Friday, June 14, 2024
spot_img
spot_img
spot_img
spot_img
spot_img
spot_img

ಬಿಯರ್‌ ಖರೀದಿ ಮಾಡ್ತಿದ್ದ ಮಗನನ್ನು ಚಪ್ಪಲಿಯಿಂದ ಮನಸೋಇಚ್ಛೆ ಹೊಡೆದ ತಂದೆ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಗ ಬಿಯರ್‌ ಖರೀದಿ ಮಾಡೋದನ್ನ ರೆಡ್‌ಹ್ಯಾಂಡ್‌ ಆಗಿ ನೋಡಿದ ಅಪ್ಪ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹರಿಯಾಣದಲ್ಲಿ (Hariyan) ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇದನ್ನು ಓದಿ : ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳ್ಕೊಂಡ ಮಹಿಳೆ ; ಶಾಕಿಂಗ್ video viral.!

ಲಿಕ್ಕರ್‌ ಶಾಪ್‌ನಲ್ಲಿದ್ದ ಮಗನನ್ನು ಕಂಡ ತಂದೆ ಒಂದು ಕ್ಷಣ ತಡ ಮಾಡದೇ ಒಳಗೆ ಹೋಗಿದ್ದಾರೆ. ಬಳಿಕ ಕಾಲಲ್ಲಿದ್ದ ಚಪ್ಪಲಿಯನ್ನು (slipper) ತೆಗೆದು ಮಗನಿಗೆ ಮನಸೋಇಚ್ಛೆ ಬಾರಿಸಿದ್ದಾರೆ.

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ವ್ಯಕ್ತಿಯು ಲಿಕ್ಕರ್‌ ಶಾಪ್‌ನ ಬಾಗಿಲಿನಲ್ಲೇ ಮನಸೋಇಚ್ಛೆ ಮಗನಿಗೆ ಹೊಡೆದು ಬುದ್ಧಿ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇನ್ನೊಂದೆಡೆ ಬಿಯರ್‌ ಕ್ಯಾನ್‌ಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ಮಗ ತಂದೆಯ ಬಳಿ ಬಿಟ್ಟು ಬಿಡುವಂತೆ ಮನವಿ ಮಾಡಿದ್ದಾನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ, ನನ್ನನ್ನು ಬಿಡಿ ಎಂದು ಹೇಳುತ್ತಿರುವುದು ದಾಖಲಾಗಿದೆ.

ನಾನು ಡ್ರಿಂಕ್ಸ್ ಮಾಡುವುದಿಲ್ಲ, ಫ್ರೆಂಡ್‌ಗಾಗಿ ಲಿಕ್ಕರ್‌ ಖರೀದಿ ಮಾಡಿದ್ದೇನೆ. ಇದನ್ನು ತಿಳಿಯದೇ ಚಪ್ಪಲಿಯಲ್ಲಿ ಹೊಡೆಯಬೇಡಿ ಎಂದು ಬೇಡಿಕೊಂಡಿದ್ದಾನೆ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಇನ್ಸ್‌ಟಾಗ್ರಾಮ್‌ ಅಕೌಂಟ್‌ನಲ್ಲಿ ಈ ವೈರಲ್‌ ವಿಡಿಯೋವನ್ನು ಶೇರ್‌ ಮಾಡಲಾಗಿದೆ. ಇಲ್ಲಿಯವರೆಗೂ 8.3 ಮಿಲಿಯನ್‌ ವೀವ್ಸ್‌ಗಳು ಈ ವಿಡಿಯೋಗೆ ಪಡೆದಿದೆ.

ಇನ್ನು ಹೆಚ್ಚಿನವರು ಈ ವಿಡಿಯೋಗೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಈ ತಂದೆಗೆ ತನ್ನ ಮಗನ ಮೇಲೆ ಇರುವ ಪ್ರೀತಿಯನ್ನು ನಾನು ಈ ವಿಡಿಯೋದಲ್ಲಿ ಕಾಣುತ್ತಿದ್ದೇನೆ. ತಂದೆಯಿಂದ ಅಷ್ಟೆಲ್ಲಾ ಪೆಟ್ಟು ತಿನ್ನುತ್ತಿದ್ದರೂ, ಆತ ಮಾತ್ರ ತಂದೆಯ ಎದುರು ತನ್ನ ಧ್ವನಿಯನ್ನು ರೈಸ್‌ ಮಾಡಲಿಲ್ಲ ಎಂದು ಕೆಲವರು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಒಳ್ಳೆಯದು, ನಿಮ್ಮ ಮಕ್ಕಳಿಗೆ ಸರಿಯಾದ ಶಿಕ್ಷೆ ನೀಡಿದ್ದೀರಿ. ನೀವು ಮಾಡಿದ್ದು ಸರಿಯಾಗಿದ್ದು, ಬೇರೆಯವರೂ ಕೂಡ ಇದರಿಂದ ಕಲಿಯಬೇಕು ಎಂದಿದ್ದಾರೆ.

spot_img
spot_img
- Advertisment -spot_img