Friday, June 14, 2024
spot_img
spot_img
spot_img
spot_img
spot_img
spot_img

Crime : ಹಾಡಹಗಲೇ ರೌಡಿಶೀಟರ್ ಬ*ರ್ಬ*ರ ಹ*ತ್ಯೆ.!

spot_img

ಜನಸ್ಪಂದನ ನ್ಯೂಸ್, ಹಾಸನ : ಹಾಸನದ ಹೇಮಾವತಿ ನಗರ ಬಡಾವಣೆಯಲ್ಲಿ ಕುಖ್ಯಾತ ರೌಡಿಶೀಟರ್’ನನ್ನು (rowdy sheeter) ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಕುಖ್ಯಾತ ರೌಡಿಶೀಟರ್ ಚೈಲ್ಡ್ ರವಿಯನ್ನು ದುಷ್ಕರ್ಮಿಗಳು ಇಂದು ಬೆಳಗ್ಗೆ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : ವಿಚಿತ್ರ Tradition : ಇಲ್ಲಿ ಪತಿಯ ಸೂಚನೆಯಂತೆ ಪತ್ನಿ ಬೇರೊಬ್ಬನ ಜತೆ ರಾತ್ರಿ ಲೈಂಗಿಕ ಕ್ರಿಯೆ ನಡೆಸಲೇಬೇಕು.!

ಬೈಕ್’ನಲ್ಲಿ ಕುಡಿಯುವ ನೀರು (drinking water) ತರಲೆಂದು ಹೋಗುತ್ತಿದ್ದ ವೇಳೆ ರವಿಯನ್ನು ಹಿಂದಿನಿಂದ ವಾಹನ ಡಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ತಪ್ಪಿಸಿಕೊಳ್ಳಲು ಅವಕಾಶವೇ ಸಿಗದಂತೆ ಇಬ್ಬರು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ಇದನ್ನು ಓದಿ : ಆಟವಾಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ ಮಂಗ ; ಆಶ್ಚರ್ಯಕರ ವಿಡಿಯೋ Viral.!

ಹೀಗಾಗಿ ಮಾರಕಾಸ್ತ್ರಗಳ ದಾಳಿಯಿಂದ (attack) ರವಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಚೈಲ್ಡ್ ರವಿ ಸಹ್ಯಾದ್ರಿ ಚಿತ್ರಮಂದಿರದ ಎದುರು ನಡೆದಿದ್ದ ಸ್ಲಂ ಮಂಜನ ಹತ್ಯೆ ಸೇರಿದಂತೆ ಕೊಲೆ, ಅತ್ಯಾಚಾರ, ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದನು. ಜಾಮೀನಿನ ಮೇಲೆ (on bail) ಜೈಲಿನಿಂದ ಹೊರಗೆ ಬಂದಿದ್ದನು ಎಂದು ತಿಳಿದು ಬಂದಿದೆ.

spot_img
spot_img
- Advertisment -spot_img