Wednesday, May 22, 2024
spot_img
spot_img
spot_img
spot_img
spot_img
spot_img

Video : ಚುನಾವಣಾ ಪ್ರಚಾರದ ವೇಳೆ ದಿಢೀರನೆ ಕುಸಿದು ಬಿದ್ದ ಕೇಂದ್ರ ಸಚಿವ ಗಡ್ಕರಿ ; ತುರ್ತು ಚಿಕಿತ್ಸೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಾರಾಷ್ಟ್ರದ ಯಾವತ್ಮಾಲ್-ವಶೀಂ (Yavatmal-Washim) ಲೋಕಸಭೆ ಕ್ಷೇತ್ರದಲ್ಲಿ (Lok Sabha Election 2024) ಚುನಾವಣೆ ಪ್ರಚಾರ ಮಾಡುತ್ತಿದ್ದಾಗಲೇ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಕುಸಿದು ಬಿದ್ದಿದ್ದಾರೆ.

ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ನಿತಿನ್‌ ಗಡ್ಕರಿ ಅವರು ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸದ್ಯ ಯಾವುದೇ ಅಪಾಯವಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಪಾರ್ಕ್​​ನಿಂದ ಹೊರಗೊಗಲು ಸೂಚಿಸಿದ ಶಾಸಕರು ; ರೂಮ್ ವ್ಯವಸ್ಥೆ ಮಾಡಿಕೊಡಿ ಎಂದ ಲವರ್ಸ್ ; Video viral.!

ನಿತಿನ್‌ ಗಡ್ಕರಿ ಅವರು ಯಾವತ್ಮಾಲ್‌-ವಶೀಂ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಶಿವಸೇನೆ ಅಭ್ಯರ್ಥಿ ರಾಜಶ್ರೀ ಪಾಟೀಲ್ ಅವರ ಪರವಾಗಿ ಪ್ರಚಾರ ಮಾಡಲು ಹೋಗಿದ್ದರು. ಅವರು ವೇದಿಕೆ ಮೇಲೆ ಇದ್ದಾಗಲೇ ಕುಸಿದಿದ್ದಾರೆ.

ಅತಿಯಾದ ಬಿಸಿಲು, ಅಬ್ಬರದ ಪ್ರಚಾರದಿಂದಾಗಿ ಸುಸ್ತಾಗಿದ್ದ ಅವರು ಕುಸಿದು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಅವರ ಆರೋಗ್ಯದ ಕುರಿತು ಇನ್ನಷ್ಟು ಮಾಹಿತಿ ಬರಬೇಕಿದೆ.

ಭೀಕರ ಅಪಘಾತ : ಕಣ್ಣೆತ್ತಿ ನೋಡದೇ ಅಮಾನವೀಯತೆ ತೋರಿದ ಜನರು, Video Viral.!

ನಾಗ್ಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ನಿತಿನ್‌ ಗಡ್ಕರಿ ಅವರು ತಮ್ಮ ಕ್ಷೇತ್ರಕ್ಕಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಮರು ಆಯ್ಕೆಯಾದರೆ ಮುಂದಿನ ಐದು ವರ್ಷಗಳಲ್ಲಿ ಒಂದು ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ್ದಾರೆ. (ಎಜೇನ್ಸಿಸ್)

spot_img
spot_img
spot_img
- Advertisment -spot_img