Friday, June 14, 2024
spot_img
spot_img
spot_img
spot_img
spot_img
spot_img

ಚಲಿಸುತ್ತಿದ್ದ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣ ಕಳ್ಕೊಂಡ ಮಹಿಳೆ ; ಶಾಕಿಂಗ್ video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಬಹಳಷ್ಟು ಜನರು ಸೆಲ್ಫಿ ಹುಚ್ಚಿಗೆ (selfie crazed) ಬಿದ್ದು ಒಂದು ಫೋಟೋ ತೆಗೆದುಕೊಳ್ಳಲು ಎಷ್ಟೆಲ್ಲಾ ಸಾಹಸ ಮಾಡುತ್ತಾರೆ. ಒಂದು ಫೋಟೋಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸಾಹಸಗಳ ಮಾಡುತ್ತಾರೆ.

ಅದರಲ್ಲೂ ರೈಲು ಹಳಿಗಳು, ರೈಲಿನ ಮುಂದೆ ಫೋಟೋ ತೆಗೆದುಕೊಳ್ಳಬಾರದು ಎಂದು ಯಾವಾಗಲು ಹೇಳುತ್ತಾರೆ. ಆದರೆ ಎ‍ಷ್ಟು ಬಾರಿ ಹೇಳಿದರೂ ಕೆಲವರಿಗೆ ಬುದ್ಧಿಯೇ ಬರುವುದಿಲ್ಲ. ಅಂತೆಯೇ ರೈಲಿನ ಮುಂದೆ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಂಡ ಘಟನೆ ನಡೆದಿದೆ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಮೆಕ್ಸಿಕೋದಲ್ಲಿ (Maxico) ಈ ಘಟನೆ ನಡೆದಿದ್ದು, ಈ ಘಟನೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮೆಕ್ಸಿಕೋದ ಐಕಾನಿಕ್ ರೈಲು ಎಂದು ಕರೆಯಲ್ಪಡುವ ಹಬೆಯ ರೈಲು ಬರುವಾಗ ಜನರು ನಾಮುಂದು ತಾಮುಂದು ಅಂತ ಸೆಲ್ಫಿ, ಫೋಟೋ ಕ್ಲಿಕ್ಕಿಸಲು ಮುಂದಾಗುತ್ತಾರೆ. ಆದ್ರೆ ಹಿಡಾಲ್ಗೊ ಬಳಿ ಹಬೆ ಎಂಜಿನ್ ಹೊಂದಿರುವ ವಿಂಟೇಜ್ ರೈಲಿನ ಫೋಟೋ ಕ್ಲಿಕ್ ಮಾಡುವಾಗ ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ.

ವಿಡಿಯೋದಲ್ಲಿರುವ ದೃಶ್ಯ :
ಹಳಿಯ ಸಮೀಪ ಬಹಳಷ್ಟು ಜನರು ನಿಂತಿದ್ದು, ರೈಲು ಬರುತ್ತಿರುವುದನ್ನು ಕಂಡು ಅವರು ಫೋಟೋ ಕ್ಕಿಕ್ಕಿಸಲು ಮುಂದಾಗುತ್ತಾರೆ, ಆದರೆ ಕಿತ್ತಲೆ ಬಣ್ಣದ ಬಟ್ಟೆ ಹಾಕಿದ್ದ ಮಹಿಳೆಯೊಬ್ಬರು ಹಳಿಯ ಹತ್ತಿರಕ್ಕೆ ಹೋಗುತ್ತಾಳೆ. ರೈಲು ಬರುವ ವೇಳೆ ಆಕೆ ಸೆಲ್ಫಿ ತೆಗೆಯುವಾಗ ರೈಲು ಡಿಕ್ಕಿಯಾಗಿದೆ (dash).

ರೈಲು ಡಿಕ್ಕಿ ಹೊಡೆಯುತ್ತಿದ್ದಂತೆ ಮಹಿಳೆ ನೆಲದ ಮೇಲೆ ಬಿದ್ದಿದ್ದಾಳೆ. ರೈಲು ಡಿಕ್ಕಿಯಾದ ರಭಸಕ್ಕೆ ಆಕೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಆಕೆಯನ್ನು ಮೇಲೆ ಎತ್ತಲು ಪ್ರಯತ್ನಿಸುವ ವ್ಯಕ್ತಿ ರೈಲು ಹಳಿಯಿಂದ (track) ಸ್ವಲ್ಪ ದೂರಕ್ಕೆ ಎಳೆಯುವುದನ್ನು ವಿಡಿಯೋದಲ್ಲಿ ನೋಡಬಹುದು.

ಒಂದು ನಿಮಿಷದ ಹಿಂದೆ ನಗು ನಗುತ್ತಾ ಇದ್ದ ಮಹಿಳೆ ಕಣ್ಣ ಮುಂದೆ ಪ್ರಾಣ ಕಳೆದುಕೊಂಡಿದ್ದನ್ನು ನೋಡಿದವರು ರೈಲು ದುರಂತಗಳು ಎಷ್ಟು ಭೀಕರ (deadly) ಎಂದು ನಡುಗುವಂತಾಗಿದೆ.

ಇದನ್ನು ಓದಿ : UIDAI : ವ್ಯಕ್ತಿಯ ಮರಣಾನಂತರ ಆಧಾರ ಕಾರ್ಡ್‌ ಏನಾಗುತ್ತೆ.? ಏನ್ಮಾಡಬೇಕು ಗೊತ್ತೇ.? ಈ ಸುದ್ದಿ ಓದಿ.!

ಹೀಗಾಗಿ ರೈಲಿನ ಹಳಿಗಳ ಪಕ್ಕದಲ್ಲಿ ಹಾಗೂ ಚಲಿಸುವ ರೈಲಿನ ಹತ್ತಿರದಲ್ಲಿ ಫೋಟೋ ಕ್ಲಿಕ್ಕಿಸಲು ಎಂದಿಗೂ ಮುಂದಾಗಬಾರದು. ಇದು ಅತ್ಯಂತ ಅಪಾಯಕಾರಿ.

ಈ ರೀತಿಯ ದುರಂತಗಳ ಸಂಖ್ಯೆ ಸಹ ಹೆಚ್ಚಾಗುತ್ತಿವೆ. ಎಷ್ಟು ಜಾಗೃತಿ (Awareness) ಮೂಡಿಸಿದರೂ ಜನರು ಮಾತ್ರ ಇಂತಹ ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಇದ್ದಾರೆ. ಈ ದುರಂತದ ವಿಡಿಯೋ ನೋಡಿದ ಜನರು ಶಾಕ್‌ಗೆ ಒಳಗಾಗಿದ್ದಾರೆ.

spot_img
spot_img
- Advertisment -spot_img