Saturday, July 13, 2024
spot_img
spot_img
spot_img
spot_img
spot_img
spot_img

ಬ್ಯಾಂಕ್‌ ಆಫ್‌ ಬರೋಡಾದ ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಕೆಯ ದಿನಾಂಕ ವಿಸ್ತರಣೆ ; details ಇಲ್ಲಿದೆ.!

spot_img

ಜನಸ್ಪಂದನ ನ್ಯೂಸ್‌, ನೌಕರಿ : ಬ್ಯಾಂಕ್‌ ಆಫ್‌ ಬರೋಡಾ (Bank of Baroda) ತನ್ನಲ್ಲಿ ಖಾಲಿ ಇರುವ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹಿಂದೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 2 ಎಂದು ಹೇಳಲಾಗಿತ್ತು. ಆದರೆ ಇದೀಗ ದಿನಾಂಕವನ್ನು ವಿಸ್ತರಿಸಲಾಗಿದ್ದು, ಆಸಕ್ತರು ಜುಲೈ 12ರ ತನಕ ಅಪ್ಲೈ ಮಾಡಬಹುದು.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಸೂಕ್ತ ಮಾಹಿತಿಗಳಾದ ಅಭ್ಯರ್ಥಿಗಳ ಆಯ್ಕೆ, ವಯಸ್ಸು, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಕುರಿತು ನೀವೂ  ಈ ಲೇಖನದಲ್ಲಿ ಪಡೆಯಬಹುದಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯನ್ನು ಅಧಿಕೃತ ಲಿಂಕ್‌ಗಳಲ್ಲಿ ಪರಿಶೀಲಿಸಿ, ಅದರ ನೈಜತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ.

ಇದನ್ನು ಓದಿ : ವಿವಿಧ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 6,128 ಕ್ಲರಿಕಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!

ಹುದ್ದೆಗಳ ವಿವರ : 

* ಡೆಪ್ಯುಟಿ ವೈಸ್ ಪ್ರೆಸಿಡೆಂಟ್ – ಡಾಟಾ ಸೈಂಟಿಸ್ಟ್ & ಡಾಟಾ ಎಂಜಿನಿಯರ್ : 04 ಹುದ್ದೆ.
* ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ – ಡಾಟಾ ಸೈಂಟಿಸ್ಟ್ & ಡಾಟಾ ಎಂಜಿನಿಯರ್ : 09 ಹುದ್ದೆ.
* ಆರ್ಕಿಟೆಕ್ಟ್ : 8 ಹುದ್ದೆ.
* ಜೋನಲ್ ಸೇಲ್ಸ್ ಮ್ಯಾನೇಜರ್ : 03 ಹುದ್ದೆ.
* ಅಸಿಸ್ಟೆಂಟ್ ವೈಸ್ಪ್ರೆಸಿಡೆಂಟ್ : 20 ಹುದ್ದೆ.
* ಸೀನಿಯರ್ ಮ್ಯಾನೇಜರ್ : 22 ಹುದ್ದೆ.
* ಮ್ಯಾನೇಜರ್ : 11 ಹುದ್ದೆ.
* ರೇಡಿಯನ್ಸ್ ಪ್ರೈವೇಟ್ ಸೇಲ್ಸ್ ಹೆಡ್ : 01 ಹುದ್ದೆ.
* ಗ್ರೂಪ್ ಹೆಡ್ : 04 ಹುದ್ದೆ.
* ಟೆರಿಟರಿ ಹೆಡ್ : 08 ಹುದ್ದೆ.
* ಸೀನಿಯರ್ ರಿಲೇಶನ್‌ಶಿಪ್‌ ಮ್ಯಾನೇಜರ್ : 234 ಹುದ್ದೆ.
* ಇ-ವೆಲ್ತ್ ರಿಲೇಶನ್‌ಶಿಪ್‌ ಮ್ಯಾನೇಜರ್ : 26 ಹುದ್ದೆ.
* ಪ್ರೈವೇಟ್ ಬ್ಯಾಂಕರ್-ರೇಡಿಯನ್ಸ್ ಪ್ರೈವೇಟ್ : 12 ಹುದ್ದೆ.
* ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ ಆರ್‌ಎಂ ಸೇಲ್ಸ್ ಹೆಡ್) : 01 ಹುದ್ದೆ.
* ವೆಲ್ತ್ ಸ್ಟ್ರಾಟಜಿಸ್ಟ್ (ಇನ್ವೆಸ್‌ಮೆಂಟ್‌ & ಇನ್ಶೂರೆನ್ಸ್)/ ಪ್ರಾಡಕ್ಟ್ ಹೆಡ್ : 10 ಹುದ್ದೆ.
* ಪೋರ್ಟ್ಫೋಲಿಯೊ ರಿಸರ್ಚ್ ಅನಾಲಿಸ್ಟ್ : 1 ಹುದ್ದೆ.
* ಎವಿಪಿ- ಅಕ್ವಿಸಿಷನ್ & ರಿಲೇಶನ್‌ಶಿಪ್‌ ಮ್ಯಾನೇಜರ್ : 19 ಹುದ್ದೆ.
* ಫಾರೆಕ್ಸ್ ಅಕ್ವಿಸಿಷನ್ & ರಿಲೇಶನ್‌ಶಿಪ್‌ ಮ್ಯಾನೇಜರ್ : 15 ಹುದ್ದೆ.
* ಕ್ರೆಡಿಟ್ ಅನಾಲಿಸ್ಟ್ : 80 ಹುದ್ದೆ.
* ರಿಲೇಶನ್‌ಶಿಪ್‌ ಮ್ಯಾನೇಜರ್ : 66 ಹುದ್ದೆ.
* ಸೀನಿಯರ್ ಮ್ಯಾನೇಜರ್ – ಬಿಸಿನೆಸ್ ಫೈನಾನ್ಸ್ : 04 ಹುದ್ದೆ.
* ಚೀಫ್ ಮ್ಯಾನೇಜರ್ – ಇಂಟರ್ನಲ್ ಕಂಟ್ರೋಲ್ಸ್‌ : 03 ಹುದ್ದೆಗಳಿವೆ.

627 ಹುದ್ದೆಗಳ ಪೈಕಿ 459 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಮತ್ತು 168 ಹುದ್ದೆಗಳನ್ನು ನಿಯಮಿತ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಇದನ್ನು ಓದಿ : AIATSLನಲ್ಲಿ ಖಾಲಿ ಇರುವ 3,256 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ.!

ವಿದ್ಯಾರ್ಹತೆ :

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕೃಷಿ, ಪಶುವೈದ್ಯಕೀಯ ವಿಜ್ಞಾನ, ಸಮಾಜಶಾಸ್ತ್ರ, ಮನಃಶಾಸ್ತ್ರ ಮತ್ತು ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ. ಅಭ್ಯರ್ಥಿಗಳು ಸ್ಥಳೀಯ ಭಾಷೆ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಔದ್ಯೋಗಿಕ ಅನುಭವ ಕಡ್ಡಾಯ.

ಅರ್ಜಿ ಶುಲ್ಕ :

* ಸಾಮಾನ್ಯ/ಇಡಬ್ಲ್ಯುಎಸ್‌/ಒಬಿಎಸ್ ವರ್ಗ : 600 ರೂ.,                                                              * ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ವರ್ಗ : 199 ರೂ. (ಇದಕ್ಕೆ ತೆರಿಗೆ ಪ್ರತ್ಯೇಕ.)

ಮತ್ತು ವಯೋಮಿತಿ : ವಿವಿಧ ಹುದ್ದೆಗಳಿಗೆ ಅನುಗುಣವಾಗಿ 24 ವರ್ಷಗಳಿಂದ 60 ವರ್ಷದೊಳಗಿನವರು ಅರ್ಜಿ ಸಲ್ಲಿಬಹುದು.

ಆಯ್ಕೆ ವಿಧಾನ :

* ಆನ್‌ಲೈನ್‌ ಪರೀಕ್ಷೆ, ಗ್ರೂಪ್‌ ಡಿಸ್ಕಷನ್‌, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.            * ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಪರೀಕ್ಷೆ ಆಯೋಜಿಸಲಾಗುತ್ತದೆ.

ಗಮನಿಸಿ ಅರ್ಜಿ ಸಲ್ಲಿಕೆ ದಿನಾಂಕ ಬದಲಾಗಿದ್ದು, ಉಳಿದೆಲ್ಲ ವಿವರಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಅರ್ಜಿ ಸಲ್ಲಿಸಲುವ ವಿಧಾನ :

  • ಮೊದಲಿಗೆ ಅಧಿಕೃತ ವೆಬ್‌ಸೈಟ್‌ ಓಪನ್‌ ಮಾಡಿ.
  • ನೀವು ಅರ್ಜಿ ಸಲ್ಲಿಸಬೇಕಿರುವ ಹುದ್ದೆಯ ಮೇಲೆ ಕ್ಲಿಕ್‌ ಮಾಡಿ.
  • ಅಗತ್ಯ ಮಾಹಿತಿ ನೀಡಿ ಹೆಸರು ನೋಂದಾಯಿಸಿ.
  • ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಡಿ.

ಇದನ್ನು ಓದಿ : 7ನೇ ತರಗತಿ ಪಾಸಾದವರಿಗೆ ಗುಡ್‌ ನ್ಯೂನ್ : KSRTCಯಲ್ಲಿ 13,000 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಇಂದೇ ಅರ್ಜಿ ಸಲ್ಲಿಸಿ.!

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  ಈ ಹಿಂದೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜುಲೈ 2 ಎಂದು ಹೇಳಲಾಗಿತ್ತು. ಆದರೆ ಇದೀಗ ದಿನಾಂಕವನ್ನು ವಿಸ್ತರಿಸಲಾಗಿದ್ದು, ಆಸಕ್ತರು ಜುಲೈ 12ರ ತನಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ಲಿಂಕ್‌ಗಳು :

Disclaimer : All information provided here is for reference purpose only. While we try to list all the jobs for the convenience of teenager, this information is available on the internet. Please refer official website for official information.

spot_img
spot_img
- Advertisment -spot_img