Sunday, September 8, 2024
spot_img
spot_img
spot_img
spot_img
spot_img
spot_img
spot_img

Health : ಅತಿಯಾದ ಬಾಯಾರಿಕೆ ಈ ರೋಗದ ಲಕ್ಷಣವಾಗಿರಬಹುದು.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಯಾವಾಗ ದೇಹದಿಂದ ನಿರ್ಜಲೀಕರಣ (dehydration) ಸಮಸ್ಯೆ ಎದುರಾಗುತ್ತದೆ. ಆ ಸಂದರ್ಭದಲ್ಲಿ ಅತಿಯಾದ ಬಾಯಾರಿಕೆ ಕಂಡು ಬರುತ್ತದೆ. ಸಕ್ಕರೆ ಪ್ರಮಾಣ ರಕ್ತದಲ್ಲಿ ಏರಿಕೆ ಆದಂತೆ ಬಾಯಾರಿಕೆ ಕೂಡ ಹೆಚ್ಚಾಗುತ್ತದೆ.

ಈ ವೇಳೆ ನಮ್ಮ ದೇಹ ನೀರಿನ ಪ್ರಮಾಣವನ್ನು ಹೆಚ್ಚಾಗಿ ದೇಹದಲ್ಲಿಯೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ.

ಇದನ್ನು ಓದಿ : ವೈರಲ್‌ ವಿಡಿಯೋ : ರೂ.33,000 ದಂಡ ಸಾಕಾಗಲಿಲ್ಲ ಅಂತ ಮತ್ತೆ ಹೆಚ್ಚುವರಿಯಾಗಿ ರೂ.47,500 ಫೈನ್ ಹಾಕಿದ ಟ್ರಾಫಿಕ್ ಪೊಲೀಸ್..!

ಬಾಯಾರಿಕೆ ಈ ರೋಗದ ಲಕ್ಷಣವಾಗಿರಬಹುದು :
* ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿದ್ದು, ಸಕ್ಕರೆ ಕಾಯಿಲೆಗೆ (diabetes) ಇರುವ ಮಾನದಂಡ ಗಳನ್ನು ಯಾವ ವ್ಯಕ್ತಿ ಪೂರೈಸುವುದಿಲ್ಲ ಅಂತಹ ವ್ಯಕ್ತಿ ಸದ್ಯದಲ್ಲಿಯೇ ಸಕ್ಕರೆ ಕಾಯಿಲೆ ಕಂಡುಕೊಳ್ಳುವ ಸಾಧ್ಯತೆ ಇರುತ್ತದೆ.
ಏಕೆಂದರೆ ಅದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಬಗೆಯ ರೋಗ ಲಕ್ಷಣಗಳು ಕಾಣಿಸುತ್ತಿರುತ್ತವೆ.

ನಮ್ಮ ದೇಹ ಹೆಚ್ಚುವರಿ ಸಕ್ಕರೆ ಪ್ರಮಾಣವನ್ನು (extra sugar amount) ಮೂತ್ರದ ಮೂಲಕ ಹೊರಹಾಕಲು ಪ್ರಯತ್ನಿಸುತ್ತದೆ. ಈ ಸಂದರ್ಭದಲ್ಲಿ ದೇಹದಿಂದ ನೀರಿನ ಅಂಶ ಕೂಡ ನಷ್ಟವಾಗುತ್ತದೆ.​

ಸಕ್ಕರೆ ಕಾಯಿಲೆ ಇರುವ ಜನರಲ್ಲಿ ಹೆಚ್ಚಿನ ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು, ಕಣ್ಣು ಮಂಜಾಗುವುದು ಇತ್ಯಾದಿ ಕಾಣಿಸುತ್ತಿರುತ್ತದೆ. ಇದು ಮಧುಮೇಹದ ಲಕ್ಷಣವಾಗಿದ್ದು, ಕಿಡ್ನಿಗಳು (kidney), ರಕ್ತನಾಳಗಳು, ಕಣ್ಣುಗಳು ಹಾಗೂ ನರಮಂಡಲಕ್ಕೆ ಸಮಸ್ಯೆ ಇರುತ್ತದೆ.

ಇತರ ಕಾರಣಗಳು :
ಸದಾ ಬಿಸಿಲಿನಲ್ಲಿ ಬಳಲುವುದರಿಂದ.

ಬಹು ದಿನಗಳವರೆಗೆ ಯಾವುದೋ ಕಾಯಿಲೆಗೆ ತುತ್ತಾಗಿ ದೇಹವು ಸೊರಗಿದ್ದಾಗ.

ಮದ್ಯಸೇವನೆಯ ವ್ಯಸನ.

ಭಯ, ಶಾರೀರಿಕ ಶ್ರಮ, ದುಃಖ, ಸಿಟ್ಟು (angry) ಮೊದಲಾದ ಸ್ಥಿತಿಗಳಲ್ಲಿ.

ಕ್ಷಾರ/ಉಪ್ಪು, ಹುಳಿ, ಖಾರ, ಉಷ್ಣ ಆಹಾರಗಳ ಸೇವನೆ, ಜಿಡ್ಡುರಹಿತ, ಒಣಕಲು ಆಹಾರ ಸೇವನೆ.

ದೇಹದಲ್ಲಿ ಪಿತ್ತ-ವಾತದೋಷಗಳು ಹೆಚ್ಚಿ, ತಂಪಿನಂಶವನ್ನು ಕಡಿಮೆಮಾಡಿ, ನಾಲಿಗೆ, ಗಂಟಲು, ಬಾಯಿ, ತುಟಿ, ಶ್ವಾಸಕೋಶಗಳನ್ನು ಒಣಗಿಸಿ ಅತಿಯಾದ ಬಾಯಾರಿಕೆಯನ್ನು (excessive thirst) ಉಂಟುಮಾಡುತ್ತವೆ.

ಸಂಪೂರ್ಣವಾಗಿ ಆಹಾರವನ್ನು ತ್ಯಜಿಸಿ ಉಪವಾಸದಲ್ಲಿ ತೊಡಗಿಕೊಳ್ಳುವುದು.

ಪರಿಹಾರಗಳು :
ತಣ್ಣೀರಿನಲ್ಲಿ ಪಾದವನ್ನು ಮುಳುಗಿಸಿಟ್ಟುಕೊಳ್ಳುವುದು.

ತಲೆಗೆ ಮೊಸರು (curd) ಮತ್ತು ನೆಲ್ಲಿಪುಡಿಯ ಕಲ್ಕವನ್ನು ಲೇಪಿಸಿ ಒಣಗದಂತೆ ಒಂದೆರಡು ಗಂಟೆ ತೇವ ಮಾಡುತ್ತಾ ಇಟ್ಟುಕೊಳ್ಳುವುದು.

ಮೂಗಿಗೆ ಎದೆಹಾಲು ಅಥವಾ ಹಸುವಿನ ಹಾಲು ಅಥವಾ ಕಬ್ಬಿನ ರಸವನ್ನು (sugar juice) ಹನಿಸುವುದು. ಗಂಟಲಿಗೆ ಬರುವಷ್ಟಾದರೂ ಹನಿಗಳನ್ನು ಬಿಡುವುದು.

ಶುದ್ಧವಾದ ಮಳೆಯ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ಜೇನುತುಪ್ಪವನ್ನು (honety) ಬೆರೆಸಿ ಕುಡಿಯುವುದು.

ಕಾಯಿಸಿ ಆರಿಸಿದ ನೀರಿನಲ್ಲಿ ಕಲ್ಲುಸಕ್ಕರೆಯನ್ನು ಬೆರೆಸಿ ಕುಡಿಯುವುದು.

ಬೆಲ್ಲವನ್ನು ತಿಂದು ತಣ್ಣೀರನ್ನು ಕುಡಿಯುವುದು.

ಇದನ್ನು ಓದಿ : Bike ಕಡಿಮೆ ಮೈಲೇಜ್ ನೀಡುತ್ತಿದೆಯೇ.? : ಹೀಗೆ ಮಾಡಿದ್ರೆ ಲೀಟರ್‌ಗೆ 90 ಕಿ.ಮೀ. ಮೈಲೆಜ್ ಪಕ್ಕಾ.!?

ಕಬ್ಬಿನ ರಸವನ್ನು ಕುಡಿಯುವುದು.

ಹಾಲಿನ ಖೀರು, ಕೆಂಪಕ್ಕಿಯ ಗಂಜಿ ಅಥವಾ ಪಾಯಸ ಆಹಾರವಾಗಿ ಸೇವಿಸುವುದು.

ಜವೆಗೋಧಿಯನ್ನು ಬೇಯಿಸಿ ಗಂಜಿ ಬಸಿದು ಜೇನುತುಪ್ಪವನ್ನು ಬೆರೆಸಿ (mix) ಕುಡಿಯುವುದು.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಜನಸ್ಪಂದನ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img