ಜನಸ್ಪಂದನ ನ್ಯೂಸ್, ಡೆಸ್ಕ್ : ಸೋಶಿಯಲ್ ಮೀಡಿಯಾಗಳಲ್ಲಿ ಹಾವುಗಳ ಕುರಿತಾದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಸದ್ಯ ಹಾವುಗಳಲ್ಲಿ ಅತ್ಯಂತ ವಿಷಕಾರಿಯಾದ ಕಾಳಿಂಗ ಸರ್ಪವು ಮೂರು ಹಾವುಗಳನ್ನು ನುಂಗಿ ಅವುಗಳನ್ನು ಉಗುಳುವ ವಿಡಿಯೋವೊಂದು ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕೆಲವು ಮಂದಿ ಹಾವುಗಳನ್ನು ಹಿಡಿಯಲು ರಾಡ್‌ಗಳೊಂದಿಗೆ ನಿಂತಿರುವುದನ್ನು ನೋಡಬಹುದು.
ಇದನ್ನು ಓದಿ : Job : ಲಿಖಿತ ಪರೀಕ್ಷೆಯಿಲ್ಲದೇ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗವಕಾಶ; 2 ಲಕ್ಷದವರೆಗೆ ಸಂಬಳ.!
ಈ ವೇಳೆ ಕಾಳಿಂಗ ಸರ್ಪ ನೆಲದ ಮೇಲೆ ಮಲಗಿರುವುದನ್ನು ಕಾಣಬಹುದಾಗಿದೆ. ಸ್ವಲ್ಪ ಚಲನೆಗಳಿರುವುದು ಕಾಣುತ್ತದೆ. ತಾನು ಹಿಂದಕ್ಕೆ ಸರಿಯುತ್ತಾ ತನ್ನ ಬಾಯಿಯಿಂದ ನಿಧಾನವಾಗಿ ಹಾವುಗಳನ್ನು ಉಗುಳುತ್ತಿದೆ.
ಕೇವಲ ಒಂದು ಅಥವಾ ಎರಡು ಅಲ್ಲ, ಬರೋಬ್ಬರಿ ಮೂರು ಹಾವುಗಳನ್ನು ಉಗುಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಒಂದರ ನಂತರ ಒಂದರಂತೆ ಹಾವುಗಳನ್ನು ನುಂಗಿದ ಕಾಳಿಂಗ ಸರ್ಪಕ್ಕೆ ಅವುಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಉಗುಳಿದೆ. ಇಡೀ ದೃಶ್ಯವನ್ನು ನೋಡಿದ ಅಲ್ಲಿದ್ದ ಜನರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.
ಇದನ್ನು ಓದಿ : ಶಿಶು ಅಭಿವೃದ್ಧಿ ಯೋಜನೆ : ಜಿಲ್ಲೆಯಾದ್ಯಂತ 577 ಅಂಗನವಾಡಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ.!
ಈ ವಿಡಿಯೊವನ್ನು Massimo ಎಂಬ ಇನ್ಸ್ಟಾಗ್ರಾಂ ಪೇಜ್‍ನಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೆ 2 ಲಕ್ಷ 75 ಸಾವಿರ ಮಂದಿ ವಿಡಿಯೋ ವೀಕ್ಷಿಸಿದ್ದು, ಬಹುತೇಕರು ಅಚ್ಚರಿಗೊಂಡಿದ್ದಾರೆ.
A King cobra regurgitating three other snakespic.twitter.com/fCSqFpq6yr
— Massimo (@Rainmaker1973) October 17, 2024