Friday, June 14, 2024
spot_img
spot_img
spot_img
spot_img
spot_img
spot_img

UIDAI : ವ್ಯಕ್ತಿಯ ಮರಣಾನಂತರ ಆಧಾರ ಕಾರ್ಡ್‌ ಏನಾಗುತ್ತೆ.? ಏನ್ಮಾಡಬೇಕು ಗೊತ್ತೇ.? ಈ ಸುದ್ದಿ ಓದಿ.!

spot_img

ಜನಸ್ಪಂದನ ನ್ಯೂಸ್‌ ಡೆಸ್ಕ್‌ : ಭಾರತ ದೇಶದಲ್ಲಿ ಆಧಾರ ಕಾರ್ಡ್‌ ಪಡೆಯುವುದು ಕಡ್ಡಾಯವಾಗಿದ್ದು ಪ್ರತಿಯೋಬ್ಬ ನಾಗರಿಕ ಈ ಕಾರ್ಡ್‌ ಪಡೆಯಲೇ ಬೇಕು. ಆಧಾರ್ ಭಾರತೀಯ ನಾಗರಿಕರಿಗೆ ನೀಡುವ ಪ್ರಾಥಮಿಕ ಗುರುತಿನ ಚೀಟಿಯಾಗಿದೆ.

ಆಧಾರ್ ಕಾರ್ಡ್ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವುದರಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರೆಗೂ ಎಲ್ಲದಕ್ಕೂ ಆಧಾರ್ ‌ಅತ್ಯಗತ್ಯವಾಗಿದೆ.

Health : ಚಹಾದೊಂದಿಗೆ ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಲೇಬಾರದು.!

ಮಕ್ಕಳಿಂದ ಹಿಡಿದು ವಯೋವೃದ್ದರವರೆಗೆ ಆಧಾರ ಕಾರ್ಡ್‌ ಪಡೆಯುವ ಬಗ್ಗೆ ಮಾತ್ರ ನಮಗೆ ಗೊತ್ತು. ವ್ಯಕ್ತಿಯ ಮರಣಾನಂತರ ಈ ಕಾರ್ಡ್‌ ಏನು ಮಾಡಬೇಕೆಂದು ಬಹಳಷ್ಟು ಜನರಿಗೆ ಗೊತ್ತೇ ಇಲ್ಲ.

ನಿಮಗೆ ಗೊತ್ತಿರುವ ಯಾರಾದರೂ ತೀರಿಕೊಂಡರೆ, ಅವನ ಅಥವಾ ಅವಳ ಆಧಾರ್ ಕಾರ್ಡ್‌ಗೆ ಏನಾಗುತ್ತದೆ.? ಇದು ಮಾನ್ಯವಾಗಿರುತ್ತದೆಯೇ.? ಅಥವಾ ಆ ಆಧಾರ್ ಕಾರ್ಡ್‌ನ್ನು ಏನು ಮಾಡಬೇಕು.? ಕಾರ್ಡ್‌ನ್ನು ಸರಂಡರ್​​ ಮಾಡುವ ವ್ಯವಸ್ಥೆ ಏನಾದರೂ ಇದೆಯೇ ಅಥವಾ ಮುಚ್ಚಬೇಕೆ.? ಹೀಗೆ ಹತ್ತು ಹಲವು ಅನುಮಾನಗಳಿವೆ. ಈ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.

UIDAI ಆಧಾರ್ ಕಾರ್ಡ್ ನೀಡುವ ವ್ಯವಸ್ಥೆ ರೂಪಿಸಿದೆ. ಈ UIDAI ನಿಂದ ಪ್ರತಿಯೊಬ್ಬ ಭಾರತೀಯನಿಗೂ ಆಧಾರ್ ಕಾರ್ಡ್ ನೀಡಲಾಗುತ್ತದೆ. ಆದರೆ ಆಧಾರ್ ಅನ್ನು ಸರಂಡರ್ ಮಾಡಲು ಅಥವಾ ರದ್ದುಗೊಳಿಸಲು ಯಾವುದೇ ವ್ಯವಸ್ಥೆ ಇದುವರೆಗೂ ಮಾಡಲಾಗಿಲ್ಲ.

ಆದರೆ ಆಧಾರ್ ಕಾರ್ಡ್ ಭದ್ರತೆಗೆ ಸಂಬಂಧಿಸಿದಂತೆ ಕೆಲವು ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಇಂದು ಆನ್‌ಲೈನ್ ವಂಚನೆಗಳು ಮತ್ತು ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಈ ಹಂತದಲ್ಲಿ ಸೈಬರ್ ಅಪರಾಧಿಗಳ ಕೈಗೆ ನಿಮ್ಮ ಆಧಾರ್ ಕಾರ್ಡ್ ಸಿಕ್ಕರೆ, ಅದನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶವಿದೆ. ಅದಕ್ಕಾಗಿಯೇ ನಿಮ್ಮ ಆಧಾರ್ ಕಾರ್ಡ್ ವಿವರಗಳು ಇತರರಿಗೆ ಸಿಕ್ಕಿ ಬೀಳದಂತೆ ನೀವು ಎಚ್ಚರಿಕೆ ವಹಿಸಬೇಕು.

ತುಂಬಾ ಸಂತೋಷವಾದಾಗ ಹೀಗೂ ಸೆಲೆಬ್ರೇಷನ್ ಮಾಡ್ತಾರಾ.? Videio ನೋಡಿ.!

ಆಧಾರ್ ಕಾರ್ಡ್‌ನ್ನು ಸರೆಂಡರ್ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. ಆದರೆ, ಅದನ್ನು ಲಾಕ್ ಮಾಡಬಹುದು. ಒಮ್ಮೆ ಲಾಕ್ ಮಾಡಿದ ನಂತರ ಆಧಾರ್ ಡೇಟಾವನ್ನು ಇತರರು ಪ್ರವೇಶಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಆಧಾರ್ ಬಳಸಬೇಕಾದರೆ, ಅದನ್ನು ಅನ್ಲಾಕ್ ಮಾಡಬೇಕು. ಆದಾಗ್ಯೂ, ಸತ್ತವರ ಕುಟುಂಬ ಸದಸ್ಯರು ಮಾತ್ರ ಅದನ್ನು ಅನ್ಲಾಕ್ ಮಾಡಬಹುದು.

ಆಧಾರ್ ಕಾರ್ಡ್ ಲಾಕ್ ಮಾಡುವುದು ಹೇಗೆ.?

  • ಮೊದಲಿಗೆ, ನೀವು UIDAI ಅಧಿಕೃತ ವೆಬ್‌ಸೈಟ್ uidai.gov.in ಗೆ ಭೇಟಿ ನೀಡಬೇಕು.
  • ಆ ನಂತರ My Aadhaar ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ‘My Aadhaar’ ನಲ್ಲಿ ಆಧಾರ್ ಸೇವೆಗಳ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿರುವ ಆಯ್ಕೆಗಳಿಂದ ‘ಲಾಕ್/ಅನ್‌ಲಾಕ್ ಆಧಾರ್ ಬಯೋಮೆಟ್ರಿಕ್ಸ್’ ಆಯ್ಕೆಮಾಡಿ.
  • ಇದರೊಂದಿಗೆ ಹೊಸ ಪುಟ ತೆರೆದುಕೊಳ್ಳುತ್ತದೆ.
  • ಇದಕ್ಕೆ ಲಾಗ್ ಇನ್ ಮಾಡಲು, ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನೀವು ನಮೂದಿಸಬೇಕಾಗುತ್ತದೆ.
  • ನಂತರ Send OTP ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ OTP ನಮೂದಿಸಿ.
  • ನಂತರ ನೀವು ಲಾಕ್/ಅನ್ಲಾಕ್ ಬಯೋಮೆಟ್ರಿಕ್ ಡೇಟಾ ಆಯ್ಕೆಯನ್ನು ನೋಡುತ್ತೀರಿ.
  • ನಿಮಗೆ ಬೇಕಾದ ಆಯ್ಕೆಯನ್ನು ಮಾಡಿ.

Disclaimer : This information is obtained online, so before locking or unlocking any Aadhaar card, Please visit UIDAI official website uidai.gov.in.

spot_img
spot_img
- Advertisment -spot_img