Friday, September 13, 2024
spot_img
spot_img
spot_img
spot_img
spot_img
spot_img
spot_img

ದೀನ್ ದಯಾಳ್ ಸ್ಪರ್ಶ್ ಯೋಜನೆ : ವಿದ್ಯಾರ್ಥಿಗಳಿಗೆ ಸಿಗಲಿದೆ ರೂ. 6 ಸಾವಿರ ಸ್ಕಾಲರ್‌ಶಿಪ್‌.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : 2023-24 ನೇ ಶೈಕ್ಷಣಿಕ ವರ್ಷದಲ್ಲಿ 60% ಅಂಕ ಗಳಿಸಿದ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳಿಂದ ಅಂಚೆ ಇಲಾಖೆಯು ‘ದೀನ್ ದಯಾಳ್ ಸ್ಪರ್ಶ್’ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಿದೆ.

ಸ್ಪರ್ಶ್ ಹೀಗೆಂದರೆ ಹವ್ಯಾಸವಾಗಿ ಸ್ಟ್ಯಾಂಪ್‍ಗಳಲ್ಲಿ ಆಪ್ಟಿಟ್ಯೂಡ್ ಮತ್ತು ಸಂಶೋಧನೆಯ ಪ್ರಚಾರಕ್ಕಾಗಿ ಸ್ಕಾಲರ್‌ಶಿಪ್ ಎಂದರ್ಥ. ಶೈಕ್ಷಣಿಕ ಪಠ್ಯಕ್ರಮವನ್ನು ಬಲಪಡಿಸಲು ಮತ್ತು ಪೂರಕವಾಗಿ ಸಮರ್ಥನೀಯ ರೀತಿಯಲ್ಲಿ ಚಿಕ್ಕ ವಯಸ್ಸಿನಲ್ಲಿ ಮಕ್ಕಳಲ್ಲಿ ಅಂಚೆಚೀಟಿಗಳ ಸಂಗ್ರಹವನ್ನು ಉತ್ತೇಜಿಸುವುದು ಈ ವಿದ್ಯಾರ್ಥಿ ವೇತನದ ಉದ್ದೇಶವಾಗಿದೆ.

ಇದನ್ನು ಓದಿ : ರೂ.15,000 ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಕೆ ಆರಂಭ.!

ಈ ಯೋಜನೆಯಡಿ 2023-24 ಶೈಕ್ಷಣಿಕ ವರ್ಷದಲ್ಲಿ ಶೇ.60 ಅಂಕಗಳನ್ನು ಹೊಂದಿರುವ ಮತ್ತು ಅಂಚೆಚೀಟಿಗಳ ಸಂಗ್ರಹಣೆಯ ಖಾತೆಯನ್ನು ಫಿಲಾಟೆಲಿಕ್ ಕ್ಲಬ್‍ನ ಸದಸ್ಯರನ್ನು ಹೊಂದಿರುವ ಮತ್ತು ಅಂಚೆಚೀಟಿ ಸಂಗ್ರಹಣೆಯನ್ನು ಹವ್ಯಾಸವಾಗಿ ಮುಂದುವರಿಸುವ 6 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ 6,000/- ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಅಂಚೆ ಚೀಟಿಗಳ ಸಂಗ್ರಹದ ರಸಪ್ರಶ್ನೆ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅಂಚೆ ಚೀಟಿಗಳ ಸಂಗ್ರಹಣೆ, ರಸಪ್ರಶ್ನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಅಂಚೆಚೀಟಿಗಳ ಸಂಗ್ರಹ ಯೋಜನೆಯಲ್ಲಿ, ಯಶಸ್ವಿಯಾಗಿ ಸ್ಪರ್ಧಿಸಬೇಕಾಗುತ್ತದೆ.

ಇದನ್ನು ಓದಿ : IBPS : 4,455 ಬ್ಯಾಂಕ್‌ ಪಿಒ, ಎಂಟಿ ಹುದ್ದೆಗಳ ಅರ್ಜಿಗೆ ಕೊನೆ ದಿನಾಂಕ ವಿಸ್ತರಣೆ ; ಇಲ್ಲಿದೆ ಮಾಹಿತಿ.!

ಕರ್ನಾಟಕ ರಾಜ್ಯದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಲೆವೆಲ್ -1 ಅಂಚೆಚೀಟಿಗಳ ರಸಪ್ರಶ್ನೆಯನ್ನು ಲಿಖಿತ ರೂಪದಲ್ಲಿ ನಡೆಸಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಲು ಅರ್ಜಿಯನ್ನು ಸಲ್ಲಿಸಿರಿ.

ಹೆಚ್ಚಿನ ಮಾಹಿತಿಗಾಗಿ : www.indiapost.gov.in ಅಥವಾ www.karnatakapost.gov.in

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img