ಜನಸ್ಪಂದನ ನ್ಯೂಸ್, ಡೆಸ್ಕ್ : ಬಾಂಗ್ಲಾದೇಶಕ್ಕೆ ಪಾಕ್ ಹೈಕಮಿಷನರ್ ಬಾಂಗ್ಲಾದ ಯುವತಿಯೊಂದಿಗೆ ಇರುವ ಫೋಟೋಗಳು ಬಹಿರಂಗಗೊಂಡಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ.
ಬಾಂಗ್ಲಾದೇಶಕ್ಕೆ ಪಾಕ್ ಹೈಕಮಿಷನರ್ (High Commissioner) ಆಗಿರುವ ಸೈಯದ್ ಅಹ್ಮದ್ ಮರೂಫ್ ಯುವತಿಯೊಂದಿಗೆ ಏಕಾಂತದಲ್ಲಿ ಇರುವ ವಿಡಿಯೋಗಳು ಮತ್ತು ಫೋಟೋಗಳು ಸಹ ಲೀಕ್ ಆಗಿವೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : Health : ಕಾಲಿನಲ್ಲಿ ಈ ಲಕ್ಷಣಗಳಿವೆಯೇ? ಇವು ಈ ಗಂಭೀರ ಕಾಯಿಲೆಯ ಲಕ್ಷಣಗಳಾಗಿರಬಹುದು?
2023ರಲ್ಲಿ ಬಾಂಗ್ಲಾದೇಶಕ್ಕೆ ಪಾಕಿಸ್ತಾನದ ಹೈಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಸೈಯದ್ ಅಹ್ಮದ್ ಮರೂಫ್, ಇದೀಗ ಬಾಂಗ್ಲಾದೇಶದ ಹುಡುಗಿಯೊಂದಿಗೆ ಇರುವ ಫೋಟೋಗಳು ಲೀಕ್ ಆಗಿದ್ದು, ಪಾಕಿಸ್ತಾನಕ್ಕೆ ಮುಖಭಂಗವಾಗಿದೆ.
ಹೀಗಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಈ ವಿಚಾರ ತಿಳಿದು ಭಯಗೊಂಡಿದ್ದು, ಸೈಯದ್ ಅಹ್ಮದ್ ಮರೂಫ್ ಅವರನ್ನು ರಜೆಯ ಮೇಲೆ ಕಳುಹಿಸಿದೆ (Sent on vacation) ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : whatsapp : ವಾಟ್ಸಪ್ಗೆ ಬರುವ ಈ ಪೋಟೋ ಕ್ಲಿಕ್ ಮಾಡಿದ್ರೆ ಖಾತೆಯಲ್ಲಿನ ಹಣವೆಲ್ಲ ಮಾಯ.!
ಮರೂಫ್ಗೆ ಸಂಬಂಧಿಸಿದ ಕೆಲವು ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗಿದ್ದವು. ಬಾಂಗ್ಲಾದೇಶದ ಹುಡುಗಿಯ ಜೊತೆ ಅನ್ಯೋನ್ಯವಾಗಿರುವ ಫೋಟೋಗಳು (Intimate photos) ಮತ್ತು ವಿಡಿಯೋಗಳು ಹರಿದಾಡಿದ್ದವು.
ಮರೂಫ್ಗೆ ಆ ಯುವತಿಯೊಂದಿಗೆ ನಿಕಟ ಸಂಬಂಧವಿದೆ ಎನ್ನಲಾಗಿದೆ. ಅಲ್ಲದೆ, ವಂಚನೆಯ ಜಾಲದಲ್ಲಿ ಆತ ಸಿಲುಕಿದ್ದಾನೆ ಎಂಬ ಪ್ರಚಾರವೂ ನಡೆಯುತ್ತಿದೆ. ಮರೂಫ್ ಸೂಕ್ಷ್ಮ ಗುಪ್ತಚರ ಮಾಹಿತಿಯನ್ನು (Sensitive intelligence information) ಆಕೆಯೊಂದಿಗೆ ಹಂಚಿಕೊಂಡಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿ : Reels : ನಿಮಗೂ ರೀಲ್ಸ್ ಹುಚ್ಚಾ.? ಹಾಗಾದ್ರೆ ಮೈ ಜುಂ ಎನ್ನೋ ವಿಡಿಯೋ ನೋಡಿ.
ಸದ್ಯ ಮರೂಫ್ ಅಧಿಕೃತವಾಗಿ ರಜೆಯಲ್ಲಿದ್ದಾರೆ ಆದರೆ, ಎಷ್ಟು ದಿನಗಳ ಕಾಲ ರಜೆಯಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.
ಇನ್ನು ಢಾಕಾದಲ್ಲಿರುವ ಪಾಕಿಸ್ತಾನದ ಉಪ ಹೈಕಮಿಷನರ್ ಮುಹಮ್ಮದ್ ಆಸಿಫ್ ಅವರು ಹಂಗಾಮಿ ಹೈಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Pakistani Ambassador to Bangladesh Syed Ahmed Maroof is reportedly untraceable after his honey trapped videos emerged online. #IntelGames pic.twitter.com/LtabGyQe5C
— Cyber Huntss (@Cyber_Huntss) May 12, 2025
ಹಿಂದಿನ ಸುದ್ದಿ : Health : ನಿಮ್ಮ ಮನೆ ಅಕ್ಕಪಕ್ಕದಲ್ಲಿ ಸಿಗುವ ಈ ಹಣ್ಣಿನಿಂದ ಸಿಗುತ್ತೆ ಮಧುಮೇಹದಿಂದ ಮುಕ್ತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸೀಮೆ ಹುಣಸೆ ಹಣ್ಣು, ಇಲಾಚಿ ಹಣ್ಣು ಎಂದು ಕರೆಯುವ ಈ ಹಣ್ಣು ಜಂಗಲ್ ಜಿಲೇಬಿ (Jungle Jilebi) ಎಂದೇ ಖ್ಯಾತಿ ಪಡೆದಿದೆ. ಪ್ರತಿದಿನ ಇಪ್ಪತ್ತರಿಂದ ಮೂವತ್ತು ಗ್ರಾಂ ಇಲಾಚಿ ಹಣ್ಣು ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತವೆ.
ಪಿಥೆಸೆಲ್ಲೋಬಿಯಂ ಡುಲ್ಸ್ (Pithecellobium dulce) ಎಂದು ಕರೆಯಲ್ಪಡುವ ಸೀಮೆ ಹುಣಸೆ ಹಣ್ಣು, ವಿಶಿಷ್ಟವಾದ ರುಚಿ ಹೊಂದಿದೆ. ಇದರ ಔಷಧೀಯ ಗುಣಗಳು ಆರೋಗ್ಯಕ್ಕೂ ವರದಾನವಿದ್ದಂತೆ.
ಇದನ್ನು ಓದಿ : Revenue Department : ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಜಂಗಲ್ ಜಲೇಬಿಯನ್ನು ಊಟ ಮಾಡುವುದಕ್ಕಿಂತ ಒಂದು ಗಂಟೆ ಮುಂಚೆ ಅಥವಾ ಒಂದು ಗಂಟೆ ನಂತರ ತಿನ್ನಬೇಕು (Eat one hour before or one hour after) ಎನ್ನುತ್ತಾರೆ ಹಿರಿಯರು.
ಈ ಹಣ್ಣು ವಿಟಮಿನ್ ಸಿ, ಪ್ರೋಟೀನ್, ಕೊಬ್ಬು, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಥಯಾಮಿನ್, ರಿಬೋಫ್ಲಾವಿನ್ ಮುಂತಾದ ಅನೇಕ ಅಂಶಗಳನ್ನು ಹೊಂದಿದೆ.
ಕಣ್ಣಿನ ಸಮಸ್ಯೆ ಮತ್ತು ಚರ್ಮದ ಕಾಯಿಲೆಗೆ (Eye problems and skin disease) ಈ ಹಣ್ಣು ತುಂಬಾ ಉಪಯೋಗಕರ ಎಂದು ಪರಿಗಣಿಸಲಾಗಿದೆ.
ಇದನ್ನು ಓದಿ : ಅತ್ಯಂತ ದುರ್ಬಲ ಪಾಸ್ವರ್ಡ್ ಗಳಿವು; 1 ನಿಮಿಷ ಸಾಕು ಖಾತೆ ಹ್ಯಾಕ್ ಮಾಡಲು.!
ಇದು ದೇಹವನ್ನು ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ. ಈ ಗುಣವು ವಯಸ್ಸಾಗುವುದನ್ನು ತಡೆಯುತ್ತದೆ (Prevents aging) ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ಈ ಹಣ್ಣು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವುದು (To strengthen the digestive system).
ಜಂಗಲ್ ಜಲೇಬಿಯನ್ನು ಒಂದು ತಿಂಗಳು ನಿಯಮಿತವಾಗಿ ಸೇವಿಸಿದರೆ, ಸಕ್ಕರೆಯನ್ನು ನಿಯಂತ್ರಿಸಬಹುದಂತೆ.
ಇದನ್ನು ಓದಿ : Pahalgam attack : ಭಾರತದಿಂದ ಪ್ರತಿಕಾರದ ಭಯ ; ಪಾಕಿಸ್ತಾನ ಸೈನಿಕರ ಸಾಮೂಹಿಕ ರಾಜೀನಾಮೆ.?
ಇದರಲ್ಲಿರುವ ಆಂಟಿಆಕ್ಸಿಡೆಂಟ್, ಆಂಟಿಇನ್ಫ್ಲಾಮೇಟರಿ, ಆಂಟಿಡಿಯಾಬೆಟಿಕ್ ಅಂಶಗಳು ಕ್ಯಾನ್ಸರ್ ರೋಗಿಗಳಿಗೆ ಉಪಯುಕ್ತವಾಗಿವೆ (Useful for cancer patients).
ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು (To maintain body temperature) ಮತ್ತು ಶಾಖ ಸಂಬಂಧಿತ ಅಸ್ವಸ್ಥತೆಯನ್ನು ತಡೆಯಲು ಸಹಾಯ ಮಾಡುತ್ತದೆ.
ನೈಸರ್ಗಿಕ ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ
ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ಇದನ್ನು ಓದಿ : Health : ಏಕಾಏಕಿ ಕೈಗಳು ನಡುಗುವುದು ಈ ಗಂಭೀರ ಕಾಯಿಲೆಯಾಗಿರಬಹುದು.!
ಫೈಲೇರಿಯಾಸಿಸ್ ಎಂಬ ಸಾರವನ್ನು ಈ ಹಣ್ಣಿನ ಎಲೆ ಮತ್ತು ಬೀಜಗಳು ಹೊಂದಿದ್ದು, ಇದು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಉಪಯುಕ್ತವಾಗಿದೆ. ಅಲ್ಲದೇ ಸೊಳ್ಳೆಗಳ ವಿರುದ್ಧ ನೈಸರ್ಗಿಕ ಕೀಟನಾಶಕವಾಗಿಯೂ (Natural insecticide against mosquitoes) ಈ ಹಣ್ಣು ಕೆಲಸ ಮಾಡುತ್ತದೆ.
ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ : ಬೇಡ, ಬೇಡ ಅಂದ್ರು ಮಧ್ಯರಾತ್ರಿ ಮಹಿಳೆ ಮನೆಯೊಳಗೆ ನುಗ್ಗಿದ Teacher ; ಮುಂದೆನಾಯ್ತು.!
ಕೆಮ್ಮು ಮತ್ತು ಅಸ್ತಮಾದಂತಹ ರೋಗಗಳನ್ನು ಗುಣಪಡಿಸಬಹುದು.
Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ (Janaspandhan News) ಈ ಲೇಖನಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರರಲ್ಲ.