Friday, July 12, 2024
spot_img
spot_img
spot_img
spot_img
spot_img
spot_img

ಕೋತಿಗಳ ಐಸ್ ಕ್ರೀಂ ಪಾರ್ಟಿ : ವಿಡಿಯೋ ನೋಡಿದ್ರೆ ನಿಮ್ಮ ಬಾಯಲ್ಲೂ ಬರುತ್ತೆ ನೀರು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : “ಐಸ್ ಕ್ರೀಂ” ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಖಂಡಿತಾ ಎಲ್ಲರಿಗೂ ಬೇಕೇ ಬೇಕು ಐಸ್ ಕ್ರೀಂ. ಇದಲ್ಲಾ ಈಗ ಯಾಕೆ ಅಂತಿರಾ.?
ವಿಷಯ ಇಷ್ಟೆ, ಐಸ್ ಕ್ರೀಂ ಬರೀ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳು ಕೂಡ ಐಸ್ ಕ್ರೀಂ ರುಚಿ ನೋಡಿದ್ರೆ ಬಿಡೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರಾನಿಗಳ ವಿಡಿಯೋ ವೈರಲ್ ಆಗ್ತಿರುತ್ತವೆ.

ಮಂಗನಿಂದ ಮಾನವ ಎನ್ನುವ ಮಾತಿದೆ. ನಮಗಿಷ್ಟ ಅಂದ್ಮೇಲೆ ಮಂಗಗಳು ಇಷ್ಟಪಡದೆ ಇರುತ್ವಾ? ಮಂಗ (Monkey) ಗಳಿಗೂ ಐಸ್ ಕ್ರೀಂ ಇಷ್ಟ ಎನ್ನುವುದು ವೈರಲ್ ವಿಡಿಯೋದಿಂದ ಬಹಿರಂಗವಾಗಿದೆ.

ಈ ವಿಡಿಯೋದಲ್ಲಿ ಮಂಗಗಳು ಐಸ್ ಕ್ರೀಂ ಕಸಿದುಕೊಂಡು ತಿನ್ನುತ್ತಿಲ್ಲ. ಮಂಗಗಳಿಗಾಗಿಯೇ ಐಸ್ ಕ್ರೀಂ ನೀಡಲಾಗಿದೆ. ಒಂದು ಬಾಕ್ಸ್ ನಲ್ಲಿ ಒಂದಿಷ್ಟು ಐಸ್ ಕ್ಯಾಂಡಿ ಇರೋದನ್ನು ನೀವು ನೋಡ್ಬಹುದು. ಬಿಳಿ ಮತ್ತು ಗುಲಾಬಿ ಬಣ್ಣದ ಐಸ್ ಕ್ಯಾಂಡಿಯನ್ನು ನೀವು ಕಾಣಬಹುದು. ಮಂಗಗಳ ಮುಂದೆ ಇದನ್ನು ಇಡುತ್ತಿದ್ದಂತೆ ಅವು ಅದನ್ನು ನಿರಾಕರಿಸೋದಿಲ್ಲ.

ಮಹಿಳಾ ಸಿಬ್ಬಂದಿ ಜೊತೆ ಕಿರಿಕ್ : ಐಪಿಎಸ್ ಅಧಿಕಾರಿ ಅರೆಸ್ಟ್.!

ಒಂದೊಂದಾಗಿ ಬಂದು ಐಸ್ ಕ್ಯಾಂಡಿ ಹಿಡಿದು ತಿನ್ನುತ್ತಾ ಹೋಗುತ್ವೆ. ಕೆಲ ಮಂಗಗಳಿ ಜನರು ಐಸ್ ಕ್ರೀಂ ತಿನ್ನಿಸೋದನ್ನು ನೀವು ನೋಡ್ಬಹುದು. ಕೈನಲ್ಲಿ ಒಂದು ಐಸ್ ಕ್ಯಾಂಡಿ ಹಿಡಿದಿದ್ದು, ಇನ್ನೊಂದನ್ನು ತಿನ್ನುತ್ತಿರುವ ಮಂಗಗಳೂ ವಿಡಿಯೋದಲ್ಲಿವೆ.

ಕೆಲ ಮಂಗಗಳು ಐಸ್ ಕ್ಯಾಂಡಿಯನ್ನು ಕಚ್ಚಿ ತಿಂದ್ರೆ ಮತ್ತೆ ಕೆಲ ಮಂಗಗಳು ಅದನ್ನು ನೆಕ್ಕಿ ತಿನ್ನುತ್ತಿವೆ. ಮಂಗಕ್ಕೂ ಐಸ್ ಕ್ರೀಂ ತಿನ್ನೋದು ಹೇಗೆ ಎಂಬುದು ಗೊತ್ತಿದೆ ಎಂದಾಯ್ತು.

ಈ ವಿಡಿಯೋವನ್ನು @AMAZlNGNATURE ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದಕ್ಕೆ ಮಂಗಗಳ ಪಾರ್ಟಿ ಎಂದು ಶೀರ್ಷಿಕೆ ಹಾಕಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. 1.4 ಮಿಲಿಯನ್ಸ್ ವೀವ್ಸ್ ಪಡೆದಿದೆ. 33 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 4 ಸಾವಿರಕ್ಕಿಂತ ಹೆಚ್ಚು ಬಾರಿ ವಿಡಿಯೋ ರೀಟ್ವಿಟ್ ಆಗಿದ್ದು, 300ಕ್ಕೂ ಹೆಚ್ಚು ಜನರು ಇದಕ್ಕೆ ಕಮೆಂಟ್ ಮಾಡಿದ್ದಾರೆ.

ಮಂಗ ಐಸ್ ಕ್ರೀಂ ತಿನ್ನುವ ವಿಧಾನವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ವಿಧ ವಿಧವಾಗಿ ಕಾಮೆಂಟ್ ಮಾಡಿದ್ದಾರೆ.

spot_img
spot_img
- Advertisment -spot_img