Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಖಾಲಿ ಹೊಟ್ಟೆಯಲ್ಲಿ ಒಣದ್ರಾಕ್ಷಿ ನೆನೆಸಿಟ್ಟು ಸೇವಿಸ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಡ್ರೈಪುಟ್ಸ್ (Dry fruits) ತಿನ್ನುವುದರಿಂದ ಆರೋಗ್ಯಕ್ಕೆ ಉತ್ತಮ. ಅದರಲ್ಲೂ ಒಣದ್ರಾಕ್ಷಿಯಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.

ಒಣದ್ರಾಕ್ಷಿ ಕೇವಲ ತಮ್ಮ ರುಚಿಗೆ ಹೆಸರುವಾಸಿ ಅಲ್ಲದೆ, ಅನೇಕ ರೀತಿಯ ಪೌಷ್ಟಿಕಾಂಶ ಮತ್ತು ಆರೋಗ್ಯ ಪ್ರಯೋಜನಗಳನ್ನು ಸಹ ಇದು ಹೊಂದಿದೆ.

ಇದನ್ನು ಓದಿ : ಬೈಕ್‌ನಲ್ಲಿ ಹೊರಟ ದಂಪತಿ : ಮಹಿಳೆಯನ್ನೇ ಗುರಿಯಾಗಿಸಿ ದಾಳಿ ಮಾಡಿದ ಬಿಡಾಡಿ ಹಸು ; ಭಯಾನಕ ವಿಡಿಯೋ ವೈರಲ್.!

ಸತತ ಕೆಲವು ದಿನಗಳವರೆಗೆ ಸೇವಿಸುವ ಮೂಲಕ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಇಲ್ಲವಾಗಿ ಹಸಿವು ಹೆಚ್ಚುತ್ತದೆ ಹಾಗೂ ದೇಹಕ್ಕೆ ಹೆಚ್ಚು ಹೆಚ್ಚಿನ ಶಕ್ತಿ ದೊರಕುತ್ತದೆ.

ಒಣದ್ರಾಕ್ಷಿ (Dry grapes) ನೆನೆಸಿಟ್ಟು ಸೇವಿಸುವುದರಿಂದ ರಕ್ತ ಶುದ್ದೀಕರಣಗೊಳ್ಳುವ ಜೊತೆಗೆ ಯಕೃತ್ ನ ಕಾರ್ಯಕ್ಷಮತೆಯೂ ಉತ್ತಮಗೊಳ್ಳುವ ಮೂಲಕ ಜೀರ್ಣಶಕ್ತಿಯೂ ಉತ್ತಮಗೊಳ್ಳುತ್ತದೆ.

ಈ ನೀರು ಜೀರ್ಣರಸಗಳನ್ನು (digestive juices) ಪ್ರತ್ಯೇಕಿಸಿ ಆಹಾರ ಸುಲಭವಾಗಿ ಜೀರ್ಣವಾಗುವಂತೆ ಹಾಗೂ ಪೋಷಕಾಂಶಗಳು ರಕ್ತಕ್ಕೆ ಲಭಿಸುವಂತೆ ಮಾಡುತ್ತದೆ. ಇದರ ಪರಿಣಾಮವನ್ನು ಈ ನೀರನ್ನು ಸೇವಿಸತೊಡಗಿದ ಎರಡು ದಿನಗಳಲ್ಲಿಯೇ ಕಾಣಬಹುದು.

ಒಣದ್ರಾಕ್ಷಿ ನೆನೆಸಿಟ್ಟು ಸೇವಿಸುವುದರಿಂದ ಹೃದಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರಯೋಜನವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಈ ವಿಧಾನದಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (bad cholesterol) ಕಡಿಮೆಯಾಗುತ್ತದೆ, ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಸಹಾ ಆರೋಗ್ಯಕರ ಮಟ್ಟದಲ್ಲಿರಿಸುತ್ತದೆ.

ಹೃದಯದ (heart) ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ದೇಹದಲ್ಲಿ ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ ಅಲ್ಲದೇ ಕಲ್ಮಶರಹಿತ ಕರುಳು ಹಾಗೂ ಉತ್ತಮಗೊಂಡ ಜೀರ್ಣಕ್ರಿಯೆ ಲಭಿಸುವ ಜೊತೆಗೇ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿವಾರಿಸಲೂ ಸಹಾಯ ಮಾಡುತ್ತದೆ. ಇವೆಲ್ಲವೂ ಆರೋಗ್ಯಕರ ಹೃದಯಕ್ಕೆ ಪೂರಕ ಅಂಶಗಳಾಗಿವೆ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಒಣದ್ರಾಕ್ಷಿಯನ್ನು ಬಿಸಿಲಿನಲ್ಲಿ ಒಣಗಿಸಿದ ಬಳಿಕ ಇದರಲ್ಲಿರುವ ಬಯೋಫ್ಲೇವನಾಯ್ಡುಗಳು ಹೆಚ್ಚು ಸಾಂದ್ರಗೊಳ್ಳುತ್ತವೆ (Condensate). ಈ ಸಾಂದ್ರತೆ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ವಿವಿಧ ಬಗೆಯ ಕ್ಯಾನ್ಸರ್ ಕಾರಕ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ದಾಳಿಯಿಂದ ರಕ್ಷಿಸುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img