Friday, June 14, 2024
spot_img
spot_img
spot_img
spot_img
spot_img
spot_img

ತನ್ನ ಪುಟ್ಟ ಮಕ್ಕಳ ಮುಂದೆಯೇ ತಂದೆಯನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿ ; Video Viral.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಮಕ್ಕಳ ಮುಂದೆಯೇ ವ್ಯಕ್ತಿಯೋರ್ವನನ್ನು ದುಷ್ಕರ್ಮಿ ಗುಂಡಿಕ್ಕಿ (shoot) ಕೊಂದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಮೀರತ್‌ನ ಜೈದಿ ಫಾರ್ಮ್ ನಿವಾಸಿ ಅರ್ಷಾದ್‌ ಕೊಲೆಯಾದ ವ್ಯಕ್ತಿ ಎಂದು ವರದಿಯಾಗಿದ್ದು, ಘಟನೆಯ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ ಆಗಿದೆ.

ಇದನ್ನು ಓದಿ : ವಿಚಿತ್ರ Tradition : ಇಲ್ಲಿ ಪತಿಯ ಸೂಚನೆಯಂತೆ ಪತ್ನಿ ಬೇರೊಬ್ಬನ ಜತೆ ರಾತ್ರಿ ಲೈಂಗಿಕ ಕ್ರಿಯೆ ನಡೆಸಲೇಬೇಕು.!

ಮಂಗಳವಾರ ರಾತ್ರಿ ಮೀರತ್‌ನ ಲೋಹಿಯಾ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಆಘಾತಕಾರಿ ಘಟನೆ (shocking incident) ನಡೆದಿದೆ.

ಇನ್ನೂ ಆರೋಪಿ ಬಿಲಾಲ್, ಅರ್ಷಾದ್‌ ತಲೆಗೆ ತೀರ ಸಮೀಪದಿಂದಲೇ ಗುಂಡಿಕ್ಕಿ ಪರಾರಿಯಾಗಿದ್ದಾನೆ (escape). ಆರೋಪಿ ಹಾಗೂ ಕೊಲೆಯಾದ ವ್ಯಕ್ತಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಈ ವೇಳೆ ಅಲ್ಲಿದ್ದ ಬೇರೆ ವ್ಯಕ್ತಿ ಇಬ್ಬರ ಜಗಳವನ್ನು ಬಿಡಿಸಿ ಇಬ್ಬರನ್ನು ದೂರ ದೂರ ಮಾಡಿದ್ದಾನೆ. ಕೆಲ ಸೆಕೆಂಡುಗಳ ನಂತರ ಅರ್ಷಾದ್ ತನ್ನ ಮೊಬೈಲ್ ತೆಗೆದು ನೋಡುತ್ತಾ ನಿಂತಿದ್ದಾನೆ. ಅಷ್ಟರಲ್ಲೇ ಆರೋಪಿ ತನ್ನ ಬಳಿ ಇದ್ದ ಪಾಯಿಂಟ್ ರೇಂಜ್ ಪಿಸ್ತೂಲ್‌ನಿಂದ (point range pistol) ಆತನ ತಲೆಗೆ ಗುಂಡಿಕ್ಕಿ ಕೊಲ್ಲುವುದನ್ನು ವಿಡಿಯೋದಲ್ಲಿ ನೋಡಬಹುದು.

ಗುಂಡಿನ ದಾಳಿಯಿಂದಾಗಿ ಅರ್ಷಾದ್ ಸ್ಥಳದಲ್ಲೇ ನೆಲಕ್ಕೆ ಕುಸಿದು ಮೃತಪಟ್ಟಿದ್ದಾನೆ. ಇದೇ ವೇಳೆ ಗುಂಡಿನ ಸದ್ದಿಗೆ ಅಲ್ಲಿ ಸೇರಿದ ಜನರೆಲ್ಲಾ ದಿಕ್ಕಾಪಾಲಾಗಿ ಓಡಿದ್ದಾರೆ. ಇಬ್ಬರ ನಡುವಿನ ಈ ಹಿಂದಿನ ವೈಷಮ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ಗುಂಡಿನ ದಾಳಿಗೊಳಗಾದ ಅರ್ಷಾದ್‌ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ವೈದ್ಯರು ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು.

ಇದನ್ನು ಓದಿ : ಲೋಕಸಭಾ election ಫಲಿತಾಂಶ : ಜನ್ಮದಿನದಂದೇ ಅಣ್ಣಾಮಲೈಗೆ ಸೋಲು.!

ಘಟನೆ ನಡೆದ ಸಂದರ್ಭದಲ್ಲಿ ಆರ್ಷಾದ್ ತನ್ನ ಇಬ್ಬರು ಪುಟ್ಟ ಮಕ್ಕಳೊಂದಿಗೆ ಭದನದಲ್ಲಿರುವ ಸ್ವಿಮಿಂಗ್‌ ಫೂಲ್‌ಗೆ ಸ್ನಾನ (bath) ಮಾಡಲು ಬಂದಿದ್ದ. ಇದೇ ವೇಳೆ ಆತನಿಗೆ ಆರೋಪಿ ಬಿಲಾಲ್ ಜೊತೆ ವಾಗ್ವಾದ ಶುರುವಾಗಿದೆ.

ಈ ಗಲಾಟೆ ವಿಕೋಪಕ್ಕೆ ತಿರುಗಿ ಬಿಲಾಲ್ ತನ್ನ ಬಳಿ ಇದ್ದ ಪಿಸ್ತೂಲ್‌ನಿಂದ ಅರ್ಷಾದ್ ತಲೆಗೆ ಗುಂಡಿಕ್ಕಿ ಕೊಂದಿದ್ದಾನೆ ಎಂದು ವರದಿಯಾಗಿದೆ.

spot_img
spot_img
- Advertisment -spot_img