ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೊಬ್ಬನಿಗೆ ರೆಸ್ಟೋರೆಂಟ್‌ನಲ್ಲಿ ಬಿಗ್ ಬಾಸ್ ಒಟಿಟಿ ಸೀಸನ್ (Season) ವಿಜೇತ ಕಪಾಳಮೋಕ್ಷ ಮಾಡಿದ್ದು, ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಜೈಪುರದ (Jaipur) ಹೆಸರಾಂತ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ : Police : ಕರ್ತವ್ಯನಿರತ ಹೆಡ್ ಕಾನ್ಸ್‌ಟೇಬಲ್ ಮೇಲೆ ಶಾಸಕಿ ಪುತ್ರನಿಂದ ಹಲ್ಲೆ.!
ಹಲ್ಲೆಗೊಳಗಾದ ವ್ಯಕ್ತಿ ಎಲ್ವಿಶ್ ಅವರ ತಾಯಿಯನ್ನು ನಿಂದಿಸಿದ ಕಾರಣಕ್ಕೆ ಎಲ್ವಿಶ್ ಸಾರ್ವಜನಿಕರ ಮುಂದೆಯೇ ಕಪಾಳಮೋಕ್ಷ ಮಾಡಿದರು ಎನ್ನಲಾಗಿದೆ.
ಇನ್ನೂ ಘಟನೆಯಿಂದಾಗಿ ಬಿಗ್ ಬಾಸ್ ಒಟಿಟಿ 2 ವಿಜೇತ ಮತ್ತು ಖ್ಯಾತ ಯೂಟ್ಯೂಬರ್ (you tuber) ಆದ ಎಲ್ವಿಶ್ ಯಾದವ್ ಮತ್ತೊಮ್ಮೆ ನೆಟಿಜನ್‌ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಘಾತಕಾರಿ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ದೃಶ್ಯದಲ್ಲಿ ಎಲ್ವಿಶ್ ರೆಸ್ಟೋರೆಂಟ್‌ನಲ್ಲಿ (restaurant) ಇತರರೊಂದಿಗೆ ಜಟಾಪಟಿ ನಡೆಸುತ್ತಿರುವುದು ಕಂಡುಬಂದಿದೆ.
ಇದನ್ನು ಓದಿ : Atrocity : ಅಪ್ರಾಪ್ತೆಯ ಮೇಲೆ ನಾಲ್ವರು ದುಷ್ಟರಿಂದ ದೌರ್ಜನ್ಯ.!
ಇನ್ನೂ ಇಬ್ಬರ ನಡುವಿನ ತೀವ್ರ ವಾಗ್ವಾದಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಆದರೆ,
ಘಟನೆಯ ಬೆನ್ನಲ್ಲೇ ಸ್ನೇಹಿತರ ಜತೆಗೆ ರೆಸ್ಟೋರೆಂಟ್‌ನಿಂದ ಹೊರಬಂದ ಯುಟ್ಯೂಬರ್, ತಾನು ಮಾಡಿದ್ದು ಸರಿ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.
Elvish Yadav Took Action Into His Hands When A Abuser Was Abusing His Family ! Very Well Done ! #ElvishYadav #ElvishArmy
#ElvishYadav pic.twitter.com/XjN5ryR36y
— Digital Harsh (@digitalharsh22) February 12, 2024