Saturday, July 27, 2024
spot_img
spot_img
spot_img
spot_img
spot_img
spot_img

Health : ಚಹಾದೊಂದಿಗೆ ಅಪ್ಪಿತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಲೇಬಾರದು.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಚಹಾವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಹೆಚ್ಚಿನ ಜನರು ತಮ್ಮ ಕೆಲಸದ ಒತ್ತಡಗಳಲ್ಲಿ (stress) ಚಹಾ ಸೇವಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಒಂದು ಕಪ್ ಚಹಾ ಸೇವಿಸುವುದರಿಂದ ಅವರ ಒತ್ತಡವನ್ನೆಲ್ಲಾ ಮರೆಯುವ ಜನರು ಸಹ ಇದ್ದಾರೆ. ಚಹಾವು ಭಾರತದಲ್ಲಿ ಅತ್ಯಂತ ಜನಪ್ರಿಯ ಪಾನೀಯವಾಗಿದೆ.

ಮುಂಜಾನೆ, ಸಾಯಂಕಾಲ ಹಾಗೂ ಆಯಾಸವಾದಾಗ ಒಮ್ಮೆ ಚಹಾ ಕುಡಿಯುವ ಹವ್ಯಾಸಗಳು ಇರುತ್ತವೆ. ಚಹಾ ಸೇವನೆಯು ಪುರಾತನ ಕಾಲದಿಂದಲೂ (Ancient times) ರೂಢಿಯಲ್ಲಿ ಇರುವ ಪದ್ಧತಿ.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯೋಕ್ಕಿಂತ ಮುಂಚೆ ನೀರು ಕುಡಿದರೆ ಏನಾಗುವುದು ಗೊತ್ತೇ.?

ಇನ್ನೂ ಚಹಾದ ಜೊತೆ ಈ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ. ಚಹಾ ಸೇವನೆಯ ಜೊತೆಗೆ ಯಾವೆಲ್ಲ ಆಹಾರ ಪದಾರ್ಥಗಳನ್ನು ಸೇವಿಸಬಾರದು ಅಂತ ನೋಡೋಣ ಬನ್ನಿ.

* ಮೆಣಸು ಅಥವಾ ಬಲವಾದ ಮಸಾಲೆಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳನ್ನು ತಿಂದ ನಂತರ ಟೀ ಕುಡಿಯುವುದರಿಂದ ಬಾಯಲ್ಲಿ ಸುಡುವ ಸಂವೇದನೆ ಉಂಟಾಗಬಹುದು.

ಮಸಾಲೆಯುಕ್ತ ಆಹಾರವನ್ನು ಸೇವಿಸಿದ ನಂತರ ತಪ್ಪಿಯೂ ಬಿಸಿ ಬಿಸಿ ಚಹಾ ಕುಡಿಯಬಾರದು. ಇದು ಚಹಾವನ್ನು ಅಹಿತಕರವಾಗಿ ಸಂಕೋಚಕವಾಗಿ (compressor) ಮಾಡುತ್ತದೆ. ಮಸಾಲೆಗಳ ಶಾಖವು ಕೆಲವು ಚಹಾಗಳಲ್ಲಿ ಕಹಿಯನ್ನು ವರ್ಧಿಸುತ್ತದೆ.

* ಪುದಿನಾ ಎಲೆಗಳು ಬಲವಾದ ಪರಿಮಳ ಹೊಂದಿರುತ್ತವೆ. ಇವು ದೇಹವನ್ನು ರಿಫ್ರೆಶ್‌ ಮಾಡುತ್ತವೆ. ಆದರೆ ಪುದಿನಾ‌ (mint) ಸೇರಿದ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ತೊಂದರೆ ಉಂಟಾಗಬಹುದು. ಪುದಿನದಲ್ಲಿರುವ ಮೆಂಥಾಲ್‌ ರುಚಿಯು ಜೀರ್ಣಕ್ರಿಯೆಯಂತಹ ತೊಂದರೆಯನ್ನು ಉಂಟು ಮಾಡಬಹುದು.

* ಹಾಲು, ಚೀಸ್’ನಿಂದ ತಯಾರಿಸಿದ ಸಿಹಿತಿಂಡಿಗಳಂತಹ ಡೈರಿ ಉತ್ಪನ್ನಗಳನ್ನು ಚಹಾದ ಜೊತೆಗೆ ಸೇವಿಸುವುದು ಸರಿಯಲ್ಲ. ಚಹಾಕ್ಕೆ ಹಾಲು ಸೇರಿಸಿ ಕುಡಿಯಬಹುದು. ಆದರೆ ಚಹಾ ಕುಡಿಯುವಾದ ಬರಿ ಹಾಲು ಸೇವನೆ ಕೂಡ ಉತ್ತಮವಲ್ಲ. ಹೀಗೆ ಇವನ್ನು ಒಟ್ಟಾಗಿ ಕುಡಿಯುವುದರಿಂದ ಡೇರಿ ಉತ್ಪನ್ನಗಳಲ್ಲಿ ಕೊಬ್ಬಿನಾಂಶವು ಹೆಚ್ಚಬಹುದು.

* ಕಿತ್ತಳೆ, ನಿಂಬೆ, ದ್ರಾಕ್ಷಿಯಂತಹ ಹಣ್ಣುಗಳು ವಿಟಮಿನ್‌ ಸಿಯಿಂದ ಸಮೃದ್ಧವಾಗಿದೆ. ಇವು ದೇಹ, ಮನಸ್ಸನ್ನು ರಿಫ್ರೆಶ್‌ ಮಾಡುವ ಗುಣವನ್ನು ಹೊಂದಿವೆ. ಆದರೆ ಚಹಾ ಸೇವಿಸುವಾಗ ಅದರಲ್ಲೂ ಬ್ಲ್ಯಾಕ್ ಅಥವಾ ಗ್ರೀನ್‌ ಟೀ ಸೇವಿಸುವಾಗ ಸಿಟ್ರಸ್‌ ಹಣ್ಣುಗಳನ್ನು ತಪ್ಪಿಯೂ ಸೇವಿಸಬಾರದು.

ಇದರಿಂದ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಸಿಟ್ರಸ್ ಹಣ್ಣುಗಳಲ್ಲಿರುವ ಆಮ್ಲವು ಚಹಾದಲ್ಲಿರುವ ಕೆಲವು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು (Absorption of nutrients) ಅಡ್ಡಿಪಡಿಸುತ್ತದೆ.

ಇದನ್ನು ಓದಿ : ಅಂಚೆ ಕಛೇರಿಯಲ್ಲಿ 40,000ಕ್ಕೂ ಅಧಿಕ ನೇಮಕಾತಿ : 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು.!

* ಚಾಕೊಲೇಟ್ ಬಲವಾದ, ತೀವ್ರವಾದ ಪರಿಮಳವನ್ನು ಹೊಂದಿದ್ದು, ಅದು ಚಹಾದ ಸೂಕ್ಷ್ಮ ಅಂಶವನ್ನು ಮರೆಮಾಡುತ್ತದೆ. ಇದಲ್ಲದೆ, ಚಾಕೊಲೇಟ್‌ನಲ್ಲಿರುವ ಹೆಚ್ಚಿನ ಕೊಬ್ಬಿನಂಶವು ದೇಹವನ್ನು ಸೇರುತ್ತದೆ. ಇದರಿಂದ ಅಪಾಯ ಹೆಚ್ಚು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

spot_img
spot_img
- Advertisment -spot_img