ಜನಸ್ಪಂದನ ನ್ಯೂಸ್, ಬೆಂಗಳೂರು : ನಗರದಲ್ಲಿ ನಡೆದಿದ್ದ ರೇವ್ ಪಾರ್ಟಿ (Rave Party) ಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ 35 ಯುವತಿಯರು ಸೇರಿದಂತೆ 115 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬೆಂಗಳೂರಿನ ದಕ್ಷಿಣ ತಾಲ್ಲೂಕಿನ ದೇವಿಗೆರೆ ಕ್ರಾಸ್ ಬಳಿ ಇರುವ ಖಾಸಗಿ ರೆಸಾರ್ಟ್‌ನಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಶುಕ್ರವಾರ ರಾತ್ರಿ ರಹಸ್ಯ ಮಾಹಿತಿ ಆಧಾರದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್‌ಪಿ ಶ್ರೀನಿವಾಸ್ ಗೌಡ ಅವರ ನೇತೃತ್ವದಲ್ಲಿ ಪೊಲೀಸರು ಖಾಸಗಿ ರೆಸಾರ್ಟ್‌ಗೆ ದಾಳಿ ನಡೆಸಿದರು. ಈ ವೇಳೆ, ರೆಸಾರ್ಟ್‌ನ ಒಳಗೆ ಭಾರಿ ಸೌಂಡ್ ಸಿಸ್ಟಮ್‌ನೊಂದಿಗೆ ಸಂಗೀತ ಮತ್ತು ಡ್ಯಾನ್ಸ್ ನಡೆಯುತ್ತಿತ್ತು ಎಂದು ಮೂಲಗಳು ತಿಳಿಸಿವೆ.
Digital trend : ಮದುವೆಯಲ್ಲಿ ಶರ್ಟ್ ಮೇಲೆ ಕ್ಯುಆರ್ ಕೋಡ್ ಧರಿಸಿ ಉಡುಗೊರೆ ವಸೂಲಿ ; ವಿಡಿಯೋ ವೈರಲ್.!
ಪೊಲೀಸರು ರೇವ್ ಪಾರ್ಟಿ (Rave Party) ಸ್ಥಳದಿಂದ 35 ಯುವತಿಯರು ಹಾಗೂ 80 ಯುವಕರು ಸೇರಿದಂತೆ ಒಟ್ಟು 115 ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಎಲ್ಲರನ್ನೂ ರಾಮನಗರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ನಿಷೇಧಿತ ಮಾದಕ ವಸ್ತುಗಳನ್ನು ಸೇವಿಸಿರುವ ಅನುಮಾನ ವ್ಯಕ್ತವಾಗಿರುವುದರಿಂದ, ಎಲ್ಲರಿಗೂ ಡ್ರಗ್ ಟೆಸ್ಟ್ ಮಾಡಲಾಗಿದೆ.

ಪೊಲೀಸರ ಪ್ರಕಾರ, ಈ ರೇವ್ ಪಾರ್ಟಿ (Rave Party) ಯನ್ನು “ಜೆನ್‌ಜೀ (GenZ)” ಎಂಬ ವಾಟ್ಸಾಪ್ ಗುಂಪಿನ ಮೂಲಕ ಆಯೋಜಿಸಲಾಗಿತ್ತು. ರೇವ್ ಪಾರ್ಟಿ (Rave Party) ಯಲ್ಲಿ ಭಾಗವಹಿಸಿದ್ದವರಲ್ಲಿ ಬಹುತೇಕರು 19-23 ವರ್ಷದ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕೆಲವರು ಖಾಸಗಿ ಕಂಪನಿಗಳ ಉದ್ಯೋಗಿಗಳೂ ಆಗಿದ್ದಾರೆ ಎನ್ನಲಾಗಿದೆ.
School ಗೆ ಹೋಗಲ್ಲ ಎಂದ ಬಾಲಕನ ಹಠ ; ಮಂಚದ ಸಹಿತ ಶಾಲೆಗೆ ಕರೆತಂದ ಮನೆಯವರು ; ವಿಡಿಯೋ ವೈರಲ್.!
ದಾಳಿ ವೇಳೆ ಕೆಲವು ಮಾಧ್ಯಮ ಪ್ರತಿನಿಧಿಗಳು ಹಾಗೂ ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಲು ಪ್ರಯತ್ನಿಸಿದರೂ, ಪೊಲೀಸರು ತನಿಖೆ ಉದ್ದೇಶದಿಂದ ಚಿತ್ರೀಕರಣವನ್ನು ನಿಷೇಧಿಸಿದ್ದಾರೆ. ರೆಸಾರ್ಟ್‌ನಿಂದ ಕೆಲ ಮಾದಕ ವಸ್ತುಗಳ ಮಾದರಿಗಳನ್ನು ವಶಪಡಿಸಿಕೊಂಡಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಘಟನೆ ಕುರಿತು ರೇವ್ ಪಾರ್ಟಿ (Rave Party) ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಅನಧಿಕೃತ ಪಾರ್ಟಿಗಳ ವಿರುದ್ಧ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರೆಸ್ಟೋರೆಂಟ್‌ನಲ್ಲಿ ಅಣ್ಣ-ತಂಗಿಯ ಮೇಲೆ Police ದರ್ಪ ; ಸಿಸಿಟಿವಿ ವಿಡಿಯೋ ವೈರಲ್.!

ಜನಸ್ಪಂದನ ನ್ಯೂಸ್, ಪಟನಾ : ಬಿಹಾರ ರಾಜ್ಯದ ಕತಿಹಾರ್ ಜಿಲ್ಲೆಯಲ್ಲಿ ನಡೆದ ಪೊಲೀಸ್ (Police) ದರ್ಪದ ಘಟನೆತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬರ್ಸೋಯ್ ಪೊಲೀಸ್ (Police) ಠಾಣೆಯ ಇನ್‌ಚಾರ್ಜ್ ಅಧಿಕಾರಿಯೋರ್ವ ರೆಸ್ಟೋರೆಂಟ್‌ನಲ್ಲಿ ಸಹೋದರ ಮತ್ತು ಸಹೋದರಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಬಹಿರಂಗವಾದ ಹಿನ್ನಲೆಯಲ್ಲಿ ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಘಟನೆ ಅಕ್ಟೋಬರ್ 24 ರಂದು ಕತಿಹಾರ್ ಜಿಲ್ಲೆಯ ಬರ್ಸೋಯ್ ಪ್ರದೇಶದಲ್ಲಿರುವ ಬಿಆರ್–11 ರೆಸ್ಟೋರೆಂಟ್‌ನಲ್ಲಿ ನಡೆದಿದೆ.
ಘಟನೆಯ ವಿಡಿಯೋ ವೈರಲ್ ಆದ ಬಳಿಕ, ಕತಿಹಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (SP) ಶಿಖರ್ ಚೌಧರಿ ಅವರು ಬರ್ಸೋಯ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (SHO) ರಾಮಚಂದ್ರ ಮಂಡಲ್ ಅವರನ್ನು ಅಮಾನತು ಮಾಡುವ ಆದೇಶ ಹೊರಡಿಸಿದರು.
ಪೊಲೀಸ್ (Police) ಇಲಾಖೆಯ ಪ್ರಕಾರ, SHO ರಾಮಚಂದ್ರ ಮಂಡಲ್ ಅವರು ಚುನಾವಣಾ ಪರಿಶೀಲನೆಗಾಗಿ ಸ್ಥಳೀಯ ರೆಸ್ಟೋರೆಂಟ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅವರು ರೆಸ್ಟೋರೆಂಟ್‌ಗೆ ಇತರ ಪೊಲೀಸ್ ಸಿಬ್ಬಂದಿಗಳೊಂದಿಗೆ ಪ್ರವೇಶಿಸಿ ಅಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿಯ ಬಳಿ ತೆರಳಿ ಪ್ರಶ್ನೆ ಮಾಡಿದ್ದಾರೆ.
ಯುವಕ ತನ್ನ ಜೊತೆ ಕುಳಿತಿದ್ದವರು ತಂಗಿಯೇ ಎಂದು ಸ್ಪಷ್ಟಪಡಿಸಿದರೂ, SHO ಆ ವಿವರಣೆಯನ್ನು ನಂಬದೇ ಅತಿಯಾದ ಶಬ್ದದಲ್ಲಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಸಮಯದಲ್ಲಿ ರೆಸ್ಟೋರೆಂಟ್‌ನಲ್ಲಿ ಇದ್ದ ಗ್ರಾಹಕರು ಅಸಹಜ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಬಳಿಕ ಒಬ್ಬ ವ್ಯಕ್ತಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾನೆ ಎಂದು ಸಾಕ್ಷಿಗಳು ಹೇಳಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಸ್ಥಳೀಯ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.
ಕತಿಹಾರ್ ಪೊಲೀಸ್ (Police) ಇಲಾಖೆ ಪ್ರಕಟಿಸಿದ ಅಧಿಕೃತ ಪ್ರಕಟಣೆಯಲ್ಲಿ, “ತನಿಖೆಯ ವೇಳೆ SHO ರಾಮಚಂದ್ರ ಮಂಡಲ್ ಅವರು ಕರ್ತವ್ಯ ನಿರ್ಲಕ್ಷ್ಯ ಮತ್ತು ಅಸಭ್ಯ ನಡವಳಿಕೆಗೆ ಒಳಪಟ್ಟಿದ್ದಾರೆ ಎಂಬುದು ದೃಢಪಟ್ಟಿದೆ. ಇಂತಹ ವರ್ತನೆ ಪೊಲೀಸರ ಶಿಸ್ತು ಮತ್ತು ಗೌರವಕ್ಕೆ ಧಕ್ಕೆ ತರುತ್ತದೆ” ಎಂದು ತಿಳಿಸಲಾಗಿದೆ.
ಈ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಕತಿಹಾರ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಪ್ರಧಾನ ಕಚೇರಿ) ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ಬಳಿಕ ಪೂರ್ಣ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸ್ (Police) ಇಲಾಖೆ ಎಲ್ಲ ಅಧಿಕಾರಿಗಳಿಗೆ ಕರ್ತವ್ಯ ಸಮಯದಲ್ಲಿ ಶಿಸ್ತು, ನೈತಿಕತೆ ಮತ್ತು ಸಾರ್ವಜನಿಕರೊಂದಿಗೆ ಗೌರವಯುತ ನಡವಳಿಕೆಯನ್ನು ಪಾಲಿಸುವಂತೆ ಸೂಚಿಸಿದೆ.
ಪೊಲೀಸ್ (Police) ದರ್ಪದ ವಿಡಿಯೋ
https://twitter.com/i/status/1982712167918182539





