Friday, June 14, 2024
spot_img
spot_img
spot_img
spot_img
spot_img
spot_img

10 ಅಡಿಯ ಗೇಟ್ ಹಾರಿ ನದಿ ಸೇರಲು ಯತ್ನಿಸುತ್ತಿರುವ ದೈತ್ಯ ಮೊಸಳೆ : ವಿಡಿಯೋ ವೈರಲ್.!

spot_img

ಜನಸ್ಪಂದನ ನ್ಯೂಸ್‌, ಡೆಸ್ಕ್ : ಬುಧವಾರ ಬೆಳಗ್ಗೆ 10 ಅಡಿ ಉದ್ದದ ಮೊಸಳೆಯೊಂದು ಬುಲಾನ್ಸ್‌ಧರ್‌ನ ನರೋರಾನ ಗಂಗಾ ಘಾಟ್‌ನ ಕಾಲುವೆಯ ಬಳಿ ಕಾಣಿಸಿಕೊಂಡಿದ್ದು, ಸ್ಥಳೀಯರನ್ನು ಬೆಚ್ಚಿ ಬೀಳಿಸಿದ ಘಟನೆ ನಡೆದಿರುವ ಗಬಗ್ಗೆ ವರದಿಯಾಗಿದೆ.

ನೀರಿನಿಂದ ಬೃಹತ್ ಮೊಸಳೆಯು ಅಚಾನಕ್ಕಾಗಿ ನದಿಯ ನೀರಿನಿಂದ ಹೊರ ಬಂದಿದ್ದು, ಮತ್ತೆ ನದಿಗೆ ಹಾರಲು ಅಲ್ಲಿನ ಗೇಟಿನ ಮೇಲೆ ಹತ್ತಲು ಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್​​ ಆಗಿದೆ. 10 ಅಡಿ ಉದ್ದದ ದೈತ್ಯ ಮೊಸಳೆಯು ಗೇಟ್ ಹತ್ತಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ : Crime : ಚಿಕಿತ್ಸೆಗೆಂದು ಕರೆದೊಯ್ದು ಆಸ್ಪತ್ರೆಯಲ್ಲೇ ನಿರಂತರ ಅತ್ಯಾಚಾರವೆಸಗಿದ ಕಾಮುಕ.!

ಸೋಶಿಯಲ್ ಮೀಡಿಯಾಗಳಲ್ಲಿ ಈ ಘಟನೆಯನ್ನು ಕಣ್ಣಾರೆ ಕಂಡ ಸ್ಥಳೀಯ ಜನರು ಮೊಬಾಯಿಲ್‌ನಲ್ಲಿ ರೆಕಾರ್ಡ್ ಮಾಡಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.  

ಹಿಂದಿ ನ್ಯೂಸ್ ಪೋರ್ಟಲ್, ಲೈವ್ ಹಿಂದೂಸ್ತಾನ್‌ನಲ್ಲಿನ ವರದಿಯ ಪ್ರಕಾರ, ದಾರಿತಪ್ಪಿ ನೀರಿನಿಂದ ಹೊರಬಂದಿದ್ದ ಮತ್ತು ಮತ್ತೆ ನೀರಿಗೆ ಮರಳಲು ಸಹಾಯಕ್ಕಾಗಿ ಓಡಾಡುತ್ತಿದ್ದ ಮೊಸಳೆಯನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.  

ಇದನ್ನೂ ಓದಿ : Lokayukta trap : ಲಂಚ ಪಡೆಯುವಾಗ ಮಹಿಳಾ ಸಬ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!

ಅರಣ್ಯ ರೇಂಜ್ ಅಧಿಕಾರಿ ಮೋಹಿತ್ ಚೌಧರಿ ಅವರು ರಕ್ಷಣಾ ತಜ್ಞ ಪವನ್ ಕುಮಾರ್ ಅವರೊಂದಿಗೆ ಎಚ್ಚರಿಕೆಯಿಂದ ಪ್ರಯತ್ನದಿಂದ ಮೊಸಳೆಯನ್ನು ರಕ್ಷಿಸಿದ್ದಾರೆ ಎಂದು ಸುದ್ದಿ ವರದಿ ಉಲ್ಲೇಖಿಸಿದೆ.

ಅಲ್ಲಿನ ಸಿಹಿನೀರಿನ ಕಾಲುವೆಯಿಂದ ತಪ್ಪಿಸಿಕೊಂಡ ಹೆಣ್ಣು ಮೊಸಳೆ ಎಂದು ಗುರುತಿಸಲಾಗಿದೆ. ನಂತರ, ಅದನ್ನು ಪಿಎಲ್‌ಜಿಸಿ ಕಾಲುವೆಯಲ್ಲಿ ಬಿಡಲಾಯಿತು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಡಿಯೋ ನೋಡಿ :

spot_img
spot_img
- Advertisment -spot_img