Sunday, September 8, 2024
spot_img
spot_img
spot_img
spot_img
spot_img
spot_img
spot_img

ಪ್ರೇಯಸಿಯ ಕಲಹ ; ಅರ್ಧ ದಾರಿಯಲ್ಲಿ ಬಸ್ ನಿಲ್ಲಿಸಿ ಹೊರಟು ಹೋದ ಡ್ರೈವರ್.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಉಡುಪಿ : ಇಲ್ಲೊಂದು ವಿಚಿತ್ರ ಎನಿಸುವಂತ ಘಟನೆ ಗುರುವಾರ ನಡೆದು ಹೋಗಿದೆ.

ಖಾಸಗಿ ಬಸ್ ಚಾಲಕನೋರ್ವ ತನ್ನ ಪ್ರೇಯಸಿಯೊಂದಿಗೆ ಜಗಳವಾಡಿ ಬಸ್ಸನ್ನು ಅರ್ಧ ದಾರಿಯಲ್ಲಿಯೇ ನಿಲ್ಲಿಸಿ ಇಳಿದು ಹೋದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಇದನ್ನು ಓದಿ : ಬ್ಯಾಂಕ್‌ ಆಫ್‌ ಬರೋಡಾದ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ ; details ಇಲ್ಲಿದೆ.!

ನಡೆದದಿಷ್ಟು :
ಉಡುಪಿ ನಗರದಿಂದ ಸಂತೆಕಟ್ಟೆಗೆ ಖಾಸಗಿ ಬಸ್ ತೆರಳುತ್ತಿತ್ತು, ನಿಟ್ಟೂರಿನಲ್ಲಿ ಬಸ್ ಚಾಲಕನ ಪ್ರೇಯಸಿ ಹತ್ತಿದ್ದಾಳೆ. ಬಸ್ ಹತ್ತಿದ್ದ ಪ್ರೇಯಸಿ ಬಸ್ ಡ್ರೈವರ್ ಜೊತೆ ಜಗಳಕ್ಕಿಳಿದಿದ್ದಾಳೆ.

ಇಬ್ಬರ ವಾಗ್ವಾದ/ಜಗಳದ ಮಧ್ಯೆಯೂ ಚಾಲಕ ಬಸ್ಸನ್ನು ಚಲಾಯಿಸುತ್ತಲೇ ಇದ್ದ.
ವಾಗ್ವಾದ ಏರುತ್ತಲೇ ಇತ್ತು, ಬಸ್ ಚಲಿಸುತ್ತಲೇ ಇತ್ತು.

ಈ ನಡುವೆ ಇವರ ಅವಾಂತರ ಕಂಡ ಕಂಡಕ್ಟರ್ ಮಧ್ಯೆ ಬಂದು ಇವರಿಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ ವಿಫಲವಾಯಿತು.

ಇದನ್ನು ಓದಿ : ‌ವೇಗವಾಗಿ ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದ ಮಹಿಳೆ ; ಭಯಾನಕ video ವೈರಲ್.!

ಯಾವಾಗ ವಾಗ್ವಾದ ತೀವ್ರವಾಯಿತೋ ಆಗ ಚಾಲಕ ಏಕಾಏಕಿ ಬಸ್ಸನ್ನು ನಿಲ್ಲಿಸಿ ಬಸ್ಸಿನಿಂದ ಇಳಿದು ಹೊರಟು ಹೋಗಿದ್ದಾನೆ.

ಯಾವಾಗ ಚಾಲಕ ಬಸ್ ಇಳಿದು ಹೋದನೋ ಆಗ ಚಾಲಕನ ಬೆನ್ನಲ್ಲೇ ಪೇಯಸಿಯೂ ಬಸ್ಸಿನಿಂದ ಇಳಿದು ಹೋಗಿದ್ದಾಳೆ.

ಬಸ್ಸನ್ನು ಅರ್ಧಲ್ಲೇ ನಿಲ್ಲಿಸಿದ್ದರಿಂದ ಪ್ರಯಾಣಿಕರು ಮಾತ್ರ ಮುಖ ಮುಖ ನೊಡಿಕೊಳ್ಳುವಂತಾಯಿತು. ಕೊನೆಗೆ ಕಂಡಕ್ಟರ್ ಬಸ್ಸನ್ನು ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img