Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಷ್ಟು ಗ್ಲಾಸ್ ನೀರು ಕುಡಿಯಬೇಕು ಗೊತ್ತಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಕೂಡ ನಮ್ಮ ನಿತ್ಯದ ಕೆಲವು ಕ್ರಮದಲ್ಲಿ ಒಂದಾಗಿದೆ. ದೇಹವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನೀರು ಅತೀ ಅಗತ್ಯವಾಗಿರುವುದು.

ದಿನಾಲೂ ಎದ್ದ ಕೂಡಲೇ ಒಂದು ದೊಡ್ಡ ಲೋಟ ನೀರು ಕುಡಿದರೆ ಅದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶವು ಹೊರಗೆ ಹೋಗುವುದು. ನೀವು ತಣ್ಣೀರು, ಬಿಸಿ ನೀರು ಅಥವಾ ಲಿಂಬೆ ನೀರು ಕುಡಿಯುತ್ತೀರಾ ಎನ್ನುವುದು ನಿಮಗೆ ಬಿಟ್ಟಿರುವ ವಿಚಾರ.

ಇದನ್ನು ಓದಿ : ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್‌, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹುದ್ದೆಗಳ ಭರ್ತಿಗೆ KPSC ಗೆ ಪ್ರಸ್ತಾವಣೆ.!

ಆದರೆ ಬೆಳಗ್ಗೆ ಎದ್ದ ಬಳಿಕ ನೀರು ಕುಡಿಯಲು ಮಾತ್ರ ಮರೆಯಬೇಡಿ.

ಹಲವು ಸಂಶೋಧನೆಗಳು ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಎಂದು ಕೂಡ ಕಂಡುಕೊಂಡಿವೆ. ನಮ್ಮ ದೇಹದಲ್ಲಿ ಶೇ.70ರಷ್ಟು ನೀರಿನಾಂಶವಿರುವ ಕಾರಣದಿಂದಾಗಿ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಲಾಭಕಾರಿ ಎಂದು ಹೇಳಲಾಗುತ್ತದೆ.

ದೇಹದಲ್ಲಿ ದ್ರವಾಂಶವನ್ನು ಕಾಯ್ದುಕೊಳ್ಳಲು ನೀರು ಕುಡಿಯಬೇಕು. ಪ್ರತೀ ದಿನ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ಪ್ರತಿರೋಧಕ ವ್ಯವಸ್ಥೆಗೆ ತುಂಬಾ ಲಾಭಕಾರಿ ಎಂದು ಪರಿಗಣಿಸಲಾಗಿದೆ. ಇದರಿಂದ ಸೋಂಕಿನ ವಿರುದ್ಧ ಹೋರಾಡಲು ನೆರವಾಗುವುದು.

ಮೂತ್ರ ವಿಸರ್ಜನೆ ಮಾಡುವ ವೇಳೆ ವಿಷಕಾರಿ ಅಂಶಗಳು ದ್ರವ ರೂಪದಲ್ಲಿ ಹೊರಗೆ ಹೋಗುವುದು. ನೀವು ಹೆಚ್ಚು ನೀರು ಕುಡಿದರೆ ಆಗ ಶೌಚಾಲಯಕ್ಕೆ ಹೆಚ್ಚು ಸಲ ಹೋಗಬೇಕಾಗುತ್ತದೆ. ಇದರಿಂದ ದೇಹದಲ್ಲಿನ ವಿಷಕಾರಿ ಅಂಶ ಕೂಡ ಹೊರಗೆ ಹೋಗುವುದು ಮತ್ತು ಹೊಟ್ಟೆ ಉಬ್ಬರ ತಡೆಯಬಹುದು.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ತೂಕ ಇಳಿಸುವ ಶ್ರಮಕ್ಕೆ ಇನ್ನಷ್ಟು ಫಲ ಸಿಗಲಿದೆ. ಯಾಕೆಂದರೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ಶೇ.25ರಷ್ಟು ಚಯಾಪಚಯ ಕ್ರಿಯೆಯು ವೃದ್ಧಿಸುವುದು. ಚಯಾಪಚಯ ಕ್ರಿಯೆ ವೃದ್ಧಿಸಿದರೆ ಆಗ ಜೀರ್ಣಕ್ರಿಯೆಯು ವೇಗ ಪಡೆಯುವುದು ಮತ್ತು ತೂಕ ಕಳೆದುಕೊಳ್ಳಲು ಇದು ಸಹಕಾರಿ.

ನಿರ್ಜಲೀಕರಣವು ತಲೆನೋವಿಗೆ ಪ್ರಮುಖ ಕಾರಣವಾಗಿದೆ ಮತ್ತು ಆಗಾಗ ನೀರು ಕುಡಿಯುತ್ತಲಿದ್ದರೆ ಅದರಿಂದ ತಲೆನೋವನ್ನು ಕೂಡ ನಿವಾರಣೆ ಮಾಡಬಹುದು. ಖಾಲಿ ಹೊಟ್ಟೆಯಲ್ಲಿ ಮತ್ತು ಹೆಚ್ಚು ಪ್ರಮಾಣದಲ್ಲಿ ನೀರು ಸೇವಿಸಿದರೆ ಅದರಿಂದ ಬಾಯಿ ಮತ್ತು ಹಲ್ಲಿನ ಸಮಸ್ಯೆ ದೂರವಿಡಬಹುದು.

ಹೊಟ್ಟೆಯಲ್ಲಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ಸುಗಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದು. ಹೆಚ್ಚು ನೀರು ಸೇವಿಸಿದ ವೇಳೆ ಕರುಳಿನ ಇರುವಂತಹ ತ್ಯಾಜ್ಯವು ಹೊರಗೆ ಹಾಕಲು ಅವಸರ ಪಡುವುದು.

ನೀರು ಕುಡಿಯುವುದರಿಂದ ಕರುಳು ಕೂಡ ಸ್ವಚ್ಛವಾಗುವ ಕಾರಣದಿಂದಾಗಿ ನಿಮಗೆ ಬೆಳಗ್ಗೆ ಬೇಗನೆ ಹಸಿವಾಗುವುದು ಮತ್ತು ಸರಿಯಾಗಿ ಉಪಾಹಾರ ಕೂಡ ಮಾಡಬಹುದು.

ಇದನ್ನು ಓದಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.!

ಖಾಲಿ ಹೊಟ್ಟೆಯಲ್ಲಿ ಎಷ್ಟು ಗ್ಲಾಸ್ ನೀರು ಕುಡಿಯಬೇಕು.?
ಬೆಳಗ್ಗೆ ಎದ್ದ ಕೂಡಲೇ 1 ದೊಡ್ಡ ಲೋಟದಲ್ಲಿ ನೀರನ್ನು ಕುಡಿಯಬೇಕು. ದಿನ ಕಳೆದಂತೆ ಇದರ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಬೇಕು. ಹಲ್ಲುಜ್ಜುವ ಮೊದಲು ನೀರು ಕುಡಿಬೇಕು. ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆ ಸುಧಾರಣೆ ಆಗುವುದು ಮತ್ತು ಚಯಾಪಚಯ ಕ್ರಿಯೆಗೆ ಇದು ಸಹಕಾರಿ. ನೀರು ಜೀರ್ಣಕ್ರಿಯೆಯನ್ನು ಉತ್ತೇಜಿಸುವುದು ಮತ್ತು ದಿನದ ಕಾರ್ಯಗಳಿಗೆ ಸಜ್ಜಾಗುವಂತೆ ಮಾಡುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img