Friday, June 14, 2024
spot_img
spot_img
spot_img
spot_img
spot_img
spot_img

ಹೃದಯವನ್ನು ಒಂದ್ ಸೆಕೆಂಡ್ ಸ್ತಬ್ಧಗೊಳ್ಳುವಂತೆ ಮಾಡುತ್ತದೆ ಈ Viral Video.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ವಾಸ್ತವ ಮತ್ತು ಕಲ್ಪನೆ ಮತ್ತು ಸೇರಿಸಿ ಮಾಡುವ ಆಕರ್ಷಕ ವಿಡಿಯೋಗಳಿಗೆ (video) ಹೆಸರುವಾಸಿಯಾಗಿರುವ ಪ್ರತಿಭಾವಂತ 3ಡಿ ಕಲಾವಿದ (3D artist) ಮಜಿದ್ ಮೌಸವಿ ಇದೀಗ ಮತ್ತೊಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ಜಾಗೃತಗೊಳಿಸುವಂತೆ ಮಾಡಿದ್ದಂತೂ ಸುಳ್ಳಲ್ಲ. ವಾಹನ ಚಾಲನೆ ಮಾಡುವಾಗ ವೇಗದ ಮಿತಿಗಳನ್ನು (Speed ​​limits) ಅನುಸರಿಸುವ ಪ್ರಾಮುಖ್ಯತೆಯನ್ನು ಈ ವಿಡಿಯೋ ಮೂಲಕ ತಿಳಿಸಲಾಗಿದೆ.

ಇದನ್ನು ಓದಿ : SER : ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 1,202 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ವೈರಲ್ ಆಗಿರುವ ಈ ವಿಡಿಯೋ ಅಜಾಗರೂಕ ಚಾಲನೆಯ ಪರಿಣಾಮಗಳ ಕುರಿತು ತಿಳಿಸುತ್ತದೆ. ಖಾಲಿ ರಸ್ತೆಯಲ್ಲಿ ಬೈಕರ್ ವೇಗವಾಗಿ ವಾಹನ ಚಲಾಯಿಸುವುದನ್ನು ವಿಡಿಯೋದಲ್ಲಿ ನೋಡಬಹುದು.

ಒಬ್ಬ ಬೈಕ್ ಸವಾರ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಾನೆ. ಆಗ ಅವನು ರಸ್ತೆಯ ಇನ್ನೊಂದು ಬದಿಗೆ ಚಲಿಸುತ್ತಾನೆ. ಬಳಿಕ ವೇಗವಾಗಿ ಬರುವ ಟ್ರಕ್‌ ಗೆ ಡಿಕ್ಕಿಯಾಗುತ್ತಾನೆ. ಅಲ್ಲಿಗೆ ಒಂದು ವಿಡಿಯೋ ಕ್ಲಿಪ್ ನಿಲ್ಲುತ್ತದೆ.

ಇನ್ನೊಂದು ಕ್ಲಿಪ್ ನಲ್ಲಿ ರಸ್ತೆ ಬದಿಯಲ್ಲಿ ನಿಂತಿರುವ ಭೂತದ ಆಕೃತಿಯನ್ನು ಕಾಣಬಹುದು. ವಿಡಿಯೋದಲ್ಲಿ ಬೈಕರ್ ಮತ್ತು ಟ್ರಕ್ ಡ್ರೈವರ್ ನಡುವಿನ ಅಪಘಾತವನ್ನು ತೋರಿಸಲಾಗಿದೆ.

ಇದನ್ನು ಓದಿ : ಖಾಲಿ ಸಿಲಿಂಡರ್ ಮೇಲೆ ಯುವತಿ Dance ; ಕೊನೆಗೆ ಏನಾಯ್ತು ನೀವೇ ನೋಡಿ.!

ಈ ವಿಡಿಯೋವನ್ನು ವಾರದ ಹಿಂದೆ ಇನ್ ಸ್ಟಾ ಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದು 156 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು (views) ಪಡೆದಿದೆ. ಪೋಸ್ಟ್ 11 ಮಿಲಿಯನ್ ಲೈಕ್‌ಗಳನ್ನು ಪಡೆದಿದ್ದು, ಬಹಳಷ್ಟು ಜನರು ತಮ್ಮ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.

ಒಬ್ಬರು ಇದು ಆಟ ಎಂದು ಹೇಳುವವರಿಗೆ ಇದು ನಿಜ ಜೀವನದಲ್ಲಿಯೂ ನಡೆಯುತ್ತದೆ. ಜಾಗರೂಕರಾಗಿರಿ ಎಂದು ಕಮೆಂಟ್ ಮಾಡಿದ್ದಾರೆ. ರಸ್ತೆಗಳಲ್ಲಿ ಜಾಗರೂಕರಾಗಿರಬೇಕು. ಅದು ಖಾಲಿಯಾಗಿರುವುದರಿಂದ ಅಜಾಗರೂಕರಾಗಿರಬೇಕೆಂದು ಅರ್ಥವಲ್ಲ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಓ ದೇವರೇ. ನಾನು ತುಂಬಾ ಹೆದರುತ್ತಿದ್ದೆ. ನಾನು ಬೈಕ್ ಓಡಿಸುತ್ತಿದ್ದೇನೆ (bike ride) ಎಂದು ಭಾವಿಸಿದೆ ಮತ್ತು ಸಣ್ಣ ಹೃದಯಾಘಾತವಾದಂತಾಯಿತು (heart attack) ಎಂದು ಮತ್ತೊಬ್ಬ ಕಮೆಂಟ್ ಮಾಡಿದ್ದಾರೆ.

 

View this post on Instagram

 

A post shared by Majid Mousavi (@shatoot3d)

spot_img
spot_img
- Advertisment -spot_img