Friday, June 14, 2024
spot_img
spot_img
spot_img
spot_img
spot_img
spot_img

ಕುಡಿದ ಮತ್ತಲ್ಲಿ ನಿಂದಿಸಿದ ಆರೋಪ ; ನಟಿ ರವೀನಾ ಟಂಡನ್ ಮೇಲೆ ಹಲ್ಲೆಗೆ ಮುಂದಾದ ಜನ ; Video viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ನಿನ್ನೆ ತಡರಾತ್ರಿ ಬಾಲಿವುಡ್ ನಟಿ ರವೀನಾ ಟಂಡನ್ ಮೂವರ ಮೇಲೆ ದೌರ್ಜನ್ಯ ಎಸಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸ್ಥಳೀಯರು (natives) ನಟಿಯನ್ನು ಸುತ್ತುವರೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮುಂಬೈನ ಬಾಂದ್ರಾ ಉಪನಗರದಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ.

ಇದನ್ನು ಓದಿ : ಬೇರೊಬ್ಬಳೊಂದಿಗಿದ್ದ ಪತಿಯನ್ನು ರೆಡ್ ಹ್ಯಾಂಡ್ಆಗಿ ಹಿಡಿದು ಕಪಾಳಮೋಕ್ಷ ಮಾಡಿದ ಪತ್ನಿ ; Video ನೋಡಿ.!

ಕುಡಿದ ಮತ್ತಿನಲ್ಲಿ (drinks) ಬಾಲಿವುಡ್ ನಟಿ ರವೀನಾ ಟಂಡನ್ ಮೂವರ ಮೇಲೆ ಹಲ್ಲೆ ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ನಟಿ ರವೀನಾರನ್ನು ಸುತ್ತುವರೆದು ಪ್ರತಿ ಹಲ್ಲೆ ನಡೆಸಿದ್ದಾರೆ.

ರವೀನಾ ಅವರ ಕಾರು ಚಾಲಕ, ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ.

ಈ ವೇಳೆ ಜನ ಸೇರಿ ಇದನ್ನು ಪ್ರಶ್ನಿಸಿದಾಗ ಕಾರಿನಲ್ಲಿ ಕುಡಿದ ಮತ್ತಿನಲ್ಲಿದ್ದ ರವೀನಾ ಟಂಡನ್ ಕಾರಿನಿಂದ ಇಳಿದು ಬಂದು ಅಪಘಾತ (accident) ಸಂತ್ರಸ್ತರನ್ನು ನಿಂದಿಸಿ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ ಎಂದು ವರದಿಯಿಂದ ತಿಳಿದು ಬಂದಿದೆ.

ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ, ದಯವಿಟ್ಟು ವಿಡಿಯೋ ಮಾಡಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ ಎಂದು ನಟಿ ಹೇಳುತ್ತಿರುವುದನ್ನು ಕೇಳಬಹುದು.

ಇದನ್ನು ಓದಿ : Weather : ಮುಂದಿನ 48 ಗಂಟೆಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶ : ಈ ಜಿಲ್ಲೆಗಳಲ್ಲಿ ಭಾರಿ ಮಳೆಗಾಳಿ ಮುನ್ಸೂಚನೆ.!

ತನ್ನ ತಾಯಿ, ಸಹೋದರಿ ಮತ್ತು ಸೊಸೆ ರಿಜ್ವಿ ಕಾಲೇಜು ಬಳಿ ಹೋಗುತ್ತಿದ್ದಾಗ ರವೀನಾ ಅವರ ಕಾರು ಚಾಲಕ ತನ್ನ ತಾಯಿಯ ಮೇಲೆ ಕಾರು ಹತ್ತಿಸಿದ್ದಾನೆ.

ಕಾರು ಚಾಲಕನನ್ನು ಪ್ರಶ್ನಿಸಿದಾಗ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ನಂತರ, ಕುಡಿದ ಅಮಲಿನಲ್ಲಿದ್ದ ರವೀನಾ ಕೂಡ ನನ್ನ ತಾಯಿಗೆ ಹೊಡೆದಿದ್ದಾರೆ ಅವಳ ತಲೆಗೆ ಗಂಭೀರ ಗಾಯಗಳಾಗಿವೆ (serious injuries) ಎಂದು ಅಪಘಾತ ಸಂತ್ರಸ್ತರ ಸಂಬಂಧಿ ಬಾಂದ್ರಾ ನಿವಾಸಿ ಮೊಹಮ್ಮದ್ ದೂರಿದ್ದಾರೆ ಎಂದು ವರದಿಯಾಗಿದೆ.

spot_img
spot_img
- Advertisment -spot_img