ಜನಸ್ಪಂದನ ನ್ಯೂಸ್, ದೆಹಲಿ : ಹರಿಯಾಣದ ಫರಿದಾಬಾದ್ ಜಿಲ್ಲೆಯ ಬಲ್ಲಭಗಢ ಪ್ರದೇಶದಲ್ಲಿ 17 ವರ್ಷದ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಇಬ್ಬರು ಬಾರಿ ಗುಂಡು ಹಾರಿಸಿರುವ (Shot) ಘಟನೆ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಭಾರೀ ಆತಂಕ ಉಂಟುಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ಗಡಿಯ ಬಳಿ ನಡೆದ ಶಾಕಿಂಗ್ ಘಟನೆಯೊಂದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಘಟನೆಯು ಬಲ್ಲಭಗಢದ ಶ್ಯಾಮ್ ಕಾಲೋನಿಯಲ್ಲಿ ನಡೆದಿದ್ದು, ದೆಹಲಿಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿದೆ. ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ಬಾಲಕಿಯನ್ನು ಹಿಂಬಾಲಿಸುತ್ತಾ ಬಂದ ವ್ಯಕ್ತಿಯೊಬ್ಬ ಆಕೆಯ ಮೇಲೆ ಬಂದೂಕಿನಿಂದ ಎರಡು ಬಾರಿ ಗುಂಡು ಹಾರಿಸಿದ್ದಾನೆ (Shot) ಎಂದು ಪೊಲೀಸರು ತಿಳಿಸಿದ್ದಾರೆ.
“ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ Bike ವ್ಹೀಲಿಂಗ್ ; ಮುಂದೆನಾಯ್ತು? ವಿಡಿಯೋ ನೋಡಿ.!”
ಸಿಸಿಟಿವಿ ದೃಶ್ಯಗಳಲ್ಲಿ ದುಷ್ಕರ್ಮಿಯು ಬೈಕ್ ಮೇಲೆ ಕಾದು ಕುಳಿತಿರುವುದು, ತನ್ನ ಬ್ಯಾಗ್‌ನಲ್ಲಿ ಬಂದೂಕು ಅಡಗಿಸಿಕೊಂಡಿರುವುದು, ನಂತರ ಬಾಲಕಿ ಹಾದುಹೋಗುತ್ತಿದ್ದಂತೆ ಬಂದೂಕನ್ನು ಎಳೆದು ಗುಂಡು ಹಾರಿಸುತ್ತಿರುವುದು (Shot) ಸ್ಪಷ್ಟವಾಗಿ ಕಾಣಿಸುತ್ತದೆ. ಘಟನೆಯ ವೇಳೆ ಬಾಲಕಿಯ ಜೊತೆ ಇದ್ದ ಇನ್ನಿಬ್ಬರು ಹುಡುಗಿಯರು ಭಯದಿಂದ ಓಡಿ ಹೋಗಿದ್ದಾರೆ.
ಒಂದು ಗುಂಡು ಬಾಲಕಿಯ ಭುಜಕ್ಕೆ ತಗುಲಿದರೆ, ಇನ್ನೊಂದು ಆಕೆಯ ಹೊಟ್ಟೆಗೆ ನುಗ್ಗಿದೆ ಎಂದು ವರದಿಗಳು ಹೇಳುತ್ತವೆ. ತೀವ್ರವಾಗಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದು, ಪ್ರಸ್ತುತ ಆಕೆಯ ಸ್ಥಿತಿ ಗಂಭೀರವಾಗಿದೆ.
ನೀವೂ ಮೊಬೈಲ್‌ನಲ್ಲಿ ದೇವರ Wallpaper ಇಟ್ಟುಕೊಂಡಿದ್ದೀರಾ? ತಕ್ಷಣವೇ ತೆಗೆಯಿರಿ ; ಏಕೆ ಗೊತ್ತೆ?
ದಾಳಿಯ ನಂತರ ದೋಷಿಯು ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ದಾಳಿಕೋರನನ್ನು ಗುರುತಿಸಿದ್ದು ಜತಿನ್ ಮಂಗ್ಲಾ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಾಥಮಿಕ ವಿಚಾರಣೆಯ ಪ್ರಕಾರ, ಜತಿನ್ ಮಂಗ್ಲಾ ಮತ್ತು ಸಂತ್ರಸ್ತೆ ಪರಸ್ಪರ ಪರಿಚಿತರಾಗಿದ್ದರು. ಬಾಲಕಿ ಆರೋಪಿ ಯಾರು ಎಂಬುದನ್ನು ಗುರುತಿಸಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ದಾಳಿಗೆ ಬಳಸಲಾದ ಬಂದೂಕನ್ನು ವಶಪಡಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ತೀವ್ರಗೊಳಿಸಲಾಗಿದೆ.
ಬೆಳಗಾವಿ : ಅಪ್ರಾಪ್ತೆಗೆ Harassment ನೀಡಿದ ಯುವಕನಿಗೆ 5 ವರ್ಷ ಶಿಕ್ಷೆ ಹಾಗೂ ದಂಡ.!
ಸಂತ್ರಸ್ತೆಯ ಸಹೋದರಿಯ ಪ್ರಕಾರ, ದಾಳಿಕೋರ ತಂಗಿಯ ಎದೆಗೆ ಗುಂಡು ಹಾರಿಸಲು ಯತ್ನಿಸಿದ್ದ, ಆದರೆ ಆಕೆ ತನ್ನ ಕೈ ಎತ್ತಿದ್ದರಿಂದ ಆತನ ಗುರಿ ತಪ್ಪಿದೆ ಎಂದು ಹೇಳಿದ್ದಾರೆ. ಇದರಿಂದ ದೊಡ್ಡ ದುರಂತ ತಪ್ಪಿದೆ ಎಂದು ಆಕೆ ಹೇಳಿದ್ದಾಳೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದ್ದು, ನೆಟ್ಟಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ. meanwhile, ಪೊಲೀಸ್ ಇಲಾಖೆ ಆರೋಪಿಯನ್ನು ಬೇಗನೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಶೂಟ್ (Shot) ಮಾಡುತ್ತಿರುವ ವಿಡಿಯೋ :
https://twitter.com/i/status/1985592788533301698
Belagavi ಯಲ್ಲಿ ರಾಜ್ಯೋತ್ಸವದ ಮೆರವಣಿಗೆ ವೇಳೆ 6 ಮಂದಿಗೆ ಚಾಕು ಇರಿತ : ಆಸ್ಪತ್ರೆಗೆ ದಾಖಲು.!

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ (Belagavi) ಯ ಸದಾಶಿವ ನಗರದಲ್ಲಿ ರಾಜ್ಯೋತ್ಸವ ಮೆರವಣಿಗೆಯ ವೇಳೆ ಚಾಕು ಇರಿತದ ಘಟನೆ ಸಂಭವಿಸಿ ಐದು ಮಂದಿ ಯುವಕರು ಗಾಯಗೊಂಡಿದ್ದಾರೆ.
ಈ ಘಟನೆ ಶನಿವಾರ ರಾತ್ರಿ ಸದಾಶಿವನಗರದ ವೈ-ಜಂಕ್ಷನ್ ಬಳಿ ನಡೆದಿದೆ.
ರೆಸ್ಟೋರೆಂಟ್‌ನಲ್ಲಿ ಅಣ್ಣ-ತಂಗಿಯ ಮೇಲೆ Police ದರ್ಪ ; ಸಿಸಿಟಿವಿ ವಿಡಿಯೋ ವೈರಲ್.!
ಗಾಯಗೊಂಡವರು ಬೆಳಗಾವಿ (Belagavi) ನೆಹರು ನಗರದ ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್ ಸುಂಕದ, ವಿನಾಯಕ ನರಟ್ಟಿ ಮತ್ತು ನಜೀರ್ ಪಠಾಣ ಎಂದು ತಿಳಿದುಬಂದಿದೆ.







