ಜನಸ್ಫಂದನ ನ್ಯೂಸ್, ಡೆಸ್ಕ್ : ಪತ್ನಿಯ ಖಾಸಗಿ ದೃಶ್ಯಗಳನ್ನು ರಹಸ್ಯ ಕ್ಯಾಮೆರಾದಲ್ಲಿ ದಾಖಲಿಸಿ, ಅವುಗಳನ್ನು ತೋರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ ಎಂಬ ಗಂಭೀರ ಆರೋಪ ಒಂದು ಪತಿ (Husband) ವಿರುದ್ಧ ಕೇಳಿ ಬಂದಿದೆ.
ಸದ್ಯ ಈ ಘಟನೆ ಪುಣೆಯಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಪತಿ (Husband) ಈ ರೀತಿಯ ವರ್ತಿಸಿದ್ದಾನೆಂದು ಪತ್ನಿಯೋರ್ವಳು ಗಂಭೀರ ಆರೋಪಗಳು ಮಾಡಿದ್ದಾರೆ. ಈ ಪ್ರಕರಣವು ಸಾರ್ವಜನಿಕರಲ್ಲಿ ಆಘಾತ ಮೂಡಿಸಿದ್ದು, ಈ ಪತಿ-ಪತ್ನಿ (Husband and wife) ಇಬ್ಬರೂ ಉನ್ನತ ಸರ್ಕಾರಿ ಅಧಿಕಾರಿಗಳೇ ಆಗಿರುವುದರಿಂದ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ.
ಹಿನ್ನೆಲೆ :
2020ರಲ್ಲಿ ವಿವಾಹವಾದ ಈ ದಂಪತಿ, ಸದ್ಯ ಪುಣೆಯ ಪ್ರಮುಖ ಸರ್ಕಾರಿ ಇಲಾಖೆಯಲ್ಲಿ ಹುದ್ದೆ ಹೊಂದಿದ್ದಾರೆ. ಆದರೆ, ಪತಿ-ಪತ್ನಿ ನಡುವೆ ಹಣಕಾಸು ಸಂಬಂಧಿತ ವಿಚಾರಗಳಲ್ಲಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಪತಿ ತನ್ನ ಪತ್ನಿಗೆ ಕಾರು ಮತ್ತು ಮನೆ ಸಾಲಗಳ ಇಎಂಐ ಪಾವತಿಸಲು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಇದರ ಜೊತೆಗೆ ತವರು ಮನೆಯಿಂದಲೂ ರೂ.1.5 ಲಕ್ಷ ತರಬೇಕೆಂದು ಪತ್ನಿಯ ಮೇಲೆ ಒತ್ತಡ ಹಾಕಿದ್ದರು ಎಂದು ಪತ್ನಿ ಆರೋಪಿಸಿದ್ದಾರೆ.
ಆದರೆ ಪತ್ನಿ ಈ ಎಲ್ಲಾ ಬೇಡಿಕೆಗಳಿಗೆ ನಿರಾಕರಿಸಿದ್ದಾರೆ. ಇನ್ನು ಪತಿ (Husband)ತನ್ನ ನಂಬಿಕೆಯ ವ್ಯಕ್ತಿಯಲ್ಲ ಎಂಬುದು ಸಾಬೀತು ಪಡಿಸುವ ಕೃತ್ಯ ಮಾಡಿದ್ದಾನೆ ಎಂದು 30 ವರ್ಷದ ಸಂತ್ರಸ್ತೆ ಪತ್ನಿ ಆರೋಪಿಸಿದ್ದಾರೆ.
ಸ್ನಾನಗೃಹದಲ್ಲಿ ರಹಸ್ಯ ಕ್ಯಾಮೆರಾ ಇಟ್ಟ ಪತಿ (Husband) :
ಮನೆಯ ಬಾತ್‌ರೂಮಿನಲ್ಲಿ ಗುಪ್ತವಾಗಿ ಕ್ಯಾಮೆರಾ ಅಳವಡಿಸಿ, ಪತ್ನಿಯ ಸ್ನಾನದ ವಿಡಿಯೋಗಳನ್ನು ಪತಿ ಚಿತ್ರೀಕರಿಸಿದ್ದಾನೆ. ನಂತರ ಆ ದೃಶ್ಯಗಳನ್ನು ತೋರಿಸಿ, ಒಂದು ವೇಳೆ ನೀನು ಹಣ ನೀಡದಿದ್ದರೆ ಈ ವಿಡಿಯೋವನ್ನು ಬೇರೆಯವರಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಪತಿ (Husband) ಯ ಈ ರೀತಿಯ ವರ್ತನೆಯಿಂದ ಆಘಾತಕ್ಕೊಳಗಾದ ಪತ್ನಿ, ಮಾನಸಿಕವಾಗಿ ಹಾಗೂ ದೈಹಿಕ ಹಿಂಸೆಗೂ ಒಳಗಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ತನ್ನ ಪತಿ ಹಾಗೂ ಆತನ ಕುಟುಂಬದ ಸದಸ್ಯರು ತನ್ನ ಮೇಲೆ ಹಣಕ್ಕಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಸಂತ್ರಸ್ತೆ ಪತ್ನಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ IPC ನ ಅನೇಕ ಗಂಭೀರ ಸೆಕ್ಷನ್‌ಗಳಡಿ ಕೇಸು ದಾಖಲಿಸಲಾಗಿದೆ.
ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ವ್ಯಕ್ತಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪತಿ ಹಾಗೂ ಇತರ ಆರು ಜನರ ವಿರುದ್ಧ ಕೇಸು ದಾಖಲಾಗಿದೆ. ಹಾಗೂ ಆರೋಪಿ ಪತಿ (Husband) ಬಳಿ ಇದ್ದ ತಾಂತ್ರಿಕ ಸಾಕ್ಷ್ಯಗಳು, ವಿಡಿಯೋ ದೃಶ್ಯಾವಳಿಗಳನ್ನು ಪರೀಕ್ಷೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಗೌಪ್ಯತೆ ಮತ್ತು ನ್ಯಾಯಕ್ಕೆ ಒತ್ತಾಯ :
ಈ ಪ್ರಕರಣವು ಮಹಿಳೆಯರು ತಮ್ಮದೇ ಮನೆಯೊಳಗೆಯೂ ಸುರಕ್ಷಿತವಾಗಿಲ್ಲವೋ ಎಂಬ ಭಾವನೆ ಮೂಡಿಸುತ್ತದೆ. ತಕ್ಷಣದ ಪೊಲೀಸ್ ಕ್ರಮಕ್ಕೆ ನಿಗದಿತ ಮಹಿಳಾ ಸಂಘಟನೆಗಳು ಧ್ವನಿ ಎತ್ತಿದ್ದು, ಮಹಿಳೆಯ ಗೌಪ್ಯತೆ ಉಲ್ಲಂಘನೆಗೆ ಗಂಭೀರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿವೆ.