Friday, October 4, 2024
spot_img
spot_img
spot_img
spot_img
spot_img
spot_img
spot_img

ವಿಚಿತ್ರ Tradition : ಇಲ್ಲಿ ಪತಿಯ ಸೂಚನೆಯಂತೆ ಪತ್ನಿ ಬೇರೊಬ್ಬನ ಜತೆ ರಾತ್ರಿ ಲೈಂಗಿಕ ಕ್ರಿಯೆ ನಡೆಸಲೇಬೇಕು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಮ್ಮ ಜಗತ್ತು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು (strange tradition) ಮಾಡುತ್ತಿರುವುದು ವಿಪರ್ಯಾಸವೇ ಸರಿ.

ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೊಳಿಸುತ್ತವೆ.

ಇದನ್ನು ಓದಿ : Lokasabha election : NDAಗೆ ಕಡಿಮೆ ಸ್ಥಾನ, ಹೃದಯಾಘಾತದಿಂದ BJP ಅಭಿಮಾನಿ ಸಾವು.!

ಅಂಥದ್ದೇ ಆಚರಣೆಯನ್ನು ನಮೀಬಿಯಾದ ಬುಡಕಟ್ಟು (tribe) ಸಮುದಾಯವೊಂದು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರುತ್ತಿದೆ ಎನ್ನಲಾಗಿದೆ.

ಹಿಂಬಾ ಎಂಬ ಬುಡಕಟ್ಟು ಸಮುದಾಯದಲ್ಲಿ ವಿಚಿತ್ರವಾದ ಒಂದು ಆಚರಣೆಯಿದೆ. ಈ ಸಮುದಾಯವು ಕೇವಲ 50 ಸಾವಿರ ಜನಸಂಖ್ಯೆಯನ್ನು ಮಾತ್ರ ಹೊಂದಿದೆ. ನಮೀಬಿಯಾ (Namibia) ಉತ್ತರ ಪ್ರದೇಶ ಹಿಂಬಾ ಸಮುದಾಯ ನೆಲೆಸಿದೆ. ಈ ಬುಡಕಟ್ಟು ಜನಾಂಗವನ್ನು ಒಮುಹಿಂಬಾ ಅಥವಾ ಓವಹಿಂಬಾ ಎಂದೂ ಕರೆಯಲಾಗುತ್ತದೆ.

ಇನ್ನೂ ಈ ಸಮುದಾಯದಲ್ಲಿ ಮಹಿಳೆಯರು ಬೇರೊಬ್ಬನ ಜತೆ ಒಂದು ರಾತ್ರಿ ಕಳೆಯಲೇಬೇಕು. ಗಂಡನ ಒತ್ತಾಯದಿಂದಲೇ ಬಂದಂತಹ ಅತಿಥಿಗಳ ಜತೆ ಲೈಂಗಿಕ ಸಂಭೋಗ (sexual intercourse) ನಡೆಸುತ್ತಾರೆ. ಯಾಕೆಂದರೆ ಇದು ಅಸೂಯೆ ತೊಡೆದು ಹಾಕುವ ಗುರಿಯನ್ನು ಹೊಂದಿರುವ ಆಚರಣೆಯಾಗಿದೆಯಂತೆ. ಒಬ್ಬ ಹಿಂಬಾ ಪುರುಷನು ತನ್ನ ಅತಿಥಿಗೆ ಒಕುಜೆಪಿಸಾ ಒಮುಕಾಜೆಂಡು ಆತಿಥ್ಯವನ್ನು ನೀಡುವ ಮೂಲಕ ತನ್ನ ಕೃತಜ್ಞತೆಯನ್ನು (Gratitude) ಸಲ್ಲಿಸುತ್ತಾರೆ.

ಒಕುಜೆಪಿಸಾ ಒಮುಕಾಜೆಂಡು ಆತಿಥ್ಯ ಅಂದರೆ, ಹೆಂಡತಿಯ ಜತೆ ಅತಿಥಿಗೆ ಒಂದು ರಾತ್ರಿ ಕಳೆಯಲು ಅವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಪತಿ ಮತ್ತೊಂದು ಕೋಣೆಯಲ್ಲಿ ಮಲಗುತ್ತಾನೆ. ಕೋಣೆ ಇಲ್ಲದಿದ್ದರೆ, ಗಂಡ ಮನೆಯಿಂದ ಹೊರಗಡೆ ಮಲಗುತ್ತಾನೆ. ಇನ್ನೂ ಈ ಸಮುದಾಯದ ಮಹಿಳೆಯರು ತಮ್ಮ ದೈನಂದಿನ ಚಟುವಟಿಕೆ ವೇಳೆ ಹೆಚ್ಚು ಮಾತನಾಡುವುದಿಲ್ಲ. ಇನ್ನೂ ಸಾಮಾನ್ಯವಾಗಿ ಒಬ್ಬ ಪುರುಷನನ್ನು ಮದುವೆಯಾಗುತ್ತಾರೆ ಆದರೆ, ಬಹುಪತ್ನಿತ್ವದ (Polygamy) ಸೆಟಪ್‌ನಲ್ಲಿ ವಾಸಿಸುತ್ತಾರೆ.

ಇನ್ನೂ ಈ ಸಮುದಾಯದವರು ಸ್ವಾವಲಂಬಿಗಳಾಗಿದ್ದು, ಹೆಚ್ಚಿನ ಜನರು ಜಾನುವಾರು ರೈತರಾಗಿದ್ದಾರೆ. ತಮ್ಮದೇಯಾದ ಆಹಾರ ಮತ್ತು ಸಂಪನ್ಮೂಲಗಳನ್ನು (Food and resources) ಸಂಗ್ರಹಿಸುವ ಇವರು ತಮ್ಮದೇ ರೀತಿಯಲ್ಲಿ ಮನೆಯನ್ನೂ ನಿರ್ಮಾಣ ಮಾಡಿಕೊಳ್ಳುತ್ತಾರೆ.

ಇವರು ಮುಕುರು ಎಂದು ಕರೆಯಲ್ಪಡುವ ನಮೀಬಿಯಾ ದೇವರನ್ನು ನಂಬುತ್ತಾರೆ. ತಮ್ಮ ನಂಬಿಕೆಗಳ ಪ್ರಕಾರ ಅವರ ಸಮುದಾಯದಲ್ಲಿ ಸಾವಿನ ನಂತರ ಸತ್ತ ವ್ಯಕ್ತಿಗಳು ದೇವಧೂತರಾಗುತ್ತಾರಂತೆ.

ಇದನ್ನು ಓದಿ : ಆಟವಾಡುತ್ತಿದ್ದ ಮಗುವನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿದ ಮಂಗ ; ಆಶ್ಚರ್ಯಕರ ವಿಡಿಯೋ Viral.!

ಇವರು ಹೊಗೆ ಸ್ನಾನವನ್ನು ಮಾಡುತ್ತಾರಂತೆ. ಹೊಗೆ ಸ್ನಾನದ ಅಭ್ಯಾಸವು ಸುಗಂಧ ದ್ರವ್ಯ ಮತ್ತು ಬೆಣ್ಣೆಯನ್ನು ಅನ್ವಯಿಸುವುದನ್ನು ಒಳಗೊಂಡಿರುತ್ತದೆ. ಹೊಗೆಯ ಮೋಡದಲ್ಲಿ ತಮ್ಮನ್ನು ತಾವು ಸಿಲುಕಿಸಿಕೊಳ್ಳುವುದಾಗಿದೆ.

ಇಂತಹ ವಿಚಿತ್ರ ಅಭ್ಯಾಸದ ಹಿಂದಿನ ಕಾರಣಗಳೆಂದರೆ, ಆ ಪ್ರದೇಶದ ಕಠಿಣ ಹವಾಮಾನ ಪರಿಸ್ಥಿತಿಗಳು ಮತ್ತು ನೀರಿನ ಅಲಭ್ಯತೆಯಾಗಿದೆ. ಈ ಹೊಗೆ ಸ್ನಾನವು ಅವರ ನಂಬಿಕೆಗಳ ಪ್ರಕಾರ ಕೀಟಗಳನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img