ಜನಸ್ಪಂದನ ನ್ಯೂಸ್, ಡೆಸ್ಕ್ : ಭಾರೀ ಪ್ರಮಾಣದ ಕಾಲ್ತುಳಿತ ಸಂಭವಿಸಿ 4 ಮಂದಿ ಮೃತಪಟ್ಟ ಘಟನೆ ತಿರುಪತಿಯಲ್ಲಿ (Tirupati) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇನ್ನೂ ಈ ಅವಘಡದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು (serious injuries), ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.
Read it : ಕೃಷಿ ಇಲಾಖೆಯಲ್ಲಿ ಖಾಲಿ ಇರುವ 945 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!
ಭಕ್ತರು ತಿರುಪತಿಯ ವೈಕುಂಠ ದ್ವಾರ ದರ್ಶನದ (Vaikunta Dwara darshan) ಟಿಕೆಟ್ ತೆಗೆದುಕೊಳ್ಳುವ ವೇಳೆ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಏಕಕಾಲಕ್ಕೆ ಸಾವಿರಾರು ಮಂದಿ ನುಗ್ಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ ಈವರೆಗೂ ನಾಲ್ಕು ಮಂದಿ ಸಾವು ಕಂಡಿದ್ದಾರೆ. ಸ್ಥಳದಲ್ಲಿಯೇ ಸೇಲಂ ಮೂಲದ ಮಹಿಳೆ ಕೊನೆಯುಸಿರೆಳೆದಿದ್ದು, ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವು ಕಂಡಿದ್ದಾರೆ.
ಇನ್ನೂ ಟೋಕನ್‌ಗಾಗಿ 4 ಸಾವಿರಕ್ಕೂ ಅಧಿಕ ಭಕ್ತರು ನೆರೆದಿದ್ದರು ಎನ್ನಲಾಗಿದೆ.
Three Dead in Tirupati Stampede
Stampede at Vishnu Niwasam in Tirupati Claims Three Lives
Chaos erupted at Vishnu Nivasam in Tirupati during the distribution of Vaikunthadwara Sarvadarshanam tokens, leading to a deadly stampede.
A massive rush of devotees attempting to secure… pic.twitter.com/IF49Vi38GM
— Sudhakar Udumula (@sudhakarudumula) January 8, 2025
ಹಿಂದಿನ ಸುದ್ದಿ : ಈ ಒಂದು ಬೇರಿನಲ್ಲಿದೆ ಅತ್ಯದ್ಭುತ ಆರೋಗ್ಯ ಪ್ರಯೋಜನಗಳು.!
ಜನಸ್ಪಂದನ ನ್ಯೂಸ್, ಡೆಸ್ಕ್ : ಹಲವರು ಚಳಿಗಾಲದಲ್ಲಿ ಕೆಮ್ಮು, ನೆಗಡಿ, ಜ್ವರ ಬಂದರೆ ನೈಸರ್ಗಿಕ ಪರಿಹಾರಗಳನ್ನು (natural remedy) ಬಳಸುತ್ತಾರೆ. ಅವುಗಳಲ್ಲಿ ಮುಲೇಥಿ ಬೇರು (ಲೈಕೋರೈಸ್ ರೂಟ್) ಒಂದಾಗಿದೆ.
ಯಷ್ಟಿಮಧು ಚೂರ್ಣ ಎಂಬ ಹೆಸರಿನಲ್ಲಿ ಈ ಬೇರಿನ ಪುಡಿ ಆಯುರ್ವೇದದ ಅಂಗಡಿಗಳಲ್ಲಿ (Ayurvedic shops) ಸಿಗುತ್ತದೆ. ಇದರ ಬೇರನ್ನು ಅಥವಾ ಈ ಚೂರ್ಣವನ್ನು ಸ್ವಲ್ಪವೇ ಸ್ವಲ್ಪ ತೆಗೆದುಕೊಂಡು ನೀರಿನಲ್ಲಿ ಹತ್ತು ನಿಮಿಷ ಕುದಿಸಿ ಊಟ ಮಾಡುವುದಕ್ಕಿಂತ ಮುಂಚೆ (Boil for ten minutes before eating) ಕುಡಿಯುವುದರಿಂದ ಜಠರದ ಒಳಭಾಗದಲ್ಲಿ (Inside the stomach) ರಕ್ಷಣಾ ಕವಚವೊಂದನ್ನು ನಿರ್ಮಿಸಿ ಉರಿ ಮತ್ತು ಎದೆಯುರಿ ಅಥವಾ ಹುಳಿತೇಗು ಆಗದಂತೆ ತಡೆಯಬಹುದು ಎಂದು ವರದಿಯಾಗಿದೆ.
Read it :ಜಾತ್ರೆಯಲ್ಲಿ ರೊಚ್ಚಿಗೆದ್ದು ಜನರನ್ನು ಸೊಂಡಿಲಿನಿಂದ ಎತ್ತಿ ಬಿಸಾಕಿದ ಆನೆ ; Shocking ವಿಡಿಯೋ ಇಲ್ಲಿದೆ.!
ಇಂಡೊಮೆಥಾಸಿನ್- ಪ್ರೇರಿತ ಹುಣ್ಣುಗಳನ್ನು (Indomethacin- induced ulcers) ಹೊಂದಿರುವ ಇಲಿಗಳಿಗೆ ಲೈಕೋರೈಸ್ ಎಫ್‌ಟಿ (ಫಾಮೋಟಿಡಿನ್) ಸಂಯೋಜನೆಯ ಚಿಕಿತ್ಸೆಯನ್ನು ನೀಡಲಾಯಿತು. ಅಚ್ಚರಿಯ ಸಂಗತಿಯೆಂದರೆ ಇತರೆ ಚಿಕಿತ್ಸೆಗಿಂತ ಎಫ್‌ಟಿ ಮತ್ತು ಲೈಕೋರೈಸ್‌ಗಳು ಹುಣ್ಣುಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಯಿತು ಎಂದು ಪಬ್‌ಮೆಡ್‌ನಲ್ಲಿ ಪ್ರಕಟವಾದ ಜೋರ್ಡಾನ್‌ನ ಅಲ್- ಇಸ್ರಾ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಫಾರ್ಮಸಿಯು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.
ಪ್ರಯೋಜನಗಳು :
ಮುಲೇಥಿಯಲ್ಲಿ ಫೈಟೊಈಸ್ಟ್ರೊಜೆನ್‌ಗಳು ಇದ್ದು ಅದು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸಲು (regulate hormone levels) ಸಹಾಯ ಮಾಡುತ್ತದೆ.
ಹೊಟ್ಟೆಯ ಹುಣ್ಣುಗಳಿಗೆ ಚಿಕಿತ್ಸೆ ನೀಡಲು ಇದು ತುಂಬಾ ಪ್ರಯೋಜನಕಾರಿ. ಹೊಟ್ಟೆಯಲ್ಲಿ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸಿ (Increase the production of mucus in the stomach), ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ. ಅಲ್ಲದೇ ಗ್ಯಾಸ್ಟ್ರಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.
ಮುಲೇಥಿಯು ಸಕ್ಕರೆಗಿಂತ ಸಿಹಿಯಾಗಿರುತ್ತದೆ. ಹಾಗಾಗಿ ಸಿಹಿತಿಂಡಿಗಳು ಮತ್ತು ಔಷಧಿಗಳನ್ನು ತಯಾರಿಸುವಾಗ ನೈಸರ್ಗಿಕ ಸಿಹಿಕಾರಕವಾಗಿ (Natural sweetener) ಇದನ್ನು ಉಪಯೋಗಿಸಲಾಗುತ್ತದೆ.
ಸಂಧಿವಾತ, ಅಲರ್ಜಿ ಮತ್ತು ಚರ್ಮದ ಕಿರಿಕಿರಿಯ ಸಮಸ್ಯೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಆ್ಯಂಟಿವೈರಲ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದ್ದು, ಪ್ರತಿರಕ್ಷಣಾ ವ್ಯವಸ್ಥೆಯನ್ನು (Immune system) ಇದು ಬಲಪಡಿಸುತ್ತದೆ.
ನೋಯುತ್ತಿರುವ ಗಂಟಲು ಮತ್ತು ಉಸಿರಾಟದ ಸೋಂಕುಗಳಿಂದ ಮುಲೇಥಿಯು ಪರಿಹಾರವನ್ನು ನೀಡುತ್ತದೆ.
ದೇಹವು ಸೋಂಕುಗಳ ವಿರುದ್ಧ ಹೋರಾಡಲು ಮುಲೇಥಿ ಸಹಾಯ ಮಾಡುತ್ತದೆ.
ಹಾರ್ಮೋನುಗಳ ಅಸಮತೋಲನ ಅಥವಾ ಋತುಬಂಧದ ಲಕ್ಷಣಗಳನ್ನು (Menopausal symptoms) ಅನುಭವಿಸುತ್ತಿರುವ ಮಹಿಳೆಯರಿಗೆ ಇದರಿಂದ ಪ್ರಯೋಜನ ಪಡೆಯಬಹುದು.
ಆದರೆ ಮುಲೇಥಿಯ ದೀರ್ಘಾವಧಿಯ ಸೇವನೆ ಅಥವಾ ಮಿತಿಮೀರಿದ ಬಳಕೆಯು ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ (Long- term consumption or overuse can cause side effects). ಆದ್ದರಿಂದ ನೀವು ನಿಯಮಿತವಾಗಿ ಬಳಸುವ ಯೋಚನೆಯಲ್ಲಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು