ಜನಸ್ಪಂದನ ನ್ಯೂಸ್, ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಬೆಳಗೊಳ ಹೋಬಳಿಯ ಪಾಲಹಳ್ಳಿ ಗ್ರಾಮದಲ್ಲಿ ಬೆಳಂಬೆಳಿಗ್ಗೆಯೇ ರೌಡಿ ಶೀಟರ್‌ನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಕೊಲೆಯಾದ ರೌಡಿಶೀಟರ್ (rowdy sheeter) ಪ್ರಜ್ವಲ್ ಆ. ಪಾಪು (29) ಎಂದು ತಿಳಿದು ಬಂದಿದೆ. ಇವನು ಪಾಲಹಳ್ಳಿ ಗ್ರಾಮದ ವಕೀಲ ನಾಗೇಂದ್ರ ಎಂಬುವರ ಮಗನಾಗಿದ್ದಾನೆ.
ಇದನ್ನು ಓದಿ : Raid : ಬೆಳ್ಳಂಬೆಳಿಗ್ಗೆ ಶಾಸಕರ ಮನೆ ಮೇಲೆ ಇಡಿ ದಾಳಿ.!
ಪಾಲಹಳ್ಳಿ ಗ್ರಾಮದ ಬೇಕರಿ ಮುಂದೆ ಬೆಳಿಗ್ಗೆ ನಿಂತಿದ್ದ ವೇಳೆ ಕೇರಳ (Kerala) ರಾಜ್ಯದ ನೋಂದಣಿ (Registration) ಇರುವ ಬಿಳಿ ಇನೋವಾ ಕಾರಿನಲ್ಲಿ ಬಂದ ನಾಲ್ಕು ಜನ ಏಕಾಏಕಿ ಮಾರಕಾಸ್ತ್ರಗಳಿಂದ ಪ್ರಜ್ವಲ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಂತಕರಿಂದ ಪ್ರಜ್ವಲ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾದ್ಯವಾಗಲಿಲ್ಲ. ತೀವ್ರ ರಕ್ತಸ್ರಾವದಿಂದ ಪ್ರಜ್ವಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪ್ರಜ್ವಲ್ ಮೇಲಿನ ಹಲ್ಲೆ ಹಳೆ ದ್ವೇಷವೇ ಕಾರಣ ಎನ್ನಲಾಗಿದೆ.
ಇದನ್ನು ಓದಿ : ಜ್ಞಾನವಾಪಿ ಮಸೀದಿ ಕೇಸ್ ನಲ್ಲಿ ಹಿಂದೂಗಳಿಗೆ ಸಿಕ್ಕಿತು ದೊಡ್ಡ ಜಯ.!
ಘಟನಾ ಸ್ಥಳಕ್ಕೆ ಮಂಡ್ಯ ಎಸ್.ಪಿ ಯತೀಶ್, ಎ.ಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಮುರುಳಿ, ಇನ್ಸ್‌ಪೆಕ್ಟರ್‌ಗಳಾದ ಪ್ರಕಾಶ್, ಎ ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ (inspection) ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.