ಜನಸ್ಪಂದನ ನ್ಯೂಸ್, ಡೆಸ್ಕ್ : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕುರಿತಾದ ಹತ್ತು ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
ಅಂತೆಯೇ ದೈತ್ಯ ಹಾವೊಂದು (A giant snake) ರಸ್ತೆ ದಾಟಲು ಯತ್ನಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನು ಓದಿ : IT : ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಟ್ರಾಫಿಕ್ ಮಧ್ಯೆ ಏಕಾಏಕಿ ಕಾಣಿಸಿಕೊಂಡ ಈ ದೈತ್ಯ ಹಾವು, ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ. ಬ್ರೆಜಿಲ್ನ (Brazil) ಪೋರ್ಟೊ ವೆಲ್ಹೋ ನಗರದ ಬಳಿ ಕಂಡು ಬಂದಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಇನ್ನೂ ಈ ಹಾವು ಸರಿ ಸುಮಾರು ನಾಲ್ಕು ಮೀಟರ್ ಉದ್ದ ಮತ್ತು 30 ಕೆಜಿ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.
@Rainmaker1973 ಎಂಬ ಟ್ವಿಟರ್ ಖಾತೆಯಲ್ಲಿ ಈ ಬೃಹತ್ ಗಾತ್ರದ ಹಾವಿನ ವಿಡಿಯೋ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಕಂಡು ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಸದ್ಯ ಈ ವಿಡಿಯೋ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ.
ವೈರಲ್ ವಿಡಿಯೋದಲ್ಲಿ ಹಾವು ನಿಧಾನವಾಗಿ ತೆವಳುತ್ತಿದೆ. ಈ ವೇಳೆ ಅಲ್ಲಿ ವಾಹನಗಳು ಚಲಿಸುತ್ತಿವೆ. ಅಲ್ಲಿದ್ದ ಜನರು ಕಂಡು ವಾಹನ ಸವಾರರು ಸಹ ನಿಧಾನವಾಗಿ ಕಾರು ಚಲಾಯಿಸುತ್ತಿದ್ದಾರೆ.
ಇದನ್ನು ಓದಿ : ಹೃದಯವನ್ನು ಒಂದ್ ಸೆಕೆಂಡ್ ಸ್ತಬ್ಧಗೊಳ್ಳುವಂತೆ ಮಾಡುತ್ತದೆ ಈ Viral Video.!
ಆ ಬಳಿಕ ಹಾವು ರಸ್ತೆ ದಾಟಿ ಕಾಡಿನೊಳಗೆ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ದೈತ್ಯ ಹಾವು ಪ್ರತ್ಯಕ್ಷವಾಗುತ್ತಿದ್ದಂತೆ ಸಾಕಷ್ಟು ಜನರು ಸೇರಿದ್ದು, ತಮ್ಮ ಮೊಬೈಲ್ ಮೂಲಕ ಈ ಹಾವಿನ ವಿಡಿಯೋ ಸೆರೆಹಿಡಿದ್ದಿದ್ದಾರೆ.
ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹರಿದಾಡುತ್ತಿದೆ.
Traffic on a busy road in Brazil halted after the people spotted a giant anaconda crossing the highway near the city of Porto Velho, Brazil.
The snake was about over four-meters long and weighted around 30 kilograms.pic.twitter.com/dmkBH8Vn8l
— Massimo (@Rainmaker1973) June 2, 2024