Sunday, February 25, 2024
spot_img
spot_img
spot_img
spot_img
spot_img

Police : ಕರ್ತವ್ಯನಿರತ ಹೆಡ್ ಕಾನ್ಸ್‌ಟೇಬಲ್ ಮೇಲೆ ಶಾಸಕಿ ಪುತ್ರನಿಂದ ಹಲ್ಲೆ.!

spot_img

ಜನಸ್ಪಂದನ ನ್ಯೂಸ್, ರಾಯಚೂರು : ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕಿ (Devadurga) ಪುತ್ರ, ಸಹೋದರ ವಿರುದ್ಧ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಹಲ್ಲೆಗೊಳಗಾದ ಪೊಲೀಸ್ ಕಾನ್ಸ್‌ಟೇಬಲ್ (police constable) ದೇವದುರ್ಗ ಠಾಣೆಯ ಹನುಮಂತ್‌ರಾಯ ಎಂದು ತಿಳಿದು ಬಂದಿದೆ.

ಇದನ್ನು ಓದಿ : 3 ಮದುವೆ ; ನಾಲ್ವರು ಬಾಲಿವುಡ್ ನಟಿಯರ ಜೊತೆ Affair ಹೊಂದಿದ್ದರು ಈ ಮಾಜಿ ಪ್ರಧಾನಿ.!

ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ಕರೆಮ್ಮ ನಾಯಕ ಪುತ್ರ ಸಂತೋಷ, ಸಹೋದರ ತಿಮ್ಮಪ್ಪ ಹಾಗೂ ತಳವಾರದೊಡ್ಡಿ ಗ್ರಾಮದ ಇಬ್ಬರು ಯುವಕರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರಕ್ಕೆ (tourist house) ಪೇದೆಯನ್ನು ಕರೆಸಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸ್‌ ಪೇದೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಘಟನೆ ಹಿನ್ನೆಲೆಯಲ್ಲಿ ಪೊಲೀಸ್‌ ಪೇದೆ ಗಾಯಗೊಂಡಿದ್ದು, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ : Murder : ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ.!

ಘಟನೆಗೆ ಸಂಬಂಧಿಸಿ ಕಾನ್ಸಟೇಬಲ್ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬಿಕ್ಕಿ ಬಿಕ್ಕಿ ಅಳುತ್ತ ಪೇದೆ ವಿಡಿಯೋ ಮಾಡಿದ್ದು, ಹಲ್ಲೆ ಮಾಡಿದ್ದಕ್ಕೆ ಕಾರಣ ಕೊಡಿ ಎಂದು ಪ್ರಶ್ನಿಸುತ್ರಿದ್ದಾರೆ

ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

spot_img
spot_img
- Advertisment -spot_img