Home Blog Page 17

Car – KSRTC ಬಸ್ ಭೀಕರ ಅಪಘಾತ ; ಮೂವರು ಯುವಕರ ದುರ್ಮರಣ.

0

ಜನಸ್ಪಂದನ ನ್ಯೂಸ್‌, ಬೆಂಗಳೂರು ಗ್ರಾಮಾಂತರ : ದೇವನಹಳ್ಳಿ ಹೊರವಲಯದ ಲಾಲಗೊಂಡನಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತ (Accident) ದಲ್ಲಿ ಕಾರಿ (Car) ನಲ್ಲಿದ್ದ ಮೂವರು ಯುವಕರು ದುರ್ಮರಣಕ್ಕೀಡಾದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಚಿಕ್ಕಬಳ್ಳಾಪುರ ದಿಕ್ಕಿನಿಂದ ವೇಗವಾಗಿ ಬರುತ್ತಿದ್ದ ಕಾರು (Car) ಚಾಲಕರ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರುಗಡೆಯ ರಸ್ತೆ ಮೇಲೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್‌ಗೆ ಅಪ್ಪಳಿಸಿದ ಪರಿಣಾಮ ದುರಂತ ನಡೆದಿದೆ.

ಡಿಕ್ಕಿಯ ತೀವ್ರತೆಗೆ ಕಾರು (Car) ಗಂಭೀರವಾಗಿ ಹಾನಿಗೊಳಗಾಗಿದ್ದು, ವಾಹನದಲ್ಲಿ ಸಿಲುಕಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಮೋಹನ್ ಕುಮಾರ್ (33), ಸುಮನ (28) ಮತ್ತು ಸಾಗರ್ (23) ಎಂದು ಪೊಲೀಸರು ದೃಢಪಡಿಸಿದ್ದಾರೆ. ಇವರು ಮೂವರೂ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಮೂಲದವರು ಎಂದು ಮಾಹಿತಿ ದೊರೆತಿದೆ.

ಇದನ್ನು ಓದಿ : “ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ : ಲೋಕಾಯುಕ್ತ Inspector ಸಜೀವ ದಹನ”.

ಅಪಘಾತದ ರಭಸದ ಪರಿಣಾಮ ಬಸ್ ಮುಂಭಾಗಕ್ಕೂ ಹಾನಿಯಾಗಿದ್ದು, ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಪೊಲೀಸರು ಮತ್ತು ಸ್ಥಳೀಯರು ತಕ್ಷಣ ಪೂರ್ಣಗೊಳಿಸಿದ್ದಾರೆ.

ಅತಿವೇಗವೇ ಈ ದುರಂತಕ್ಕೆ ಪ್ರಮುಖ ಕಾರಣವಾಗಿರಬಹುದೆಂದು ಪ್ರಾಥಮಿಕ ತನಿಖೆಯಿಂದ ಊಹಿಸಲಾಗಿದೆ. ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸರಾಗಗೊಳಿಸುವಲ್ಲಿ ತೊಡಗಿದ್ದರು.

ಇದನ್ನು ಓದಿ : Accident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!

ಅಪಘಾತದ ಪರಿಣಾಮವಾಗಿ ಕೆಲಕಾಲ ಹೈದರಾಬಾದ್–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ನಜ್ಜುಗುಜ್ಜಾದ ಕಾರಿನಿಂದ (Car) ಮೃತದೇಹಗಳನ್ನು ಹೊರತೆಗೆಯಲು ಪೊಲೀಸರು ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ದಟ್ಟಣೆ ಮತ್ತಷ್ಟು ಹೆಚ್ಚಾಗಿತ್ತು.

ಬಳಿಕ ಮೃತದೇಹಗಳನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, Car – KSRTC ಬಸ್ ಅಪಘಾತಕ್ಕೆ ಕಾರಣಗಳ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.

ರಾಜ್ಯದಲ್ಲಿ 2.84 ಲಕ್ಷ Government ಹುದ್ದೆಗಳು ಖಾಲಿ ; 24,300 ನೇಮಕಕ್ಕೆ ಅನುಮತಿ : ಸಿಎಂ

Government Job

ಜನಸ್ಪಂದನ ನ್ಯೂಸ್‌, ಬೆಂಗಳೂರು : ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡ ಸೇರಿದಂತೆ ರಾಜ್ಯದ ವಿವಿಧೆಡೆ ಇತ್ತೀಚೆಗೆ ಯುವಕರು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಕರ್ನಾಟಕದಲ್ಲಿ ಒಟ್ಟು 2,84,881 ಸರ್ಕಾರಿ (Government) ಹಾಗೂ ಅರೆ ಸರ್ಕಾರಿ (semi Government) ಹುದ್ದೆಗಳು ಖಾಲಿ ಇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಪೈಕಿ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿ, ಇಲಾಖಾವಾರು ಖಾಲಿ ಹುದ್ದೆಗಳ ವಿವರ ಹಾಗೂ ಪ್ರಸ್ತುತ ಭರ್ತಿ ಮಾಡಲು ಅನುಮೋದನೆ ಪಡೆದ ಹುದ್ದೆಗಳ ಮಾಹಿತಿಯನ್ನು ಪ್ರಕಟಿಸಿದ್ದಾರೆ.

ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಇಲಾಖಾವಾರು ಖಾಲಿ ಹುದ್ದೆಗಳ ವಿವರ :

ಸಿಎಂ ನೀಡಿದ ಮಾಹಿತಿಯಂತೆ, ರಾಜ್ಯದ ವಿವಿಧ (Government) ಇಲಾಖೆಗಳಲ್ಲಿ ಈ ಕೆಳಕಂಡಂತೆ ಹುದ್ದೆಗಳು ಖಾಲಿಯಿವೆ:

  • ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ : 79,696
  • ಆರೋಗ್ಯ ಇಲಾಖೆ : 37,572
  • ಒಳಾಡಳಿತ ಇಲಾಖೆ : 28,188
  • ಉನ್ನತ ಶಿಕ್ಷಣ ಇಲಾಖೆ : 13,599
  • ಪಶುಸಂಗೋಪನೆ ಇಲಾಖೆ : 11,020
  • ಗ್ರಾಮೀಣಾಭಿವೃದ್ಧಿ ಇಲಾಖೆ : 10,504
  • ಕಂದಾಯ ಇಲಾಖೆ : 10,867
  • ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆ : 9,646
  • ಆರ್ಥಿಕ ಇಲಾಖೆ : 7,668
  • ಕಾನೂನು ಇಲಾಖೆ : 7,659
  • ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ : 4,792
  • ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ–ಜೀವನೋಪಾಯ ಇಲಾಖೆ : 4,010
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ : 3,391
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ : 2,435

ಇದನ್ನು ಓದಿ : ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಕೇಳಿದ Noise ; ನೋಡಲು ಹೋದ ಅತ್ತೆಗೆ ಶಾಕ್!

24,300 ಹುದ್ದೆಗಳ ಭರ್ತಿಗೆ ಅನುಮೋದನೆ :

ಪ್ರಸ್ತುತ ಆರ್ಥಿಕ ಇಲಾಖೆ ಅನುಮೋದನೆ ನೀಡಿರುವ 24,300 ಹುದ್ದೆಗಳ ಇಲಾಖಾವಾರು ವಿವರ ಹೀಗಿದೆ:

  • ಸಾರಿಗೆ ಇಲಾಖೆ : 6,847
  • ಇಂಧನ ಇಲಾಖೆ : 2,400
  • ಆರ್ಥಿಕ (ಹಣಕಾಸು) ಇಲಾಖೆ : 2,243
  • ಆರೋಗ್ಯ ಇಲಾಖೆ : 1,725
  • ಕಂದಾಯ ಇಲಾಖೆ : 1,350
  • ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ : 5,267
  • ಕೃಷಿ ಇಲಾಖೆ : 557
  • ಒಳಾಡಳಿತ ಇಲಾಖೆ : 557
  • ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆ : 892
  • ವೈದ್ಯಕೀಯ ಶಿಕ್ಷಣ ಇಲಾಖೆ : 333
  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ : 200
  • ನಗರಾಭಿವೃದ್ಧಿ ಇಲಾಖೆ : 185
  • ಸಹಕಾರ ಇಲಾಖೆ : 180

ಇದನ್ನು ಓದಿ : Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

ಒಟ್ಟು 24,300 ಹುದ್ದೆಗಳ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Courtesy : Kannada Prabha

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

DCC ಬ್ಯಾಂಕ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ; ಅರ್ಜಿ ಸಲ್ಲಿಕೆ ಆರಂಭ.

Raichur & Koppal DCC Bank

ಜನಸ್ಪಂದನ ನ್ಯೂಸ್‌, ನೌಕರಿ : ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (Raichur & Koppal DCC Bank) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 70 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಗ್ರೂಪ್ A, B ಮತ್ತು C ವಿಭಾಗದ ಶಾಖಾ ವ್ಯವಸ್ಥಾಪಕ, ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ ascguru.com/raichur-dcc-bank ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಒಟ್ಟು DCC Bank ಹುದ್ದೆಗಳ ವಿವರ :

  • ಶಾಖಾ ವ್ಯವಸ್ಥಾಪಕರು (Branch Manager) – 15 ಹುದ್ದೆಗಳು.
  • ಸಹಾಯಕರು (Assistants) – 45 ಹುದ್ದೆಗಳು.
  • ಅಟೆಂಡರ್ (Attender) – 10 ಹುದ್ದೆಗಳು.

ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!

DCC Bank ವಿದ್ಯಾರ್ಹತೆ :

1. ಶಾಖಾ ವ್ಯವಸ್ಥಾಪಕರು – 15 ಹುದ್ದೆಗಳು.

  • ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಉತ್ತೀರ್ಣರಾಗಿರಬೇಕು.

2. ಸಹಾಯಕರು – 45 ಹುದ್ದೆಗಳು.

  • ಸಮರ್ಥಿತ ವಿಶ್ವವಿದ್ಯಾನಿಲಯದ ಪದವಿ ಕಡ್ಡಾಯ.

3. ಅಟೆಂಡರ್ – 10 ಹುದ್ದೆಗಳು.

  • ಕಡ್ಡಾಯವಾಗಿ SSLC (10ನೇ ತರಗತಿ) ಉತ್ತೀರ್ಣರಾಗಿರಬೇಕು.

ವಯೋಮಿತಿ :

  • ಕನಿಷ್ಠ: 18 ವರ್ಷ
  • ಗರಿಷ್ಠ: 35 ವರ್ಷ

ಇದನ್ನು ಓದಿ : IB : ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ.

ವಯೋಮಿತಿ ಸಡಿಲಿಕೆ :

  • 2A, 2B, 3A, 3B ಅಭ್ಯರ್ಥಿಗಳು : 3 ವರ್ಷಗಳು.
  • SC / ST ಅಭ್ಯರ್ಥಿಗಳು : 5 ವರ್ಷಗಳು.

ಅರ್ಜಿ ಶುಲ್ಕ (Application Fee) :

1. ಶಾಖಾ ವ್ಯವಸ್ಥಾಪಕ & ಸಹಾಯಕ ಹುದ್ದೆಗಳು :

  • ಸಾಮಾನ್ಯ ಮೆರಿಟ್‌ (GM) : ರೂ.1600/-
  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.800/-

2. ಅಟೆಂಡರ್ ಹುದ್ದೆ :

  • ಪ.ಜಾ / ಪ.ಪಂ / ಪ್ರವರ್ಗ – 1 / ಮಾಜಿ ಸೈನಿಕರು / ಅಂಗವಿಕಲರು : ರೂ.500/-
  • ಇತರ ಅಭ್ಯರ್ಥಿಗಳು (GM, 2A, 2B, 3A, 3B) : ರೂ.500/-

ಇದನ್ನು ಓದಿ : NWKRTC : ಕರ್ನಾಟಕ ವಾಯುವ್ಯ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

ಆಯ್ಕೆ ವಿಧಾನ :

ನೇಮಕಾತಿ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯುತ್ತದೆ:

  1. ಲಿಖಿತ ಪರೀಕ್ಷೆ
  2. ಸಂದರ್ಶನ (Interview)

DCC Bank ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ → https://tascguru.com/raichur-dcc-bank/
  2. ಹೋಮ್‌ಪೇಜ್‌ನಲ್ಲಿ ಕಾಣುವ “Apply Here” ಬಟನ್ ಕ್ಲಿಕ್ ಮಾಡಿ
  3. ಹೊಸ ಪೋರ್ಟಲ್ ತೆರೆಯುತ್ತದೆ, ನಿಮ್ಮ Email ID & Password ಬಳಸಿ Login ಅಥವಾ Register ಆಗಿ
  4. ಹೊಸ ಬಳಕೆದಾರರೆಂದರೆ ಮೊದಲು ಹೊಸ ಖಾತೆ ರಚಿಸಿ.
  5. ನಂತರ Login ಆಗಿ → ಅರ್ಜಿ ನಮೂದು ಪೂರೈಸಿ.
  6. ಬೇಡಿಕೆಯಿರುವ ಸ್ಕ್ಯಾನ್ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ.
  7. ಅರ್ಜಿ ಶುಲ್ಕ ಪಾವತಿಸಲು ಚಲನ್‌ (Challan) ಪ್ರಿಂಟ್ ತೆಗೆದುಕೊಳ್ಳಿ.
  8. ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಿದ ನಂತರ, ಆ ವಿವರವನ್ನು ಅರ್ಜಿಯಲ್ಲಿ ಅಪ್ಡೇಟ್ ಮಾಡಿ.
  9. ಅರ್ಜಿ ಸಲ್ಲಿಕೆ ಪೂರ್ಣಗೊಳ್ಳುತ್ತದೆ.

ಇದನ್ನು ಓದಿ : RRB NTPC : ಅರ್ಜಿ ಸಲ್ಲಿಕೆಯ ಗಡುವು ವಿಸ್ತರಿಸಿದ ರೈಲ್ವೆ ನೇಮಕಾತಿ ಮಂಡಳಿ

ಮುಖ್ಯ ದಿನಾಂಕಗಳು :

  • ಅರ್ಜಿ ಪ್ರಾರಂಭ : ನವೆಂಬರ್ 21, 2025.
  • ಕೊನೆಯ ದಿನ : ಡಿಸೆಂಬರ್ 22, 2025.

ಮುಖ್ಯ ಸೂಚನೆ :

  • ಹುದ್ದೆಗಳ ಅಧಿಕೃತ ಅಧಿಸೂಚನೆ ಮತ್ತು ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ:
    👉 ascguru.com/raichur-dcc-bank

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಕುಡಿದ ಅಮಲಿನಲ್ಲಿ ರಾಪಿಡೋದಿಂದ ಕೆಳಗೆ ಬಿದ್ದ Young woman ; ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದ್ಯದ ಅಮಲಿನಲ್ಲಿ ಇದ್ದ ಎಳೆ ವಯಸ್ಸಿನ ಯುವತಿ (Young woman) ಯೊಬ್ಬಳು ರಾಪಿಡೋ ಬೈಕ್‌ನಲ್ಲಿ ಕುಳಿತುಕೊಳ್ಳುವ ವೇಳೆ ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ದೃಶ್ಯಗಳನ್ನು ಕಂಡ ನೆಟ್ಟಿಗರು ಯುವ ಸಮೂಹದ ಸುರಕ್ಷತೆ ಮತ್ತು ಜವಾಬ್ದಾರಿಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.

37 ಸೆಕೆಂಡುಗಳ ಈ ವಿಡಿಯೋವನ್ನು @rose_k01 ಎಂಬ ಎಕ್ಸ್ (ಹಿಂದಿನ ಟ್ವಿಟರ್) ಖಾತೆಯಿಂದ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕಾಣುವಂತೆ, ಯುವತಿ (Young woman) ಯೊಬ್ಬಳ ಒಂದು ಕೈ ಮತ್ತು ಕಾಲು ಬೈಕ್ ಮೇಲೆ ಇದ್ದರೆ, ಮತ್ತೊಂದು ಕೈ ಹಾಗೂ ಕಾಲು ನೆಲಕ್ಕೆ ತಾಗಿರುವ ಸ್ಥಿತಿಯಲ್ಲಿ ಕಾಣಿಸುತ್ತದೆ.

ರಾಪಿಡೋ ಚಾಲಕ ಒಂದು ಕೈಯಲ್ಲಿ ಬೈಕ್ ಹಿಡಿದು, ಮತ್ತೊಂದು ಕೈಯಿಂದ ಯುವತಿ (Young woman) ಯನ್ನು ಎಚ್ಚರಿಕೆಯಿಂದ ಕೆಳಗೆ ಇಳಿಸಲು ಯತ್ನಿಸುತ್ತಿರುವುದು ದೃಶ್ಯದಲ್ಲಿದೆ.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ವಿಡಿಯೋದಲ್ಲಿ ಯುವತಿ (Young woman) ಸ್ಪಷ್ಟವಾಗಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿದ್ದು, ಆಕೆಗೆ ಏನಾಗುತ್ತಿದೆ ಎಂಬ ಅರಿವು ಇಲ್ಲದಂತಿದೆ. ಈ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ವಿಡಿಯೋ ಪೋಸ್ಟ್ ಮಾಡಿದವರು, “ದೆಹಲಿಯ ನೈಟ್ ಕ್ಲಬ್ ಹೊರಗೆ ಮದ್ಯದ ಅಮಲಿನಲ್ಲಿ ಯುವತಿ ರಾಪಿಡೋ ಬೈಕ್‌ನಿಂದ ಬಿದ್ದಿದ್ದಾಳೆ. ಆಕೆ (Young woman) ಸಂಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡಂತಿದೆ” ಎಂದು ವಿವರಣೆ ನೀಡಿದ್ದಾರೆ. ಈ ವಿಡಿಯೋ ಕೆಲವೇ ಸಮಯದಲ್ಲಿ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ಕುರಿತು ನೆಟ್ಟಿಗರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಯುವತಿ (Young woman) ಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದರೆ, ಮತ್ತೊಬ್ಬರು ಇಂತಹ ಸಂದರ್ಭಗಳಲ್ಲಿ ತಕ್ಷಣ ಪೊಲೀಸರ ಸಹಾಯ ಪಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಇನ್ನೂ ಕೆಲವರು ಮದ್ಯಪಾನ ಮಾಡಿದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ ಎಂದು ಸೂಚಿಸಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದರೂ, ಮಹಿಳೆಯರ ಸುರಕ್ಷತೆ, ವೈಯಕ್ತಿಕ ಜವಾಬ್ದಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರಿಕೆಯಿಂದ ವರ್ತಿಸುವ ಅಗತ್ಯವಿದೆ ಎಂಬ ಸಂದೇಶವನ್ನು ಇದು ಮತ್ತೆ ಒತ್ತಿಹೇಳುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕೆಳಗೆ ಬೀಳುತ್ತಿರುವ ಯುವತಿ (Young woman) ಯ ವಿಡಿಯೋ :

ಸೂಚನೆ : ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋ ಆಧಾರಿತವಾಗಿದೆ. ಘಟನೆಯ ಸಂಪೂರ್ಣ ಸತ್ಯಾಂಶಗಳ ಬಗ್ಗೆ ಅಧಿಕೃತ ದೃಢೀಕರಣ ಲಭ್ಯವಿಲ್ಲ.

ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

missing girl found by smart dog

ಜನಸ್ಪಂದನ ನ್ಯೂಸ್‌, ಮಡಿಕೇರಿ : ಕೊಡಗು ಜಿಲ್ಲೆಯ ಕಾಫಿ ತೋಟದಲ್ಲಿ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯನ್ನು, ಮರುದಿನ ಸಾಕು ನಾಯಿ (Dog) ಯ ಬುದ್ಧಿವಂತಿಕೆಯೊಂದು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಶನಿವಾರ ಮಧ್ಯಾಹ್ನ ಕಾಣೆಯಾಗಿದ್ದ ಮಗು, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ಸಂಯುಕ್ತ ಹುಡುಕಾಟದ ನಂತರ ಪೋಷಕರ ಮಡಿಲಿಗೆ ಮರಳಿದ್ದು ಘಟನೆಯ ಅಂತ್ಯ ಸಂತೋಷದಲ್ಲಿ ಕೊನೆಗೊಂಡಿದೆ.

ಇಡೀ ರಾತ್ರಿ ಕತ್ತಲಾದ ತೋಟದಲ್ಲಿ ಒಂಟಿಯಾಗಿ ಕಳೆದಿದ್ದ ಮಗು, ಮರುದಿನ ಬೆಳಿಗ್ಗೆ ಹುಡುಕಾಟ ನಡೆಸಿದ ಸಂದರ್ಭದಲ್ಲಿ ನಾಯಿ (Dog) ಯೊಂದು ಪತ್ತೆಹಚ್ಚಿ ತಾಯಿಯ ಮಡಿಲಿಗೆ ತಲುಪಿಸಿದೆ.

ಇದನ್ನು ಓದಿ : Free ಟಿಕೆಟ್ ಪಡೆದು ಮಾರ್ಗ ಮಧ್ಯೆ ಇಳಿದ ಮಹಿಳೆ ; ಪ್ರಶ್ನಿಸಿದ ಕಂಡಕ್ಟರ್ ಮೇಲೆ ಹಲ್ಲೆ ; ವಿಡಿಯೋ ವೈರಲ್.

ನಾಪತ್ತೆಯಾಗಿದ್ದ ಮಗು :

ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದ ದಂಪತಿ ಒಬ್ಬರ 2 ವರ್ಷದ ಮಗು ಸುನನ್ಯಾ, ಶನಿವಾರ ಮಧ್ಯಾಹ್ನ ಕಾಫಿ ತೋಟದಲ್ಲಿ ಕಾಣೆಯಾಗಿತ್ತು. ಮಗು ಆಕೆಯ ಪೋಷಕರೊಂದಿಗೆ ಶರಿ ಗಣಪತಿ ಎಂಬವರ ತೋಟಕ್ಕೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ.

ಮೊಬೈಲ್ ನೋಡುತ್ತಿದ್ದಾಗ ಮಗು ನಾಪತ್ತೆ :

ಶನಿವಾರ ಮಧ್ಯಾಹ್ನ ತೋಟದಲ್ಲಿ ನೆಟ್‌ವರ್ಕ್ ಸಿಗುವ ಜಾಗದಲ್ಲಿ ಸುನನ್ಯಾ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಇದೇ ವೇಳೆ ಮಗು ಶೌಚಕ್ಕೆಂದು ಹತ್ತಿರದ ಕಾಫಿ ಗಿಡಗಳ ಕಡೆಗೆ ಹೋಗಿತ್ತು. ನಂತರ ಮಗು ಹಿಂದಿರುಗದೆ ತೋಟದ ಒಳಭಾಗದಲ್ಲಿ ದಾರಿ ತಪ್ಪಿ ನಡೆದುಕೊಂಡು ಹೋಗಿದೆ ಎಂದು ಶಂಕಿಸಲಾಗಿದೆ.

ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.

ರಾತ್ರಿ ತುಂಬಾ ಹುಡುಕಾಟ — ಸಿಗದ ಸುಳಿವು :

ಮಗು ನಾಪತ್ತೆಯಾಗುತ್ತಿದ್ದಂತೇ ಪೋಷಕರು, ಸ್ಥಳೀಯರು, ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸೇರಿ ಹುಡುಕಾಟ ನಡೆಸಿದರೂ ಸುಳಿವೂ ಸಿಗಲಿಲ್ಲ. ಮಗು ಅಳದೇ ಇದ್ದದ್ದರಿಂದ ಹುಡುಕುವುದು ಇನ್ನಷ್ಟು ಕಷ್ಟವಾಗಿತ್ತು ಎನ್ನಲಾಗಿದೆ. ಹುಲಿ ದಾಳಿ ಕೂಡ ಸಂಭವಿಸಿರಬಹುದೆಂಬ ಭಯದಿಂದ ಅರಣ್ಯ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದರು.

ಅರಣ್ಯ ಇಲಾಖೆ, ಪೊಲೀಸರು ಹಾಗೂ ಗ್ರಾಮಸ್ಥರು ಸೇರಿ ಸುಮಾರು 70–80 ಸದಸ್ಯರ ತಂಡ ರಾತ್ರಿ ಹೊತ್ತಿಗೂ ಹುಡುಕಾಟ ಮುಂದುವರೆಸಿದರು.

ಮರುದಿನ ನಾಯಿ (Dog) ಯೊಂದು ಪತ್ತೆ ಮಾಡಿ ಜೀವ ಉಳಿಸಿದ ಕ್ಷಣ :

ಭಾನುವಾರ ಬೆಳಿಗ್ಗೆ, ಸುನನ್ಯಾ ಇರುವ ಸ್ಥಳದಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಅನಿಲ್ ಕಾಳಪ್ಪ ಅವರ ತೋಟದಲ್ಲಿ ಸಾಕಲಾದ ‘ಓರಿಯೋ’ ಎಂಬ ನಾಯಿ (Dog) ಏಕಾಏಕಿ ಬೊಗಳಲಾರಂಭಿಸಿತು. ಅನುಮಾನಗೊಂಡ ತೋಟದ ಮಾಲೀಕರು ಅಲ್ಲಿಗೆ ಹೋಗಿ ನೋಡಿದಾಗ, ಮಗು ಕಾಫಿ ಗಿಡಗಳ ಮಧ್ಯದಲ್ಲಿ ಕುಳಿತಿರುವುದು ಕಂಡುಬಂದಿದೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ನಾಯಿ (Dog) ಪತ್ತೆ ಹಚ್ಚಿದ ಮಗು ಅಳದೆ, ಕೇವಲ ಆಯಾಸಗೊಂಡ ಸ್ಥಿತಿಯಲ್ಲಿ ಮಾತ್ರ ಕಂಡುಬಂತು. ನಂತರ ಸ್ಥಳೀಯರು ಮಗುವನ್ನು ಎತ್ತಿಕೊಂಡು ಪೋಷಕರ ಬಳಿ ತಲುಪಿಸಿದರು. ಮಗಳನ್ನ ಮತ್ತೆ ನೋಡಿದ ಪೋಷಕರು ಭಾವೋದ್ರಿಕ್ತರಾದರು.

ಸ್ಥಳೀಯರ ಧೈರ್ಯ ಮತ್ತು ನಾಯಿಯ ಜಾಣ್ಮೆಗೆ ಪ್ರಶಂಸೆ :

ಸುನನ್ಯಾ ಪತ್ತೆಯಾದ ಸುದ್ದಿ ಹರಿದಾಡುತ್ತಿದ್ದಂತೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಾಯಿ (Dog) ಯ ಜಾಣ್ಮೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಳದೆ, ಶಾಂತವಾಗಿದ್ದ ಮಗುವನ್ನು ಪತ್ತೆ ಮಾಡುವುದು ಕಷ್ಟಕರವಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿಯ ಆರೋಗ್ಯ ಸ್ಥಿತಿ :

ನಾಯಿ (Dog) ಪತ್ತೆ ಹಚ್ಚಿದ ಮಗು ಸದ್ಯ ಸುರಕ್ಷಿತವಾಗಿದೆ ಮತ್ತು ವೈದ್ಯಕೀಯ ತಪಾಸಣೆಯ ನಂತರ ಮನೆಗೆ ಕರೆದೊಯ್ಯಲಾಗಿದೆ. ಯಾವುದೇ ಗಂಭೀರ ಗಾಯಗಳಿಲ್ಲ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Heart-Attack ಕ್ಕೂ 30 ನಿಮಿಷ ಮುನ್ನ ದೇಹ ನೀಡುವ ಈ ಎಚ್ಚರಿಕೆ ಸೂಚನೆಗಳು

0

ಜನಸಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಅನೇಕರು ಹೃದಯಾಘಾತ (Heart-Attack) ದಿಂದ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಅಚ್ಚರಿಯ ಸಂಗತಿಯೆಂದರೆ, ಹೃದಯಾಘಾತ (Heart-Attack) ಸಂಭವಿಸುವ ಮೊದಲು ನಮ್ಮ ದೇಹವೇ ಕೆಲವೊಂದು ಎಚ್ಚರಿಕೆ ಸೂಚನೆಗಳನ್ನು ನೀಡುತ್ತದೆ. ಕೆಲವರಲ್ಲಿ ಈ ಲಕ್ಷಣಗಳು ಒಂದು ತಿಂಗಳ ಮುಂಚೆಯೇ ಕಾಣಿಸಿಕೊಳ್ಳಬಹುದು.

ಹೃದಯಾಘಾತ (Heart-Attack) ಅಥವಾ ಪರಿಧಮನಿ ಕಾಯಿಲೆ (Coronary Artery Disease), ಹೃದಯದಲ್ಲಿ ಬ್ಲಾಕೇಜ್, ಹೆಚ್ಚಿದ ಕೊಲೆಸ್ಟ್ರಾಲ್ ಹಾಗೂ ಪೊಟ್ಯಾಸಿಯಮ್ ಮಟ್ಟಗಳು ಹೃದಯದ ಕಾರ್ಯಕ್ಷಮತೆಯನ್ನು ಹದಗೆಡಿಸಬಹುದು. ಆದರೆ, ಬಹುತೇಕ ಜನರು ಈ ಆರಂಭಿಕ ಲಕ್ಷಣಗಳನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.

ಹೃದಯದಲ್ಲಿ ಬ್ಲಾಕೇಜ್ ಇದ್ದರೆ ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳು :

ಎದೆನೋವು :

ಪುನಃ ಪುನಃ ಎದೆನೋವು ಕಾಣಿಸಿಕೊಳ್ಳುವುದು ಹೃದಯದ ಪ್ರಮುಖ ಎಚ್ಚರಿಕೆ. ಈ ನೋವು ಒತ್ತುವಂತೆ, ಸುಡುವಂತೆ ಅಥವಾ ತೀಕ್ಷ್ಣವಾಗಿರಬಹುದು. ದೈಹಿಕ ಚಟುವಟಿಕೆ ಮಾಡುವಾಗ, ಒತ್ತಡದಲ್ಲಿರುವಾಗ ಅಥವಾ ಊಟದ ನಂತರ ನೋವು ಹೆಚ್ಚು ತೀವ್ರವಾಗಬಹುದು. ಕೆಲವರು ಎದೆ ಮೇಲೆ ಯಾರೋ ತುಳಿದಂತೆ ಭಾಸವಾಗುತ್ತದೆ ಎಂದು ವಿವರಿಸುತ್ತಾರೆ.

ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಉಸಿರಾಟದ ತೊಂದರೆ :

ಸ್ವಲ್ಪ ದೈಹಿಕ ಚಟುವಟಿಕೆಯಿಂದಲೂ ಉಸಿರಾಟಕ್ಕೆ ಕಷ್ಟವಾಗುವುದು, ಹೃದಯಕ್ಕೆ ಸರಿಯಾಗಿ ರಕ್ತ ಹರಿಯುತ್ತಿಲ್ಲ ಎಂಬ ಸೂಚನೆಯಾಗಿರಬಹುದು. ಮೆಟ್ಟಿಲೇರಿದಾಗ ಅಥವಾ ಸ್ವಲ್ಪ ದೂರ ನಡೆದರೂ ಉಸಿರಾಟ ಕಡಿಮೆಯಾಗುವುದು ಗಮನಿಸಬೇಕಾದ ಲಕ್ಷಣ.

ನಿರಂತರ ಆಯಾಸ :

ವಿಶ್ರಾಂತಿ ತೆಗೆದುಕೊಂಡರೂ ದಣಿವು ಹೋಗದೆ ಇರುವುದು, ದೇಹದಲ್ಲಿ ಶಕ್ತಿಯ ಕೊರತೆ ಕಂಡುಬರುವುದು ಹೃದಯ ಸಮಸ್ಯೆಗಳ (Heart-Attack) ಸೂಚನೆ ಆಗಿರಬಹುದು.

ತಲೆತಿರುಗುವಿಕೆ ಅಥವಾ ಮೂರ್ಛೆ :

ಹಠಾತ್ ಎದ್ದು ನಿಂತಾಗ ತಲೆಸುತ್ತುವುದು, ಕಣ್ಣು ಕತ್ತಲೆಯಾಗುವುದು ಅಥವಾ ಮೂರ್ಛೆ ಬರುವಂತೆ ಅನಿಸುವುದು ರಕ್ತದೊತ್ತಡ ಅಥವಾ ಹೃದಯದ ರಕ್ತಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿರಬಹುದು.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ಕಾಲುಗಳಲ್ಲಿ ನೋವು :

ನಡೆಯುವಾಗ ವಿಶೇಷವಾಗಿ ಕಾಲುಗಳಲ್ಲಿ, ಹೆಚ್ಚಾಗಿ ಬಲಗಾಲಿನಲ್ಲಿ ನೋವು ಕಾಣಿಸಿಕೊಳ್ಳುವುದು ರಕ್ತನಾಳಗಳಲ್ಲಿ ಅಡಚಣೆಯ ಸೂಚನೆಯಾಗಿರಬಹುದು.

ಅತಿಯಾದ ಬೆವರು :

ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹೆಚ್ಚು ಬೆವರುವುದು, ವಿಶೇಷವಾಗಿ ತಣ್ಣನೆಯ ಬೆವರು ಹೃದಯಾಘಾತ (Heart-Attack) ದ ಮುನ್ನ ಕಾಣಿಸಿಕೊಳ್ಳುವ ಲಕ್ಷಣಗಳಲ್ಲಿ ಒಂದು.

ಅಜೀರ್ಣ ಮತ್ತು ಎದೆಯುರಿ :

ಆಗಾಗ್ಗೆ ಅಜೀರ್ಣ, ಎದೆಯುರಿ ಅಥವಾ ಹೊಟ್ಟೆ ಉಬ್ಬರದಂತಹ ಲಕ್ಷಣಗಳು ಹೃದಯದ ಸಮಸ್ಯೆಯೊಂದಿಗೆ ಸಂಬಂಧ ಹೊಂದಿರಬಹುದು.

ಇದನ್ನು ಓದಿ : Water : ಬೊಜ್ಜು ಕರಗಿಸಲು ಇಲ್ಲದೇ ಪರಿಹಾರ ; ಆರೋಗ್ಯ ಸಚಿವಾಲಯದ ಪ್ರಮುಖ ಸಲಹೆ.!

ಗಮನಿಸಬೇಕಾದ ಮುಖ್ಯ ವಿಷಯ :

ಹೃದಯದ ಬ್ಲಾಕೇಜ್ ಇರುವ ಬಹುತೇಕ ಸಂದರ್ಭಗಳಲ್ಲಿ ಸ್ಪಷ್ಟ ಲಕ್ಷಣಗಳು ಕಾಣಿಸಿಕೊಳ್ಳದೇ ಹೃದಯಾಘಾತ (Heart-Attack) ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ, ಮೇಲ್ಕಂಡ ಲಕ್ಷಣಗಳಲ್ಲಿ ಯಾವುದಾದರೂ ದೀರ್ಘಕಾಲ ಮುಂದುವರಿದರೆ ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

Disclaimer : ಈ Heart-Attack ಲೇಖನವು ಸಾಮಾನ್ಯ ಮಾಹಿತಿ ಮತ್ತು ಆರೋಗ್ಯ ಜಾಗೃತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ Heart-Attack ಲಕ್ಷಣಗಳು ಕಂಡುಬಂದರೆ ವೈದ್ಯರ ಸಲಹೆ ಪಡೆಯುವುದು ಅತ್ಯಾಗತ್ಯ.

“ದಿನಾ ಕುಡಿಯೋರು vs ವಾರಕ್ಕೊಮ್ಮೆ ಕುಡಿಯೋರು : ‘Drink’ ಎಫೆಕ್ಟ್ ಯಾರಿಗೆ ಹೆಚ್ಚು?”

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇತ್ತೀಚಿನ ದಿನಗಳಲ್ಲಿ ವಾರಾಂತ್ಯ ಬಂದ ತಕ್ಷಣ ಪಾರ್ಟಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಆಹಾರ, ಪಾನೀಯಗಳು, ಸಂಗೀತ, ಮೋಜು – ಮಸ್ತಿ ಇವುಗಳ ಜೊತೆಗೆ ಮದ್ಯಪಾನ (Drink) ವೂ ಅನೇಕರ ಪಾರ್ಟಿಗಳ ಅವಿಭಾಜ್ಯ ಭಾಗವಾಗಿದೆ. “ಒಮ್ಮೆ ಕುಡಿದರೆ ಏನು ಆಗುತ್ತದೆ?”, “ವೇಕೆಂಡ್‌ನಲ್ಲಿ ಮಾತ್ರ ಕುಡಿಯುತ್ತಿದ್ದೇನೆ, ಅದರಲ್ಲಿ ಏನು ತೊಂದರೆ ಇಲ್ಲ” ಎಂಬ ನಂಬಿಕೆ ಇನ್ನೂ ಹಲವರಲ್ಲಿದೆ.

ಆದರೆ ವೈದ್ಯಕೀಯ ತಜ್ಞರ ಪ್ರಕಾರ, ಮದ್ಯಪಾನ (Drink) ದ ಯಾವ ಪ್ರಮಾಣವೂ ಸಂಪೂರ್ಣ ಸುರಕ್ಷಿತವಲ್ಲ ಮತ್ತು ಅದು ದೇಹದ ಮೇಲೆ ಬರುವ ಪರಿಣಾಮವು ನೀವು ಎಷ್ಟು ಬಾರಿ ಮತ್ತು ಯಾವ ಪ್ರಮಾಣದಲ್ಲಿ ಕುಡಿಯುತ್ತೀರಿ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ.

ಮುಂಬೈನ ಮೂಳೆ ಶಸ್ತ್ರಚಿಕಿತ್ಸಕ ಡಾ. ಮನನ್ ವೋರಾ ಅವರು ತಮ್ಮ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ “ಸುರಕ್ಷಿತ ಆಲ್ಕೋಹಾಲ್ (Drink) ಪ್ರಮಾಣ ಎಂಬುದು ಅಸ್ತಿತ್ವದಲ್ಲೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಮದ್ಯಪಾನ ಮಾಡಿದೊಡನೆ ದೇಹವು ಅದನ್ನು ಜೀರ್ಣಿಸಿಕೊಳ್ಳಲು ಹೆಚ್ಚುವರಿ ಶ್ರಮ ಪಡುತ್ತದೆಯೇ ವಿನಃ, ದೇಹಕ್ಕೆ ಯಾವುದೇ ದೀರ್ಘಕಾಲಿಕ ಲಾಭವಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ : ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

ತಿಂಗಳಿಗೊಮ್ಮೆ ಮದ್ಯಪಾನ (Drink) : ದೇಹದ ಮೇಲಿನ ಪರಿಣಾಮ?

ತಿಂಗಳಿಗೊಮ್ಮೆ ಮಾತ್ರ ಕುಡಿಯುವವರಿಗೂ ಮದ್ಯದ ತಕ್ಷಣದ ಪರಿಣಾಮ ಕಂಡುಬರುತ್ತದೆ. ಆ ದಿನ ಮೆದುಳಿನ ಚಟುವಟಿಕೆ ನಿಧಾನವಾಗುವುದು, ದೇಹ ನಿರ್ಜಲೀಕರಣಗೊಳ್ಳುವುದು, ಹಾಗೆಯೇ ಲಿವರ್‌ ಮೇಲೆ ಹೆಚ್ಚುವರಿ ಒತ್ತಡ ಬೀರುವುದು ಸಾಮಾನ್ಯ.

ಕುಡಿದ ಮರುದಿನ ತಲೆನೋವು, ಆಯಾಸ, ನಿದ್ರೆಯ ಅಸ್ವಸ್ಥತೆ ಮತ್ತು ಗಾಬರಿಯ ಅನುಭವ ಉಂಟಾಗಬಹುದು. ಇದು ದೇಹದ ಸಾಮಾನ್ಯ ಚಕ್ರವನ್ನೇ ತಾತ್ಕಾಲಿಕವಾಗಿ ಅವ್ಯವಸ್ಥೆಗೆ ದೂಡುತ್ತದೆ.

ವಾರಕ್ಕೊಮ್ಮೆ ಕುಡಿಯುವವರ ಅಪಾಯ :

“ವಾರಕ್ಕೊಮ್ಮೆ ಮದ್ಯಪಾನ (Drink) ಮಾಡುವ ಅಭ್ಯಾಸ ಹೊಂದಿದವರಲ್ಲಿ ಫ್ಯಾಟಿ ಲಿವರ್ ಅಪಾಯ ಗಮನಾರ್ಹವಾಗಿ ಹೆಚ್ಚಾಗುತ್ತದೆ.” ಲಿವರ್ ನಿರಂತರವಾಗಿ ವಿಷಕಾರಕ ಪದಾರ್ಥಗಳನ್ನು ಹೊರಹಾಕಲು ಕೆಲಸ ಮಾಡಬೇಕಾಗಿರುವುದರಿಂದ ಅದರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಬೆಳಗಿನ ಜಾವ ಹೆಚ್ಚು ತೀವ್ರವಾದ ಹ್ಯಾಂಗೊವರ್, ದೇಹದ ಭಾರ, ಅಶಾಂತಿ ಮತ್ತು ಜೀರ್ಣಕ್ರಿಯೆ ಅಸ್ಥಿರತೆ ಸಾಮಾನ್ಯ. ಕಾಲಕ್ರಮೇಣ ಇದು ಲಿವರ್‌ನ ಕೊಬ್ಬಿನ ಅಂಶವವು ಹೆಚ್ಚಿಸಿ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ವಾರಕ್ಕೆ 3–5 ಬಾರಿ ಮದ್ಯಪಾನ (Drink) : ದೀರ್ಘಕಾಲದ ಹಾನಿ :

ವಾರದಲ್ಲಿ ಹಲವಾರು ದಿನ ಕುಡಿಯುವವರು ತಮ್ಮ ದೇಹಕ್ಕೆ ಸಾಕಷ್ಟು ವಿಶ್ರಾಂತಿ ನೀಡುವುದಿಲ್ಲ. ಇದರಿಂದ:

  • ಚಯಾಪಚಯ ಕ್ರಿಯೆ ನಿಧಾನವಾಗುವುದು.
  • ಲಿವರ್ ಉಬ್ಬುವಿಕೆ.
  • ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಅಸ್ಥಿರಗೊಳ್ಳುವುದು.
  • ಗುಣಮಟ್ಟದ ನಿದ್ರೆ ಕಡಿಮೆ ಆಗುವುದು.
  • ದೇಹದ ಉರಿಯೂತ ವೇಗವಾಗಿ ಹೆಚ್ಚಾಗುವುದು.

ಈ ಹಂತದಲ್ಲಿ ದೇಹವು ಮದ್ಯದ ಒತ್ತಡದಿಂದ ಹೊರಬರಲು ಸಾಧ್ಯವಿಲ್ಲದ ಮಟ್ಟಕ್ಕೆ ಹೋದಂತೆ ಆಗುತ್ತದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ಪ್ರತಿದಿನ ಮದ್ಯಪಾನ ; ಅತ್ಯಂತ ಅಪಾಯಕಾರಿ ಹಂತ :

ಪ್ರತಿದಿನ ಮದ್ಯಪಾನ (Drink) ಮಾಡುವವರು ತೀವ್ರ ಅಪಾಯದ ವರ್ಗಕ್ಕೆ ಸೇರುತ್ತಾರೆ. ಇವರಲ್ಲಿ ಕಂಡುಬರುವ ಪ್ರಮುಖ ಸಮಸ್ಯೆಗಳು:

  • ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು.
  • ಲಿವರ್ ಫೈಬ್ರೋಸಿಸ್ ಮತ್ತು ಸಿರೋಸಿಸ್ ಅಪಾಯ ಹೆಚ್ಚಾಗುವುದು.
  • ಕೆಲವು ವಿಧದ ಕ್ಯಾನ್ಸರ್ ಸಂಭವನೀಯತೆ ಏರಿಕೆ.
  • ಹೃದಯಕ್ಕೆ ಹಾನಿ.
  • ಇನ್ಸುಲಿನ್ ಪ್ರತಿಕ್ರಿಯೆ ಕುಂದಿದ್ದು, ಡಯಾಬಿಟಿಸ್ ಅಪಾಯ.
  • ಮಾನಸಿಕ ಆರೋಗ್ಯಕ್ಕೆ ಹಾನಿ, ನಿದ್ರೆಯ ಗೊಂದಲ.

ತಜ್ಞರ ಪ್ರಕಾರ, ಪ್ರತಿದಿನ ಕುಡಿಯುವುದರಿಂದ ದೇಹದ ಯಾವುದೇ ಅಂಗಾಂಗವೂ ನಿಷ್ಕ್ರಿಯವಾಗದೆ ಕೆಲಸ ಮಾಡಲು ಸಾಧ್ಯವಿಲ್ಲ.

ಸಾರಾಂಶ :

ವಾರಾಂತ್ಯದ ಮೋಜು, ಒತ್ತಡ ನಿವಾರಣೆ ಅಥವಾ ಅಭ್ಯಾಸ—ಯಾವ ಕಾರಣವಾಗಿರಲಿ, ಮದ್ಯಪಾನ (Drink) ದೇಹದ ಮೇಲಿನ ಹಾನಿಯನ್ನು ಶೇ.100 ತಡೆಯಲು ಸಾಧ್ಯವಿಲ್ಲ. ಕುಡಿಯುವ ಅವಧಿ ಮತ್ತು ಪ್ರಮಾಣ ಹೆಚ್ಚಾದಂತೆ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ಮದ್ಯಪಾನವನ್ನು ಸಂಪೂರ್ಣವಾಗಿ ತೊರೆಯುವುದು ಅಥವಾ ಕಡಿಮೆ ಮಾಡುವುದು ಆರೋಗ್ಯಕ್ಕಾಗಿ ಅತ್ಯುತ್ತಮ ಮಾರ್ಗ.

ಗಮನಿಸಿ : ಇಲ್ಲಿನ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ತಜ್ಞರ ಅಭಿಪ್ರಾಯದ ಆಧಾರಿತವಾಗಿದೆ. ಯಾವುದೇ ಆರೋಗ್ಯ ಸಂಬಂಧಿತ ನಿರ್ಧಾರ ಕೈಗೊಳ್ಳುವ ಮೊದಲು ವೈದ್ಯರ ಸಲಹೆ ಕಡ್ಡಾಯ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಕೇಳಿದ Noise ; ನೋಡಲು ಹೋದ ಅತ್ತೆಗೆ ಶಾಕ್!

0

ಜನಸ್ಪಂದನ ನ್ಯೂಸ್‌, ಉ.ಪ್ರ : ಅಯೋಧ್ಯೆ ಜಿಲ್ಲೆಯ ಪುರ ಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲೇ ಇದ್ದ ಅತ್ತೆಗೆ ಮಧ್ಯರಾತ್ರಿ ಸೊಸೆಯ ಕೋಣೆಯಿಂದ ಪಿಸುಮಾತುಗಳು ಹಾಗೂ ಅಸಹಜ ಶಬ್ದಗಳು (noise) ಕೇಳಿ ಬಂದ ನಂತರ, ಕೋಣೆಯಲ್ಲಿ ಪರಿಸ್ಥಿತಿ ಏನೋ ತಪ್ಪಾಗಿದೆ ಎಂಬ ಅನುಮಾನ ಹುಟ್ಟಿತ್ತು. ಶಬ್ದದ (noise) ಮೂಲವನ್ನು ತಿಳಿಯಲು ಹುಡುಕಾಡಿದ ಅತ್ತೆ ಕೊನೆಗೆ ಕೋಣೆ ಬಾಗಿಲು ತೆರೆಯುತ್ತಿದ್ದಂತೆಯೇ ನಂಬಲು ಆಗದ ದೃಶ್ಯ ಕಣ್ಣಿಗೆ ಬಿದ್ದಿದೆ.

ಇಬ್ಬರು ಮಕ್ಕಳ ತಾಯಿಯಾಗಿರುವ 30 ವರ್ಷದ ಸೊಸೆ ತನ್ನ ಪ್ರಿಯಕರನೊಂದಿಗೆ ಕೋಣೆಯಲ್ಲಿದ್ದಳು. ಬರುವ ಶಬ್ದ (noise) ಕೇಳಿ ಹೆದರಿದ ಯುವಕ (ಪ್ರಿಯಕರ) ಮಂಚದ ಕೆಳಗೆ ಅಡಗಿ ಕುಳಿತಿರುವುದನ್ನು ಅತ್ತೆ ಕಂಡು ಬೆಚ್ಚಿಬಿದ್ದಳು. ಆಕೆ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಮಾವ ನಾಗ್ಪುರ್‌ಗೆ ತೆರಳಿರುವ ವೇಳೆಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಇದನ್ನು ಓದಿ : ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

ಘಟನೆಯ ಸಮಯದಲ್ಲಿ ಅತ್ತೆ ಮೊಮ್ಮಕ್ಕಳೊಂದಿಗೆ ಮಲಗಿದ್ದಳು. ಕೆಲವು ಸಮಯದಿಂದಲೇ ಸೊಸೆಯ ಕೋಣೆಯಿಂದ ಶಬ್ದಗಳು (noise) ಕೇಳಿಬಂದ ಕಾರಣ, ಅತ್ತೆ ನೆರೆಹೊರೆಯವರನ್ನು ಕರೆದು ಸಹಾಯ ಕೇಳಿದ್ದರು.

ಸ್ಥಳೀಯರು ಬಂದು ಬಾಗಿಲು ತೆರೆಯುವಾಗ ಪ್ರಿಯಕರನ ಉಪಸ್ಥಿತಿ ಬಹಿರಂಗಗೊಂಡಿತು. ನಂತರ ಗ್ರಾಮದಲ್ಲಿ ಗಲಾಟೆಯ ಶಬ್ದ (noise) ಉಂಟಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.

ಇದನ್ನು ಓದಿ : ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

ಮಾಹಿತಿಯ ಪ್ರಕಾರ, 25 ವರ್ಷದ ಯುವಕ ಕೆಲಕಾಲದಿಂದಲೇ ಮಧ್ಯರಾತ್ರಿ ಮಹಿಳೆಯನ್ನು ಭೇಟಿ ಮಾಡಲು ಬರುತ್ತಿದ್ದ. ಮದುವೆಯ ನಂತರವೂ ಅವರ ಸಂಬಂಧ ಮುಂದುವರಿದಿತ್ತು ಎಂಬುದು ಗ್ರಾಮಸ್ಥರ ಹೇಳಿಕೆ.

ಈ ಘಟನೆ ಬಗ್ಗೆ ತಿಳಿದಂತೆಯೇ ದುಬೈನಲ್ಲಿದ್ದ ಮಹಿಳೆಯ ಪತಿ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣವೇ ವಿಚ್ಛೇದನ ನೀಡಿದ್ದಾನೆ ಎನ್ನಲಾಗಿದೆ.

ಗ್ರಾಮಸ್ಥರು ನಂತರ ಸಭೆ ನಡೆಸಿ, ಇಬ್ಬರೂ ಒಟ್ಟಿಗೆ ವಾಸಿಸಲು ಬಯಸಿದರೆ ಸಮಾಜದ ದೃಷ್ಟಿಯಿಂದ ಮದುವೆಯಾಗಬೇಕು ಎಂದು ಸಲಹೆ ನೀಡಿದರು. ಮಹಿಳೆ ವಿಚಾರವಾಗಿ ತನ್ನ ಪ್ರಿಯಕರನೊಂದಿಗೆ ವಾಸಿಸಲು ಒಪ್ಪಿಕೊಂಡಿದ್ದು, ಮದುವೆ ಮಾಡಲು ಸಿದ್ಧತೆಗಳು ನಡೆಯುತ್ತಿರುವುದಾಗಿ ಮೂಲಗಳು ತಿಳಿಸಿವೆ. ಈ ಘಟನೆ ಯುವಕನ ಕುಟುಂಬಕ್ಕೂ ಆಘಾತ ತಂದಿದೆ.

ಇದನ್ನು ಓದಿ : Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.

ಪುರ ಕಲಂದರ್ ಪೊಲೀಸ್ ಠಾಣೆಯ ಉಸ್ತುವಾರಿ ಕಮಲೇಶ್ ಸಾಹ್ನಿ ಮಾತಿನಂತೆ, ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಎರಡೂ ಕುಟುಂಬಗಳು ಪರಸ್ಪರ ವಿವಾಹಕ್ಕೆ ಒಪ್ಪಿಕೊಂಡಿದ್ದು, ಈ ಸಂಬಂಧ ಯಾವುದೇ ದೂರು ನೀಡಲಾಗಿಲ್ಲ.

ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

wife dance program husband

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದಿನ ಸೊಶಿಯಲ್ ಮೀಡಿಯಾ ಕಾಲದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ನೃತ್ಯ (Dance), ಮನರಂಜನೆ ಸಾಮಾನ್ಯವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ತಮ್ಮಷ್ಟಕ್ಕೆ ಎಂಜಾಯ್ ಮಾಡುವುದನ್ನು ನಾವು ದಿನವೂ ವಿಡಿಯೋಗಳಲ್ಲಿ ನೋಡುತ್ತೇವೆ. ಆದರೆ ಕೆಲವು ಕುಟುಂಬಗಳಲ್ಲಿ ಮಹಿಳೆಯರು ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ನೃತ್ಯ (Dance) ಮಾಡುವುದನ್ನು ಇನ್ನೂ ಒಪ್ಪಿಕೊಳ್ಳುವುದಿಲ್ಲ.

ಇದಕ್ಕೆ ಉದಾಹರಣೆ ಎಂಬಂತೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಹೊಸ ವಿಡಿಯೋ ಒಂದು ಚರ್ಚೆಗೆ ಕಾರಣವಾಗಿದೆ. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ವಿವಾಹಿತೆಯೊಬ್ಬರು ಜೋಶ್‌ನೊಂದಿಗೆ ಸ್ಟೇಜ್ ಬಳಿ ನಿಂತು ಪುರುಷರ ಮಧ್ಯದಲ್ಲಿ ಅನಾಯಾಸವಾಗಿ ನೃತ್ಯ (Dance) ಮಾಡುತ್ತಿದ್ದರು.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಆದರೆ ಅದೆಲ್ಲವನ್ನು ಗಮನಿಸುತ್ತಿದ್ದ ಆಕೆಯ ಪತಿ ಇದನ್ನು ಸಹಿಸಿಕೊಳ್ಳದೆ ತೀವ್ರ ಆಕ್ರೋಶಗೊಂಡಿದ್ದಾನೆ.

ವಿಡಿಯೋದಲ್ಲಿನ ದೃಶ್ಯಗಳ ಪ್ರಕಾರ, ಗಂಡನು ಕೂಡ ಸ್ಟೆಪ್ (Dance) ಹಾಕುವಂತೆ ಮುಂದಕ್ಕೆ ಬಂದು, ಅಚಾನಕವಾಗಿ ಹೆಂಡತಿಗೆ ಲತ್ತೆ ನೀಡುತ್ತಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯೂ ತಕ್ಷಣ ಗಂಡನಿಗೂ ಸಹ ಡಾನ್ಸ್ (Dance) ಮಾಡುತ್ತ ಎದುರಾಗಿ ಹಲ್ಲೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ನಂತರ ಗಂಡನು ಆಕೆಯನ್ನು ಥಳಿಸಿ, ಬಲವಂತವಾಗಿ ಸ್ಥಳದಿಂದ ಕರೆದುಕೊಂಡು ಹೋಗುತ್ತಾನೆ.

ಈ ಘಟನೆ ನಡೆದ ಸ್ಥಳ ಮತ್ತು ಸಮಯ ಸ್ಪಷ್ಟವಾಗಿಲ್ಲ. ಆದರೆ ಈ ಸಂಪೂರ್ಣ ಘಟನೆ ಸೆರೆಹಿಡಿದ ವಿಡಿಯೋ ಈಗ ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ವೇಗವಾಗಿ ವೈರಲ್ ಆಗಿದೆ.

ವಿಡಿಯೋ ಕುರಿತು ನೆಟ್ಟಿಗರು ತೀವ್ರ ಚರ್ಚೆ ನಡೆಸುತ್ತಿದ್ದು, ಮಹಿಳೆಯ ಸ್ವಾತಂತ್ರ್ಯ, ಕುಟುಂಬದ ನಿಯಮಗಳು ಹಾಗೂ ಸಾಮಾಜಿಕ ದೃಷ್ಟಿಕೋನಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ : Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.

ಮಹಿಳೆಯ ಡಾನ್ಸ್ (Dance) ವಿಡಿಯೋ :

Disclaimer : The information provided in this article is based on a video/post currently circulating on social media. Janaspandan News does not confirm any claim or authenticity regarding this.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಮದುವೆಯಲ್ಲಿ Dance ಮಾಡಿದ ಹೆಂಡತಿ ; ಗಂಡ ಮಾಡಿದ್ದೇನು ಗೊತ್ತೇ? ವಿಡಿಯೋ ನೋಡಿ.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಇಂದಿನ ಸೊಶಿಯಲ್ ಮೀಡಿಯಾ ಕಾಲದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ನೃತ್ಯ (Dance), ಮನರಂಜನೆ ಸಾಮಾನ್ಯವಾಗಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ತಮ್ಮಷ್ಟಕ್ಕೆ ಎಂಜಾಯ್ ಮಾಡುವುದನ್ನು ನಾವು ದಿನವೂ ವಿಡಿಯೋಗಳಲ್ಲಿ ನೋಡುತ್ತೇವೆ. ಆದರೆ ಕೆಲವು ಕುಟುಂಬಗಳಲ್ಲಿ ಮಹಿಳೆಯರು ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ನೃತ್ಯ (Dance) ಮಾಡುವುದನ್ನು ಇನ್ನೂ ಒಪ್ಪಿಕೊಳ್ಳುವುದಿಲ್ಲ.

ಇದಕ್ಕೆ ಉದಾಹರಣೆ ಎಂಬಂತೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಹೊಸ ವಿಡಿಯೋ ಒಂದು ಚರ್ಚೆಗೆ ಕಾರಣವಾಗಿದೆ. ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ವಿವಾಹಿತೆಯೊಬ್ಬರು ಜೋಶ್‌ನೊಂದಿಗೆ ಸ್ಟೇಜ್ ಬಳಿ ನಿಂತು ಪುರುಷರ ಮಧ್ಯದಲ್ಲಿ ಅನಾಯಾಸವಾಗಿ ನೃತ್ಯ (Dance)ಮಾಡುತ್ತಿದ್ದರು.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಆದರೆ ಅದೆಲ್ಲವನ್ನು ಗಮನಿಸುತ್ತಿದ್ದ ಆಕೆಯ ಪತಿ ಇದನ್ನು ಸಹಿಸಿಕೊಳ್ಳದೆ ತೀವ್ರ ಆಕ್ರೋಶಗೊಂಡಿದ್ದಾನೆ.

ವಿಡಿಯೋದಲ್ಲಿನ ದೃಶ್ಯಗಳ ಪ್ರಕಾರ, ಗಂಡನು ಕೂಡ ಸ್ಟೆಪ್ (Dance) ಹಾಕುವಂತೆ ಮುಂದಕ್ಕೆ ಬಂದು, ಅಚಾನಕವಾಗಿ ಹೆಂಡತಿಗೆ ಲತ್ತೆ ನೀಡುತ್ತಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆಯೂ ತಕ್ಷಣ ಗಂಡನಿಗೂ ಸಹ ಡಾನ್ಸ್ (Dance) ಮಾಡುತ್ತ ಎದುರಾಗಿ ಹಲ್ಲೆ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ನಂತರ ಗಂಡನು ಆಕೆಯನ್ನು ಥಳಿಸಿ, ಬಲವಂತವಾಗಿ ಸ್ಥಳದಿಂದ ಕರೆದುಕೊಂಡು ಹೋಗುತ್ತಾನೆ.

ಈ ಘಟನೆ ನಡೆದ ಸ್ಥಳ ಮತ್ತು ಸಮಯ ಸ್ಪಷ್ಟವಾಗಿಲ್ಲ. ಆದರೆ ಈ ಸಂಪೂರ್ಣ ಘಟನೆ ಸೆರೆಹಿಡಿದ ವಿಡಿಯೋ ಈಗ ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ವೇಗವಾಗಿ ವೈರಲ್ ಆಗಿದೆ.

ವಿಡಿಯೋ ಕುರಿತು ನೆಟ್ಟಿಗರು ತೀವ್ರ ಚರ್ಚೆ ನಡೆಸುತ್ತಿದ್ದು, ಮಹಿಳೆಯ ಸ್ವಾತಂತ್ರ್ಯ, ಕುಟುಂಬದ ನಿಯಮಗಳು ಹಾಗೂ ಸಾಮಾಜಿಕ ದೃಷ್ಟಿಕೋನಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ : Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.

ಮಹಿಳೆಯ ಡಾನ್ಸ್ (Dance) ವಿಡಿಯೋ :

Disclaimer : The information provided in this article is based on a video/post currently circulating on social media. Janaspandan News does not confirm any claim or authenticity regarding this.

ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.

ktm rider fatal-accident

ಜನಸ್ಪಂದನ ನ್ಯೂಸ್‌, ಸೂರತ್‌ : ಗುಜರಾತ್‌ನ ಸೂರತ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದ ಯುವ ಇನ್‌ಫ್ಲುವೆನ್ಸರ್ ದುರ್ಮರಣ ಹೊಂದಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ‘ಪಿಕೆಆರ್ ಬ್ಲಾಗರ್’ ಎಂದು ಪರಿಚಿತರಾದ ಪ್ರಿನ್ಸ್ ಪಟೇಲ್, ರೀಲ್ ಚಿತ್ರೀಕರಣಕ್ಕಾಗಿ ಅತಿ ವೇಗದಲ್ಲಿ ಬೈಕ್ (KTM Bike) ಸವಾರಿ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಭೀಕರವಾಗಿ ಬಿದ್ದಿದ್ದಾರೆ.

ಘಟನೆ ಸೂರತ್‌ನ ಗ್ರೇಟ್ ಲೈನರ್ ಸೇತುವೆಯ ಬಳಿಯಲ್ಲಿ ನಡೆದಿದೆ. ಪ್ರಿನ್ಸ್ ತಮ್ಮ ಕೆಟಿಎಂ ಬೈಕ್ (KTM Bike) ಅನ್ನು ಗಂಟೆಗೆ ಸುಮಾರು 140 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದಾಗ ಸಮತೋಲನ ಕಳೆದುಕೊಂಡು ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಬೈಕ್‌ (KTM Bike) ಕೆಲವು ನೂರು ಮೀಟರ್‌ಗಳವರೆಗೆ ಸ್ಕಿಡ್ ಆಗಿದ್ದು, ಪ್ರಿನ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಅಪಘಾತದ ಸಿಸಿಟಿವಿ ದೃಶ್ಯ ವೈರಲ್ :

ಸಿಸಿಟಿವಿ ದೃಶ್ಯಗಳಲ್ಲಿ ಪ್ರಿನ್ಸ್ ಸೇತುವೆಯ ಇಳಿಜಾರಿನಲ್ಲಿ ಅತೀವೇಗದಲ್ಲಿ KTM ಬೈಕ್ ಚಲಾಯಿಸುತ್ತಿರುವುದು ಮತ್ತು ಕ್ಷಣಾರ್ಧದಲ್ಲೇ ನಿಯಂತ್ರಣ ತಪ್ಪಿಸುವುದು ಕಾಣಿಸುತ್ತದೆ. ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ, ಇದು ಗಂಭೀರ ಗಾಯಗಳಿಗೆ ಕಾರಣವಾಗಿದೆ.

ಕುಟುಂಬದ ದುಸ್ಥಿತಿ :

ಪ್ರಿನ್ಸ್ ಕುಟುಂಬ ಆರ್ಥಿಕವಾಗಿ ಅತಿಯಾಗಿ ಹಿಂದುಳಿದಿದ್ದು, ಅವರ ತಾಯಿ ಆಶ್ರಯ ತಾಣದಲ್ಲಿ ವಾಸಿಸುತ್ತಾ ಹಾಲು ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಮಗನ ಅಕಾಲಿಕ ಸಾವು ಕುಟುಂಬಕ್ಕೆ ಶೋಕಾಂತಿಕೆಯಾಗಿರುವುದು ಸ್ಥಳೀಯರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಪ್ರಿನ್ಸ್ :

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಪ್ರಿನ್ಸ್ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಯುವಕರಲ್ಲಿ, ವೇಗದ ಬೈಕಿಂಗ್ ವಿಡಿಯೊಗಳಿಂದಷ್ಟು ಜನಪ್ರಿಯರಾಗಿದ್ದರು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಹೊಸ ಕೆಟಿಎಂ ಬೈಕ್ (KTM Bike) ಖರೀದಿಸಿದ್ದರು ಮತ್ತು ಅದನ್ನು ‘ಲೈಲಾ’ ಎಂದು ಕರೆಯುತ್ತಿದ್ದರು. ಬೈಕ್‌ (KTM Bike) ನ ಫೋಟೋಗಳು, ರೀಲ್‌ಗಳು ಮತ್ತು ಸವಾರಿ ವಿಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರು.

ಅಂತೆಯೇ, ನಾಲ್ಕು ದಿನಗಳ ಹಿಂದೆ ಅವರು ತಮ್ಮ ಸಾವನ್ನು ಉಲ್ಲೇಖಿಸುವಂತಹ ಒಂದು ಕ್ರಿಯೇಟಿವ್ ವಿಡಿಯೋ ಹಂಚಿಕೊಂಡಿದ್ದು, “ಮರಣದ ನಂತರವೂ ನನ್ನ ಲೈಲಾ (KTM Bike) ವನ್ನು ಪ್ರೀತಿಸುತ್ತೇನೆ” ಎಂಬ ಸಂದೇಶ ಸೇರಿಸಿದ್ದರು. ಈಗ ಅದು ದುಃಖದ ಸಂಧರ್ಭದಲ್ಲಿ ಮತ್ತಷ್ಟು ವೈರಲ್ ಆಗಿದೆ.

ಪ್ರಕರಣ ದಾಖಲು ; ಮುಂದುವರೆದ ತನಿಖೆ :

ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ಅಗತ್ಯ ತನಿಖೆ ಕೈಗೊಂಡಿದ್ದಾರೆ. ಅತಿವೇಗ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ರಾಟ್‌ವೀಲರ್ ದಾಳಿಗೆ ಮಹಿಳೆಯ ಸಾವು ; ಸೆರೆ ಕಾರ್ಯಾಚರಣೆಯಲ್ಲಿ Dog ಬಲಿ, ಮಾಲೀಕ ಬಂಧನ.

0

ಜನಸ್ಪಂದನ ನ್ಯೂಸ್‌, ದಾವಣಗೆರೆ : ದಾವಣಗೆರೆಯಲ್ಲಿ ರಾಟ್‌ವೀಲರ್ ನಾಯಿಗಳ (Rottweiler Dog) ದಾಳಿಗೆ ಮಹಿಳೆ ಸಾವನ್ನಪ್ಪಿದ ಪ್ರಕರಣ ರಾಜ್ಯದೆಲ್ಲೆಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದರೂ, ಇದೀಗ ಈ ಘಟನೆಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆ ಹೊರಬಂದಿದೆ. ಸಾರ್ವಜನಿಕ ಸ್ಥಳದಲ್ಲಿ ನಾಯಿಗಳನ್ನು ನಿರ್ದಯವಾಗಿ ಬಿಟ್ಟುಹೋದ ಆರೋಪಿಯನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಮತ್ತೊಂದೆಡೆ, ದಾಳಿ ನಡೆಸಿದ ಎರಡೂ ರಾಟ್‌ವೀಲರ್ ನಾಯಿಗಳು ಸೆರೆ ಕಾರ್ಯಾಚರಣೆ ಸಮಯದಲ್ಲೇ ಮೃತಪಟ್ಟಿರುವ ದುಃಖಕರ ಮಾಹಿತಿ ಹೊರಬಿದ್ದಿದೆ.

ನಾಯಿ (Rottweiler Dog) ಗಳನ್ನು ಬಿಟ್ಟುಹೋದ ಆರೋಪಿ ಬಂಧನ :

ಪೊಲೀಸರ ಬಂಧನದಲ್ಲಿರುವ ಶೈಲೇಶಕುಮಾರ್ ಅವರು ದಾವಣಗೆರೆಯ ದೇವರಾಜ ಅರಸು ಬಡಾವಣೆ ಪ್ರದೇಶದ ನಿವಾಸಿ. ಈತ ಹೊನ್ನೂರು ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 48 (NH-48) ಸೇವಾ ರಸ್ತೆಯಲ್ಲಿ ಎರಡು ರಾಟ್‌ವೀಲರ್ ನಾಯಿಗಳನ್ನು ಬಾಡಿಗೆ ಆಟೋದಲ್ಲಿ ತಂದು ಬಿಟ್ಟುಹೋದ ಎನ್ನಲಾಗಿದೆ.

ಇದನ್ನು ಓದಿ :

ನಂತರ ಈ ನಾಯಿ (Rottweiler Dog) ಗಳು ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ ಅವರ ಮೇಲೆ ದಾಳಿ ಮಾಡಿ ಅವರನ್ನು ದುರ್ಘಟನೆಗೊಳಪಡಿಸಿದವು.

ಪ್ರಕರಣದ ತನಿಖೆಯನ್ನು ಗ್ರಾಮಾಂತರ ಠಾಣೆಯ ಸಿಪಿಐ ಅಣ್ಣಯ್ಯ ಕೆ.ಟಿ. ಅವರು ನೇತೃತ್ವ ವಹಿಸಿದ್ದರು. ಘಟನೆಯ ಬಳಿಕ ಪೊಲೀಸ್ ತಂಡವು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ನಾಯಿ (Rottweiler Dog) ಗಳನ್ನು ಯಾರಿಂದ ಕರೆ ತಂದು ಬಿಡಲಾಯಿತು ಎಂಬ ಸುಳಿವುಗಳನ್ನು ಕಲೆಹಾಕಿತು.

ಸಂಗ್ರಹಿಸಿದ ಸಾಕ್ಷ್ಯಾಧಾರಗಳು ಶೈಲೇಶಕುಮಾರ್ ಭಾಗವಹಿಸಿದ ಬಗ್ಗೆ ಮಾಹಿತಿ ದೃಢಪಡಿಸಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಂಧನದ ಬಳಿಕ ಘಟನೆ ನಡೆದ ಸ್ಥಳದಲ್ಲಿ ಸ್ಥಳ ಮಹಜರು ನಡೆಸಲಾಯಿತು.

ರಕ್ತಸ್ರಾವದಿಂದ ನಾಯಿಗಳ ಸಾವು :

ಅನಿತಾ ಅವರು ರಾತ್ರಿ ಹೊತ್ತು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ರಾಟ್‌ವೀಲರ್ ನಾಯಿ (Rottweiler Dog) ಗಳು ಅಕಸ್ಮಿಕವಾಗಿ ದಾಳಿ ನಡೆಸಿದ್ದವು. ಮಹಿಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ನಾಯಿಗಳು ಸುಮಾರು 50ಕ್ಕೂ ಹೆಚ್ಚು ಬಾರಿ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದವು. ಸ್ಥಳೀಯರು ನೆರವಿಗೆ ಧಾವಿಸಿದರೂ, ಅವರು ಪ್ರಾಣ ಕಳೆದುಕೊಂಡಿದ್ದರು.

ಇದನ್ನು ಓದಿ : ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.

ಘಟನೆ ಬಳಿಕ ಜನರು ನಾಯಿ (Rottweiler Dog) ಗಳನ್ನು ಸ್ಥಳೀಯರ ನೆರವಿನಿಂದ ಹುಡುಕಿ ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುವಾಗಲೇ ನಾಯಿಗಳು ತೀವ್ರ ನಿತ್ರಾಣಗೊಂಡಿದ್ದವು. ನಂತರ ಸೆರೆ ಕಾರ್ಯಾಚರಣೆಯ ವೇಳೆ ಎರಡೂ ನಾಯಿಗಳು ಆಂತರಿಕ ರಕ್ತಸ್ರಾವದಿಂದ ಮೃತಪಟ್ಟಿರುವುದು ವರದಿಯಾಗಿದೆ.

ಶ್ವಾನಪ್ರೇಮಿಗಳಿಂದ ತೀವ್ರ ಆಕ್ರೋಶ :

ಈ ದುರ್ಘಟನೆಗೆ ಸಂಬಂಧಿಸಿದಂತೆ ದಾವಣಗೆರೆಯ ಶ್ವಾನಪ್ರೇಮಿಗಳು ಮತ್ತು ಡಾಗ್ ಹ್ಯಾಂಡ್ಲರ್‌ಗಳು ನಾಯಿಗಳ (Rottweiler Dog) ಮಾಲೀಕರ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಡಾಗ್ ಹ್ಯಾಂಡ್ಲರ್ ನಂದೀಶ್ ಮತ್ತು ಶ್ವಾನಪ್ರೇಮಿ ಸಚಿನ್ ಅವರು ಮಾತನಾಡಿ, ನಾಯಿಗಳನ್ನು ಸಾಕಲಾಗದಿದ್ದರೆ ಸಂಬಂಧಪಟ್ಟ ಇಲಾಖೆ ಅಥವಾ ಪ್ರಾಣಿ ದಯಾ ಸಂಘಕ್ಕೆ ಒಪ್ಪಿಸಬಹುದಿತ್ತು. ಕಾಯಿಲೆ ಅಥವಾ ಆಕ್ರೋಶದ ಸಮಸ್ಯೆ ಇದ್ದರೆ ದಯಾಮರಣಕ್ಕೆ ಕಾನೂನು ಅವಕಾಶವಿದೆ.

ಆದರೆ ಹೀಗೆ ಬಿಟ್ಟುಹೋದ ಪರಿಣಾಮವಾಗಿ ಒಬ್ಬ ಮಹಿಳೆ ಮತ್ತು ಎರಡು ಪ್ರಾಣಿಗಳು ಸಾವನ್ನಪ್ಪಿರುವುದು ಮಾಲೀಕನ ಗಂಭೀರ ನಿರ್ಲಕ್ಷ್ಯ. ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಹೆತ್ತ ಮಗನನ್ನು ಸೇರಿಸಿ 4 ಮಕ್ಕಳನ್ನು ಹತ್ಯೆ ಮಾಡಿದ Woman.!

ನಿರ್ಲಕ್ಷ್ಯದಿಂದ ದುರಂತ :

ಒಬ್ಬ ಮಾಲೀಕನ ನಿರ್ಲಕ್ಷ್ಯದಿಂದಾಗಿ ಮನುಷ್ಯ ಜೀವವೊಂದು ಕಳೆದುಹೋಗಿರುವುದಲ್ಲದೆ, ಸಾಕಲ್ಪಟ್ಟ ಪ್ರಾಣಿಗಳೂ ದುರಂತ ಅಂತ್ಯ ಕಂಡಿವೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಯುತ್ತಿದೆ.

Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.

woman 50k cash dropped road biker stole-and-fled

ಜನಸ್ಪಂದನ ನ್ಯೂಸ್‌, ಜೈಪುರ : ರಾಜಸ್ತಾನದ ಜೈಪುರದ ಬಜಾಜ್ ನಗರದಲ್ಲಿ ಹಗಲು ದರೋಡೆ ರೀತಿಯ ಘಟನೆ ನಡೆದಿದೆ. ಶಾಪಿಂಗ್‌ಗೆ ಬಂದಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ನೆಲಕ್ಕೆ ಕೆಡವಿದ್ದ 50 ಸಾವಿರ ರೂಪಾಯಿ ಇರುವ ಹಣದ ಬಂಡಲ್‌ನ್ನು ಇಬ್ಬರು ಬೈಕರ್‌ಗಳು ಎತ್ತಿಕೊಂಡು ಪರಾರಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿವೆ.

ಶಾಪಿಂಗ್ ವೇಳೆ ಬಿದ್ದ ರೂ.50 ಸಾವಿರ :

ಬರ್ಕತ್ ನಗರದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಶಾಪಿಂಗ್‌ಗೆ ಬಂದಿದ್ದ ಮಹಿಳೆ ರಸ್ತೆ (Road) ದಾಟುವಾಗ, ಕೈಯಲ್ಲಿದ್ದ 50,000 ರೂ ನಗದು ಇರುವ ಬಂಡಲ್ ಜಾರಿಬಿದ್ದು ರಸ್ತೆಗೆ ಬಿದ್ದಿದೆ. ಜನಸಂದಣಿ ಮತ್ತು ಜಾಕೆಟ್ ಹಾಕಿಕೊಳ್ಳುವ ಗಡಿಬಿಡಿಯಲ್ಲಿ ರಸ್ತೆಗೆ (Road) ಹಣ ಬಿದ್ದಿರುವುದನ್ನು ಮಹಿಳೆ ಗಮನಿಸದೇ ಹಾಗೆಯೇ ಮುಂದೆ ಸಾಗಿದ್ದಾರೆ.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಬೈಕರ್‌ಗಳು ಕ್ಷಣಾರ್ಧದಲ್ಲಿ ಹಣ ಎತ್ತಿಕೊಂಡು ಪರಾರಿ :

ಅದೇ ವೇಳೆ ಬಂದ ಇಬ್ಬರು ಬೈಕ್ ಸವಾರರು ರಸ್ತೆ (Road) ಯಲ್ಲಿ ಬಿದ್ದಿದ್ದ ಹಣವನ್ನು ಗಮನಿಸಿ ಕ್ಷಣಾರ್ಧದಲ್ಲಿ ಬೈಕ್ ನಿಲ್ಲಿಸಿದ್ದಾರೆ. ಹಿಂಬದಿ ಸವಾರ ಕೆಳಗಿಳಿದು ರಿಕ್ಷಾ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಬಿದ್ದ ಹಣವನ್ನು ಎತ್ತಿಕೊಂಡು, ಮಹಿಳೆ ಅರಿತುಕೊಳ್ಳುವಷ್ಟರಲ್ಲಿ ಬೈಕ್‌ಗೆ ಏರಿ ಪರಾರಿಯಾಗಿದ್ದಾರೆ.

ರಸ್ತೆ (Road) ಮೇಲೆ ತಮ್ಮ ಹಣ ಬಿದ್ದಿದೆ ಎಂದು ಗಮನಿಸಿದ ಮಹಿಳೆ ಬೈಕ್ ನಿಲ್ಲಿಸಲು ಓಡಿ ಬಂದರೂ, ದುಷ್ಕರ್ಮಿಗಳು ಅವರನ್ನು ತಳ್ಳಿ ಸಂಚಾರ ದಟ್ಟಣೆಯ ನಡುವೆ ಪರಾರಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಸ್ಪಷ್ಟ ದೃಶ್ಯ :

ಈ ಘಟನೆಯ ದೃಶ್ಯ ರಸ್ತೆ (Road) ಬದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನು ಓದಿ : ಮುಗಿದ Rasgulla ; ರಣಾಂಗಣದಂತಾಯ್ತು ಮದುವೆ ಹಾಲ್‌ ; ಗಲಾಟೆಯ ವಿಡಿಯೋ ವೈರಲ್.

ಮದುವೆ ಶಾಪಿಂಗ್‌ಗೆ ಬಂದಿದ್ದ ಮಹಿಳೆ :

SHO ಪೂನಂ ಚೌಧರಿ ನೀಡಿರುವ ಮಾಹಿತಿಯ ಪ್ರಕಾರ, “ಮಹಿಳೆ ತಮ್ಮ ಮಗಳೊಂದಿಗೆ ಮದುವೆ ಶಾಪಿಂಗ್‌ಗಾಗಿ ಜೈಪುರಕ್ಕೆ ಬಂದಿದ್ದರು. ಜನಸಂದಣಿ ಇರುವ ಬರ್ಕತ್ ನಗರದಲ್ಲಿ ರಸ್ತೆ (Road) ದಾಟುವಾಗ ಮತ್ತು ಜಾಕೆಟ್ ಹಾಕಿಕೊಳ್ಳುವ ಅವಸರದ ವೇಳೆ ಹಣ ಬಿದ್ದಿದೆ. ಬೈಕರ್‌ಗಳು ಈ ಅವಕಾಶವನ್ನು ಬಳಸಿಕೊಂಡು ನಗದನ್ನು ಕದ್ದಿದ್ದಾರೆ,” ಎಂದು ತಿಳಿಸಿದ್ದಾರೆ.

FIR ದಾಖಲು :

ಸ್ಥಳೀಯ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ FIR ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದ್ದಾರೆ.

ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

Road ನಲ್ಲಿ ಬಿದ್ದ ಮಹಿಳೆಯ 50,000 ರೂ. ಕದ್ದ ಬೈಕರ್ ಕ್ಷಣಾರ್ಧದಲ್ಲಿ ಪರಾರಿ ; ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಜೈಪುರ : ರಾಜಸ್ತಾನದ ಜೈಪುರದ ಬಜಾಜ್ ನಗರದಲ್ಲಿ ಹಗಲು ದರೋಡೆ ರೀತಿಯ ಘಟನೆ ನಡೆದಿದೆ. ಶಾಪಿಂಗ್‌ಗೆ ಬಂದಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ನೆಲಕ್ಕೆ ಕೆಡವಿದ್ದ 50 ಸಾವಿರ ರೂಪಾಯಿ ಇರುವ ಹಣದ ಬಂಡಲ್‌ನ್ನು ಇಬ್ಬರು ಬೈಕರ್‌ಗಳು ಎತ್ತಿಕೊಂಡು ಪರಾರಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗಿವೆ.

ಶಾಪಿಂಗ್ ವೇಳೆ ಬಿದ್ದ ರೂ.50 ಸಾವಿರ :

ಬರ್ಕತ್ ನಗರದಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಶಾಪಿಂಗ್‌ಗೆ ಬಂದಿದ್ದ ಮಹಿಳೆ ರಸ್ತೆ (Road) ದಾಟುವಾಗ, ಕೈಯಲ್ಲಿದ್ದ 50,000 ರೂ ನಗದು ಇರುವ ಬಂಡಲ್ ಜಾರಿಬಿದ್ದು ರಸ್ತೆಗೆ ಬಿದ್ದಿದೆ. ಜನಸಂದಣಿ ಮತ್ತು ಜಾಕೆಟ್ ಹಾಕಿಕೊಳ್ಳುವ ಗಡಿಬಿಡಿಯಲ್ಲಿ ರಸ್ತೆಗೆ (Road) ಹಣ ಬಿದ್ದಿರುವುದನ್ನು ಮಹಿಳೆ ಗಮನಿಸದೇ ಹಾಗೆಯೇ ಮುಂದೆ ಸಾಗಿದ್ದಾರೆ.

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಬೈಕರ್‌ಗಳು ಕ್ಷಣಾರ್ಧದಲ್ಲಿ ಹಣ ಎತ್ತಿಕೊಂಡು ಪರಾರಿ :

ಅದೇ ವೇಳೆ ಬಂದ ಇಬ್ಬರು ಬೈಕ್ ಸವಾರರು ರಸ್ತೆ (Road) ಯಲ್ಲಿ ಬಿದ್ದಿದ್ದ ಹಣವನ್ನು ಗಮನಿಸಿ ಕ್ಷಣಾರ್ಧದಲ್ಲಿ ಬೈಕ್ ನಿಲ್ಲಿಸಿದ್ದಾರೆ. ಹಿಂಬದಿ ಸವಾರ ಕೆಳಗಿಳಿದು ರಿಕ್ಷಾ ಕೆಳಗೆ ಸಿಕ್ಕಿ ಹಾಕಿಕೊಂಡಿದ್ದ ಬಿದ್ದ ಹಣವನ್ನು ಎತ್ತಿಕೊಂಡು, ಮಹಿಳೆ ಅರಿತುಕೊಳ್ಳುವಷ್ಟರಲ್ಲಿ ಬೈಕ್‌ಗೆ ಏರಿ ಪರಾರಿಯಾಗಿದ್ದಾರೆ.

ರಸ್ತೆ (Road) ಮೇಲೆ ತಮ್ಮ ಹಣ ಬಿದ್ದಿದೆ ಎಂದು ಗಮನಿಸಿದ ಮಹಿಳೆ ಬೈಕ್ ನಿಲ್ಲಿಸಲು ಓಡಿ ಬಂದರೂ, ದುಷ್ಕರ್ಮಿಗಳು ಅವರನ್ನು ತಳ್ಳಿ ಸಂಚಾರ ದಟ್ಟಣೆಯ ನಡುವೆ ಪರಾರಿಯಾಗಿದ್ದಾರೆ.

ಸಿಸಿಟಿವಿಯಲ್ಲಿ ಸೆರೆಯಾದ ಸ್ಪಷ್ಟ ದೃಶ್ಯ :

ಈ ಘಟನೆಯ ದೃಶ್ಯ ರಸ್ತೆ (Road) ಬದಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನು ಓದಿ : ಮುಗಿದ Rasgulla ; ರಣಾಂಗಣದಂತಾಯ್ತು ಮದುವೆ ಹಾಲ್‌ ; ಗಲಾಟೆಯ ವಿಡಿಯೋ ವೈರಲ್.

ಮದುವೆ ಶಾಪಿಂಗ್‌ಗೆ ಬಂದಿದ್ದ ಮಹಿಳೆ :

SHO ಪೂನಂ ಚೌಧರಿ ನೀಡಿರುವ ಮಾಹಿತಿಯ ಪ್ರಕಾರ, “ಮಹಿಳೆ ತಮ್ಮ ಮಗಳೊಂದಿಗೆ ಮದುವೆ ಶಾಪಿಂಗ್‌ಗಾಗಿ ಜೈಪುರಕ್ಕೆ ಬಂದಿದ್ದರು. ಜನಸಂದಣಿ ಇರುವ ಬರ್ಕತ್ ನಗರದಲ್ಲಿ ರಸ್ತೆ (Road) ದಾಟುವಾಗ ಮತ್ತು ಜಾಕೆಟ್ ಹಾಕಿಕೊಳ್ಳುವ ಅವಸರದ ವೇಳೆ ಹಣ ಬಿದ್ದಿದೆ. ಬೈಕರ್‌ಗಳು ಈ ಅವಕಾಶವನ್ನು ಬಳಸಿಕೊಂಡು ನಗದನ್ನು ಕದ್ದಿದ್ದಾರೆ,” ಎಂದು ತಿಳಿಸಿದ್ದಾರೆ.

FIR ದಾಖಲು :

ಸ್ಥಳೀಯ ಬಜಾಜ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ FIR ದಾಖಲಿಸಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸುವ ಕಾರ್ಯ ಕೈಗೊಂಡಿದ್ದಾರೆ.

ವಿಡಿಯೋ :

ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.

ktm rider fatal-accident

ಜನಸ್ಪಂದನ ನ್ಯೂಸ್‌, ಸೂರತ್‌ : ಗುಜರಾತ್‌ನ ಸೂರತ್ ನಗರದಲ್ಲಿ ಭೀಕರ ಅಪಘಾತ ಸಂಭವಿಸಿ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯರಾಗಿದ್ದ ಯುವ ಇನ್‌ಫ್ಲುವೆನ್ಸರ್ ದುರ್ಮರಣ ಹೊಂದಿದ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ‘ಪಿಕೆಆರ್ ಬ್ಲಾಗರ್’ ಎಂದು ಪರಿಚಿತರಾದ ಪ್ರಿನ್ಸ್ ಪಟೇಲ್, ರೀಲ್ ಚಿತ್ರೀಕರಣಕ್ಕಾಗಿ ಅತಿ ವೇಗದಲ್ಲಿ ಬೈಕ್ (KTM Bike) ಸವಾರಿ ಮಾಡುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಭೀಕರವಾಗಿ ಬಿದ್ದಿದ್ದಾರೆ.

ಘಟನೆ ಸೂರತ್‌ನ ಗ್ರೇಟ್ ಲೈನರ್ ಸೇತುವೆಯ ಬಳಿಯಲ್ಲಿ ನಡೆದಿದೆ. ಪ್ರಿನ್ಸ್ ತಮ್ಮ ಕೆಟಿಎಂ ಬೈಕ್ (KTM Bike) ಅನ್ನು ಗಂಟೆಗೆ ಸುಮಾರು 140 ಕಿ.ಮೀ ವೇಗದಲ್ಲಿ ಚಲಾಯಿಸುತ್ತಿದ್ದಾಗ ಸಮತೋಲನ ಕಳೆದುಕೊಂಡು ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತವು ಎಷ್ಟು ಭೀಕರವಾಗಿತ್ತೆಂದರೆ ಬೈಕ್‌ (KTM Bike) ಕೆಲವು ನೂರು ಮೀಟರ್‌ಗಳವರೆಗೆ ಸ್ಕಿಡ್ ಆಗಿದ್ದು, ಪ್ರಿನ್ಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಇದನ್ನು ಓದಿ : ಹಳಿ ಮೇಲೆ ಜೋಡಿ ರೋಮಾನ್ಸ್‌ : ಚಲಿಸಿದ ಗೂಡ್ಸ್‌ ರೈಲು ; ಮುಂದೆನಾಯ್ತು? Video ನೋಡಿ.

ಅಪಘಾತದ ಸಿಸಿಟಿವಿ ದೃಶ್ಯ ವೈರಲ್ :

ಸಿಸಿಟಿವಿ ದೃಶ್ಯಗಳಲ್ಲಿ ಪ್ರಿನ್ಸ್ ಸೇತುವೆಯ ಇಳಿಜಾರಿನಲ್ಲಿ ಅತೀವೇಗದಲ್ಲಿ KTM ಬೈಕ್ ಚಲಾಯಿಸುತ್ತಿರುವುದು ಮತ್ತು ಕ್ಷಣಾರ್ಧದಲ್ಲೇ ನಿಯಂತ್ರಣ ತಪ್ಪಿಸುವುದು ಕಾಣಿಸುತ್ತದೆ. ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಅಪಘಾತದ ಸಮಯದಲ್ಲಿ ಅವರು ಹೆಲ್ಮೆಟ್ ಧರಿಸಿರಲಿಲ್ಲ, ಇದು ಗಂಭೀರ ಗಾಯಗಳಿಗೆ ಕಾರಣವಾಗಿದೆ.

ಕುಟುಂಬದ ದುಸ್ಥಿತಿ :

ಪ್ರಿನ್ಸ್ ಕುಟುಂಬ ಆರ್ಥಿಕವಾಗಿ ಅತಿಯಾಗಿ ಹಿಂದುಳಿದಿದ್ದು, ಅವರ ತಾಯಿ ಆಶ್ರಯ ತಾಣದಲ್ಲಿ ವಾಸಿಸುತ್ತಾ ಹಾಲು ಮಾರಾಟದ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಮಗನ ಅಕಾಲಿಕ ಸಾವು ಕುಟುಂಬಕ್ಕೆ ಶೋಕಾಂತಿಕೆಯಾಗಿರುವುದು ಸ್ಥಳೀಯರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದ ಪ್ರಿನ್ಸ್ :

ಇದನ್ನು ಓದಿ : Zooನಲ್ಲಿ ಹುಚ್ಚಾಟಕ್ಕೆ ಹೋಗಿದ 19ರ ಯುವಕ ; ಕ್ಷಣಾರ್ಧದಲ್ಲಿ ಸಿಂಹಕ್ಕೆ ಆಹಾರ! ವಿಡಿಯೋ ವೈರಲ್.

ಪ್ರಿನ್ಸ್ ಪಟೇಲ್ ಸಾಮಾಜಿಕ ಮಾಧ್ಯಮದಲ್ಲಿ, ವಿಶೇಷವಾಗಿ ಯುವಕರಲ್ಲಿ, ವೇಗದ ಬೈಕಿಂಗ್ ವಿಡಿಯೊಗಳಿಂದಷ್ಟು ಜನಪ್ರಿಯರಾಗಿದ್ದರು.

ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಹೊಸ ಕೆಟಿಎಂ ಬೈಕ್ (KTM Bike) ಖರೀದಿಸಿದ್ದರು ಮತ್ತು ಅದನ್ನು ‘ಲೈಲಾ’ ಎಂದು ಕರೆಯುತ್ತಿದ್ದರು. ಬೈಕ್‌ (KTM Bike) ನ ಫೋಟೋಗಳು, ರೀಲ್‌ಗಳು ಮತ್ತು ಸವಾರಿ ವಿಡಿಯೊಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಿದ್ದರು.

ಅಂತೆಯೇ, ನಾಲ್ಕು ದಿನಗಳ ಹಿಂದೆ ಅವರು ತಮ್ಮ ಸಾವನ್ನು ಉಲ್ಲೇಖಿಸುವಂತಹ ಒಂದು ಕ್ರಿಯೇಟಿವ್ ವಿಡಿಯೋ ಹಂಚಿಕೊಂಡಿದ್ದು, “ಮರಣದ ನಂತರವೂ ನನ್ನ ಲೈಲಾ (KTM Bike) ವನ್ನು ಪ್ರೀತಿಸುತ್ತೇನೆ” ಎಂಬ ಸಂದೇಶ ಸೇರಿಸಿದ್ದರು. ಈಗ ಅದು ದುಃಖದ ಸಂಧರ್ಭದಲ್ಲಿ ಮತ್ತಷ್ಟು ವೈರಲ್ ಆಗಿದೆ.

ಪ್ರಕರಣ ದಾಖಲು ; ಮುಂದುವರೆದ ತನಿಖೆ :

ಅಪಘಾತದ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ಅಗತ್ಯ ತನಿಖೆ ಕೈಗೊಂಡಿದ್ದಾರೆ. ಅತಿವೇಗ ಮತ್ತು ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ಅಂದಾಜು ವ್ಯಕ್ತವಾಗಿದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ವಿಡಿಯೋ :

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

ಮುಗಿದ Rasgulla ; ರಣಾಂಗಣದಂತಾಯ್ತು ಮದುವೆ ಹಾಲ್‌ ; ಗಲಾಟೆಯ ವಿಡಿಯೋ ವೈರಲ್.

0

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಮದುವೆ ಎಂಬುದು ಸಂತಸದ ಕಾರ್ಯಕ್ರಮವಷ್ಟೇ ಅಲ್ಲಾ, ಅದು ಮನೆ ಮಂದಿಗೆ ದೊಡ್ಡ ಜವಾಬ್ದಾರಿಯ ಕಾರ್ಯಕ್ರಮವೂ ಹೌದು. ಅತಿಥಿ ನಿರ್ವಹಣೆ, ಅಡುಗೆ, ಅಲಂಕರಣ, ಆಹ್ವಾನ ಸೇರದಂತೆ ಮದುವೆಯ ಸಿದ್ಧತೆಗಳೆಂದರೆ ಕಷ್ಟಪಟ್ಟು ಮಾಡಬೇಕಾದ ಕೆಲಸ. ಎಲ್ಲವನ್ನೂ ಸರಿಯಾಗಿ ನಡೆಸಿದರೂ, ಅಂತಿಮ ಕ್ಷಣದಲ್ಲಿ ಈರುಳ್ಳಿ ಕಡಿಮೆ, ಮಜ್ಜಿಗೆ ಹೆಚ್ಚು, ಅಡುಗೆ ಒಗ್ಗರಣೆ ತಡ ಅಥವಾ ಅತಿಥಿಗಳು ನಿರೀಕ್ಷೆಗಿಂತ ಹೆಚ್ಚು ಬರುವುದು ಹೀಗೆ ಮದುವೆ ಮನೆಯಲ್ಲಿ ಸಣ್ಣಪುಟ್ಟ ತೊಂದರೆಗಳು ಸಾಮಾನ್ಯ.

ಆದರೆ ಬಿಹಾರದಲ್ಲಿ ನಡೆದ ಘಟನೆ ಮಾತ್ರ ಸಾಮಾನ್ಯವಲ್ಲ. ಅಲ್ಲಿ “ರಸಗುಲ್ಲಾ (Rsagulla)” ಕಡಿಮೆ ಆಯ್ತು ಎನ್ನುವ ಒಂದು ಸಣ್ಣ ಕಾರಣಕ್ಕೆ ಮದುವೆ ಮನೆಯಲ್ಲಿ ಭಾರೀ ಗಲಭೆ ಉಂಟಾಗಿ, ಮದುವೆ ಸ್ಥಳವೇ ರಣರಂಗದಂತಾಗಿತ್ತು.

ಇದನ್ನು ಓದಿ : “ದಿನಾ ಕುಡಿಯೋರು vs ವಾರಕ್ಕೊಮ್ಮೆ ಕುಡಿಯೋರು : ‘Drink’ ಎಫೆಕ್ಟ್ ಯಾರಿಗೆ ಹೆಚ್ಚು?”

ರಸಗುಲ್ಲಾ (Rasgulla) ಮುಗಿದ ಕಾರಣಕ್ಕೆ ಮದುವೆ ಮನೆಯಲ್ಲಿ ಗಲಾಟೆ :

ಬುದ್ಧಗಯಾದ ಮದುವೆ ಹಾಲ್‌ನಲ್ಲಿ ಅತಿಥಿಗಳಿಗೆ ನೀಡಲಾಗುತ್ತಿದ್ದ ಸಿಹಿತಿನಿಸಿನ (Rasgulla) ಪ್ರಮಾಣ ಕಡಿಮೆ ಆಯಿತು. ಇದಕ್ಕಾಗಿ ವರಪಕ್ಷದ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಮದುವೆ ಮನೆಯಲ್ಲಿ ಕುರ್ಚಿಗಳನ್ನು ಎತ್ತಿ ಪರಸ್ಪರ ಹೊಡೆಯಲು ಪ್ರಾರಂಭಿಸಿದರು. ಅಲ್ಲದೆ ಅಡುಗೆ ಸಿಬ್ಬಂದಿಯ ಮೇಲೂ ಹಲ್ಲೆ ನಡೆದಿದ್ದು, ಮದುವೆ ಸ್ಥಳದಲ್ಲಿ ಭಾರೀ ಗಲಾಟೆ ನಡೆಯಿತು.

ಮದುವೆ ಹಾಲ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಈ ಗಲಾಟೆಯ ದೃಶ್ಯಗಳು ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ. ವೈರಲ್ ದೃಶ್ಯಗಳಲ್ಲಿ ಯುವಕರು ಕೈಯಲ್ಲಿ ಕುರ್ಚಿಗಳನ್ನು ಹಿಡಿದು ಆಹಾರ ಬಡಿಸುತ್ತಿದ್ದವರ ಮೇಲೆ ದಾಳಿ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.

ಕೆಲವು ಮಂದಿ ಅಡುಗೆ ಪಾತ್ರೆಗಳನ್ನೇ ಎತ್ತಿ ಪರಸ್ಪರ ಹೊಡೆಯುತ್ತಿರುವುದು ಸಹ ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನು ಓದಿ : ಅಮ್ಮನಿಗೆ ಫೋನ್ ಮಾಡಿ, ಮನೆಗೆ ಹಾಲು ಕುಡಿಯಲು ಬಿಡಿ ಎಂದು ಅಳುತ್ತಿರುವ LKG Kids.

ಗಲಾಟೆಯಿಂದ ಮದುವೇ ನಿಂತುಹೋದ ವರದಿ :

ಕೆಲ ವರದಿಗಳ ಪ್ರಕಾರ, ರಸಗುಲ್ಲಾ (Rasgulla) ವಿಷಯದಿಂದ ಆರಂಭವಾದ ಗಲಾಟೆ ದೊಡ್ಡ ಜಗಳ ಉಂಟಾಗಿ ಮದುವೆ ಕಾರ್ಯಕ್ರಮವೇ ತಾತ್ಕಾಲಿಕವಾಗಿ ನಿಲ್ಲಬೇಕಾಯಿತು ಎನ್ನಲಾಗಿದೆ. ಎರಡೂ ಸಮುದಾಯದವರು ಪರಸ್ಪರ ಕೈಯಿಕ್ಕಿ ಹೊಡೆದಾಡಿರುವ ಮಾಹಿತಿ ಹೊರಬಿದ್ದಿದೆ. ತಳ್ಳಾಟ–ನೂಕಾಟ ಹಾಗೂ ಕುರ್ಚಿಗಳಿಂದ ಹೊಡೆದಾಟ ಮದುವೆ ಹಾಲ್‌ನಲ್ಲಿ ಗೊಂದಲ ಸೃಷ್ಟಿಸಿತು.

ಈ ಘಟನೆ ನವೆಂಬರ್ 29ರಂದು ನಡೆದಿದೆ ಎಂದು ವರದಿಯಾಗಿದೆ. ಆದರೆ ಈವರೆಗೆ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ, ಬಂಧನವೂ ಆಗಿಲ್ಲ.

ವೈರಲ್ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ :

ವಿಡಿಯೋ ಹೊರಬಿದ್ದ ನಂತರ ನೆಟ್ಟಿಗರು ಹಲವಾರು ಪ್ರತಿಕ್ರಿಯೆ ನೀಡಿದ್ದಾರೆ. “ರಸಗುಲ್ಲಾ (Rasgulla) ಮುಗಿದ ಕಾರಣಕ್ಕೆ ಮದುವೆ ಮುರಿದು ಹೋಗುತ್ತದೆ ಎನ್ನುವುದೇ ವಿಚಿತ್ರ!”. “ನನ್ನ ದೇಶ ನಿತ್ಯವೂ ಹೊಸ ರೀತಿಯಲ್ಲಿ ಅಚ್ಚರಿ ಕೊಡುತ್ತದೆ” ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಇದನ್ನು ಓದಿ : ಕಾಫಿ ತೋಟದಲ್ಲಿ ನಾಪತ್ತೆಯಾದ 2 ವರ್ಷದ ಬಾಲಕಿಯನ್ನು ಜೀವಂತವಾಗಿ ಪತ್ತೆಹಚ್ಚಿದ ಸಾಕು Dog.

ರಸಗುಲ್ಲಾ (Rasgulla) ದ ಈ ಘಟನೆ, ಮದುವೆ ಮನೆಗಳಲ್ಲಿ ಅಡುಗೆ ನಿರ್ವಹಣೆ ಹೇಗೆ ಕೆಲವೊಮ್ಮೆ ಗಂಭೀರ ಸಮಸ್ಯೆಯಾಗಿ ಬದಲಾಗಬಹುದು ಎಂಬುದನ್ನೇ ಮತ್ತೊಮ್ಮೆ ದೃಢಪಡಿಸಿದೆ.

ರಸಗುಲ್ಲಾ (Rasgulla) ವಿಡಿಯೋ :

“ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿಗೆ ಬೆಂಕಿ : ಲೋಕಾಯುಕ್ತ Inspector ಸಜೀವ ದಹನ”.

divider car fire lokayukta inspector death

ಜನಸ್ಪಂದನ ನ್ಯೂಸ್‌, ಧಾರವಾಡ : ಧಾರವಾಡದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲೋಕಾಯುಕ್ತ ಇಲಾಖೆಯ ಇನ್ಸ್‌ಪೆಕ್ಟರ್‌ (Inspector) ರಾದ ಪಂಚಾಕ್ಷರಿ ಸಾಲಿಮಠ ದುರ್ಘಟನೆಗೆ ಬಲಿಯಾಗಿದ್ದಾರೆ. ಇತ್ತೀಚೆಗೆ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಮೃತಪಟ್ಟ ಘಟನೆ ಇನ್ನೂ ಜನರ ಮನಸಿನಲ್ಲಿ ಮಸುಕಾಗುವುದಕ್ಕೂ ಮುನ್ನ, ಮತ್ತೊಂದು ಗಂಭೀರ ಕಾರು ದುರಂತ ರಾಜ್ಯವನ್ನು ಕಂಗೆಡಿಸಿದೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್ (Inspector) ಕಾರು ಅಪಘಾತ :

ಹಾವೇರಿಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ (Inspector) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪಂಚಾಕ್ಷರಿ ಸಾಲಿಮಠ ಬುಧವಾರ ಸಂಜೆ ಗದಗ ಕಡೆಗೆ i20 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ‌

ಇದನ್ನು ಓದಿ : ರೀಲ್ಸ್‌ಗಾಗಿ ಗಂಟೆಗೆ 140 ಕಿ.ಮೀ ವೇಗದಲ್ಲಿ KTM ಬೈಕ್ ಚಾಲನೆ ; ತುಂಡಾಗಿ ತಲೆ.

ಅಣ್ಣಿಗೇರಿ ಪಟ್ಟಣ ಹೊರವಲಯದ ಭದ್ರಾಪುರದ ಬಳಿ ಗದಗ–ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಕಾರು ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ (Divider) ಭೀಕರವಾಗಿ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಕ್ಷಣಾರ್ಧದಲ್ಲಿ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿ ಅತಿ ವೇಗವಾಗಿ ವ್ಯಾಪಿಸಿದ್ದು, ಕಾರ್ ಲಾಕ್ ತೆಗೆಯಲು ಸಾಧ್ಯವಾಗಿಲ್ಲ ಕಾರಣ Inspector ಅವರು ಕಾರಿನಿಂದ ಹೊರಬರಲು ಸಾಧ್ಯವಾಗಿಲ್ಲ.

ಅಪಘಾತ ಸಂಜೆ 7.30ರ ಸಮಯದಲ್ಲಿ ನಡೆದಿದೆ. ಆಗ Inspector ಪಂಚಾಕ್ಷರಿ ಸಾಲಿಮಠ ತಮ್ಮ ವಾಹನವನ್ನು ಸ್ವತಃ ಚಾಲನೆ ಮಾಡುತ್ತಿದ್ದರು. ಕುಟುಂಬವನ್ನು ಭೇಟಿಯಾಗಲು ಗದಗಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದಂತೆ ಮೂಲಗಳು ತಿಳಿಸಿವೆ.

ಇದನ್ನು ಓದಿ : Accident : ಕಾರು – ಟ್ರ್ಯಾಕ್ಟರ್ ಡಿಕ್ಕಿ ; ಸ್ಥಳದಲ್ಲಿಯೇ ನಾಲ್ವರು ಯುವಕರ ದುರ್ಮರಣ.!

“ಡಿಕ್ಕಿಯ ನಂತರ ಪೆಟ್ರೋಲ್ ಸೋರಿಕೆ ಆಗಿ ಸ್ಪಾರ್ಕ್ ಉಂಟಾಗಿ ಬೆಂಕಿ ಹಬ್ಬಿದ ಸಾಧ್ಯತೆ ಇದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.”

ಘಟನಾ ಸ್ಥಳಕ್ಕೆ ತಕ್ಷಣವೇ ಅಣ್ಣಿಗೇರಿ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಒಳಗಿದ್ದ ಪಂಚಾಕ್ಷರಿ ಸಾಲಿಮಠ ಸಜೀವವಾಗಿ ದಹನಗೊಂಡಿರುವುದು ದೃಢಪಟ್ಟಿದೆ.

Inspector ಮೃತದೇಹ ಗುರುತಿಸಲು ಆರಂಭದಲ್ಲಿ ಕಷ್ಟ ಎದುರಾಯಿತು. ನಂತರ ಅವರ ಕೈಯಲ್ಲಿದ್ದ ಬ್ರೆಸ್ಲೆಟ್ ಆಧರಿಸಿ ಕುಟುಂಬದ ಸದಸ್ಯರು ಗುರುತು ಪತ್ತೆಹಚ್ಚಿದರು. ಇದಾದ ಬಳಿಕ ಪೊಲೀಸರು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿ ತನಿಖೆಯನ್ನು ಮುಂದುವರೆಸಿದ್ದಾರೆ.

ಸ್ಥಳಕ್ಕೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನು ಓದಿ : “ದಿನಾ ಕುಡಿಯೋರು vs ವಾರಕ್ಕೊಮ್ಮೆ ಕುಡಿಯೋರು : ‘Drink’ ಎಫೆಕ್ಟ್ ಯಾರಿಗೆ ಹೆಚ್ಚು?”

ಈ ಅಪಘಾತದಿಂದ ಸ್ಥಳೀಯರು, ಸಹೋದ್ಯೋಗಿಗಳು ಹಾಗೂ ಕುಟುಂಬದವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಐಎಎಸ್ ಮಹಾಂತೇಶ್ ಬೀಳಗಿ ನಿಧನದ ಸುದ್ದಿ ಮಾಸುವ ಮುನ್ನೇ ಮತ್ತೊಂದು Inspector ಓರ್ವರ ಜೀವ ಹಾನಿ ರಾಜ್ಯದ ಕಾನೂನು ಜಾಗೃತಿ ವಲಯದಲ್ಲಿ ಆತಂಕ ಮೂಡಿಸಿದೆ.