Thursday, April 25, 2024
spot_img
spot_img
spot_img
spot_img
spot_img
spot_img

ಬಸ್ಸಿನಲ್ಲಿಯೇ ವಿದ್ಯಾರ್ಥಿನಿಗೆ ಲೈಂ*ಗಿಕ ದೌ*ರ್ಜನ್ಯವೆಸಗಿದ ಕಂಡಕ್ಟರ್‌ನಿಗೆ ಕೋರ್ಟ್ ನೀಡಿದ ಶಿಕ್ಷೆಯೇನು ಗೊತ್ತಾ.?

spot_img

ಜನಸ್ಪಂದನ ನ್ಯೂಸ್, ಮಂಗಳೂರು : ಮಂಗಳೂರಿನ ನ್ಯಾಯಾಲಯವು (Mangalore Court), ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್’ನನ್ನು ಜೈಲಿಗಟ್ಟಿ ಕಠಿಣ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ.

ಶಿಕ್ಷೆಗೊಳಗಾದ ಆರೋಪಿ ಬಾಗಲಕೋಟೆಯ ದಾವಲ್ ಸಾಬ್ (34) ಎಂದು ತಿಳಿದು ಬಂದಿದೆ. 2023ರ ಮಾರ್ಚ್‌ನಲ್ಲಿ ಈ ಘಟನೆ ನಡೆದಿತ್ತು.

ಇದನ್ನು ಓದಿ : ರಾಜಕೀಯ ಪಕ್ಷಕ್ಕೂ ಮಾನ ಇದೆ ಎಂದ High-court ; ಏನಿದು ಕೇಸ್.?

ಘಟನೆಯ ಹಿನ್ನೆಲೆ :
ಬಾಲಕಿ ಶಾಲೆಯಿಂದ ಮನೆಗೆ ಹೋಗಲು ಕೆಎಸ್‌ಆರ್‌ಟಿಸಿ ಬಸ್ ಹತ್ತಿದ್ದಳು. ಆಗ ಬಸ್‌ನಲ್ಲಿ 4-5 ಜನ ಪ್ರಯಾಣಿಕರು (passenger) ಮಾತ್ರ ಇದ್ದು, ಅವರು ಮುಂದಿನ ನಿಲ್ದಾಣದಲ್ಲಿ ಇಳಿದಿದ್ದರು. ಆಗ ಬಸ್ ನಲ್ಲಿ ಚಾಲಕ, ಆರೋಪಿ ನಿರ್ವಾಹಕ ಹಾಗೂ ಬಾಲಕಿ ಮಾತ್ರ ಇದ್ದರು. ಈ ವೇಳೆ ಆಕೆಯ ಬಳಿಗೆ ಬಂದ ನಿರ್ವಾಹಕ ಆತನ ಪ್ಯಾಂಟ್‌ನ ಜಿಪ್ ತೆಗೆದು ಗುಪ್ತಾಂಗವನ್ನು ತೋರಿಸಿ ಕಿರುಕುಳ ನೀಡಿದ್ದ.

ಅಲ್ಲದೆ ಸನ್ನೆ ಮಾಡಿ ಬಾ ಎಂದು ಪೀಡಿಸಿದ್ದ. ನನ್ನ ತಂದೆತಾಯಿಗೆ, ಪೊಲೀಸರಿಗೆ ವಿಚಾರ ಹೇಳುವುದಾಗಿ ವಿದ್ಯಾರ್ಥಿನಿ ತಿಳಿಸಿದರೂ ಕೇಳದ ಆರೋಪಿ ಕಿರುಕುಳ ನೀಡಿದ್ದ. ಅಸಭ್ಯವಾಗಿ (rudely) ವರ್ತಿಸಿ ಮಾನಕ್ಕೆ ಕುಂದುಂಟಾಗುವಂತೆ ವರ್ತಿಸಿದ್ದ.

ಇದರಿಂದ ತೀವ್ರ ಮನನೊಂದಿದ್ದ ಬಾಲಕಿ ಬಸ್‌ನ ಸಂಖ್ಯೆಯೊಂದಿಗೆ ಮನೆಗೆ ಬಂದು ತಾಯಿಗೆ ಘಟನೆಯ ಬಗ್ಗೆ ತಿಳಿಸಿದ್ದಳು. ಅನಂತರ ತಾಯಿ ಮತ್ತು ಬಾಲಕಿ ಬಂಟ್ವಾಳ ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ ನಿರ್ವಾಹಕನನ್ನು (conductor) ವಶಕ್ಕೆ ಪಡೆದಿದ್ದರು.

ಇನ್ಸ್‌ಪೆಕ್ಟರ್ ನಂದಿನಿ ಎಸ್. ಶೆಟ್ಟಿ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಮಂಜುಳಾ ಇಟ್ಟಿ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಇದನ್ನು ಓದಿ : ಕರಿಮಣಿ ಮಾಲೀಕ ಹಾಡಿಗೆ ಕುಣಿದ ಆ್ಯಂಕರ್ ಅನುಶ್ರೀ ; ನೆಟ್ಟಿಗರ ಕಮೆಂಟ್ಸ್ ಮಾತ್ರ ಸೂಪರೋ super.!

ಪೊಕ್ಸೋ ಕಾಯಿದೆಯ ಕಲಂ 12ರಡಿ 2 ವರ್ಷ ಕಠಿಣ ಸಜೆ ಮತ್ತು 10,000 ರೂ. ದಂಡ, ಒಂದು ವೇಳೆ ದಂಡ ಪಾವತಿಸದಿದ್ದರೆ ಮತ್ತೆ 2 ತಿಂಗಳು ಸಾದಾ ಸಜೆ ವಿಧಿಸಿದ್ದಾರೆ. ಆರೋಪಿಗೆ ಐಪಿಸಿ ಕಲಂ 509ರಡಿ ಒಂದು ವರ್ಷ ಸಾದಾ ಸಜೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ ಒಂದು ತಿಂಗಳು ಸಾದಾ ಸಜೆ, ಅಲ್ಲದೆ ಸಂತ್ರಸ್ತೆ ವಿದ್ಯಾರ್ಥಿನಿಗೆ 10,000 ರೂ.ಗಳನ್ನು ಪರಿಹಾರವಾಗಿ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಲಾಗಿದೆ.

spot_img
spot_img
spot_img
- Advertisment -spot_img