ಜನಸ್ಪಂದನ ನ್ಯೂಸ್, ಡೆಸ್ಕ್ : ಕರ್ನಾಟಕದ (Karnataka) ಐಪಿಎಸ್ ಅಧಿಕಾರಿಯೋರ್ವರು ಮಹಿಳಾ ಪೊಲೀಸ್ (women police) ಸಿಬ್ಬಂದಿ ಜೊತೆಗೆ ಕಿರಿಕ್ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
ಕರ್ನಾಟಕದ ಐಪಿಎಸ್ ಅಧಿಕಾರಿ (officer) ಅರುಣ್ ರಂಗರಾಜನ್ ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆಗೆ ಕಿರಿಕ್ (kirik) ಮಾಡಿಕೊಂಡಿರುವ ಅಧಿಕಾರಿ ಎಂದು ಹೇಳಲಾಗುತ್ತಿದೆ.
ಕಿರಿಕ್ ಮಾಡಿರುವ ಹಿನ್ನಲೆಯಲ್ಲಿ ತಮಿಳುನಾಡಿನ (Tamilanadu) ಗೋಬಿ ಪೊಲೀಸ್ ಠಾಣೆಯಲ್ಲಿ (Gobi police station) ಐಪಿಎಸ್ ಅಧಿಕಾರಿ ವಿರುದ್ಧ ಜಿಲ್ಲೆಯ ಮಹಿಳಾ ಪೊಲೀಸ್ ಒಬ್ಬರು ದೂರು ದಾಖಲು ಮಾಡಿದ್ದರು.
ದೂರು (Complaint) ದಾಖಲಾದ ಪರಿಣಾಮ ಐಪಿಎಸ್ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ (release) ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ದೂರು ನೀಡಿದ ಮಹಿಳೆ ಚಿಂಚೋಳಿ (Chicholi) ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಈ ಮಹಿಳೆ ಜತೆ ಕಲಬುರಗಿ ಎಸ್ಪಿ ಆಗಿರುವ ಐಪಿಎಸ್ ಅಧಿಕಾರಿ ಸಹೊದ್ಯೋಗಿ ಮಹಿಳೆ ಜೊತೆ ತಿರುಚ್ಚಿಗೆ ತೆರಳಿದ್ದ ವೇಳೆ ಅಲ್ಲಿ ಅವರಿಬ್ಬರ ಮಧ್ಯೆ ಜಗಳವಾಗಿದೆ. ನಂತರ ಸ್ಥಳೀಯ ಪೊಲೀಸರು ರಾಜಿ ಮಾಡಿ ಕಳಿಸಿದ್ದರು.
ದೂರು ದಾಖಲಾದ ಬಳಿಕ ಸುಜಾತರನ್ನು ಹುಟ್ಟೂರಿಗೆ ಕರೆದೊಯ್ದಿದ್ದ ಅರುಣ್ ರಂಗರಾಜನ್, ಮನೆಯಲ್ಲಿಯೂ ಹಲ್ಲೆ (accused) ನಡೆಸಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.