Tuesday, September 17, 2024
spot_img
spot_img
spot_img
spot_img
spot_img
spot_img
spot_img

trap : ಲಂಚ ಪಡೆಯುತ್ತಿದ್ದ ವೇಳೆ ಅರಣ್ಯ ಅಧಿಕಾರಿ ಲೋಕಾಯುಕ್ತ ಬಲೆಗೆ.!

spot_img
WhatsApp Group Join Now
Telegram Group Join Now
Instagram Account Follow Now

ಜ‌ನಸ್ಪಂದನ ನ್ಯೂಸ್, ಉಡುಪಿ : ಉಡುಪಿ ಜಿಲ್ಲೆಯ ಬೈಂದೂರು ಉಪ ವಲಯ ಅರಣ್ಯ ಅಧಿಕಾರಿಯೋರ್ವ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೈಂದೂರು ವಲಯದ ಉಪವಲಯ ಅರಣ್ಯಧಿಕಾರಿ ಬಂಗಾರಪ್ಪ ಎಂಬಾತ ಲೋಕಾಯುಕ್ತ ಕೈಗೆ ತಗ್ಲಾಕೊಂಡಿದ್ದಾರೆ. ಅಧಿಕಾರಿಯು ಮರ ತೆರವುಗೊಳಿಸುವ ಅನುಮತಿಗಾಗಿ ಲಂಚ ಸ್ವೀಕರಿಸುತ್ತಿದ್ದ ಎನ್ನಲಾಗಿದೆ.

ಇದನ್ನು ಓದಿ : ಪ್ರಾಣ ಪಣಕಿಟ್ಟು ರೀಲ್ಸ್‌ಗಾಗಿ ಬಹುಮಹಡಿ ಕಟ್ಟಡದಲ್ಲಿ ನೇತಾಡುತ್ತಿರುವ ಯುವತಿ ; ವಿಡಿಯೋ Viral.!

ದಾಳಿ ವೇಳೆ ಇನ್ನೋರ್ವ ಆರೋಪಿ ಅರಣ್ಯ ವೀಕ್ಷಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ ಎಂದು ತಿಳಿದು ಬಂದಿದೆ.

ಶಿರೂರಿನ ಮಹಮ್ಮದ್ ಅನ್ವರ್ ಹಸನ್ ಎಂಬವರು ತನ್ನ ಪಟ್ಟ ಸ್ಥಳದಲ್ಲಿರುವ ಹಲಸಿನ ಮರವನ್ನು ತೆರವುಗೊಳಿಸಲು ಅನುಮತಿಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಉಪವಲಯ ಅರಣ್ಯಾಧಿಕಾರಿ ಅನುಮತಿ ನೀಡಬೇಕಾದರೆ 4000 ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಇದನ್ನು ಓದಿ : ಜಿಲ್ಲಾ ನ್ಯಾಯಾಂಗ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.!

ಈ ಬಗ್ಗೆ ಅನ್ವರ್, ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿದ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯನ್ನು ಬಂಧಿಸಿದರು ಎಂದು ತಿಳಿದು ಬಂದಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ನಟರಾಜ್ ಎಂ.ಎ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಡಿವೈಎಸ್ಪಿ ಪ್ರಕಾಶ್ ಕೆ ಸಿ, ಪೊಲೀಸ್ ನಿರೀಕ್ಷಕ ಮಂಜುನಾಥ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img