ಜನಸ್ಪಂದನ ನ್ಯೂಸ್, ಕೊಯಮತ್ತೂರು : ನಗರದ ಏರ್‌ಪೋರ್ಟ್ ಸಮೀಪ ಭಾನುವಾರ (ನವೆಂಬರ್ 2) ರಾತ್ರಿ ಸಂಭವಿಸಿದ ಎಂ.ಬಿ.ಎ (MBA) ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಿಂದ ಆತಂಕ ಉಂಟಾಗಿದೆ.
ಪೀಲಮೇಡು ಬಳಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ MBA ವಿದ್ಯಾರ್ಥಿನಿ ತನ್ನ ಸ್ನೇಹಿತನೊಂದಿಗೆ ಕಾರಿನಲ್ಲಿದ್ದ ವೇಳೆ ಮೂವರು ಅಕ್ರಮವಾಗಿ ಪ್ರವೇಶಿಸಿ ದುಷ್ಕೃತ್ಯ ಎಸಗಿದ ಘಟನೆ ಬಹಿರಂಗವಾಗಿದೆ.
Kannada ರಾಜ್ಯೋತ್ಸವ ಸಂಭ್ರಮದ ನಡುವೆ ಮಂಗನ ಚೆಲ್ಲಾಟ ; ನೆರೆದಿದ್ದ ಜನರಿಗೆ ಪ್ರಾಣಭೀತಿ ; ವಿಡಿಯೋ ವೈರಲ್.!
ಪೊಲೀಸ್ ವರದಿ ಪ್ರಕಾರ, ರಾತ್ರಿ ಸುಮಾರು 11 ಗಂಟೆ ಸುಮಾರಿಗೆ MBA ವಿದ್ಯಾರ್ಥಿನಿ ಮತ್ತು ಆಕೆಯ ಬಾಯ್‌ಫ್ರೆಂಡ್ ಕಾರಿನಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ಯುವಕರು ಕಾರ್‌ನ ಬಳಿ ಬಂದು ಆಕೆಯ ಸ್ನೇಹಿತನ ಮೇಲೆ ಹಲ್ಲೆ ನಡೆಸಿದರು.
ಬಳಿಕ MBA ವಿದ್ಯಾರ್ಥಿನಿಯನ್ನು ಬಲವಂತವಾಗಿ ಕಾರಿನಿಂದ ಎಳೆದೊಯ್ದು, ವಾಹನದಲ್ಲಿ ಅಪಹರಿಸಿ ನಗರದಿಂದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದುದೊಯ್ಯದ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”
ಘಟನೆಯ ನಂತರ ಗಾಯಗೊಂಡ ಬಾಯ್‌ಫ್ರೆಂಡ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಅನೇಕ ತಂಡಗಳು ಸ್ಥಳಕ್ಕೆ ಧಾವಿಸಿ MBA ವಿದ್ಯಾರ್ಥಿನಿಗಾಗಿ ಹುಡುಕಾಟ ಆರಂಭಿಸಿದವು. ಬೆಳಗಿನ ಜಾವ ಸುಮಾರು 4 ಗಂಟೆಯ ಸುಮಾರಿಗೆ ಏರ್‌ಪೋರ್ಟ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿವಸ್ತ್ರಳಾಗಿ ಸಂತ್ರಸ್ತೆ ಪತ್ತೆಯಾದಳು.
ಆಕೆಯನ್ನು ತಕ್ಷಣವೇ ಸಿತ್ರಾ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿಗಳು ಕೊವಿಲ್‌ಪಾಳ್ಯಂ ಪ್ರದೇಶದಲ್ಲಿ ಬೈಕ್ ಕದ್ದ ಬಳಿಕ ಏರ್‌ಪೋರ್ಟ್ ಮಾರ್ಗವಾಗಿ ತೆರಳುತ್ತಿದ್ದರು. ಆ ವೇಳೆ ಕಾರ್‌ನಲ್ಲಿ MBA ವಿದ್ಯಾರ್ಥಿನಿ ಹಾಗೂ ಬಾಯ್‌ಫ್ರೆಂಡ್ ಇದ್ದದ್ದನ್ನು ಕಂಡು ಈ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ.
“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಘಟನೆಯ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಏಳು ವಿಶೇಷ ತಂಡಗಳನ್ನು ರಚಿಸಿದ್ದು, ಶಂಕಿತರ ಪತ್ತೆಗೆ ವ್ಯಾಪಕ ಶೋಧ ಆರಂಭಿಸಲಾಗಿದೆ.
ಗಾಯಗೊಂಡ ಯುವತಿಯ ಬಾಯ್‌ಫ್ರೆಂಡ್‌ನಿಗೂ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕೊಯಮತ್ತೂರು ನಗರ ಪೊಲೀಸ್ ಆಯುಕ್ತರು ಪತ್ರಿಕಾ ಪ್ರತಿಕ್ರಿಯೆಯಲ್ಲಿ, “ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ಆರಂಭಿಸಲಾಗಿದೆ. ಯಾವುದೇ ತಪ್ಪಿತಸ್ಥರನ್ನು ಬಿಟ್ಟುಕೊಡುವುದಿಲ್ಲ,” ಎಂದು ತಿಳಿಸಿದ್ದಾರೆ.
ಮದುವೆಯಾಗು ಎಂದ Girlfriend ; ಗುಂಡಿ ತೋಡಿ ಹೂತು ಹಾಕಿದ ಪ್ರಿಯಕರ.!

ಜನಸ್ಪಂದನ ನ್ಯೂಸ್, ಈರೋಡ್ : ಇದೊಂದು ವಿರಳ ಪ್ರೀತಿ-ಪ್ರೇಮ ಕಥೆ, ಆದರೆ ಈ ಘಟನೆ ಮಾನವೀಯತೆಯ ಅತೀ ಕರಾಳತೆಯ ಮುಖವನ್ನು ತೋರಿಸುತ್ತದೆ. ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. “ಮದುವೆಯಾಗು” ಎಂಬ ಒಂದೇ ಮಾತಿಗೆ ಪ್ರೇಯಸಿ (Girlfriend) ಯ ಜೀವ ತೆಗೆದ ಕ್ರೂರ ಕೃತ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಳಯಂ ಬಳಿಯ ಬಾಳೆ ತೋಟವೊಂದರಲ್ಲಿ ಮಹಿಳೆ (Girlfriend) ಯೊಬ್ಬಳ ಶವ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ತನಿಖೆಯ ವೇಳೆ ಈ ಪ್ರಕರಣವು ಪ್ರೇಮ ಸಂಬಂಧದ ಕೊಲೆಯೆಂದು ಖಚಿತವಾಗಿದೆ.
Kannada ರಾಜ್ಯೋತ್ಸವ ಸಂಭ್ರಮದ ನಡುವೆ ಮಂಗನ ಚೆಲ್ಲಾಟ ; ನೆರೆದಿದ್ದ ಜನರಿಗೆ ಪ್ರಾಣಭೀತಿ ; ವಿಡಿಯೋ ವೈರಲ್.!
ಪೊಲೀಸರ ವರದಿಯ ಪ್ರಕಾರ, ಮೃತಪಟ್ಟ ಮಹಿಳೆ (Girlfriend) ಯನ್ನು ಅಪ್ಪಕುಡಲ್ ಪಟ್ಟಣದ 35 ವರ್ಷದ ಸೋನಿಯಾ ಎಂದು ಗುರುತಿಸಲಾಗಿದೆ. ವೃತ್ತಿಯಿಂದ ಅವರು ಬ್ಯೂಟಿಷಿಯನ್ ಆಗಿದ್ದು, ತಮ್ಮ ತಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ನವೆಂಬರ್ 1ರಿಂದ ಸೋನಿಯಾ ಕಾಣೆಯಾಗಿದ್ದರು. ಮನೆಗೆ ಮರಳದ ಕಾರಣ ಕುಟುಂಬದವರು ನಾಪತ್ತೆ ದೂರು ದಾಖಲಿಸಿದ್ದರು.
ಪೊಲೀಸರು ನಡೆಸಿದ ತನಿಖೆಯಲ್ಲಿ 27 ವರ್ಷದ ಮೋಹನ್ ಕುಮಾರ್ ಎಂಬ ಯುವಕನ ಹೆಸರು ಬಯಲಾಗಿತು. ಆತ ಬಿ.ಕಾಂ ಪದವೀಧರನಾಗಿದ್ದು, ಬಾಳೆ ತೋಟದ ಮಾಲೀಕರಾಗಿದ್ದಾನೆ. ಸೋನಿಯಾ ಮತ್ತು ಮೋಹನ್ ಇಬ್ಬರೂ ಎರಡು ವರ್ಷಗಳ ಹಿಂದೆ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಿತರಾದರು. ಆ ನಂತರ ಇವರಿಬ್ಬರ ಮಧ್ಯೆ ಪ್ರೇಮ ಬೆಳೆದಿತ್ತು.
“ಮಾಂಸಕ್ಕಿಂತ 10 ಪಟ್ಟು ಶಕ್ತಿಶಾಲಿ E-Vitamin ; ದೇಹ ಬಲಗೊಳಿಸಿ ಯುವತೆಯನ್ನು ಕಾಪಾಡುತ್ತದೆ.!“
ಮೋಹನ್ ಕುಮಾರ್ ನೀಡಿದ ಹೇಳಿಕೆಯ ಪ್ರಕಾರ, Girlfriend ಸೋನಿಯಾ ಮದುವೆಯಾಗಲು ಒತ್ತಾಯಿಸುತ್ತಿದ್ದಳು. ಆದರೆ ಆತ ಅದನ್ನು ಒಪ್ಪಿಕೊಳ್ಳದೆ, ಪ್ಲಾನ್ ಮಾಡಿದ ರೀತಿಯಲ್ಲಿ ಆಕೆಯ ಜೀವ ತೆಗೆದಿದ್ದಾನೆ. ತನಿಖೆಯ ಪ್ರಕಾರ, ಆತ ತನ್ನ ಜಮೀನಿನಲ್ಲಿ ಮೊದಲೇ ಮೂರು ಅಡಿ ಆಳದ ಗುಂಡಿ ತೋಡಿದ್ದ.
ಬಳಿಕ ರಾತ್ರಿ 8 ಗಂಟೆಯ ಸುಮಾರಿಗೆ Girlfriend ಸೋನಿಯಾಳನ್ನು ಕರೆದು ತಂದು, ಕಲ್ಲಿನಿಂದ ಹಲ್ಲೆ ನಡೆಸಿ ಚಾಕುವಿನಿಂದ ಕುತ್ತಿಗೆ ಇರಿದು ಕೊಂದಿದ್ದಾನೆ. ನಂತರ ಶವವನ್ನು ಆ ಗುಂಡಿಯಲ್ಲಿ ಹೂತು, ಆಕೆಯ ಮೊಬೈಲ್ ಹಾಗೂ ಬಟ್ಟೆಗಳನ್ನು ಕಾಲುವೆಗೆ ಎಸೆದಿದ್ದಾನೆ.
Accident : “ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ; 20 ಮಂದಿ ದುರ್ಮರಣ.!”
ಸ್ಥಳೀಯರು ಮಳೆ ನಂತರ ಅಣಬೆ ಸಂಗ್ರಹಿಸಲು ಹೋಗಿ, ಮಣ್ಣಿನೊಳಗೆ ಕೂದಲು ಮತ್ತು ರಕ್ತದ ಗುರುತು ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ, ಪೆರುಂಡುರೈ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯಕೀಯ ತಂಡದ ಸಹಾಯದಿಂದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತ ಕೊಲೆ ಮಾಡಿದುದನ್ನು ಒಪ್ಪಿಕೊಂಡಿದ್ದಾನೆ. ಈ ಘಟನೆ ಪ್ರೇಮ ಸಂಬಂಧದ ನಿಜಸ್ವರೂಪದ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ. ಪ್ರೇಮವೆಂಬ ಪವಿತ್ರ ಭಾವನೆ ಕ್ರೂರತನದ ರೂಪ ತಾಳಿದ ಈ ಪ್ರಕರಣವು ಸಮಾಜವನ್ನು ನಿಜಕ್ಕೂ ಬೆಚ್ಚಿಬೀಳಿಸಿದೆ.
Tamil Nadu Man Murders Partner. She Kept Asking Him To Marry Her https://t.co/f3BROAs7LC pic.twitter.com/Hl2raTkpxy
— NDTV (@ndtv) November 3, 2025







