Sunday, September 8, 2024
spot_img
spot_img
spot_img
spot_img
spot_img
spot_img
spot_img

SSLC ಪಾಸಾಗಿದ್ದೀರಾ.? ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ರಾಮನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಜಿಲ್ಲೆ ಮತ್ತು ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : ಮಹಿಳೆಯ ಬಟ್ಟೆ ಒಣಗಿಸುವ ಹೊಸ technique ನೋಡಿ‌ ನೆಟ್ಟಿಗರು ಪುಲ್‌ ಖುಷ್ ; ವಿಡಿಯೋ ವೈರಲ್.!

ಹುದ್ದೆ ವಿವರ : 

  • ರಾಮನಗರ- 100.
  • ಚನ್ನಪಟ್ಟಣ – 25.
  • ಕನಕಪುರ – 25.
  • ಮಾಗಡಿ – 25 ಹೀಗೆ ಒಟ್ಟು 175 ಹುದ್ದೆಗಳು.

ವಿದ್ಯಾರ್ಹತೆ :

  • ಅಭ್ಯರ್ಥಿಗಳು ಕನಿಷ್ಠ ಎಸ್​ಎಸ್​ಎಲ್​ಸಿ ಉತ್ತೀರ್ಣರಾಗಿರಬೇಕು.
  • ವಸ್ತು ಸ್ಥಿತಿಯ ಮತ್ತು ಪರಿಸ್ಥಿತಿಯ ವಿಷಯಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುವವರಾಗಿರಬೇಕು.
  • ಈ ಹುದ್ದೆಗೆ ನಿವೃತ್ತ ಶಿಕ್ಷಕರು, ನಿವೃತ್ತ ಸರ್ಕಾರಿ ನೌಕರರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತರು, ಕಾನೂನು ವಿದ್ಯಾರ್ಥಿಗಳು, ರಾಜಕೀಯವಲ್ಲದ ಸಂಘಗಳ ಸದಸ್ಯರು. ಮತ್ತು
  • ಮಹಿಳಾ ಸ್ವಯಂ ಸಂಘಗಳ ಪ್ರತಿನಿಧಿಗಳು ಅರ್ಜಿ ಸಲ್ಲಿಸಬಹುದು.

(ಈ ಹುದ್ದೆಗಳನ್ನು ಮೂರು ವರ್ಷದ ಗುತ್ತಿಗೆ ಅವಧಿಗೆ ಗೌರವಧನದ ಆಧಾರದ ಮೇಲೆ ನೇಮಕಾತಿ ನಡೆಸಲಾಗುವುದು.)

ಇದನ್ನು ಓದಿ : ಮಗಳ ಖಾಸಗಿ ವಿಡಿಯೋ‌ Viral ಮಾಡಿದ ತಂದೆ.!

ಅರ್ಜಿ ಸಲ್ಲಿಕೆ : 

  • ಅಭ್ಯರ್ಥಿಗಳು ಆಫ್​ಲೈನ್​ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
  • ನಿಗದಿತ ಅರ್ಜಿ ಸಲ್ಲಿಕೆಯೊಂದಿಗೆ ಇತ್ತೀಚಿನ ಪಾಸ್​ಪೋರ್ಟ್​ ಅಳತೆಯ ಭಾವಚಿತ್ರ, ಅಗತ್ಯ ವಿದ್ಯಾರ್ಹತೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಅರ್ಜಿ ಸಲ್ಲಿಸುವ ವಿಳಾಸ : 

ಅಧ್ಯಕ್ಷರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಲಯದ ಆವರಣ, ರಾಮನಗರ- 562159.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ಜುಲೈ 20, 2024 ಆಗಿದೆ.

ಪ್ರಮುಖ ಲಿಂಕ್‌ :

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಕುರಿತು ramanagara.dcourts.gov.in ಭೇಟಿ ನೀಡಿ.

ಇದನ್ನು ಓದಿ : Health : ನಾಲಿಗೆಯ ಬಣ್ಣವೇ ಹೇಳುತ್ತೆ ನಿಮ್ಮ ಆರೋಗ್ಯದ ಬಗ್ಗೆ.!

Ramanagar District Legal Services Authority Recruitment for Para Legal Volunteer

ಅಧಿಸೂಚನೆ : (ರಾಮನಗರದ ಕಾನೂನು ಸೇವಾ ಪ್ರಾಧಿಕಾರ)

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official website for official information.
WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img