Saturday, July 27, 2024
spot_img
spot_img
spot_img
spot_img
spot_img
spot_img

Atrocity : ಅಪ್ರಾಪ್ತೆಯ ಮೇಲೆ ನಾಲ್ವರು ದುಷ್ಟರಿಂದ ದೌರ್ಜನ್ಯ.!

spot_img

ಜನಸ್ಪಂದನ ನ್ಯೂಸ್, ಗದಗ : ಗದಗ ಜಿಲ್ಲೆಯ ಮುಂಡರಗಿ (Mundaragi) ಪೊಲೀಸ್ ಠಾಣೆ ವ್ಯಾಪ್ತಿಯ ಅಂತಾರಾಷ್ಟ್ರೀಯ ಯೋಗಪಟುವಾದ ಅಪ್ರಾಪ್ತ ಬಾಲಕಿ ಮೇಲೆ ನಾಲ್ವರು ದುಷ್ಟರು ದೌರ್ಜನ್ಯ ಎಸಗಿರುವ ಆರೋಪ ಕೇಳಿ ಬಂದಿದೆ.

ಮುಂಡರಗಿ ನಿವಾಸಿಗಳಾದ ಮೌಲಾಹುಸೇನ್ ಕರಣಿ, ಖಾಜಾಹುಸೇನ್ ಕರಣಿ ಹಾಗೂ ಇಬ್ಬರು ಸಹಚರರು ಆರೋಪಿಗಳೆಂದು ತಿಳಿದು ಬಂದಿದೆ.

ಇದನ್ನು ಓದಿ : ಕೆಸರಿನಲ್ಲಿ ಸಿಲುಕಿದ ಸಚಿವರು : ಹರಸಾಹಸ ಪಟ್ಟು ಹೊರ ತಂದದ್ಹೇಗೆ ; Video ವೀಕ್ಷಿಸಿ.!

ಇನ್ನು ಬಾಲಕಿ ಒಬ್ಬಳೇ ಮನೆಯಲ್ಲಿ ಇದ್ದ ಸಮಯದಲ್ಲಿ ಆರೋಪಿ ಮೌಲಾಹುಸೇನ್ ಬಾಬುಸಾಬ್ ಕರಣಿ ಹಾಗೂ ಆತನ ಸಹೋದರ ಮತ್ತು ಇನ್ನಿಬ್ಬರು ಸಹಚರರು ಸೇರಿ ಮನಬಂದಂತೆ ಮಾರಣಾಂತಿಕ ಹಲ್ಲೆ ನಡೆಸಿ ದೌರ್ಜನ್ಯ (Atrocity) ಎಸಗಿ ಬಳಿಕ ಎಸ್ಕೇಪ್ ಆಗಿದ್ದಾರೆ.

ಮುಂಡರಗಿ ಠಾಣೆಯ ಸಿಪಿಐ ಮಂಜುನಾಥ ಕುಸುಗಲ್ ಹಾಗೂ ಪಿಎಸ್‌ಐ ಸುಮಾ ಗೊರ್ಬಾಳ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎನ್ನಲಾಗಿದೆ.

ಕೇಸ್ ವಾಪಸ್ ಪಡೆಯಲು ಒತ್ತಡ ಹಾಕುತ್ತಿದ್ದಾರೆ. ಹೀಗಾಗಿ ಕೇಸ್ ಸಾಕ್ಷಿ ನಾಶಕ್ಕೆ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ತಾಯಿ ಆರೋಪಿಸಿದ್ದಾಳೆ.

ಆರೋಪಿಯು 3 ವರ್ಷಗಳ ಹಿಂದೆ ಬಾಲಕಿಯ ಅಕ್ಕನನ್ನು ಅತ್ಯಾಚಾರ (rape) ಮಾಡಿ, ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಜೊತೆಗೆ ಹಲವು ಬಾರಿ ಹಣಕ್ಕೂ ಬೇಡಿಕೆ (money demand) ಇಟ್ಟು ಆಕೆಯನ್ನು ಮನಬಂದಂತೆ ಬಳಸಿಕೊಂಡಿದ್ದ.

ಇದನ್ನು ಓದಿ : Mistake : ರಾಜ್ಯ ಸರ್ಕಾರದ ವೆಬ್‌ಸೈಟ್‌ನಲ್ಲಿ ಮಹಾ ಎಡವಟ್ಟು.!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಮೂರು ತಿಂಗಳು ಜೈಲು ವಾಸ ಅನುಭವಿಸಿ ಬೇಲ್ ಮೇಲೆ ಹೊರಗಡೆ ಬಂದಿದ್ದಾನೆ. ಆದರೆ, ಇನ್ನೂ ಕೇಸ್ ವಿಚಾರಣೆ (inquiry) ಹಂತದಲ್ಲಿದೆ.

spot_img
spot_img
- Advertisment -spot_img