ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಗಜೇಂದ್ರಗಡ (Gajendragad) ತಾಲ್ಲೂಕಿನ ನರೇಗಲ್ ಪೊಲೀಸ್ ಠಾಣೆಯ ಪಿಎಸ್‌ಐ ವಿರುದ್ಧ ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ.
ನರೇಗಲ್ (Naregal) ಪೊಲೀಸ್ ಠಾಣೆಯ ಪಿಎಸ್‌ಐ ನಿಖಿಲ್ ಕಾಂಬ್ಳೆ, ಕಾನ್ಸ್‌ಟೇಬಲ್ ಶಂಕರ್ ನಾಲಕರ್ ವಿರುದ್ಧ ಯುವತಿ ಗಂಭೀರ ಆರೋಪ ಮಾಡಿದ್ದಾಳೆ.
ಪೊಲೀಸ್ ಠಾಣೆ ಬಳಿಯೇ ಪಿಎಸ್ಐ, ವಿದ್ಯಾರ್ಥಿನಿ ಜೊತೆಗೆ ಅನುಚಿತವಾಗಿ ವರ್ತಿಸಿ ಕಿರುಕುಳ (harassment) ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ನರೇಗಲ್ ಬಸ್ ನಿಲ್ದಾಣ ಹಾಗೂ ಪೊಲೀಸ್ ಠಾಣೆ ಬಳಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ. ತನ್ನ ಗೆಳತಿಯರ (friends) ಜೊತೆ ಸೇರಿ ಕಾಲೇಜ್ಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ನಂಬರ್ ಪಡೆದಿದ್ದರು.
ಬಳಿಕ ವಿದ್ಯಾರ್ಥಿನಿಗೆ ಮೆಸೇಜ್ ಮಾಡಿ ಹಣ ಕೊಡುತ್ತೇವೆ ಬಾ ಎಂದು ಕಾನ್ಸ್‌ಟೇಬಲ್ ಶಂಕರ್ ನಾಲಕರ್ ಅಶ್ಲೀಲವಾಗಿ ಮೆಸೇಜ್ (obscene message) ಮಾಡಿದ್ದಾರೆ. ಎಸ್ಪಿ ಅವರಿಗೆ ಈ ವಿಚಾರ ತಿಳಿಸುತ್ತೇನೆ ಎಂದರೂ ಹಗಲು-ರಾತ್ರಿ ಎನ್ನದೆ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿ ಗಂಭೀರ ಆರೋಪ ಮಾಡಿದ್ದಾಳೆ.
ಪಿಎಸ್‌ಐ ನಿಖಿಲ್ ಕಾಂಬ್ಳೆ, ಕಾನ್ಸ್‌ಟೇಬಲ್ ಶಂಕರ್ ನಾಲಕರ್ ವಿರುದ್ಧ ಯುವತಿ ಆರೋಪ ಮಾಡಿದ್ದಾಳೆ. ಸದ್ಯ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿ ಮನವಿ ಮಾಡಿದ್ದಾಳೆ.
ಘಟನೆ ಕುರಿತಂತೆ ಪಿಎಸ್‌ಐ ನಿಖಿಲ್ ಕಾಂಬ್ಳೆ, ಕಾನ್ಸ್‌ಟೇಬಲ್ ಶಂಕರ್ ನಾಲಕರ್ ಅವರನ್ನು ಜಿಲ್ಲಾ ವರಿಷ್ಠಾಧಿಕಾರಿ ಅಮಾನತ್ತರು ಮಾಡಿ ಆದೇಶಿಸಿದ್ದಾರೆ.