Friday, September 20, 2024
spot_img
spot_img
spot_img
spot_img
spot_img
spot_img
spot_img

Scheme : ರೂ. 500 ಗೆ ಎಲ್‌ಪಿಜಿ ಸಿಲಿಂಡರ್ ; ಸಿಎಂ ಘೋಷಣೆ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಂಗ್ರೆಸ್ ಪಕ್ಷವು ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳ (Guarantee scheme) ಮೂಲಕ ಸರಕಾರ ರಚಿಸಿತ್ತು.

ಇನ್ನು ವಿಧಾನಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ (Telangana) ಕೆಲವೊಂದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅದರಂತೆ ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿತು.

ಇದನ್ನು ಓದಿ : ರೇಷನ್ ಅಂಗಡಿಯಿಂದ ತಂದ ಅಕ್ಕಿ ನೀರಲ್ಲಿ ತೇಲುತ್ತಿದೆಯೇ.? ಹಾಗಾದ್ರೆ ಈ ಸ್ಟೋರಿ ಓದಿ.!

ತೆಲಂಗಾಣದ ಮುಲುಗು ಜಿಲ್ಲೆಯ ಮೇಡಾರಂನಲ್ಲಿ ನಡೆದ ಬುಡಕಟ್ಟು ಉತ್ಸವದಲ್ಲಿ ದೇವರು ಮತ್ತು ದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ ಮುಖ್ಯಮಂತ್ರಿ (Chief Minister) ರೇವಂತ್ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ವೇಳೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಘೋಷಣೆಯೊಂದನ್ನು ಮಾಡಿದ್ದು, ಫೆಬ್ರವರಿ 27 ರಿಂದ ಕೇವಲ 500 ರೂ.ಗೆ ಎಲ್‌ಪಿಜಿ ಗ್ಯಾಸ್, ಉಚಿತ ವಿದ್ಯುತ್ (Free electricity) ನೀಡಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಮಾಡಿದ್ದು, ನಾಳೆಯಿಂದಲೇ ಹೊಸ ಯೋಜನೆ ಜಾರಿಗೆ ಬರುತ್ತಿದೆ ಎಂದು ವರದಿಯಾಗಿದೆ.

ಇದನ್ನು ಓದಿ : ಬಸ್ಸಿನಲ್ಲಿಯೇ ವಿದ್ಯಾರ್ಥಿನಿಗೆ ಲೈಂ*ಗಿಕ ದೌ*ರ್ಜನ್ಯವೆಸಗಿದ ಕಂಡಕ್ಟರ್‌ನಿಗೆ ಕೋರ್ಟ್ ನೀಡಿದ ಶಿಕ್ಷೆಯೇನು ಗೊತ್ತಾ.?

ಆರು ಚುನಾವಣಾ ಖಾತರಿಗಳ ಪೈಕಿ ಬಿಪಿಎಲ್ ಪಡಿತರ ಚೀಟಿದಾರರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಕೆ ಮತ್ತು ಫೆಬ್ರವರಿ 27 ರ ಸಂಜೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ (LPG Cylinder) ಕೊಡುವುದಾಗಿ ಸಿಎಂ ರೆಡ್ಡಿ ಮಾಹಿತಿ ನೀಡಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img