ಶುಕ್ರವಾರ, ನವೆಂಬರ್ 14, 2025

Janaspandhan News

HomeGeneral NewsWife : ನಡುಬೀದಿಯಲ್ಲೇ ಪತ್ನಿಯಿಂದ ಪತಿಗೆ ಹಿಗ್ಗಾಮುಗ್ಗ ಹೊಡೆತ ; ವಿಚಿತ್ರ ಘಟನೆಯ ವಿಡಿಯೋ ವೈರಲ್.!
spot_img
spot_img
spot_img

Wife : ನಡುಬೀದಿಯಲ್ಲೇ ಪತ್ನಿಯಿಂದ ಪತಿಗೆ ಹಿಗ್ಗಾಮುಗ್ಗ ಹೊಡೆತ ; ವಿಚಿತ್ರ ಘಟನೆಯ ವಿಡಿಯೋ ವೈರಲ್.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಉತ್ತರ ಪ್ರದೇಶದ ಕಾನ್ಪುರ (Kanpur, Uttar Pradesh) ನಲ್ಲಿ ಗಂಡ–ಹೆಂಡತಿಯ (husband wife) ಜಗಳ ನಡುಬೀದಿಯಲ್ಲೇ ನಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಸಾಮಾನ್ಯವಾಗಿ ಪತಿ–ಪತ್ನಿ (husband wife) ಯ ಕಲಹಗಳು ಮನೆಯೊಳಗೇ ಮುಗಿಯುತ್ತವೆ. ಆದರೆ ಇದೀಗ ಕಾಲ ಬದಲಾಗಿದೆ. ಸಣ್ಣ ಪುಟ್ಟ ವಿಷಯಗಳನ್ನೇ ದೊಡ್ಡದಾಗಿ ಮಾಡಿ ಜನರ ಮುಂದೆ ಜಗಳ ಮಾಡುವ ದಂಪತಿಗಳ ಘಟನೆಗಳು ಹೆಚ್ಚಾಗುತ್ತಿವೆ.

ನಡುಬೀದಿಯಲ್ಲಿ ಪತಿಯ ಮೇಲೆ ಪತ್ನಿಯ ಆಕ್ರೋಶ :

@gharkekalesh ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ, ಪತ್ನಿ (Wife) ಪತಿಯನ್ನು ಜನಸಮೂಹದ ಮುಂದೆ ಹಿಗ್ಗಾಮುಗ್ಗವಾಗಿ ಹೊಡೆದಿರುವ ದೃಶ್ಯಗಳು ಕಾಣುತ್ತವೆ. ಆರಂಭದಲ್ಲಿ ಕುರ್ಚಿ ಮೇಲೆ ಕುಳಿತಿದ್ದ ಪತಿಯನ್ನು ಕಾಲಿನಿಂದ ಒದ್ದಿಬೀಳಿಸಿದ ಮಹಿಳೆ, ಬಳಿಕ ಆತನ ಮೈಮೇಲೆ ಹತ್ತಿ ನಿರಂತರವಾಗಿ ಬಾರಿಸುತ್ತಾಳೆ.

ಅಲ್ಲದೇ, ಪತಿಯ ತಲೆಯನ್ನು ಚರಂಡಿಯೊಳಗೆ ತಳ್ಳಿ ಮತ್ತೆ ಹೊಡೆದಿರುವುದೂ ದೃಶ್ಯಗಳಲ್ಲಿ ಕಾಣುತ್ತದೆ. ಗಂಡ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ, ಆತನಿಗೆ ಸಾಧ್ಯವಾಗಲಿಲ್ಲ. ಇದನ್ನು ಅಲ್ಲಿ ನೆರೆದಿದ್ದವರು ಮಧ್ಯ ಪ್ರವೇಶಿಸಿ ತಡೆಯದೇ, ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ :

ವಿಡಿಯೋ ವೈರಲ್ – ನೆಟ್ಟಿಗರ ಪ್ರತಿಕ್ರಿಯೆ :

ಸೆಪ್ಟೆಂಬರ್ 17 ರಂದು ಅಪ್‌ಲೋಡ್ ಮಾಡಲಾದ ಈ ವಿಡಿಯೋ ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ. ಬಳಕೆದಾರರೊಬ್ಬರು, “ಈ ಮಹಿಳೆಗೆ ಫೈಟಿಂಗ್ ಸ್ಕಿಲ್ ಇದೆ, ಅವಳು WWE ಯಲ್ಲಿ ಭಾಗವಹಿಸಬಹುದು” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, “ಇದು ನಿಜಕ್ಕೂ ಕಠಿಣ ಸ್ಪರ್ಧೆ!” ಎಂದು ಪ್ರತಿಕ್ರಿಯಿಸಿದ್ದಾರೆ.

ಕೆಲವರು ಹಾಸ್ಯಾತ್ಮಕವಾಗಿ, “ಭಾರತೀಯ ಜೋಡಿಗಳ ಕಲಹ ಹೀಗೆಯೇ ಇರುತ್ತದೆ, ಆದರೆ ಇದು ನಡುಬೀದಿಯಲ್ಲಿ ನಡೆಯುತ್ತಿರುವುದು ಅಚ್ಚರಿ!” ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಸೇತುವೆ ಕೆಳಗೆ ಚೀಲದಲ್ಲಿ ಸುತ್ತಿದ Woman ಶವ ಪತ್ತೆ ; ಶಾಕ್ ಆದ ಸ್ಥಳೀಯರು.!

Woman

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಹೈದರಾಬಾದ್‌ನ ರಾಜೇಂದ್ರನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಿಸ್ಮತ್ಪುರ ಸೇತುವೆ ಕೆಳಗೆ ಯುವತಿ (Woman) ಯೊಬ್ಬರ ಶವ ಪತ್ತೆಯಾದ ಘಟನೆ ಘಟನೆ ಸ್ಥಳೀಯರಲ್ಲಿ ಭಾರೀ ಆತಂಕವನ್ನು ಉಂಟುಮಾಡಿದೆ.

ಚೀಲದಲ್ಲಿ ಸುತ್ತಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಈ ಯುವತಿ  (Woman)  ಯ ಶವವು ಸುಮಾರು ಮೂರು ದಿನಗಳ ಹಿಂದೆ ಕೊಲೆಗೀಡಾಗಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.

ಪಂಪ್ ಇಲ್ಲದೆ Bike Tyre ಗೆ ಗಾಳಿ ತುಂಬಿದ ಯುವಕ ; ವೈರಲ್ ಆದ ವಿಚಿತ್ರ ವಿಡಿಯೋ.!

ಪೊಲೀಸರ ಮಾಹಿತಿಯಂತೆ, ಮೃತೆಯ ವಯಸ್ಸು 25 ರಿಂದ 30 ವರ್ಷದೊಳಗಿನವರಾಗಿರಬಹುದು ಎಂದು ಅಂದಾಜಿಸಲಾಗಿದೆ. ಶವ ಪತ್ತೆಯಾದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರದೇಶವನ್ನು ಸುತ್ತುವರೆದು ಸಾಕ್ಷ್ಯ ಸಂಗ್ರಹ ಕಾರ್ಯ ಕೈಗೊಂಡಿದ್ದಾರೆ.

ಲೈಂಗಿಕ ದೌರ್ಜನ್ಯ ಶಂಕೆ :

ಶವದ ಮೇಲೆ ಬಟ್ಟೆ ಇಲ್ಲದಿರುವುದರಿಂದ, ಯುವತಿ (Woman) ಯ ಮೇಲೆ ಕೊಲೆಗೆ ಮೊದಲು ಲೈಂಗಿಕ ದೌರ್ಜನ್ಯ ನಡೆದಿರಬಹುದೆಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಸಂಭಾವ್ಯ ಕೋಣಗಳನ್ನು ಪರಿಶೀಲಿಸಲು ವಿಶೇಷ ತಂಡವನ್ನು ರಚಿಸಿದ್ದಾರೆ.

“ಬಿಸಿನೀರಿನಲ್ಲಿ ಈ ಪುಡಿ ಬೆರೆಸಿ ಕುಡಿದರೆ ಕೆಟ್ಟ Cholesterol ಬೆಣ್ಣೆಯಂತೆ ಕರಗಿ ಮಾಯವಾಗುತ್ತದೆ.!”
ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ :

ಸಂಭಾವ್ಯ ಶಂಕಿತರನ್ನು ಗುರುತಿಸಲು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಈಗಾಗಲೇ ಪರಿಶೀಲನೆಗೆ ತೆಗೆದುಕೊಂಡಿದ್ದಾರೆ. ತನಿಖೆಗಾಗಿ ಕ್ರೈಂ ತಂಡ ಹಾಗೂ ಫೊರೆನ್ಸಿಕ್ ತಜ್ಞರೂ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.

ಸಾರ್ವಜನಿಕರಿಗೆ ಮನವಿ :

ಹಿರಿಯ ಪೊಲೀಸ್ ಅಧಿಕಾರಿಗಳು ಯುವತಿ (Woman) ಯ ಪ್ರಕರಣದ ಗಂಭೀರತೆಯನ್ನು ಒತ್ತಿ ಹೇಳಿದ್ದು, ಈ ಕುರಿತಾಗಿ ಯಾವುದೇ ಮಾಹಿತಿ ಇರುವವರು ತಕ್ಷಣ ಪೊಲೀಸರಿಗೆ ತಿಳಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ತಲಾಖ್ ಆರೋಪ : ಕೋರ್ಟ್ ಆವರಣದಲ್ಲಿಯೇ ಪತಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗ ಥಳಿಸಿದ Wife.!

ಮೃತ ಯುವತಿ (Woman) ಯ ಗುರುತು ಇನ್ನೂ ಪತ್ತೆಗಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments