Thursday, June 20, 2024
spot_img
spot_img
spot_img
spot_img
spot_img
spot_img

ಐಟಂ Songಗೂ ರೆಡಿ, ಬೆತ್ತಲೆಯಾಗೋಕು ರೆಡಿ ಎಂದ ನಟಿ.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಟಿ ಕಾಮಾಕ್ಷಿ ಭಾಸ್ಕರಾಲಾ ವೈದ್ಯೆಯಾಗಿದ್ದರೂ, ತಮ್ಮ ಆಸ್ತಕ್ತಿಯಿಂದಲೇ ನಟನಾ ಕ್ಷೇತ್ರಕ್ಕೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬೋಲ್ಡ್‌ (bold) ಪಾತ್ರಕ್ಕಾದರೂ ತಾವು ಸೈ ಎನ್ನುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಪೊಲಿಮೆರಾ ಪಾರ್ಟ್‌-1 ಹಾಗೂ ಪಾರ್ಟ್‌ 2 ಸಿನಿಮಾದ ಮೂಲಕ ತೆಲಂಗಾಣದಲ್ಲಿ ಪ್ರಸಿದ್ಧಿ ಪಡೆದಿರುವ ಕಾಮಾಕ್ಷಿ ಭಾಸ್ಕರಾಲಾ, ಎರಡೂ ಸಿನಿಮಾದಲ್ಲಿ ಬಹಳ ಪ್ರಭಾವ (impact) ಬೀರುವ ಪಾತ್ರದಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದರು.

ಇದನ್ನು ಓದಿ : ಬಾಯ್’ಫ್ರೆಂಡ್ ಭೇಟಿಯಾಗಲು ಬಂದು ಆತನ ತಾಯಿಯ ಕೈಗೆ ಸಿಕ್ಕಿಬಿದ್ದ ಯುವತಿ ; ಮುಂದೆನಾಯ್ತು Video ನೋಡಿ.!

ಇನ್ನೂ ಇದಕ್ಕೂ ಮುಂಚೆ ಆಕೆ ಸೈತಾನ್‌ ಎನ್ನುವ ವೆಬ್‌ ಸಿರೀಸ್‌ನಲ್ಲಿ ಬೋಲ್ಡ್‌ ಪಾತ್ರದಲ್ಲಿ ನಟಿಸಿದ್ದರು. ನಟಿಯಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ತನ್ನಲ್ಲಿರುವ ವಿಶಿಷ್ಟತೆಯನ್ನು (Uniqueness) ಪ್ರೇಕ್ಷಕರಿಗೆ ಹಾಗೂ ಚಿತ್ರರಂಗಕ್ಕೆ ಪರಿಚಯಿಸುವುದು ತಮ್ಮ ಗುರಿ ಎಂದಿದ್ದಾರೆ.

ಪೊಲಿಮೆರಾ ಸಿನಿಮಾ ಇವರನ್ನು ಫೇಮಸ್‌ ಮಾಡಿದ್ದರೆ, ಇದರ 2ನೇ ಪಾರ್ಟ್‌ ಇವರು ಇನ್ನಷ್ಟು ಪ್ರಸಿದ್ಧಿ ಪಡೆಯುವಂತೆ ಮಾಡಿದೆ. ಸೈತಾನ್‌ ವೆಬ್‌ ಸಿರೀಸ್‌ನಲ್ಲಿ ಬೋಲ್ಡ್‌ ಆಗಿ ನಟಿಸಿದ್ದ ಈಕೆ, ಪ್ರಿಯರಾಲು ಸಿನಿಮಾದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ಪೊಲಿಮೆರಾ 2 ಸಿನಿಮಾದ ಹೀರೋಯಿನ್‌ ಸಾಯಿ ಕಾಮಾಕ್ಷಿ ಭಾಸ್ಕರಾಲಾ ತಮ್ಮ ಬೋಲ್ಡ್‌ ಸ್ಟೇಟ್‌ಮೆಂಟ್‌ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಇಲ್ಲಿಯವರೆಗೂ ಡಿ ಗ್ಲಾಮರ್‌ ರೋಲ್‌ನಲ್ಲೇ ನಟಿಸಿದ್ದ ಈಕೆ ಮುಂದೆ ಬೆತ್ತಲೆಯಾಗಿ (naked) ನಟಿಸೋಕು ಸಿದ್ಧ ಎಂದು ಹೇಳಿದ್ದಾರೆ.

ಈಗ ಕಾಮಾಕ್ಷಿ ಭಾಸ್ಕರಾಲಾ ಬೋಲ್ಡ್‌ ಸ್ಟೇಟ್‌ಮೆಂಟ್‌ಅನ್ನು ನೀಡಿದ್ದು, ಎಲ್ಲಾ ರೀತಿಯ ಬೋಲ್ಡ್‌ ಪಾತ್ರಗಳಿಗೂ ನಾನು ರೆಡಿ ಅದು ನ್ಯೂಡ್‌ ಪಾತ್ರವೇ ಆಗಿರಲಿ, ಐಟಮ್‌ ಡಾನ್ಸ್‌ ಆಗಿರಲಿ ನಾನು ಮಾಡುತ್ತೇನೆ ಎಂದಿದ್ದಾರೆ.

ಸಿನಿಮಾದಲ್ಲಿ ಬೋಲ್ಡ್‌ ಪಾತ್ರದಲ್ಲಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು (What do you think?) ಎಂಬ ಪ್ರಶ್ನೆಗೆ ಮುಕ್ತವಾಗಿ ಉತ್ತರ ನೀಡಿದ ಅವರು, ಎಲ್ಲಾ ರೀತಿಯ ಬೋಲ್ಡ್‌ ಪಾತ್ರಗಳಿಗೂ ನಾನು ಸಿದ್ಧ. ನಾನು ಬೋಲ್ಡ್‌ ಪಾತ್ರವೇ ಮಾಡಲಿ ಅಥವಾ ಮುಜುಗರ ಪಡುವ ಹೆಣ್ಣಿನ ಪಾತ್ರವೇ ಮಾಡಲಿ. ನನ್ನ ಪಾಲಿಗೆ ಅದೊಂದು ಪಾತ್ರವಷ್ಟೇ ಎಂದು ಹೇಳಿದ್ದಾರೆ.

ಇತ್ತೀಚೆಗೆ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಚಿಟ್‌ಚಾಟ್‌ನಲ್ಲಿ ಕಾಮಾಕ್ಷಿ ಭಾಸ್ಕರಾಲಾ ಅವರು ನಿರ್ದೇಶಕರಿಗೆ ಈ ಆಫರ್‌ ನೀಡಿದ್ದಾರೆ.

ಹಾಗಿದ್ದರೆ ನೀವು ನ್ಯೂಡ್‌ ಪಾತ್ರದಲ್ಲಿ ನಟಿಸೋಕೆ ಸಿದ್ಧವೇ ಎಂದು ನಿರೂಪಕ ಕೇಳಿದ ಪ್ರಶ್ನೆಗೆ, ನಾನೊಬ್ಬಳು ನಟಿ ಎಲ್ಲಾ ರೀತಿಯ ಪಾತ್ರಗಳಿಗೂ ಸಿದ್ಧರಾಗಿರೋದು ನನ್ನ ಜವಾಬ್ದಾರಿ ಎಂದಿದ್ದಾರೆ.

ಇದುವೇ ಕಲಾವಿದರ ಜೀವನ, ಜನರಿಗೂ ನಾವು ಕಲಾವಿದರಂತೆ ಕಾಣಬೇಕು. ನಾನೊಬ್ಬ ನಟಿಯಾದ್ದರಿಂದ ಆ ಪಾತ್ರಕ್ಕೆ ನನ್ನ ಧ್ವನಿ, ದೇಹ, ಮುಖ, ಎಲ್ಲವನ್ನೂ ಸಾಧನವಾಗಿ ಬಳಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : Health : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯೋಕ್ಕಿಂತ ಮುಂಚೆ ನೀರು ಕುಡಿದರೆ ಏನಾಗುವುದು ಗೊತ್ತೇ.?

ಹೀಗೆ ಇದ್ದು ನಾಳೆ ಬಿಟ್ಟರೆ ನನಗೆ ಇಮೇಜ್ ಮತ್ತು ಸೌಂದರ್ಯದ (Image and beauty) ಬಗ್ಗೆ ಕಾಳಜಿ ಇಲ್ಲ ಎನ್ನುತ್ತಾರೆ. ಹಾಗಾಗಿ ನಗ್ನ ಅಥವಾ ಬೋಲ್ಡ್ ಆಗಿ ನಟಿಸಲು ಸಿದ್ಧ ಎಂದು ಕಾಮಾಕ್ಷಿ ಬಹಿರಂಗವಾಗಿ ಹೇಳಿದ್ದಾರೆ.

ಇದಲ್ಲದೆ, ಐಟಂ ಸಾಂಗ್‌ಗಳ ಬಗ್ಗೆ ಮಾತನಾಡುತ್ತಾ, ತಾನು ಉತ್ತಮ ಡ್ಯಾನ್ಸರ್ ಕೂಡ ಮತ್ತು ಐಟಂ ಡಾನ್ಸ್‌ಗಳನ್ನೂ ಕೂಡ ಮಾಡುತ್ತೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ.

 

spot_img
spot_img
- Advertisment -spot_img