Saturday, July 13, 2024
spot_img
spot_img
spot_img
spot_img
spot_img
spot_img

ಪ್ರಾಣ ಪಣಕಿಟ್ಟು ರೀಲ್ಸ್‌ಗಾಗಿ ಬಹುಮಹಡಿ ಕಟ್ಟಡದಲ್ಲಿ ನೇತಾಡುತ್ತಿರುವ ಯುವತಿ ; ವಿಡಿಯೋ Viral.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರೀಲ್ಸ್‌ ಹುಚ್ಚಿಗೆ ಬಲಿಯಾಗುತ್ತಿರುವ ಸಂಗತಿ ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿದ್ದರು ಸಹ ಮತ್ತೇ ಅದೇ ರೀತಿಯ ದುಃಸಾಹಸಕ್ಕೆ ಕೈಹಾಕದೆ ಬಿಡುತ್ತಿಲ್ಲ ಯುವ ಜನ. ಇಲ್ಲಿ  ಅಥವಾ ಯುವ ಜನಾಂಗವೇ ರೀಲ್ಸ್‌ ಬಿಡುತ್ತಿಲ್ಲವೂ ಅಥವಾ ರೀಲ್ಸ್‌ ಅವರನ್ನು ಬಿಡುತ್ತಿಲ್ಲವೋ ಒಂದು ತಿಳಿಯುತ್ತಿಲ್ಲ.

ಇದೀಗ ಇಂತಹದೇ ಒಂದು ದುಃಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಡಿಯೋದಲ್ಲಿ ಯುವತಿಯೋರ್ವಳು ಯುವಕನೊಬ್ಬನ ಕೈ ಹಿಡಿದು ಬಹು ಮಹಡಿಯ ಕಟ್ಟಡದಲ್ಲಿ ನೇತಾಡುತ್ತಿರುವುದನ್ನು ಕಾಣಬಹುದು. 

ಮತ್ತಷ್ಟು ಓದಿ : ಭಾರತ ಸರ್ಕಾರದ ಹಡಗು ನಿರ್ಮಾಣ ಕಂಪನಿಯಲ್ಲಿ ನೇಮಕಾತಿ ; 8, 10 ಮತ್ತು 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ.!

ಯುವತಿಯ ಇಂಥ ಅಪಾಯಕಾರಿ ಸಾಹಸ ಪ್ರದರ್ಶಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಪುಣೆಯ ಸ್ವಾಮಿ ನಾರಾಯಣ ದೇವಸ್ಥಾನದ ಬಳಿಯಿರುವ ಪಾಳು ಬಿದ್ದ ಬಹು ಮಹಡಿಯ ಕಟ್ಟಡದಲ್ಲಿ ಚಿತ್ರೀಕರಿಸಲಾಗಿದೆ.

ವಿಡಿಯೋದಲ್ಲಿ ಯುವಕನೊಬ್ಬನ ಕೈ ಹಿಡಿದು ಯುವತಿ ನೇತಾಡುತ್ತಿರುವುದನ್ನು ಕಾಣಬಹುದು. ರೀಲ್ಸ್ ಗಾಗಿ ಯುವತಿ ಈ ರೀತಿಯ ಸ್ಟಂಟ್​​ ಮಾಡಿರುವುದು ತಿಳಿದುಬಂದಿದೆ. ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಹಸದಲ್ಲಿ ತೊಡಗಿರುವಾಗ ಆಕೆ ಕ್ಯಾಮರಾದಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು.  

@fpjindia ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವೈರಲ್​​ ಆಗಿತ್ತಿದಂತೆಯೇ ಸ್ಥಳೀಯ ಪೊಲೀಸರು ತಕ್ಷಣ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಮತ್ತಷ್ಟು ಓದಿ : Reel’s Madness : ಕಾರು ರಿವರ್ಸ್ ಗೇರ್‌ನಲ್ಲಿದ್ದಾಗ ಕ್ಲಚ್ ಬದಲು ಎಕ್ಸಲೇಟರ್ ಒತ್ತಿ 300 ಅಡಿ ಪ್ರಪಾತಕ್ಕೆ ಬಿದ್ದು ಯುವತಿ ಸಾವು.!

ವಿಡಿಯೋ ನೋಡಿದ ಅನೇಕ ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.  ರೀಲ್ಸ್​​ಗಾಗಿ ಯುವತಿ ಈ ರೀತಿಯ ಸ್ಟಂಟ್ ಮಾಡುವುದನ್ನು ಕಂಡು ಸಾಕಷ್ಟು ನೆಟ್ಟಿಗರು ​ ಖಂಡಿಸಿದ್ದಾರೆ. ಯುವತಿಯ ರೀಲ್ಸ್​​ ಹುಚ್ಚು ಪ್ರಾಣಕ್ಕೆ ಕಂಟಕವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ” ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ. 

spot_img
spot_img
- Advertisment -spot_img