Wednesday, May 22, 2024
spot_img
spot_img
spot_img
spot_img
spot_img
spot_img

Health : ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿಟ್ಟು ತಿನ್ನಲೇಬಾರದು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಾವು ಆಹಾರ ಪದಾರ್ಥಗಳು, ತರಕಾರಿಗಳು ಮತ್ತು ನೀರು, ಹಾಲು, ಮೊಸರು ಮತ್ತು ಹಣ್ಣುಗಳು ಕೆಡದಂತೆ ತಣ್ಣಗಾಗಲು (cold) ಫ್ರಿಡ್ಜ್‌ನಲ್ಲಿ ಇಡುತ್ತೇವೆ.

ಆದರೆ, ಕೆಲವನ್ನು ಫ್ರಿಡ್ಜ್‌ನಲ್ಲಿ ಇಡಬಾರದು. ಅದರಲ್ಲಿಯೂ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ (pernicious) ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನು ಓದಿ : LS Election – 2024 : ಮತದಾನ ಬಹಿಷ್ಕರಿಸಿದ್ದ ಗ್ರಾಮದಲ್ಲಿ ಮತಯಂತ್ರ – ಮತಗಟ್ಟೆ ಪುಡಿ ಪುಡಿ.!

ಕಲ್ಲಂಗಡಿ :
ಕಲ್ಲಂಗಡಿಯನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅದರ ಪೋಷಕಾಂಶಗಳು (nutrient) ನಿಧಾನವಾಗಿ ಕಡಿಮೆಯಾಗುತ್ತವೆ. ಇದನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟರೆ ಆಹಾರ ವಿಷವಾಗುವ ಅಪಾಯವೂ ಇದೆ. ಏಕೆಂದರೆ ಕತ್ತರಿಸಿದ ಕಲ್ಲಂಗಡಿಯಲ್ಲಿ ಬ್ಯಾಕ್ಟೀರಿಯಾಗಳು ನಮ್ಮ ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ.

ಲಿಚ್ಚಿ :
ಫ್ರಿಡ್ಜ್​ನಲ್ಲಿ ಲಿಚ್ಚಿಯನ್ನು ಇರಿಸಿದರೆ, ಅದರ ಚರ್ಮವು ಗಡಸು ಮತ್ತು ಗಟ್ಟಿಯಾಗಿ ಉಳಿಯುತ್ತದೆ. ಜತೆಗೆ ಅದು ಒಳಗಿನಿಂದ ಹಾಳಾಗುತ್ತದೆ. ಏಕೆಂದರೆ ಲಿಚ್ಚಿ ಹಣ್ಣು ಫ್ರಿಡ್ಜ್​ನ ಕೃತಕ ಶೀತವನ್ನು (artificial cold) ತಡೆದುಕೊಳ್ಳುವುದಿಲ್ಲ.

ಬಾಳೆಹಣ್ಣು :
ಬಾಳೆಹಣ್ಣಿನ ಸಿಪ್ಪೆಯಲ್ಲಿ ಎಥಿಲೀನ್ ಎಂಬ ಅನಿಲ ಬಿಡುಗಡೆಯಾಗುತ್ತದೆ. ಈ ಕಾರಣದಿಂದಾಗಿ ಬಾಳೆಹಣ್ಣನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದಾಗ ವೇಗವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಲ್ಲದೇ ಸುತ್ತಮುತ್ತಲಿನ ಹಣ್ಣುಗಳನ್ನು ಹಾಳು ಮಾಡುತ್ತದೆ. ಅದಕ್ಕಾಗಿಯೇ ಬಾಳೆಹಣ್ಣನ್ನು ಎಂದಿಗೂ ಫ್ರಿಡ್ಜ್​ನಲ್ಲಿ ಇಡಬೇಡಿ.

ಕಿತ್ತಳೆ ಮತ್ತು ನಿಂಬೆಹಣ್ಣು :
ಕಿತ್ತಳೆ, ನಿಂಬೆಹಣ್ಣಿನಂತಹ ಸಿಟ್ರಿಕ್ ಆಮ್ಲ ಹೊಂದಿರುವ ಹಣ್ಣುಗಳು ಫ್ರಿಡ್ಜ್​ನ ಶೀತವನ್ನು ಸಹಿಸುವುದಿಲ್ಲ. ಇವುಗಳನ್ನು ಫ್ರಿಡ್ಜ್​ನಲ್ಲಿಡುವುದರಿಂದ ಇದರಲ್ಲಿರುವ ಪೋಷಕಾಂಶಗಳು ಕುಗ್ಗಲಾರಂಭಿಸುತ್ತವೆ. ಇದರ ಹೊರತಾಗಿ ಈ ಹಣ್ಣಿನ ರುಚಿಯೂ ನಿರುಪಯುಕ್ತವಾಗುತ್ತದೆ (becomes useless). ಅದಕ್ಕಾಗಿಯೇ ಇವುಗಳನ್ನು ಫ್ರಿಡ್ಜ್​ನಲ್ಲಿ ಇಡಬಾರದು.

ಮಾವು :
ಮಾವಿನಹಣ್ಣು ಕಾರ್ಬೈಡ್‌ ಅಂಶ ಹೊಂದಿದೆ. ಹೀಗಾಗಿ ಫ್ರಿಡ್ಜ್​ನಲ್ಲಿ ಇಡಬಾರದು. ಇದನ್ನು ಫ್ರಿಡ್ಜ್​ನಲ್ಲಿ ಇಟ್ಟರೆ ನೀರಿನೊಂದಿಗೆ ಪ್ರತಿಕ್ರಿಯಿಸುತ್ತದೆ ಮತ್ತು ತ್ವರಿತವಾಗಿ ಮಾವು ಹಾಳಾಗಲು ಪ್ರಾರಂಭಿಸುತ್ತದೆ. ಇದಲ್ಲದೇ ಫ್ರಿಡ್ಜ್​ನಲ್ಲಿ ಮಾವನ್ನು ಇಡುವುದರಿಂದ ಅದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಕಡಿಮೆಯಾಗುತ್ತವೆ. ಆದ್ದರಿಂದ ಮಾವಿನ ಪೌಷ್ಟಿಕಾಂಶದ ಲಾಭವನ್ನು (nutritional benefit) ಪಡೆಯಲು ಬಯಸಿದರೆ ಫ್ರಿಡ್ಜ್​ನಲ್ಲಿ ಇಡಬೇಡಿ.

ಸೇಬು :
ಸಕ್ರಿಯ ಕಿಣ್ವಗಳು ಸೇಬು, ಪೀಚ್, ಪ್ಲಮ್ ಮತ್ತು ಚೆರ್ರಿಗಳಂತಹ ಹಣ್ಣುಗಳಲ್ಲಿ ಅಧಿಕವಾಗಿರುತ್ತವೆ. ಅವುಗಳನ್ನು ಫ್ರಿಡ್ಜ್​ನಲ್ಲಿಡುವುದರಿಂದ ಪೋಷಕಾಂಶಗಳು ಕಡಿಮೆಯಾಗುತ್ತದೆ ಮತ್ತು ಕೆಲವೊಮ್ಮೆ ಅವು ಹಾಳಾಗುತ್ತವೆ (get spoiled). ಅದಕ್ಕಾಗಿಯೇ ಅವುಗಳನ್ನು ಎಂದಿಗೂ ಫ್ರಿಡ್ಜ್​ನಲ್ಲಿ ಇಡಬಾರದು.

ಇದನ್ನು ಓದಿ : ರೈಲಿನ S2 ಮತ್ತು 2S ಕೋಚ್‌ಗಳ ನಡುವಿನ ವ್ಯತ್ಯಾಸವೇನು ಗೊತ್ತೇ.?

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

ಜನಸ್ಪಂದನ ನ್ಯೂಸ್‌, ಕಳಕಳಿ : ಮತದಾನ ಪ್ರತಿಯೊಬ್ಬ ಭಾರತೀಯನ “ಹಕ್ಕು” ಮತ್ತು “ಕರ್ತವ್ಯ”ವಾಗಿರುತ್ತದೆ. ತಪ್ಪದೇ ಮತ ಚಲಾಯಿಸಿ ಯೋಗ್ಯ ಸಂಸದರನ್ನು ಆಯ್ಕೆ ಮಾಡಿ.

spot_img
spot_img
spot_img
- Advertisment -spot_img