Friday, June 14, 2024
spot_img
spot_img
spot_img
spot_img
spot_img
spot_img

ಇಂಟರ್ನೆಟ್ ಇಲ್ಲದಿದ್ದರೂ WhatsAppನಲ್ಲಿ ಮೆಸೇಜ್, ಕಾಲ್ ಮಾಡಬೇಕೆ.? ಇಲ್ಲಿದೆ ಸುಲಭ ಟ್ರಿಕ್.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಇಂದಿನ ಯುಗವೂ ಸ್ಮಾರ್ಟ್ ಫೋನ್ ಗಳ ಯುಗವೆಂದರೆ ತಪ್ಪಾಗಲಾರದು. ನೀವು ಮೆಸೇಜ್ ಕಳುಹಿಸಲು WhatsApp ಅಪ್ಲಿಕೇಶನ್ ಅನ್ನು ಬಳಸುತ್ತೀರಿ. ಅದು‌‌ ಇಂಟರ್ನೆಟ್ ವ್ಯವಸ್ಥೆ ಇದ್ದಾಗ ಮಾತ್ರ.

ಆದರೆ, ಇಂಟರ್ನೆಟ್ (internet) ಇಲ್ಲದಿದ್ದರೂ ವಾಟ್ಸಪ್‌ನಲ್ಲಿ ಮೆಸೇಜ್‌ಗಳನ್ನು (messages) ಕಳುಹಿಸಬಹುದು ಎಂಬುದು ನಿಮಗೆ ಗೊತ್ತೇ.?

ಇದನ್ನು ಓದಿ : ತನ್ನ ಪುಟ್ಟ ಮಕ್ಕಳ ಮುಂದೆಯೇ ತಂದೆಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿ ; Video Viral.!

ನಿಮ್ಮ ಕಾಂಟಾಕ್ಟ್ ಲಿಸ್ಟ್ ನಲ್ಲಿರುವವರಿಗೆ ಫ್ರೀಯಾಗಿ ಮೆಸೇಜ್‌ಗಳನ್ನು ಕಳುಹಿಸಬಹುದು. ಬಹುತೇಕ ವಾಟ್ಸಪ್ ಬಳಕೆದಾರರಿಗೆ ಈ ಫೀಚರ್‌ ಬಗ್ಗೆ ತಿಳಿದಿಲ್ಲ. ಹಾಗಿದ್ರೆ, ಯಾವುದು ಈ ಟ್ರಿಕ್? ಈ ಫೀಚರ್ ಬಳಸುವುದು ಹೇಗೆ? ಅಂತ ಮುಂದೆ ತಿಳಿಯಿರಿ.

ವಾಟ್ಸಪ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಪ್ರಾಕ್ಸಿ ಫೀಚರ್ (Proxy feature) ಅನ್ನು ಒದಗಿಸುತ್ತದೆ. ಈ ಫೀಚರ್‌ನ ಮೂಲಕ ನೀವು ಇಂಟರ್ನೆಟ್ ಇಲ್ಲದೆಯೂ ವಾಟ್ಸಪ್ ಮೆಸೇಜ್‌ಗಳನ್ನು ಕಳುಹಿಸಬಹುದು.

ಇನ್ನೂ ಮೆಟಾ ಈ ಫೀಚರ್‌ ಬಗ್ಗೆ ಸ್ಪಷ್ಟಪಡಿಸಿದ್ದು, ವಾಟ್ಸಪ್‌ ಬಳಕೆದಾರರಿಗೆ ಈ ಫೀಚರ್‌ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಿದೆ. ಈ ಫೀಚರ್‌ ಮೂಲಕ ಯಾವುದೇ ಅನ್ಯವ್ಯಕ್ತಿಗಳು ನಿಮ್ಮ ಕಾಲ್ ಅಥವಾ ಮೆಸೇಜ್‌ಗಳಿಗೆ ಪ್ರವೇಶಿಸಲು ಸಾಧ್ಯವಿಲ್ಲ ಎಂದೂ ಖಚಿತಪಡಿಸಿದೆ. ನೀವೇನಾದರೂ ಇಂಟರ್ನೆಟ್ ಇಲ್ಲದೆಯೇ ಮೆಸೇಜ್‌ ಕಳುಹಿಸಲು ಬಯಸಿದರೆ ಇಂದೇ ಇದರ ಲಾಭ ಪಡೆಯಬಹುದು.

ಪ್ರಾಕ್ಸಿ ಫೀಚರ್ ಸಕ್ರಿಯಗೊಳಿಸುವಿಕೆ :

ಮೊದಲು ಮೊಬೈಲ್‌ನಲ್ಲಿ ವಾಟ್ಸಪ್ ಅನ್ನು ಓಪನ್ ಮಾಡಬೇಕು (ನೆನಪಿರಲಿ, ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಪ್ ಇತ್ತೀಚಿನ ಆವೃತ್ತಿಯಾಗಿರಬೇಕು).

WhatsApp ಅಪ್ಲಿಕೇಶನ್‌ನ ಬಲಭಾಗದಲ್ಲಿರುವ ಮೂರು ಚುಕ್ಕೆಗಳಿವೆ. ಅದರ ಮೇಲೆ ಕ್ಲಿಕ್ ಮಾಡಬೇಕು.

ಸೆಟ್ಟಿಂಗ್‌ಗಳಿಗೆ ಹೋಗಿ.

ಇಲ್ಲಿ ನೀವು ಸ್ಟೋರೇಜ್ ಮತ್ತು ಡೇಟಾವನ್ನು ಆಯ್ಕೆ ಮಾಡಬೇಕು.

ನೀವು ಪ್ರಾಕ್ಸಿ ಆಯ್ಕೆಯನ್ನು ಪಡೆಯುತ್ತೀರಿ. ಅದರ ಮೇಲೆ ಟ್ಯಾಪ್ ಮಾಡಬೇಕಾಗುತ್ತದೆ.

ನಂತರ ನಿಮ್ಮ ಪ್ರಾಕ್ಸಿ ವಿಳಾಸವನ್ನು ನಮೂದಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.

ಪ್ರಾಕ್ಸಿ ವಿಳಾಸವನ್ನು ಉಳಿಸಿದ ನಂತರ, ನಿಮಗೆ ಗ್ರೀನ್ (ಹಸಿರು) ಮಾರ್ಕ್ ಕಾಣಿಸುತ್ತದೆ. ಇದರರ್ಥ ಪ್ರಾಕ್ಸಿ ವಿಳಾಸವನ್ನು ಸೇರಿಸಲಾಗಿದೆ ಎಂದರ್ಥ.

ಇದನ್ನು ಓದಿ : ಕುಡಿದ ಮತ್ತಲ್ಲಿ ನಿಂದಿಸಿದ ಆರೋಪ ; ನಟಿ ರವೀನಾ ಟಂಡನ್ ಮೇಲೆ ಹಲ್ಲೆಗೆ ಮುಂದಾದ ಜನ ; Video viral.!

ಪ್ರಾಕ್ಸಿ ಫೀಚರ್‌ ಅನ್ನು ಸಕ್ರಿಯಗೊಳಿಸಿದ ನಂತರವೂ ನಿಮಗೆ ಕಾಲ್‌ ಅಥವಾ ಮೆಸೇಜ್‌ ಮಾಡಲು ಸಾಧ್ಯವಾಗದಿದ್ದರೆ, ನೀವು ಲಾಂಗ್‌ ಪ್ರೆಸ್‌ ಮಾಡಿ ಪ್ರಾಕ್ಸಿ ವಿಳಾಸವನ್ನು (address) ತೆಗೆದು ಹಾಕಬಹುದು. ಹೊಸ ಪ್ರಾಕ್ಸಿ ಅಡ್ರೆಸ್‌ ಸೇರಿಸಬಹುದು.

ನೀವು ಪ್ರಾಕ್ಸಿ ವಿಳಾಸವನ್ನು ಅಧಿಕೃತ ಮೂಲದಿಂದ ಮಾತ್ರ ಸೇರಿಸಬೇಕು ಎಂಬುದನ್ನು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಿ. ವಾಸ್ತವವಾಗಿ, ಪ್ರಾಕ್ಸಿ ನೆಟ್‌ವರ್ಕ್‌ನಲ್ಲಿ ನೀವು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಅಥವಾ ಸರ್ಚ್ ಇಂಜಿನ್‌ಗಳ ಸಹಾಯದಿಂದ ಇಂಟರ್ನೆಟ್ ಇಲ್ಲದೆಯೇ ಮೆಸೇಜ್ ಅಥವಾ ಕಾಲ್ ಮಾಡಬಹುದು.

spot_img
spot_img
- Advertisment -spot_img