ಜನಸ್ಪಂದನ ನ್ಯೂಸ್, ಮುಂಬೈ : ಮುಂಬೈನ ಚೆಂಬೂರು ಪ್ರದೇಶದ ವಾಶಿ ನಾಕಾ ಕಾಳಿ ಮಾತಾ (Kali Mata) ದೇವಸ್ಥಾನದಲ್ಲಿ 22 ನವೆಂಬರ್ ರಾತ್ರಿ ಅಸಾಮಾನ್ಯ ಘಟನೆ ನಡೆದಿದೆ. ದೇವಿಯ ವಿಗ್ರಹವನ್ನು ಮದರ್ ಮೇರಿ (Mother Mary) ಶೈಲಿಯಲ್ಲಿಅಲಂಕರಿಸಿರುವುದು ಕಂಡುಬಂದ ಕಾರಣ ಭಕ್ತರಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ವಿಷಯ ಗಂಭೀರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಹಸ್ತಕ್ಷೇಪಿಸಿ, ಪ್ರಕರಣ ದಾಖಲಿಸಿ, ಕಾಳಿ ಮಾತಾ (Kali Mata) ದೇವಸ್ಥಾನದ ಪೂಜಾರಿಯನ್ನು ಬಂಧಿಸಿದ್ದಾರೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಮಂದಿ ಟೀಕೆ ಹಾಗೂ ವಿರೋಧಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನು ಓದಿ : ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.
FIR ದಾಖಲು :
23 ನವೆಂಬರ್‌ರಂದು RCF ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 299 ಅಡಿಯಲ್ಲಿ FIR ದಾಖಲಾಗಿದೆ. ದೂರುದಾರ ಅಕಾಶ್ ರಾಜೇಶ್ ಸಿಂಗ್ ಅವರು, ಪ್ರತೀ ಶನಿವಾರ ಭೇಟಿ ನೀಡುವಂತೆ ಈ ಶನಿವಾರವೂ ಸಹ ಅನಿಕ್‌ಗಾಂವ್ (Vashigaon) ಸ್ಮಶಾನದೊಳಗಿನ ಕಾಳಿ ಮಾತಾ (Kali Mata) , ಕಾಳಭೈರವ ಮತ್ತು ಶಿವನ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು.
ಈ ಭೇಟಿಯ ವೇಳೆ ಅಂದರೆ 22 ನವೆಂಬರ್ ರಾತ್ರಿ ಸುಮಾರು 8 ಗಂಟೆಗೆ ದರ್ಶನಕ್ಕೆ ಹೋದಾಗ, ಕಾಳಿ ಮಾತಾ (Kali Mata) ವಿಗ್ರಹವನ್ನು ಕ್ರಿಸ್ತ ಧರ್ಮದ ಮದರ್ ಮೇರಿ ರೀತಿಯಲ್ಲಿ ಅಲಂಕರಿಸಿರುವುದು ಕಂಡು ಬಂದಿತ್ತು. ಘಟನೆ ನೋಡಿದ ಅಕಾಶ್, ತಕ್ಷಣವೇ ಸ್ನೇಹಿತರನ್ನು ಕರೆದು ನಂತರ ಪೊಲೀಸರಿಗೆ ಮಾಹಿತಿ ನೀಡಿದರು.
ವಿಗ್ರಹದ ಅಸಾಮಾನ್ಯ ಅಲಂಕಾರ :
FIR ಪ್ರಕಾರ, ದೇವಿಯ ವಿಗ್ರಹದಲ್ಲಿ ಕೆಳಗಿನ ಬದಲಾವಣೆಗಳು ಕಂಡುಬಂದಿವೆ:
- ವಿಗ್ರಹದ ಶರೀರ ಭಾಗಕ್ಕೆ ಬಿಳಿ ಬಣ್ಣ ಹಚ್ಚಲಾಗಿತ್ತು.
- ಹಳದಿ ಬಟ್ಟೆಯಿಂದ ದೇವಿಯನ್ನು ಮೆರಗಿಸಲಾಗಿತ್ತು.
- ಶಿಶುವಿನಂತೆ ಕಾಣುವ ಗೊಂಬೆಯನ್ನು ವಿಗ್ರಹದ ಬಳಿಯಲ್ಲಿ ಇಡಲಾಗಿತ್ತು.
- ಮದರ್ ಮೇರಿ ಶೈಲಿಯ ಬೆಳ್ಳಿಯ ಕಿರೀಟ.
- ಕಿರೀಟದ ಮೇಲ್ಭಾಗದಲ್ಲಿ ಕ್ರಾಸ್ ಚಿಹ್ನೆ ಕಂಡು ಬಂದಿದ್ದವು.
ಇದನ್ನು ಓದಿ : ಹೆದ್ದಾರಿಯಲ್ಲೇ ಮಲಗಿದ್ದ Tiger ; 30 ನಿಮಿಷ ವಾಹನ ಸಂಚಾರ ಸ್ಥಗಿತ!
ಪೊಲೀಸರು ಸ್ಥಳಕ್ಕೆ ಭೇಟಿ – ಅಲಂಕಾರ ವಶಕ್ಕೆ :
ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ವಿಗ್ರಹದ ಮೇಲೆ ಹಾಕಿದ್ದ ಬಟ್ಟೆ, ಗೊಂಬೆ, ಕಿರೀಟ, ಕ್ರಾಸ್ ಚಿಹ್ನೆ ಸೇರಿ ಎಲ್ಲಾ ವಸ್ತುಗಳನ್ನು ತೆಗೆಯಿಸಿ ವಶಕ್ಕೆ ಪಡೆದುಕೊಂಡರು. ನಂತರ ಭಕ್ತರು ದೇವಿಯ ವಿಗ್ರಹಕ್ಕೆ ಪುನಃ ಅಭಿಷೇಕ ಮತ್ತು ಪೂಜೆ ನೆರವೇರಿಸಿದರು.
ವಾಚ್‌ಮನ್ ಹೇಳಿಕೆ :
ಸ್ಮಶಾನದ ವಾಚ್‌ಮನ್ ಹೇಳಿಕೆಯ ಪ್ರಕಾರ, ದೇವಾಲಯದ ಪೂಜಾರಿ ರಮೇಶ್ ಯೋಗೇಶ್ವರ್ 22 ನೇ ತಾರೀಖು ಸಂಜೆ 8 ಗಂಟೆಗೆ ಮೊದಲು ವಿಗ್ರಹವನ್ನು ಮದರ್ ಮೇರಿ ರೀತಿಯಲ್ಲಿ ಅಲಂಕರಿಸಿದ್ದನ್ನು ತಾನೇ ನೋಡಿದ್ದೇನೆ ಎಂದು ಹೇಳಿದ್ದಾನೆ.
FIRನಲ್ಲಿ, ಈ ಕ್ರಮದಿಂದ ಹಿಂದೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ದೂರುದಾರ ತಿಳಿಸಿದ್ದಾರೆ.
‘ಕಾಲಿ ಮಾತಾ (Kali Mata) ಕನಸಿನಲ್ಲಿ ಬಂದಳು’ – ಪೂಜಾರಿ :
ಘಟನೆ ನಂತರ ಕೆಲವು ಭಕ್ತರು ಪೂಜಾರಿಯನ್ನು ಪ್ರಶ್ನಿಸಿದಾಗ, ಅವರು ನೀಡಿದ ಉತ್ತರ ಇನ್ನಷ್ಟು ವಿವಾದಕ್ಕೆ ಕಾರಣವಾಯಿತು. ಆತನ ಹೇಳಿಕೆ ಪ್ರಕಾರ, “ದೇವಿಯು ನನಗೆ ಕನಸಿನಲ್ಲಿ ಕಾಣಿಸಿಕೊಂಡು, ಈ ರೀತಿಯಾಗಿ ಅಲಂಕರಿಸಬೇಕೆಂದು ಸೂಚಿಸಿದ್ದಳು” ಎಂದಿದ್ದರೆ. ಪೂಜಾರಿಯ ಈ ಹೇಳಿಕೆಯನ್ನು ಭಕ್ತರು, ಸ್ಥಳೀಯ ಸಂಘಟನೆಗಳು ತೀವ್ರವಾಗಿ ಪ್ರಶ್ನಿಸಿ ವಿರೋಧ ವ್ಯಕ್ತಪಡಿಸಿದರು.
ಇದನ್ನು ಓದಿ : Twins ಮಕ್ಕಳಿಗೆ ಜನ್ಮ ನೀಡಿದ 19ರ ಯುವತಿ; ಆದರೆ ತಂದೆಗಳು ವಿಭಿನ್ನರು!
ಪೂಜಾರಿ ಬಂಧನ – ಎರಡು ದಿನಗಳ ಪೊಲೀಸ್ ಕಸ್ಟಡಿ :
ಸ್ಥಳೀಯರು ಪೂಜಾರಿಯನ್ನು RCF ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಪೊಲೀಸರು ವಿಚಾರಣೆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅಲ್ಲಿ ಪೂಜಾರಿಯನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.
ಮುಂದುವರೆದ ಪೊಲೀಸರ ತನಿಖೆ :
ಪೊಲೀಸ್ ಹೇಳಿಕೆ ಪ್ರಕಾರ, ಪೂಜಾರಿ ಹೊರತಾಗಿ ಇನ್ನೊಬ್ಬರು ಸೇರಿದ್ದಾರೆವೇ? ಯಾರಾದರೂ ಪೂಜಾರಿಯನ್ನು ಪ್ರಭಾವಿತರಿಸಿದ್ದಾರೆವೇ? ಯಾವುದೇ ದೊಡ್ಡ ಸಂಚು ಇದೆಯೇ? ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಶ್ರೀಮಂತ ಪ್ರದೇಶವಾಗಿರುವ ಕಾರಣ, ಸಿಸಿಟಿವಿ ದೃಶ್ಯಾವಳಿಗಳನ್ನೂ ಸಂಗ್ರಹಿಸಿ ಪರಿಶೀಲನೆ ಮಾಡಲಾಗುತ್ತಿದೆ.
ಕಾಳಿ ಮಾತೆ (Kali Mata) ಯ ವಿಡಿಯೋ :
Outrage in Chembur as Kalimata Idol Dressed as ‘Mother Mary’; Priest Arrested
A major controversy erupted in Chembur–Vashi Naka after a Kalimata idol was found dressed as ‘Mother Mary’. Devotees were outraged, leading to a police complaint. The priest claimed the goddess… pic.twitter.com/aRZn0K9gYw
— Pune Mirror (@ThePuneMirror) November 24, 2025
ಚಿನ್ನಾಭರಣ ದರೋಡೆ ಪ್ರಕರಣ : ಓರ್ವ PSI ವಜಾ, ಇನ್ನೋರ್ವ ಸಸ್ಪೆಂಡ್.

ಜನಸ್ಪಂದನ ನ್ಯೂಸ್, ದಾವಣಗೆರೆ : ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಚಿನ್ನದ ದರೋಡೆ ಪ್ರಕರಣದಲ್ಲಿ ಓರ್ವ PSI ಅವರನ್ನು ವಜಾ ಮಾಡಿ ಮತ್ತು ಇನ್ನೋರ್ವ PSI avrnfnu ಸಸ್ಪೆಂಡ್ ಮಾಡಿ ಆದೇಶಿಸಿಲಾಗದೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಹಂಸಭಾವಿ ಪೊಲೀಸ್ ಠಾಣೆಯ PSI ಮಾಳಪ್ಪ ಚಿಪ್ಪಲಕಟ್ಟಿ ಸೇವೆಯಿಂದ ವಜಾಗೊಂಡಿದ್ದು, ಶಿವಮೊಗ್ಗ ಜಿಲ್ಲೆ ಸಾಗರ ನಗರ ಪೊಲೀಸ್ ಠಾಣೆಯ PSI ಪ್ರವೀಣಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಮತ್ತು ಇಲಾಖಾ ವಿಚಾರಣೆಗೆ ಕಳುಹಿಸಲಾಗಿದೆ.
ಇದನ್ನು ಓದಿ : “ಯಮನಿಗೂ ತಡೆದ ವೃದ್ಧ : Train ಹಳಿಯ ಬಳಿ ನಡೆದ ಅಚ್ಚರಿಯ ಘಟನೆ ; ವಿಡಿಯೋ ನೋಡಿ,!”
ನವೆಂಬರ್ 24ರಂದು ಬೆಳಗಿನ ಜಾವ, ಈ ಇಬ್ಬರು PSIಗಳು ತಮ್ಮ ಪರಿಚಯದಲ್ಲಿರುವ ಮೂವರನ್ನು ಸೇರಿಸಿಕೊಂಡು ಕಾರವಾರದ ಚಿನ್ನಾಭರಣ ತಯಾರಕ ವಿಶ್ವನಾಥ್ ಆರ್ಕಸಾಲಿ ಅವರನ್ನು ಆಟಿಕೆ ಗನ್ ತೋರಿಸಿ ಬೆದರಿಸಿ 78.15 ಗ್ರಾಂ ಚಿನ್ನದ ಗಟ್ಟಿ ಮತ್ತು ಚಿನ್ನಾಭರಣ ಕಿತ್ತುಕೊಂಡಿದ್ದರು.
ಪ್ರಕರಣದ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಮತ್ತು ಇಬ್ಬರನ್ನೂ ಸೋಮವಾರ ಬಂಧಿಸಲಾಗಿತ್ತು.
ಇದನ್ನು ಓದಿ : IAS ಮಹಾಂತೇಶ್ ಬೀಳಗಿ ಕಾರು ಅಪಘಾತದಲ್ಲಿ ದುರ್ಮರಣ.
ಸಾರ್ವಜನಿಕರ ಸುರಕ್ಷತೆ ಮತ್ತು ನ್ಯಾಯದ ಪಾಲನೆಯ ಹೊಣೆದಾರಿ ಹುದ್ದೆಯಲ್ಲಿ ಇದ್ದವರು, ಈ ಘೋರ ಅಪರಾಧ ಕೃತ್ಯಕ್ಕೆ ಒಳಗಾದ ಕಾರಣ ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ತಿಳಿಸಿದ್ದಾರೆ.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ





