ಜನಸ್ಪಂದನ ನ್ಯೂಸ್, ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾವಳ್ಳಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಾಗಲಕೋಟೆಯಿಂದ ಮಂಗಳೂರು ಕಡೆಗೆ ಹೊರಟಿದ್ದ KA 19 F 3470 ನಂಬರ್‌ನ ಕೆಎಸ್‌ಆರ್‌ಟಿಸಿ ಬಸ್ (Bus) ಓವರ್‌ಟೇಕ್ ಮಾಡುವ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಭೀಕರ ಅವಘಡ ಸಂಭವಿಸಿದೆ.
ಈ ದುರಂತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರ ಗಾಯಾಳುಗಳಲ್ಲಿ ಸಣ್ಣ ಮಕ್ಕಳೂ ಸೇರಿದ್ದಾರೆ.
ಮೃತರು ಬಾಗಲಕೋಟೆ ಮೂಲದವರು :
ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರು,
- ನಿಲವ್ವ ಹರದೊಳ್ಳಿ (40) – ಬಾದಾಮಿ ತಾಲೂಕಿನ ಗುಳೆದಗುಡ್ಡ ಗ್ರಾಮ.
- ಗಿರಿಜವ್ವಾ ಬೂದನ್ನವರ (30) – ಜಾಲಿಹಾಳ ಗ್ರಾಮ.
- ಇನ್ನೋರ್ವ 45 ವರ್ಷದ ವ್ಯಕ್ತಿ (ಹೆಸರು ಇನ್ನಷ್ಟೇ ಪತ್ತೆಯಾಗಬೇಕು).
ಮೃತರು ಎಲ್ಲರೂ ಬಾಗಲಕೋಟೆ ಮೂಲದವರಾಗಿದ್ದು, ಕೆಲಸದ ನಿಮಿತ್ತ ಮಂಗಳೂರಿಗೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲು :
ಅಪಘಾತಕ್ಕೆ ಕಾರಣವಾದ ಬಸ್ (Bus) ಚಾಲಕ ಯಮನಪ್ಪ ಮಾಗಿ (ಆಲಮಟ್ಟಿ ಗ್ರಾಮ) ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ (Bus) ಚಾಲಕ ಮತ್ತು ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ (Bus) ಅಪಘಾತದ ಹಿನ್ನೆಲೆ :
ಯಲ್ಲಾಪುರ–ಅಂಕೋಲಾ ರಸ್ತೆಯು ದಟ್ಟ ಕಾಡು ಮತ್ತು ಘಟ್ಟ ಪ್ರದೇಶ ಹೊಂದಿದ್ದು ಅಪಾಯಕರ ಹೆದ್ದಾರಿಯಾಗಿ ಪರಿಗಣಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇರಳ ಮೂಲದ ಲಾರಿ ಚಾಲಕ ರಾತ್ರಿ ಇಂಡಿಕೇಟರ್ ಹಾಕದೆ ಕತ್ತಲೆಯಲ್ಲೇ ವಾಹನ ನಿಲ್ಲಿಸಿದ್ದರಿಂದ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಯಿಂದ ಬಸ್ (Bus) ನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಪೊಲೀಸ್ ಪರಿಶೀಲನೆ :
ಯಲ್ಲಾಪುರ ಸಿಪಿಐ ರಮೇಶ್ ಹಾನಾಪುರ, ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಯಲ್ಲಾಪುರ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.
ಬೆಳಗಾವಿ : 30 beauty-parlour ಗಳ ಮೇಲೆ ಆರೋಗ್ಯ ಇಲಾಖೆಯ ದಾಳಿ ; 10 ಸೀಜ್, 20ಕ್ಕೆ ನೋಟಿಸ್.!
ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದಲ್ಲಿ ನಿಯಮ ಉಲ್ಲಂಘನೆ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್ (beauty-parlour) ಗಳ ವಿರುದ್ಧ ಆರೋಗ್ಯ ಇಲಾಖೆ ಬೃಹತ್ ದಾಳಿ ನಡೆಸಿದ್ದು, ಶುಕ್ರವಾರ (ಆ.15) ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನಿರ್ದೇಶನದಂತೆ, ಡಿಎಚ್‌ಒ ಡಾ. ಈಶ್ವರ ಗಡಾದಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 30 ಬ್ಯೂಟಿ ಪಾರ್ಲರ್‌ಗಳನ್ನು ಪರಿಶೀಲಿಸಲಾಯಿತು.
ದಾಳಿಯ ವೇಳೆ ಕೆಲವು ಪಾರ್ಲರ್ (beauty-parlour) ಗಳಲ್ಲಿ ಮೇಕಪ್, ಟ್ರೆಡಿಂಗ್, ವ್ಯಾಕ್ಸಿಂಗ್ ಸೇವೆಗಳ ಬದಲು ಕೂದಲು ಕಸಿ, ಚರ್ಮರೋಗ ಚಿಕಿತ್ಸೆ, ಮತ್ತು ಚರ್ಮದ ಕಾಂತಿ ಹೆಚ್ಚಿಸಲು ಹಾನಿಕಾರಕ ಕೆಮಿಕಲ್ ಹಾಗೂ ಸಿರೈಡ್‌ಗಳಂತಹ ಔಷಧಿಗಳನ್ನು ಬಳಸುತ್ತಿರುವುದು ಪತ್ತೆಯಾಯಿತು.
ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!
ಪರಿಶೀಲನೆಯ ನಂತರ, 10 ಪಾರ್ಲರ್ (beauty-parlour) ಗಳನ್ನು ತಕ್ಷಣ ಸೀಜ್ ಮಾಡಲಾಗಿದ್ದು, 20 ಪಾರ್ಲರ್‌ಗಳಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಪ್ರಕಾರ, ಕೂದಲು ಕಸಿ ಹಾಗೂ ಚರ್ಮ ಚಿಕಿತ್ಸೆಯನ್ನು ಮಾತ್ರ ನುರಿತ ತಜ್ಞ ವೈದ್ಯರು ನಡೆಸಬೇಕು ಎಂಬ ನಿಯಮಗಳಿದ್ದರೂ, ಅನರ್ಹ ಸಿಬ್ಬಂದಿ ಈ ಸೇವೆಗಳನ್ನು ನೀಡುತ್ತಿರುವುದು ಗಂಭೀರ ಆರೋಗ್ಯ ಅಪಾಯವನ್ನು ಉಂಟುಮಾಡುತ್ತಿದೆ.
ಸಾರ್ವಜನಿಕರು ಕೂಡ, “ಅಮಾಯಕ ಮಹಿಳೆಯರು ಮತ್ತು ಯುವತಿಯರ ಮೇಲೆ ಪಾರ್ಲರ್ ಸಿಬ್ಬಂದಿ ಮೋಸ ಮಾಡುತ್ತಿದ್ದಾರೆ. ಹಾನಿಕಾರಕ ಕೆಮಿಕಲ್‌ಗಳಿಂದ ಬ್ಲೀಚಿಂಗ್ ಮತ್ತು ಫೇಸ್‌ವಾಶ್ ಮಾಡುವುದರಿಂದ ಚರ್ಮರೋಗ ತಗುಲುವ ಸಾಧ್ಯತೆ ಹೆಚ್ಚು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Student : ಕೇವಲ 2 ಅಂಕ ಕಡಿಮೆ ನೀಡಿದಕ್ಕೆ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಹಲ್ಲೆ ; ಸಿಸಿಟಿವಿ ದೃಶ್ಯ ವೈರಲ್!”
ಜಿಲ್ಲಾಧಿಕಾರಿ ಅವರ ನಿರ್ಧಾರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವರು, “ನಿಯಮ ಉಲ್ಲಂಘಿಸಿದ ಪಾರ್ಲರ್ (beauty-parlour) ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
“ಸಾರ್ವಜನಿಕರೂ ಪಾರ್ಲರ್ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಹಣ ಕಳೆದುಕೊಳ್ಳುವುದರ ಜೊತೆಗೆ, ಚರ್ಮದ ಆರೋಗ್ಯಕ್ಕೂ ಹಾನಿಯಾಗುವ ಸಾಧ್ಯತೆ ಇದೆ” ಎಂದು ಅಧಿಕಾರಿಗಳ ಎಚ್ಚರಿಕೆ ನೀಡಿದ್ದಾರೆ.