Thursday, January 9, 2025
HomeNewsಬೈಕ್ ರಿಪೇರಿಗೆ ಹಣ ಕೇಳಿದ ಮೆಕ್ಯಾನಿಕ್‌ಗೆ ಬೆದರಿಕೆ ಹಾಕಿದ PSI ಸಸ್ಪೆಂಡ್.!
spot_img

ಬೈಕ್ ರಿಪೇರಿಗೆ ಹಣ ಕೇಳಿದ ಮೆಕ್ಯಾನಿಕ್‌ಗೆ ಬೆದರಿಕೆ ಹಾಕಿದ PSI ಸಸ್ಪೆಂಡ್.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಬೈಕ್ ರಿಪೇರಿ ಮಾಡಿದ ಹಣ ಕೇಳಿದ್ದಕ್ಕೆ (For asking money for repairing the bike) ದಿಂಡಿಗಲ್ ಮೂಲದ ಮೆಕ್ಯಾನಿಕ್‌ ಮೇಲೆ ಸಬ್‌ ಇನ್‌ಸ್ಪೆಕ್ಟರ್ ಓರ್ವ ಹಲ್ಲೆ ಮಾಡಿರುವ ಘಟನೆ ತಮಿಳುನಾಡಿನ ಮಧುರೈನಲ್ಲಿ (Madurai, Tamil Nadu) ನಡೆದಿದೆ ಎಂದು ತಿಳಿದು ಬಂದಿದೆ.

ಮೆಕ್ಯಾನಿಕ್ ಶ್ರೀನಿವಾಸ್ ಮೇಲೆ ಪಾಳಮೇಡು ಎಸ್‌ಐ ಈ ರೀತಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?

ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ (It has gone viral on social media) ಬಳಿಕ ಎಸ್‌ಐ ಅಣ್ಣಾದೊರೈಯನ್ನು ಸಸ್ಪೆಂಡ್ ಆದೇಶ ಹೊರಡಿಸಲಾಗಿದೆ.

ಮಧುರೈ ವಾಡಿಪಟ್ಟಿಯಲ್ಲಿರುವ ವರ್ಕ್‌ಶಾಪ್‌ಗೆ ಹಲವು ದಿನಗಳಿಂದ ಎಸ್‌ಐ ಅಣ್ಣಾದೊರೈ ಬೈಕ್ ರಿಪೇರಿ ಮಾಡಿಸಿಕೊಳ್ಳಲು ಬರುತ್ತಿದ್ದರು. ಅಲ್ಲದೇ ಅವರು ಹಣ ನೀಡದೇ ಹಲವು ಸಲ ಫ್ರೀಯಾಗಿ ಬೈಕ್ ರಿಪೇರಿ ಮಾಡಿಸಿಕೊಂಡಿದ್ದಾರೆ. ಮೆಕ್ಯಾನಿಕ್ ಸುಮಾರು 8 ಸಾವಿರ ರೂ. ಮೌಲ್ಯದ ಬಿಡಿಭಾಗಗಳನ್ನು ಬಳಸಿ (Use accessories) ಎಸ್‌ಐ ಅವರ ಬೈಕ್ ರಿಪೇರಿ ಮಾಡಿದ್ದರು. ಆದರೆ ಆ ಹಣವನ್ನು ಎಸ್ಐ ನೀಡಿರಲಿಲ್ಲ ಎಂದು ವರದಿಯಾಗಿದೆ.

ಇದನ್ನು ಓದಿ : ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!

ಇನ್ನೂ ಕಳೆದ ವಾರ ಮತ್ತೆ ಬೈಕ್ ರಿಪೇರಿ ಮಾಡಿದಾಗ ಎಲ್ಲಾ ಸೇರಿ 10 ಸಾವಿರ ರೂಪಾಯಿ ಬಿಲ್ ಆಗಿದೆ ಎಂದು ಮೆಕ್ಯಾನಿಕ್ ಶ್ರೀನಿವಾಸ್ ಹೇಳಿದ್ದಾರೆ. ಅಲ್ಲದೇ ಇನ್ನುಮುಂದೆ ಹಣ ಕೊಟ್ಟರೆ ಮಾತ್ರ ಬೈಕ್ ರಿಪೇರಿ ಮಾಡುತ್ತೇನೆ. ಇಲ್ಲವಾದ್ರೆ ರಿಪೇರಿ ಮಾಡಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ.

ಈ ಮಾತುಗಳಿಂದ ಕೋಪಗೊಂಡ ಎಸ್ಐ ಅಣ್ಣಾದೊರೈ, ಸುಮ್ನೆ ಬೈಕ್ ರಿಪೇರಿ ಮಾಡಿ, ಇಲ್ಲಾಂದ್ರೆ ಸುಳ್ಳು ಕೇಸ್ ಹಾಕುವುದಾಗಿ ಬೆದರಿಕೆ ಹಾಕಿ ಅಲ್ಲಿಂದ ತೆರಳಿದ್ದಾರೆ. ಗ್ಯಾರೇಜ್‌ಗೆ ಅಣ್ಣಾದೊರೈ ಹಿಂದಿರುಗಿ (return) ಬಂದಾಗ, ಬೈಕ್ ರಿಪೇರಿ ಮಾಡದೆ ಇರುವುದನ್ನು ಗಮನಿಸಿದ್ದಾರೆ. ಇದರಿಂದ ಕೋಪಗೊಂಡ ಅಣ್ಣಾದೊರೈ, ಶ್ರೀನಿವಾಸ್ ಅವರಿಗೆ ಕಪಾಳಮೋಕ್ಷ (A slap in the face) ಮಾಡಿದ್ದಾರೆ. ಎಸ್ಐ ಮಾತಿಗೆ ಬೆಲೆ ಕೊಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಅಣ್ಣಾದೊರೈ ಜೊತೆಯಲ್ಲಿದ್ದ ಸ್ನೇಹಿತ ಕೂಡ ಬೆದರಿಕೆ (threat) ಹಾಕಿದ್ದಾನೆ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ 945 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

ಹೀಗಾಗಿ ಶ್ರೀನಿವಾಸ್, ಎಸ್‌ಐ ಬೆದರಿಕೆ ಹಿನ್ನೆಲೆ ನೇರವಾಗಿ ಜಿಲ್ಲಾಧಿಕಾರಿ ಬಳಿ ತೆರಳಿ (Go directly to the Collector) ಅಣ್ಣಾದೊರೈ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಗಳನ್ನಾಧರಿಸಿ ಅಣ್ಣಾದೊರೈ ಅವರನ್ನು ಅಮಾನತುಗೊಳಿಸಿ ಎಸ್‌ಪಿ ಆದೇಶ ಹೊರಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಹಿಂದಿನ ಸುದ್ದಿ : ಚೆನ್ನೈಯನ್ನು ಹಿಂದಿಕ್ಕಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದ Bangalore ; ಯಾವುದರಲ್ಲಿ ಗೊತ್ತಾ.?

ಜನಸ್ಪಂದನ ನ್ಯೂಸ್, ಬೆಂಗಳೂರು : ಚೆನ್ನೈ ನಗರವನ್ನು ಹಿಂದಿಕ್ಕಿದ ಬೆಂಗಳೂರು, 2024ರಲ್ಲಿ ಉದ್ಯೋಗಿ ಮಹಿಳೆಯರಿಗಾಗಿ (working women) ಭಾರತದ ಅತ್ಯುತ್ತಮ ನಗರವಾಗಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ಇದನ್ನು ಓದಿ : ಪ್ರಾಣಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತವೆ ಅಂದ್ರೆ ನೀವು ನಂಬುತ್ತಿರಾ.? ಈ Video ನೋಡಿ.!

ಯಾವ ವಿಚಾರವಾಗಿ ಚೆನ್ನೈಯನ್ನು ಬೆಂಗಳೂರು ಹಿಂದಿಕ್ಕಿದೆ ಗೊತ್ತಾ.?
ಕೆಲಸ ಮಾಡುವ ಮಹಿಳೆಯರಿಗೆ ಬೆಂಗಳೂರು ನಗರವು ಅತ್ಯಂತ ಸುರಕ್ಷಿತ (Very safe for working women) ಎಂದು ವರದಿಯೊಂದು ಬಹಿರಂಗಪಡಿಸಿದೆ (revealed). ಈ ವಿಚಾರವಾಗಿ ಇದೀಗ ಚೆನ್ನೈಯನ್ನು ಬೆಂಗಳೂರು ಹಿಂದಿಕ್ಕಿದೆ ಎಂದು ವರದಿಯಾಗಿದೆ.

ಇದು ಮಹಿಳೆಗೆ ಹೊಂದಿಕೊಳ್ಳುವ ವಾತಾವರಣ ಮತ್ತು ಮಹಿಳಾ ವೃತ್ತಿಪರರಿಗೆ ಸುರಕ್ಷಿತವನ್ನು (A woman-friendly environment and a safe one for women professionals) ರಾಜಧಾನಿ ಬೆಂಗಳೂರು ಒದಗಿಸುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಇದನ್ನು ಓದಿ : ರೊಮ್ಯಾಂಟಿಕ್‌ ಆಗಿ ಪತ್ನಿಗೆ ಹೂ ಮುಡಿಸುತ್ತಿರುವಾಗ ಹಸುವಿನ ಆಗಮನ ; ಮುಂದೆನಾಯ್ತು Video ನೋಡಿ.!

ಈ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ ಚೆನ್ನೈ ಎರಡನೇ ಸ್ಥಾನದಲ್ಲಿದೆ. ಮುಂಬೈ ಮೂರನೇ ಮತ್ತು ದೆಹಲಿ ಎಂಟನೇ ಸ್ಥಾನದಲ್ಲಿದೆ.

ಇನ್ನು, ಮುಂಬೈ ಮತ್ತು ಹೈದರಾಬಾದ್ ಸುರಕ್ಷತಾ ನಿಯತಾಂಕಗಳ (Safety parameters) ವಿಷಯದಲ್ಲಿ ಅಗ್ರ ಸ್ಥಾನದಲ್ಲಿವೆ. ತಿರುವನಂತಪುರಂ ಉದಯೋನ್ಮುಖ ಸಣ್ಣ ನಗರ ಕೇಂದ್ರಗಳ (An emerging small urban center) ಗುಂಪಿನಲ್ಲಿ ಹೆಚ್ಚಿನ ರೇಟಿಂಗ್‌ ಪಡೆದಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.

ಇದನ್ನು ಓದಿ : ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳಿಗೆ ಆಸ್ತಿ ಸಿಗುವುದಿಲ್ಲ ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು.!

ಅವತಾರ್‌ ಗ್ರೂಪ್‌ ನಡೆಸಿದ ಟಾಪ್‌ ಸಿಟಿಸ್‌ ಫಾರ್‌ ವುಮನ್‌ ಇನ್‌ ಇಂಡಿಯಾ(TCWI) ಸಮೀಕ್ಷೆಯಲ್ಲಿ,‌ ಭಾರತದ 25 ನಗರಗಳಲ್ಲಿ ಬೆಂಗಳೂರು ದೇಶದಲ್ಲೇ ಅಗ್ರ ಸ್ಥಾನದಲ್ಲಿದೆ (Bangalore is the top position in the country). ಈ ಮೂಲಕ ಬೆಂಗಳೂರು ನಗರದಲ್ಲಿ ಉದ್ಯೋಗ ನಿರತ ಮಹಿಳೆಯರಿಗೆ ಅತ್ಯಂತ ಅನುಕೂಲಕರ ಪರಿಸರವಿದೆ ಎಂದು ಅವತಾರ್‌ ಗ್ರೂಪ್‌ ಸಮೀಕ್ಷೆ ಮೂಲಕ ತಿಳಿಸಿದೆ. ಮಹಿಳೆಯರಿಗೆ ಉದ್ಯೋಗದ ಅವಕಾಶಗಳು ಚೆನ್ನೈ ಮತ್ತು ಹೈದರಾಬಾದ್‌ ನಗರದಲ್ಲಿ ಹೆಚ್ಚು ಎಂದು ಸಮೀಕ್ಷೆ ವರದಿ ಮಾಡಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!