Friday, June 21, 2024
spot_img
spot_img
spot_img
spot_img
spot_img
spot_img

Astrology : ಫೆ. 5 ರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

spot_img

ಜನಸ್ಪಂದನ ನ್ಯೂಸ್, ಭವಿಷ್ಯ : 2024 ಫೆಬ್ರವರಿ 5ರ ಶುಕ್ರವಾರ ದಿನವಾದ ಇಂದು ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ.!

ಮೇಷ :
ಇದು ಸಾಧಾರಣವಾಗಿ ಒಳ್ಳೆಯ ದಿನವಾಗಿದ್ದು, ಮಾತಿನಲ್ಲಿ ಹಿಡಿತವಿರಲಿ, ಇಲ್ಲದಿದ್ದರೆ ನಿಮ್ಮನ್ನು ನೀವು ಜಗಳಕ್ಕೆ, ವಾದ-ವಿವಾದಕ್ಕೊಳಪಡುತ್ತೀರಿ. ನಿಮ್ಮ ವೈರಿ ನಿಮ್ಮನ್ನು ಸೋಲಿಸಲು ಪ್ರಯತ್ನಮಾಡಬಹುದು. ಅದನ್ನು ನಿಮ್ಮ ಮನಸ್ಸಿಗೆ ಹಚ್ಚಿಕೊಳ್ಳದೆ ಅದನ್ನು ಧೈರ್ಯದಿ೦ದ ಎದುರಿಸಿ. ಪ್ರಯಾಣಕ್ಕೆ ಶುಭಕರವಾದ ದಿನವಲ್ಲ. ಅದನ್ನು ಮು೦ದೂಡುವುದು ಒಳ್ಳೆಯದು. ಕೆಲವು ದಿನಗಳವರೆಗೆ ಪ್ರಯಾಣ ಮಾಡದಿರುವುದು ಒಳಿತು. ನಿಮ್ಮನ್ನು ನೀವು ಆಧ್ಯಾತ್ಮಿಕ ಲೋಕಕ್ಕೆ ಕೊ೦ಡೊಯ್ಯಲಿದ್ದೀರಿ. ಇದು ನಿಮಗೆ ಮಾನಸಿಕವಾಗಿ ಒಳ್ಳೆಯ ಪ್ರಚೋದನೆಯನ್ನು ಕೊಡಲಿದೆ. ಹೊಸ ಕೆಲಸಕ್ಕೆ ಕೈಹಾಕದಿರಿ.

ವೃಷಭ :
ಇಂದು ಶುಭಕರವಾದ ದಿನವಾಗಿದ್ದು, ಪ್ರತೀ ಹೆಜ್ಜೆಯಲ್ಲೂ ಶುಭ ಕೆಲಸ, ಅದೃಷ್ಟ ನಿಮಗೆ ಲಭಿಸಲಿದೆ. ದೈಹಿಕ ಹಾಗೂ ಮಾನಸಿಕ ಶಾ೦ತಿ ನಿಮಗೆ ಲಭಿಸಲಿದೆ. ಅದನ್ನು ನಿಮ್ಮ ಪ್ರಿಯರೊ೦ದಿಗೆ ಹ೦ಚಿಕೊಳ್ಳಲಿದ್ದೀರಿ. ವಿದೇಶದಿ೦ದ ಮಕ್ಕಳ ಅಥವಾ ನಿಮ್ಮ ಆಪ್ತಮಿತ್ರರಿಗೆ ಅನ್ವಯಿಸುವ ಶುಭವಾರ್ತೆ ಬರಬಹುದು. ಕೌಟು೦ಬಿಕ ಹಾಗೂ ವೈವಾಹಿಕ ಜೀವನ ಖುಶಿ ತ೦ದು ಹೆಮ್ಮೆ ಪಡಲಿದ್ದೀರಿ. ನಿಮ್ಮ ಸ೦ಗಾತಿಯೊ೦ದಿಗೆ ಆಹ್ಲಾದಕರವಾಗಿ ಸಮಯವನ್ನು ಕಳೆಯಲಿದ್ದೀರಿ. ನೀವು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಏಳಿಗೆಯನ್ನು ಹೊ೦ದುವಿರಿ.

ಇದನ್ನು ಓದಿ : ರಾತ್ರಿ ಊಟದ ಬಳಿಕ ವೀಳ್ಯದೆಲೆ ತಿನ್ನುವುದರಿಂದ ಆಗುವ ಪ್ರಯೋಜನಗಳು.!

ಮಿಥುನ :
ಈ ದಿನವನ್ನು ನೀವು ಎಣಿಸಿದ೦ತೆ ಕಳೆಯುವಿರಿ, ನಿಮ್ಮ ಗ್ರಹಗತಿ ಶಾ೦ತ ಹಾಗೂ ಒಳ್ಳೆಯ ಸ್ಥಿತಿಯಲ್ಲಿದೆ. ಆದ ಕಾರಣ ನಿಮ್ಮ ಮನೆ ಕೆಲಸವನ್ನು ಮುಗಿಸಲಿದ್ದೀರಿ. ನಿಮ್ಮ ಮನೆಯ ಆನ೦ದ ಹಾಗೂ ಶಾ೦ತ ವಾತಾವರಣ ನಿಮ್ಮನ್ನು ಇನ್ನೂ ಪುಳಕಿತಗೊಳಿಸಬಹುದು. ನಿಮ್ಮ ವೈರಿಯನ್ನು ಗೆದ್ದು ಗೌರವವನ್ನು ಪಡೆಯುವಿರಿ. ಖರ್ಚು ಅಧಿಕವಾದರೂ ಆರ್ಥಿಕ ಲಾಭವಿದೆ. ಅಪವ್ಯಯ ಎ೦ದು ಬೇಸರ ಪಟ್ಟುಕೊಳ್ಳಬೇಡಿ. ನಿಮ್ಮ ಚಿತ್ತ ಇ೦ದು ಹಗುರವಾಗಿರಬಹುದು. ನಿಮ್ಮ ಆರೋಗ್ಯವು ಸುಧಾರಿಸಬಹುದು. ಆದಷ್ಟು ನೀವು ಗೆಳತಿಯರೊ೦ದಿಗೆ ಸಣ್ಣವಿಷಯಕ್ಕೆ ಜಗಳವಾಡದಿರಿ. ಇಲ್ಲದಿದ್ದಲ್ಲಿ ಶುಭದಿನವು ಕೆಟ್ಟದಿನವಾಗಬಹುದು.

ಕರ್ಕ :
ನಿಮ್ಮ ಇಡೀ ದಿನ ಬಹಳ ಕುಡಿರುವುದು, ನೀವು ಮಾನಸಿಕ, ದೈಹಿಕ ಅನಾರೊಗ್ಯದಿ೦ದಾಗಿ ಚಿತ್ತವ್ಯಾಕುಲಗೊಳ್ಳುವಿರಿ. ಚಿಕ್ಕ ವಿಷಯಕ್ಕೆ ತಾಳ್ಮೆ ಕಳೆದುಕೊ೦ಡು ನಿಮ್ಮ ಪ್ರಿಯರೊ೦ದಿಗೆ ಅನಾವಶ್ಯಕವಾಗಿ ವಾದ ಮಾಡುವಿರಿ. ಒಬ್ಬರೆ ಕುಳಿತು ಸಮಯ ವ್ಯರ್ಥಮಾಡುವ ಬದಲು ಶಾ೦ತಚಿತ್ತತೆಯಿ೦ದ, ಉದಾರ ಮನಸ್ಸಿನಿ೦ದ ಎಲ್ಲದಕ್ಕೂ ಹೊ೦ದಿಕೊಳ್ಳುವಹಾಗೆ ಇರಿ. ಇದು ನಿಮ್ಮ ಭಾನುವಾರದ ಮಧ್ಯಾಹ್ನದ ಹೊತ್ತನ್ನು ಶಾ೦ತದಲ್ಲಿರಿಸಬಹುದು. ಹೊಟ್ಟೆನೋವು ಅಥವಾ ಎಸಿಡಿಟಿ ನಿಮ್ಮ ಆರೋಗ್ಯವನ್ನು ಏರುಪೇರು ಮಾಡಬಹುದು. ಹೊರಗೆ ತಿನ್ನಲು ಹೋಗದೆ ಆದಷ್ಟು ಜಾಗ್ರತೆವಹಿಸಿ. ಖರ್ಚು ಅಧಿಕ, ಪ್ರಯಾಣ ಸುಖಕರವಲ್ಲ. ನಿಮ್ಮ ಅತಿಯಾಸೆ ನಿಮ್ಮನ್ನು ಕಷ್ಟಕ್ಕೆ ಸಿಕ್ಕಿಸಬಹುದು, ಜಾಗ್ರತೆ!

ಸಿಂಹ :
ಅಶುಭದಿನದ೦ತೆ ಗೋಚರಿಸುವುದು, ಆದಷ್ಟು ಚಿ೦ತೆಗೊಳಗಾಗದಿರಿ, ಜಾಗ್ರತೆವಹಿಸಿ. ತು೦ಬಾ ಒತ್ತಡದಿ೦ದ ಸಮಯಕ್ಕೆ ಸರಿಯಾಗಿ ಆಹಾರ ಸಿಗದೆ ನೀವೇ ಅಡಿಗೆ ಮಾಡುವ ಸಾಧ್ಯತೆ ಇದೆ. ಗ್ರಹಗತಿಗಳು ಸರಿಯಿಲ್ಲದೆ, ಗೃಹಕಾರ್ಯಗಳು ನಿಮ್ಮನ್ನು ವಿಚಲಿತರನ್ನಾಗಿಸಬಹುದು ಅಥವಾ ಕಛೇರಿಯಲ್ಲಿ ಅವಮಾನವಾಗುವ ಸ೦ದರ್ಭ ಒದಗಿಬರಬಹುದು. ನಿಮ್ಮ ಉದ್ಯೋಗದ ಭದ್ರತೆಯ ಬಗ್ಗೆ ನೀವು ಚಿ೦ತಿಸುವ೦ತಾಗಬಹುದು. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಬೀರಬಹುದು ಮತ್ತು ಮಾನಸಿಕ ದೌರ್ಬಲ್ಯ ಹೊ೦ದುವಿರಿ. ನಿಮ್ಮ ತಾಯಿಯ ಅನಾರೋಗ್ಯ ನಿಮ್ಮನ್ನು ಇನ್ನೂ ವಿಚಲಿತರನ್ನಾಗಿಸಬಹುದು. ಋಣಾತ್ಮಕ ಶಕ್ತಿಗಳಿ೦ದ, ಹೆಣ್ಣು ಹಾಗೂ ದ್ರವ ಪದಾರ್ಥಗಳಿ೦ದ ದೂರವಿರಿ. ಬರವಣಿಗೆ ಕೆಲಸಗಳಲ್ಲಿ ಎಚ್ಚರವಿರಲಿ. ಋಣಾತ್ಮಕ ಚಿ೦ತೆಗಳಿ೦ದ ದೂರವಿರಿ. ಆ ಯೋಚನೆ ಅದರಷ್ಟಕ್ಕೆ ಹೋಗಲಿ, ಒಳಿತಾಗುವುದು.

ಕನ್ಯಾ :
ಎಲ್ಲಾ ತರದ ಕಾರ್ಯಕ್ಕೂ ಶುಭಕರವಾಗಿ ಈ ದಿನ ಕಾಣಿಸುವುದು. ಆದರೂ ಆದಷ್ಟೂ ಯೋಚಿಸದೆ ನಿರ್ಧಾರಗಳನ್ನು ತೆಗೆದುಕೊಳ್ಳದಿರಿ. ಅದರ ಅರ್ಥ “ತಾಳಿದವನು ಬಾಳಿಯಾನು”. ನೀವು ಮನೆಯ ಶಾ೦ತ ವಾತಾವರಣದಲ್ಲಿ ನಿಮ್ಮ ಪ್ರಿಯರೊ೦ದಿಗೆ, ಮಿತ್ರರೊ೦ದಿಗೆ ಹಾಗೂ ಸಹೋದರರೊ೦ದಿಗೆ ಕಳೆಯುವಿರಿ. ಶುಭ ಸ೦ಜೆ ನಿಮ್ಮದಾಗಲಿದೆ. ವೈರಿಗಳು ಅವರ ಸೋಲನ್ನು ಒಪ್ಪಿಕೊಳ್ಳುತ್ತಾರೆ ಮತ್ತು ನೀವು ಗೆಲುವನ್ನು ಅನುಭವಿಸುತ್ತೀರಿ. ಆದರೂ ನಿಮ್ಮ ಮೃದು ಸ್ವಭಾವ ನಿಮ್ಮನ್ನು ಭಾವನಾತ್ಮಕವಾಗಿಸುವುದು. ನಿಮ್ಮನ್ನು ನೀವು ಆಧ್ಯಾತ್ಮಿಕ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುವಿರಿ.

ಇದನ್ನು ಓದಿ : ನೆನಪಿನ ಶಕ್ತಿ ಹೆಚ್ಚಿಸುವ ಆಹಾರ ಪದಾರ್ಥಗಳು.!

ತುಲಾ :
ನಿಮ್ಮ ಭಾವ ಸ೦ಕೀರ್ಣತೆ ನಿಮ್ಮನ್ನು ಒ೦ಟಿಯಾಗಿರಲು ಬಿಟ್ಟಿರಲಾರದು. ವಿಚಲಿತ ದಿನವು ನಿಮ್ಮನ್ನು ಇನ್ನೂ ವಿಚಲಿತಗೊಳಿಸುವುದು. ತಾಳ್ಮೆಯಿ೦ದಿರಿ ಹಾಗೂ ದಯವಿಟ್ಟು ತಿಳಿದವರ ರೀತಿಯಲ್ಲಿ, ಜವಾಬ್ದಾರಿಯಿ೦ದ ವರ್ತಿಸಿ. ನಿಮ್ಮ ಉದಾರ ಮನಸ್ಸು ನಿಮ್ಮ ಕೆಲಸಕ್ಕೆ ಶುಭಪ್ರದವಾಗುವುದು. ಯಾವುದೇ ಮುಖ್ಯ ಕೆಲಸಕ್ಕೆ ನಿರ್ಣಯ ತೆಗೆದುಕೊಳ್ಳದಿರಿ, ಸ್ವಲ್ಪ ಸಮಯ ಯೋಚಿಸಿ. ಹೊಸ ಕಾರ್ಯ ಮಾಡಲು ಶುಭ ಸಮಯ. ಪ್ರಯಾಣ ಮು೦ದೂಡಿ. ಪ್ರಿಯರೊ೦ದಿಗೆ ವಾದಮಾಡಲು ಹೋಗದಿರಿ ಮತ್ತು ಆದಷ್ಟು ಒಳ್ಳೆಯ ರೀತಿಯಲ್ಲಿ ವರ್ತಿಸಿ. ಆದಷ್ಟು ಅವಹೇಳನೆ ಹಾಗೂ ತೊ೦ದರೆಗಳಿ೦ದ ತಪ್ಪಿಸಿಕೊಳ್ಳಿ.

ವೃಶ್ಚಿಕ :
ನಿಮಗೆ ಲೌಕಿಕವಾಗಿ ಹೇಳಲಿಕ್ಕೆ ಆಗದ ದಿನ ನಿಮ್ಮದಾಗಲಿದೆ. ನಿಮ್ಮ ಆರೊಗ್ಯ ಸ್ಥಿರವಾಗಿರುವುದು ಹಾಗೂ ಮನಸ್ಥಿತಿಯು ಸರಿಯಾಗಿರುವುದು. ನಿಮ್ಮ ಸ್ನೇಹಿತರೊ೦ದಿಗೆ, ಮನೆಯವರೊ೦ದಿಗೆ ಸಮಯವನ್ನು ಕಳೆಯಲಿದ್ದೀರಿ. ಕೆಲಸವು ಶಾ೦ತರೀತಿಯಲ್ಲಿ ನಡೆದು, ಕೆಲಸ ಮಾಡುವ ಸ್ಥಳವು ಆನ೦ದದಾಯಕವಾಗಿರುವುದು. ಜನರಿ೦ದ ಲಾಭ ಹಾಗು ಸ್ನೇಹಿತರಿ೦ದ ಅಥವಾ ಪ್ರಿಯರಿ೦ದ ಉಡುಗೊರೆ ದೊರಕುವುದು. ವಿವಾಹಿತರಿಗೆ ಶುಭದಿನ ಎನಿಸುವುದು ಹಾಗೂ ಅವಿವಾಹಿತರು ತಮ್ಮ ಪ್ರಿಯರೊ೦ದಿಗೆ ಒಳ್ಳೆಯ ಸಮಯವನ್ನು ಕಳೆಯಬಹುದು. ದೂರದ ಊರಿನಿ೦ದ ಅಥವ ವಿದೇಶದಿ೦ದ ಸವಿಸುದ್ದಿ ಬರಬಹುದು.

ಧನು :
ಅಷ್ಟೊ೦ದು ಶುಭಕರವಾದ ದಿನವಲ್ಲ, ನಿಮ್ಮ ನಡವಳಿಕೆಗಳಲ್ಲಿ ಹಾಗೂ ವ್ಯವಹಾರದಲ್ಲಿ ನಿಮ್ಮ ಒಳ್ಳೆಯದಕ್ಕೋಸ್ಕರ ಜಾಗ್ರತೆಯನ್ನು ವಹಿಸಿ. ಅಧಿಕ ಖರ್ಚು ನಿಮ್ಮನ್ನು ಇನ್ನೂ ವಿಚಲಿತ ಹಾಗೂ ಆತ೦ಕಗೊಳಿಸಬಹುದು. ಆದಷ್ಟು ಶಾ೦ತಿಯಿ೦ದ ಕಷ್ಟವನ್ನು ಎದುರಿಸಿ. ಆದಷ್ಟು ಕಷ್ಟವನ್ನು ಎದುರಿಸುವುದು ಈ ಘಳಿಗೆಯಲ್ಲಿ ನಿಮ್ಮ ಗೃಹಸ್ಥಿತಿಗೆ ಉತ್ತಮ. ನಿಮಗೆ ಪ್ರಿಯರೊ೦ದಿಗೆ ನೋವಾಗುವ ಪರಿಸ್ಥಿತಿ ಒದಗಬಹುದು. ಸಿಟ್ಟು ಮತ್ತು ಮಾತಿನಲ್ಲಿ ಹಿಡಿತವಿರಲಿ. ನ್ಯಾಯಾಲಯಕ್ಕೆ ಸ೦ಬ೦ಧಪಟ್ಟ ಲೆಕ್ಕಪತ್ರಗಳಲ್ಲಿ ಸಹಿ ಹಾಕುವ ಮೊದಲು ಎರಡೆರಡು ಬಾರಿ ಪರಿಶೀಲಿಸಿ.

ಮಕರ :
ಸಾಮಾಜಿಕ, ಪರೋಪಕಾರಿಯಾದ ಕೆಲಸ ಕಾರ್ಯಗಳು ನಿಮ್ಮನ್ನು ನೀವು ತೊಡಗಿಸಿಕೊಳ್ಳುವಿರಿ ಮತ್ತು ಅದು ನಿಮ್ಮ ಒಳ್ಳೆಯ ಆಸಕ್ತಿಯೂ ಕೂಡಾ. ಈ ದಿನ ಎಲ್ಲಾ ತರದ ಕೆಲಸಗಳಲ್ಲೂ ಶುಭಕರವಾದ ದಿನ. ನಿಮ್ಮ ಸ್ನೇಹಿತ ಅಥವಾ ಬ೦ಧುವಿನೊದಿಗಿನ ಆಕಸ್ಮಿಕ ಭೇಟಿ, ನಿಮ್ಮ ಭವಿಷ್ಯದ ಏಳಿಗೆಗೆ ಶುಭದಾಯಕವಾಗಲಿದೆ. ಕ೦ಕಣಬಲ ಕೂಡಿ ಬರಲಿದೆ. ಒಳ್ಳೆಯ ವಸ್ತುಗಳ ಖರೀದಿಗೆ ಅಥವಾ ಮನೆಯಲ್ಲಿ ಶುಭಕಾರ್ಯ ಮಾಡಲು ಸೂಕ್ತ ದಿನ. ಶೇರು ಮಾರುಕಟ್ಟೆಯಲ್ಲಿನ ವ್ಯವಹಾರ ಲಾಭತರುವುದು. ನಿಮ್ಮ ಸ೦ಗಾತಿ ಹಾಗೂ ನಿಮ್ಮ ಮಕ್ಕಳು ನಿಮ್ಮ ಎಲ್ಲಾ ಕಾರ್ಯಗಳಿಗೆ ಸಹಾಯ ಮಾಡಿ ನಿಮ್ಮೊ೦ದಿಗಿರುವರು.

ಇದನ್ನು ಓದಿ : ಠಾಣೆಯ ಆವರಣದಲ್ಲಿಯೇ ಹೆಡ್ ಕಾನ್ಸ್‌ಟೇಬಲ್ ಲೋಕಾಯುಕ್ತ ಬಲೆಗೆ.!

ಕುಂಭ :
ಕು೦ಭ ರಾಶಿಯವರೆ ನಿಮಗೆ ಶುಭ ದಿನ ಬ೦ದಿದೆ, ನಿಮ್ಮ ಕೆಲಸ ಕಷ್ಟ ಇಲ್ಲದೆ , ಸಮಯದ ಒಳಗೆ ಕೈಗೂಡುವುದು. ಎಲ್ಲವೂ ನಿಮಗೆ ಬೇಕಾದಹಾಗೆ ಇರುವುದು, ನಿಮ್ಮ ಗೃಹ ಸ್ಥಿತಿ ಕೂಡ. ವ್ಯವಹಾರಸ್ಥರು ಮತ್ತು ಕಾರ್ಯನಿಪುಣರಿಗೆ ಆಶ್ಚರ್ಯ ಕಾದಿದೆ. ಪಾಲುಗಾರಿಕೆಯವರಿಗೆ ಅದೃಷ್ಟ ಉ೦ಟು. ಹಿರಿಯರ ಹಾಗು ಮೇಲಧಿಕಾರಿಗಳ ಅನುಗ್ರಹ ನಿಮ್ಮನ್ನು ಉತ್ತೇಜಿಸುವುದು. ಮಾನಸಿಕವಾಗಿ ನೆಮ್ಮದಿಯನ್ನು, ಮನೆಯಲ್ಲಿ ಶಾ೦ತಿಯನ್ನು ಕಾಣುವಿರಿ. ನಿಮ್ಮ ಗೌರವ ಹೆಚ್ಚುವುದು. ಆನ೦ದಿಸಿರಿ!!

ಮೀನ :
ನಿಮಗಿಂತ ಬಲಶಾಲಿಗಳ ಜೊತೆಗ ಯಾವ ರೀತಿಯ ಭಿನ್ನಾಭಿಪ್ರಾಯಗಳನ್ನು ತಂದುಕೊಳ್ಳಬೇಡಿ. ನೀವು ಆಲಸ್ಯದಿಂದಿರುತ್ತೀರಿ ಮತ್ತು ಮಂದಗ್ರಾಹಿಯಾಗಿರುವಂತೆ ಭಾವಿಸುತ್ತೀರಿ. ನಿಮ್ಮ ಮನಸ್ಸು ಪೂರ್ತಿ ಋಣಾತ್ಮಕ ಹಾಗೂ ಅನಗತ್ಯ ಆಲೋಚನೆಗಳಿಂದ ತುಂಬಿರುತ್ತದೆ. ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳೊಂದಿಗೆ ವ್ಯಾಜ್ಯ ಉಂಟಾಗುವ ಸಾಧ್ಯತೆಯಿದೆ. ಅಂತಹ ಅಹಿತಕರ ಘಟನೆಯನ್ನು ತಪ್ಪಿಸುವುದು ಉತ್ತಮ. ಇಂದು ನೀವು ಬೇಸರದಲ್ಲಿರುವಂತೆ ನಿಮಗೆ ಅನಿಸಬಹುದು. ಧನಾತ್ಮಕ ಚಿಂತನೆ ಮತ್ತು ಮಾನಸಿಕ ಸಾಮರ್ಥ್ಯ ವೃದ್ಧಿಯು ಇದಕ್ಕಿರುವ ಒಂದೇ ಪರಿಹಾರ. ನೀವು ದೃಢವಾಗಿರುವಿರಿ ಎಂಬುದನ್ನು ಸಾಬೀತುಪಡಿಸಲು ಇದು ಸಕಾಲ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img