ಜನಸ್ಪಂದನ ನ್ಯೂಸ್, ಚಂಡೀಗಢ : ಹರಿಯಾಣ ಕೇಡರ್ನ ಹಿರಿಯ IPS ಅಧಿಕಾರಿ ಹಾಗೂ ಎಡಿಜಿಪಿ ಹುದ್ದೆಯಲ್ಲಿದ್ದ ವೈ. ಪೂರಣ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣವು ರಾಜ್ಯ ಪೊಲೀಸ್ ಇಲಾಖೆಯನ್ನು ಬೆಚ್ಚಿಬೀಳಿಸಿದೆ. ಚಂಡೀಗಢದ ಸೆಕ್ಟರ್ 11ರಲ್ಲಿ ಅವರ ನಿವಾಸದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, IPS ಅಧಿಕಾರಿ ಪೂರಣ್ ಕುಮಾರ್ ಅವರು ತಮ್ಮ ಸೇವಾ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯಾಗುವ ವೇಳೆ ಅವರು ಮನೆಯಲ್ಲಿ ಏಕಾಂಗಿಯಾಗಿ ಇದ್ದರು.
ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ನೆಲಮಾಳಿಗೆಯಲ್ಲಿ ನಡೆದ ಘಟನೆ :
ವರದಿಗಳ ಪ್ರಕಾರ, IPS ಪೂರಣ್ ಕುಮಾರ್ ತಮ್ಮ ಮನೆಯಲ್ಲಿ ಇರುವ ಧ್ವನಿ ನಿರೋಧಕ (soundproof) ನೆಲಮಾಳಿಗೆಯಲ್ಲಿ ಇದ್ದಾಗ ಗುಂಡು ಹಾರಿಸಿಕೊಂಡಿದ್ದಾರೆ. ಗುಂಡಿನ ಶಬ್ದ ಹೊರಗೆ ಕೇಳಿಸದ ಕಾರಣ, ಯಾರಿಗೂ ಘಟನೆಯ ಬಗ್ಗೆ ತಕ್ಷಣ ಅರಿವಾಗಲಿಲ್ಲ.
ಅವರ ಮಗಳು ಕೆಳಮಹಡಿಗೆ ಹೋದಾಗ ತಂದೆಯು ನೆಲದ ಮೇಲೆ ಬಿದ್ದಿರುವುದನ್ನು ಕಂಡು ಬೆಚ್ಚಿಬಿದ್ದು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಚಂಡೀಗಢ ಪೊಲೀಸ್ ತಂಡ ಹಾಗೂ ವಿಧಿವಿಜ್ಞಾನ ತಜ್ಞರು (forensic experts) ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
School ದಸರಾ ರಜೆ ವಿಸ್ತರಣೆ ; ಕರ್ನಾಟಕ ಸರ್ಕಾರದ ಮಹತ್ವದ ನಿರ್ಧಾರ ಹೀಗಿದೆ.!
ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ ಅಧಿಕಾರಿ :
ವೈ. ಪೂರಣ್ ಕುಮಾರ್ ಹರಿಯಾಣ ಕೇಡರ್ನ ಹಿರಿಯ IPS ಅಧಿಕಾರಿ ಆಗಿದ್ದು, ತಮ್ಮ ಸೇವಾ ಅವಧಿಯಲ್ಲಿ ಅನೇಕ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ಪ್ರಸ್ತುತ ಪೊಲೀಸ್ ತರಬೇತಿ ಕಾಲೇಜಿನಲ್ಲಿ (Police Training College) ಎಡಿಜಿಪಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಅವರ ಪತ್ನಿ ಅಮ್ನೀತ್ ಪಿ. ಕುಮಾರ್, ಹರಿಯಾಣ ಕೇಡರ್ನ IAS ಅಧಿಕಾರಿ ಆಗಿದ್ದು, ಪ್ರಸ್ತುತ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಅಧಿಕೃತ ನಿಯೋಗದೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ.
ನದಿ ದಡದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯನ್ನು ಎಳೆದೊಯ್ದ Crocodile ; ವಿಡಿಯೋ ವೈರಲ್.!
ಆತ್ಮಹತ್ಯೆಯ ಹಿನ್ನೆಲೆ ಇನ್ನೂ ಸ್ಪಷ್ಟವಿಲ್ಲ :
ವೈ. ಪೂರಣ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ (suicide note) ಪತ್ತೆಯಾಗಿಲ್ಲ.
ಮೂಲಗಳ ಪ್ರಕಾರ, ಅವರು ಕಳೆದ ಕೆಲವು ತಿಂಗಳಿಂದ ಆಂತರಿಕ ಅಸಮಾಧಾನ ಮತ್ತು ಇಲಾಖೆಯ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಕಾಲಕಾಲಕ್ಕೆ ಅವರು ಗೃಹ ಸಚಿವ ಅನಿಲ್ ವಿಜ್ ಅವರಿಗೆ ಪತ್ರಗಳನ್ನು ಬರೆದು ಪೋಲೀಸ್ ವ್ಯವಸ್ಥೆಯೊಳಗಿನ ಸಮಸ್ಯೆಗಳನ್ನು ಉಲ್ಲೇಖಿಸುತ್ತಿದ್ದರು ಎನ್ನಲಾಗಿದೆ.
King :15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್ನಲ್ಲಿ ಬಂದಿಳಿದ ಆಫ್ರಿಕನ್ ರಾಜ.!
ತನಿಖೆ ಮುಂದುವರಿದಿದೆ :
ಘಟನಾ ಸ್ಥಳದಿಂದ ರಿವಾಲ್ವರ್ ಹಾಗೂ ಇತರ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫಾರೆನ್ಸಿಕ್ ವರದಿ ಮತ್ತು ಮರಣೋತ್ತರ ಪರೀಕ್ಷೆಯ ನಂತರವೇ ಪ್ರಕರಣದ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.
ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದು, IPS ಅಧಿಕಾರಿಯ ಆತ್ಮಹತ್ಯೆಯ ಹಿನ್ನೆಲೆ ಕುರಿತು ಸಂಪೂರ್ಣ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
Prediabetes : ನಿಮ್ಮಲ್ಲಿ ಬೆಳಿಗ್ಗೆ ಏಳುವಾಗ ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರಿಕೆ ; ಅದು ಈ ರೋಗದ ಆರಂಭಿಕ ಸೂಚನೆ ಆಗಿರಬಹುದು.!
ಕುಟುಂಬದ ಸದಸ್ಯರು ಆಘಾತದಲ್ಲಿ :
ಘಟನೆಯ ಬಳಿಕ IPS ಪೂರಣ್ ಕುಮಾರ್ ಅವರ ಕುಟುಂಬ ಮತ್ತು ಸಹೋದ್ಯೋಗಿಗಳು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಅವರ ಮನೆಯನ್ನು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
Disclaimer: ಈ ಲೇಖನವು ಸಾರ್ವಜನಿಕ ಮಾಧ್ಯಮಗಳಲ್ಲಿ ಲಭ್ಯವಿರುವ ವರದಿಗಳ ಆಧಾರದ ಮೇಲೆ ರಚಿಸಲಾಗಿದೆ. ಇದು ಯಾವುದೇ ನಿರ್ಧಾರಾತ್ಮಕ ಅಥವಾ ಅಧಿಕೃತ ಹೇಳಿಕೆಯಾಗಿಲ್ಲ.
Girl : ನಡು ರಸ್ತೆಯಲ್ಲಿಯೇ 14 ವರ್ಷದ ಬಾಲಕಿಯ ಕುತ್ತಿಗೆ ಹಿಚುಕಿದ ಕಿರಾತಕ.!
ಜನಸ್ಪಂದನ ನ್ಯೂಸ್, ಮೀರತ್ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಿಥೌರ್ ಪ್ರದೇಶದಲ್ಲಿ ನಡೆದ ಒಂದು ಶಾಕಿಂಗ್ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಅಕ್ಟೋಬರ್ 3 ರಂದು ನಡು ಬೀದಿಯಲ್ಲೇ ಯುವಕನೊಬ್ಬ ಅಪ್ರಾಪ್ತ ಬಾಲಕಿಯ (Girl) ಕುತ್ತಿಗೆ ಹಿಡಿದು ಕಿರುಕುಳ ನೀಡಿದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಹಿನ್ನಲೆಯಲ್ಲಿ ಮೀರತ್ ಪೊಲೀಸರು ತಕ್ಷಣ ಸ್ಪಂದಿಸಿದ್ದು, ಆರೋಪಿ ಜಾನು ಅಲಿಯಾಸ್ ಜಾನೆ ಆಲಂ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
King :15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್ನಲ್ಲಿ ಬಂದಿಳಿದ ಆಫ್ರಿಕನ್ ರಾಜ.!
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಗಾಜಿಯಾಬಾದ್ನಿಂದ ತನ್ನ ಅಜ್ಜಿಯ ಗ್ರಾಮಕ್ಕೆ ಭೇಟಿ ನೀಡಲು ಬಂದಿದ್ದ 14 ವರ್ಷದ ಬಾಲಕಿ (Girl) ಯೊಂದಿಗೆ ಆರೋಪಿಯು ವಾಗ್ವಾದ ನಡೆಸಿದ್ದಾನೆ. ಆ ವೇಳೆ ಆತ ಬಾಲಕಿಯ ವಿಡಿಯೋವನ್ನು ಫೋನ್ನಲ್ಲಿ ರಹಸ್ಯವಾಗಿ ರೆಕಾರ್ಡ್ ಮಾಡಿ ಗ್ರಾಮದಲ್ಲಿನ ಇತರರಿಗೆ ಹಂಚಿದ್ದಾನೆ ಎಂಬ ಆರೋಪವಿದೆ.
ಆತ ಎದುರಾದಾಗ ತನ್ನ ಫೋನ್ ಹಿಂತಿರುಗಿಸುವಂತೆ ಒತ್ತಾಯಿಸಿದ್ದಳು. ಆಗ ಕೋಪಗೊಂಡ ಆರೋಪಿ ಆಕೆಯ (Girl) ಕುತ್ತಿಗೆ ಹಿಡಿದು ಹಲ್ಲೆ ನಡೆಸಿದ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!
ಇನ್ನು ಬಾಲಕಿಯ (Girl) ಚೀಕಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸುತ್ತಿದಂತೆಯೇ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಶಹಜಹಾನ್ಪುರ ಕಾಲುವೆ ರಸ್ತೆಯ ಬಳಿ ಭಾನುವಾರ ಬಂಧಿಸಿದ್ದಾರೆ.
ಪೊಲೀಸರು ಬಂಧಿಸಲು ತೆರಳಿದಾಗ “ಓಡಿಹೋಗಲು ಪ್ರಯತ್ನಿಸುತ್ತಿದ್ದ ಆರೋಪಿ ಹೊಂಡಕ್ಕೆ ಬಿದ್ದು ಬಲಗೈ ಮುರಿದುಕೊಂಡನು. ಅವನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕಳುಹಿಸಲಾಗಿದೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಓಯೋ ರೂಂನಲ್ಲಿ ಸ್ನೇಹಿತೆಯ ಜೊತೆ Lover ನನ್ನು ಕಂಡ ಗೃಹಿಣಿ ; ಮುಂದೆ ನಡೆದದ್ದು ಬೆಚ್ಚಿಬೀಳಿಸುವಂತಿತ್ತು.!
ಆರೋಪಿ ವಿರುದ್ಧ ಬಾಲಕಿಯ (Girl) ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪೊಕ್ಸೊ ಕಾಯ್ದೆ (POCSO Act) ಮತ್ತು ಭಾರತೀಯ ದಂಡ ಸಂಹಿತೆಯ (IPC) ಅನ್ವಯ ಸಂಬಂಧಿತ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
ವಿಧಿವಿಜ್ಞಾನ ಮತ್ತು ಡಿಜಿಟಲ್ ಪರೀಕ್ಷೆಗಳು ನಡೆಯುತ್ತಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಸ್ಥಳೀಯ ಜನರಲ್ಲಿ ಆತಂಕ ಉಂಟಾಗಿದ್ದು, ಪೊಲೀಸರು ಬಾಲಕಿಯ (Girl) ಸುರಕ್ಷತೆ ಹಾಗೂ ತನಿಖೆಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿಡಿಯೋ :
मेरठ: 14 साल की लड़की पर सड़क पर हमला, दबंग बना कानून! CCTV में कैद! #मेरठ #CCTV pic.twitter.com/qIMB2aardv
— Arun Kumar (@ArunKum96527953) October 5, 2025