Thursday, September 19, 2024
spot_img
spot_img
spot_img
spot_img
spot_img
spot_img
spot_img

ನಮ್ಮ ಅತ್ತೆ ಬೇಗ ಸಾಯಬೇಕು ದೇವರೇ ಅಂತ ಹರಕೆ ಹೊತ್ತ ಅಳಿಯ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ನಡೆದ ಘಟನೆಗಳು ವೈರಲ್ ಆಗುತ್ತಿರುತ್ತವೆ. ಒಂದು ಬಾರಿ ಸಾಮಾಜಿಕ ಜಾಲತಾಣದ (social media) ಯಾವುದಾದರೂ ಖಾತೆಯಲ್ಲಿ ಹಂಚಿಕೆಯಾದರೆ ಮುಗಿಯಿತು. ಅದು ಸಾಕಷ್ಟು ವೈರಲ್ ಆಗುತ್ತದೆ.

ಅದರಂತೆಯೇ ಇಲ್ಲೊಬ್ಬ ವ್ಯಕ್ತಿ ತನ್ನ ಅತ್ತೆ ಕಾಟ ತಾಳಲಾರದೆ, ಆಕೆಯ ಸಾವನ್ನು (death) ಬಯಸಿ, ದೇವರ ಹುಂಡಿಗೆ 50 ರೂ. ಹಾಕುವ ಮೂಲಕ ಕೋರಿಕೊಂಡಿದ್ದಾನೆ.

ಇದನ್ನು ಓದಿ : Strange Ritual : ಭಾರತದ ಈ ಗ್ರಾಮದಲ್ಲಿ ಮದುವೆಗೂ ಮುಂಚೆ ಲೈಂಗಿಕ ಕ್ರಿಯೆ ಕಡ್ಡಾಯವಂತೆ.!

ಗಂಡನ ಮನೆಗೆ ಹೋದ ಸೊಸೆಗೆ (daughter-in-law) ಅತ್ತೆ ಕಾಟ ಇರುತ್ತದೆ ಅಥವಾ ಅತ್ತೆ ಬಹಳ ಹಿಂಸೆ ನೀಡುತ್ತಾರೆ ಎಂಬುದು ಸಾಮಾನ್ಯ. ಇಂತದ್ದೆಲ್ಲ ನಾವೆಲ್ಲಾ ಹಲವು ಬಾರಿ ಕೇಳಿರುತ್ತೇವೆ.

ಆದರೆ, ಇದು ಸ್ವಲ್ಪ ಉಲ್ಟಾ ಕೇಸ್​ ಎಂದೇ ಹೇಳಬಹುದು. ಈ ವ್ಯಕ್ತಿ ತನ್ನ ಹೆಂಡತಿಯ ತಾಯಿ ಕೊಡುವ ಕಾಟಕ್ಕೆ ಬೇಸತ್ತು ದೇವರ ಮೊರೆ ಹೋಗಿದ್ದಾನೆ.

ಇದು ಒಂದು ರೀತಿ ವಿಚಿತ್ರ ಘಟನೆ. ಅಸಲಿಗೆ ತನ್ನ ಹೆಂಡತಿಯ ತಾಯಿ ಕೊಡುತ್ತಿದ್ದ ಕಾಟಕ್ಕೆ ಬೇಸತ್ತ ಈ ಅನಾಮಧೇಯ ವ್ಯಕ್ತಿ (unknown person) 50 ರೂ. ಹಸಿರು ನೋಟಿನ ಮೇಲೆ ‘ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ’ ಎಂದು ಬರೆದು ದೇವರ ಹುಂಡಿಯಲ್ಲಿ ಹಾಕಿದ್ದಾನೆ.

ಇದನ್ನು ಓದಿ : ಕೋಲೆ ಬಸವನ ಗುದ್ದಿದ ಏಟಿಗೆ ಚಲಿಸುವ ಟ್ರಕ್‌ ಕೆಳಗೆ ಬಿದ್ದ ಬೈಕ್ ಸವಾರ ; ಮುಂದೆನಾಯ್ತು Video ನೋಡಿ.

ಇದು ಮೇಲ್ನೋಟಕ್ಕೆ ಕೆಲವರಿಗೆ ಹಾಸ್ಯಸ್ಪದವಾಗಿ ಕಂಡುಬಂದಿದ್ದೇ ಆದರೂ ಆತನ ಕಷ್ಟ ನಿಜವೂ ಇರಬಹುದು ಎಂದು ಕೆಲವರು ಭಾವಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img