Friday, June 14, 2024
spot_img
spot_img
spot_img
spot_img
spot_img
spot_img

Shocking incident : ಕಾಣೆಯಾಗಿದ್ದ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಪತ್ತೆ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : 16 ಅಡಿ ಉದ್ದದ ಬೃಹತ್​ ಹೆಬ್ಬಾವೊಂದು ಮಹಿಳೆಯನ್ನು ಸಂಪೂರ್ಣವಾಗಿ ನುಂಗಿದ ಆಘಾತಕಾರಿ ಘಟನೆಯೊಂದು (shocking incident) ಮಧ್ಯ ಇಂಡೋನೇಷ್ಯಾದ ಮಕಾಸ್ಸರ್​ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಮೃತ ಮಹಿಳೆ 45 ವರ್ಷದ ಫರೀದಾ ಎಂದು ಈ ಕುರಿತು ಎನ್.ಡಿ.ಟಿ.ವಿ ವೆಬ್ಸೈಟ್ ವರದಿ ಮಾಡಿದೆ.

ಇದನ್ನು ಓದಿ : UIDAI : ವ್ಯಕ್ತಿಯ ಮರಣಾನಂತರ ಆಧಾರ ಕಾರ್ಡ್‌ ಏನಾಗುತ್ತೆ.? ಏನ್ಮಾಡಬೇಕು ಗೊತ್ತೇ.? ಈ ಸುದ್ದಿ ಓದಿ.!

ಈ ಕುರಿತು ಸ್ಥಳೀಯ ಅಧಿಕಾರಿಯೊಬ್ಬರು ಹೆಬ್ಬಾವಿನ (python) ಹೊಟ್ಟೆಯೊಳಗೆ ಮಹಿಳೆ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಮಹಿಳೆ ರಾತ್ರಿ ಮನೆಯಿಂದ ಹೊರ ಹೋದವರು ಹಲವು ಗಂಟೆಗಳು ಕಳೆದರೂ ಸಹ ಹಿಂತಿರುಗಲಿಲ್ಲ. ಇದು ಕುಟುಂಬಸ್ಥರಲ್ಲಿ ಭಾರೀ ಆತಂಕ ಸೃಷ್ಟಿಸಿತು.

ಈಕೆಗೆ ನಾಲ್ಕು ಮಕ್ಕಳಿದ್ದು, ಮನೆಯವರು ಹಾಗೂ ಸ್ಥಳೀಯರು ಹುಡುಕಿಕೊಂಡು ಹೋದ ವೇಳೆ, ಬೃಹತ್​ ಹೆಬ್ಬಾವೊಂದು ಕಾಣಿಸಿದ್ದು, ಅದರ ಹೊಟ್ಟೆ ಊದಿಕೊಂಡಿರುವುದು (Abdominal swelling) ಅನುಮಾನಕ್ಕೆ ಮೂಡಿಸಿದೆ.

ಮಹಿಳೆಗೆ ಸಂಬಂಧಿಸಿದ ಕೆಲವು ವಸ್ತುಗಳು ಸಹ ಅದೇ ಸ್ಥಳದಲ್ಲಿ ಪತ್ತೆಯಾದ ಕಾರಣ, ಸ್ಥಳೀಯರು ಆಕೆಯನ್ನು ಹೆಬ್ಬಾವು ನುಂಗಿರಬಹುದು ಎಂದು ಊಹಿಸಿ, ಹಾವಿನ ಹೊಟ್ಟೆಯನ್ನು ಕತ್ತರಿಸಿದ್ದಾರೆ (cut).

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ತಕ್ಷಣವೇ ಫರೀದಾ ಅವರ ತಲೆ ಹೊರಬಂದದ್ದನ್ನು ಗಮನಿಸಿದ ಕುಟುಂಬಸ್ಥರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೆಬ್ಬಾವುಗಳು ಮನುಷ್ಯರನ್ನು ಜೀವಂತವಾಗಿ ನುಂಗುವ ಘಟನೆ ತೀರಾ ಅಪರೂಪವೆನಿಸಿದರೂ ಇಂಡೋನೇಷ್ಯಾದಲ್ಲಿ (Indonesia) ಇಂತಹ ಘಟನೆಗಳು ಆಗಾಗ ಕೇಳಿ ಬರುತ್ತವೆ.

spot_img
spot_img
- Advertisment -spot_img