ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಬಳಲುತ್ತಿರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಇನ್ನೂ ಬಾಳಿ ಬದುಕಬೇಕಾದ ಯುವಜನತೆಯರು, ಸಣ್ಣ ವಯಸ್ಸಿನಲ್ಲಿಯೇ ಈ ಕಾಯಿಲೆಗೆ ಬಲಿಯಾಗುತ್ತಿರುವುದು, ನಿಜಕ್ಕೂ ನೋವುಂಟು ಮಾಡುತ್ತಿದೆ.
ವಿಶೇಷವಾಗಿ ಭಾರತದಲ್ಲಿ ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದ್ರೆ, ಒಂದು ಕಾಲದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮಾತ್ರ ಈ ಸಮಸ್ಯೆಗಳು ಬರುತ್ತಿದ್ದವು.
ಇದನ್ನು ಓದಿ : ಬೆಳಗಾವಿಯ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ವ್ಯಕ್ತಿಯು ಅನಾರೋಗ್ಯಕರ ಆಹಾರ, ಅವ್ಯವಸ್ಥೆಯ ಜೀವನಶೈಲಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಿಂದ ಹೃದಯಾಘಾತಕ್ಕೆ ಒಳಗಾಗುತ್ತಾನೆ.
ಸದ್ಯ ಅಕ್ಟೋಬರ್ 15 ರಂದು ಹೃದಯಾಘಾತದಿಂದ ಯುವತಿ ಸಾವಿಗೀಡಾದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ : ವಿಚ್ಛೇದನದ ಬಳಿಕ ಸೊಸೆ, ಅತ್ತೆ-ಮಾವನ ಮನೆಯಲ್ಲಿ ಇರುವಂತಿಲ್ಲ; High court ಮಹತ್ವದ ತೀರ್ಪು.!
ಲಕ್ಷ್ಮೀ ಪೂರ್ಣಿಮಾ ಹಬ್ಬದ ಆಚರಣೆಯ ವೇಳೆ ವೇದಿಕೆಯಲ್ಲಿ ಯುವತಿ ನೃತ್ಯ ಪ್ರದರ್ಶನ ನೀಡುತ್ತಿದ್ದಾಗ ಹೃದಯಾಘಾತ ಸಂಭವಿಸಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾಳೆ.
ತಕ್ಷಣ ಹುಡುಗಿಯನ್ನು ಎಚ್ಚರಿಸುವ ಪ್ರಯತ್ನ ಮಾಡಲಾಯಿತಾದರೂ ಯಾವುದೇ ಪ್ರಯೋಜನವಾಗದೇ ಯುವತಿ ಕೊನೆಯುಸಿರೆಳೆದರು.
मंच पर नृत्य करते हुए 18 वर्षीय छात्रा की हुई मौत ! mp news #mpnews #mpnewsupdate #asam pic.twitter.com/t9IoSFSHRs
— MP News (@mpnewstv) October 19, 2024